ಅಕ್ಷಯ ತೃತೀಯಾ ಧಾರ್ಮಿಕ ಭಾವನಾತ್ಮಕ ಚಿಂತನೆ

Team Udayavani, May 14, 2021, 6:20 AM IST

ಅಕ್ಷಯ ತೃತೀಯಾ ಧಾರ್ಮಿಕ ಭಾವನಾತ್ಮಕ ಚಿಂತನೆ

ಪರ್ವದಿನ, ಅಕ್ಷಯ ತೃತೀಯಾ ವೈಶಾಖ ಮಾಸದಲ್ಲಿನ ವಿಶೇಷ ಹಬ್ಬವಾಗಿ ಆಚರಿಸಲ್ಪಡುತ್ತಿದೆ. ವ್ಯಾವಹಾರಿಕವಾಗಿ ಅತ್ಯಂತ ಆಕರ್ಷಣೆಯ ಉತ್ಸವವಾಗಿದೆ. ಅಂದು ಮನೆ ತುಂಬಿಸುವ ನಗನಾಣ್ಯ, ಸಂಪತ್ತು ವರ್ಷದಿಂದ ವರ್ಷಕ್ಕೆ ಅಕ್ಷಯವಾಗಲಿ ಎಂಬ ಗಾಢ ನಂಬಿಕೆ ಆಸ್ತಿಕರದ್ದು. ಅಕ್ಷಯ ತೃತೀಯ, ಪರ್ವವು ಒಂದು ಸಾಮೂಹಿಕ ಆಚರಣೆಯಾಗಿ ಇಂದು ಕಂಡು ಬರುತ್ತಿದೆ. ನದಿಸ್ನಾನ, ದಾನ, ಪೂಜೆ, ಹೋಮಹವನಾದಿಗಳು, ಪಾರಾಯಣ, ಪಿತೃ ತರ್ಪಣ, ಅನ್ನ ಸಂತರ್ಪಣೆ, ಇತ್ಯಾದಿ ಅಂದು ನಡೆದರೆ ಅಕ್ಷಯ ಪುಣ್ಯ ಲಭಿಸುತ್ತದೆ ಎಂದು ಅಕ್ಷಯ ತೃತೀಯಾದ ಮಹಣ್ತೀವನ್ನು ವರ್ಣಿಸಲಾಗಿದೆ.

ಚೈತ್ರ, ವೈಶಾಖ ಮಾಸಗಳು ಪರ್ವ ಮಾಸಗಳು
ಚೈತ್ರ, ವೈಶಾಖ ಮಾಸವನ್ನು ವಸಂತ(ವಸಂತೋತ್ಸವ) ಕಾಲ. ಬಿಸಿಲ ಬೇಗೆಗೆ ಬಸವಳಿದವರಿಗೆ ತಂಪು ಪಾನೀಯವನ್ನು (ಪಾನಕ) ದಾನ ಮಾಡಬೇಕೆಂದಿದೆ. “ಪಂಚೋತ್ಸವಾ ಹಿ… ಕಾರ್ತಿಕ ಉತ್ಸವಃ| ವಸಂತೋಪಿ ದ್ವಿತೀಯಸ್ತು ದಮನಾಖ್ಯಸ್ತತೀಯಖಃ||’ ವೈಶಾಖ ಶುದ್ಧ ಪ್ರತಿಪದದಿಂದ ಹುಣ್ಣಿಮೆ ತನಕ ಆಚರಿಸಬೇಕು. ಇಂದಿಗೂ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಅಕ್ಷಯ ತೃತೀಯದಿಂದ ಹುಣ್ಣಿಮೆವರೆಗೆ ವಸಂತೋತ್ಸವದ ಸಂಪ್ರದಾಯವಿದೆ. ಚೈತ್ರ ಶುದ್ಧ ಪಾಡ್ಯ ಯುಗಾದಿ, ತದಿಗೆಯಂದು ಮತ್ಸ್ಯ ಜಯಂತಿ, ಶುಕ್ಲ ನವಮಿ ರಾಮನವಮಿ, ಹುಣ್ಣಿಮೆಯಂದು ಹನುಮಜ್ಜಯಂತಿ ಮತ್ತು ವೈಶಾಖ ದ್ವಿತೀಯದಂದು ಕೂರ್ಮ ಜಯಂತಿ, ತೃತೀಯಾದಂದು ಅಕ್ಷಯ ತೃತೀಯಾ, ಅಂದೇ ಪರಶುರಾಮ ಜಯಂತಿ, ವಿಜಯಧ್ವಜರ ಆರಾಧನೆ ಮತ್ತು ತ್ರೇತಾ ಯುಗಾದಿಯನ್ನು ಕಾಣುವ ಆಸ್ತಿಕರಿಗೆ ಚೈತ್ರ, ವೈಶಾಖ ಮಾಸಗಳು ಪರ್ವ ಮಾಸಗಳಾಗಿವೆ.
“ಜಮದಗ್ನಿ ಸುತೋ ವೀರ ಕ್ಷತ್ರಿ ಯಾಂತಕರ ಪ್ರಭೋ|’ ಎಂದು ಪರಶುರಾಮನ ಪೂಜೆಯನ್ನು ಮಾಡಬೇಕೆಂದಿದೆ.

ಧಾರ್ಮಿಕ ಭಾವನಾತ್ಮಕ ಚಿಂತನೆ
ಅಕ್ಷಯವಾಗಲಿ ಎಂಬ ಚಿಂತನೆ ಯಿಂದ ಧನಧಾನ್ಯ…ಅಷ್ಟೆ„ಶ್ವರ್ಯ ಲಕ್ಷಿ¾àಯನ್ನು ಹೊಂದುವ ಮಾನವ ಸಹಜ ಅಭಿಲಾಷೆಗೆ ಅಕ್ಷಯ ತೃತೀಯಾ ಧಾರ್ಮಿಕ ಭಾವನಾತ್ಮಕ ಚಿಂತನೆಯನ್ನು ಕಲ್ಪಿಸುತ್ತದೆ. ಲಕ್ಷ್ಮೀ ಎಂದರೆ ಸಿರಿ ಸಂಪತ್ತು ಅಂದರೆ ಚಿನ್ನ, ಸುವರ್ಣವೂ ಹೌದು. ಲಕ್ಷ್ಮೀ ಎಂದರೆ ಹೊಂದಲ್ಪಡುವವಳು, ಅಪೇಕ್ಷಿಸಲ್ಪಡುವವಳು, ಬೆಳಗುವವಳು ಎಂಬ ಅರ್ಥವಿದೆ. ಹಿರಣ್ಯ- ಭೂಗರ್ಭದಲ್ಲಿ ಸೇರಿಕೊಂಡಿರುವ ಬರೀ ಕಣ್ಣಿಗೆ ಕಾಣದ ಸ್ಥಿತಿಯಲ್ಲಿರುವ ಚಿನ್ನಕ್ಕೆ ಎಲ್ಲರೂ ಆಸೆ ಪಡುವಂತೆ ಎಂಬ ಅರ್ಥ ಲಕ್ಷ್ಮೀ ತಂತ್ರದಲ್ಲಿದೆ.

ಸುವರ್ಣ ಸ್ವರೂಪಿ ಲಕ್ಷ್ಮೀ
ಲಕ್ಷ್ಮೀ ಅಂದರೆ ಲಾ – ಅಂದರೆ ದಾನ, ಕ್ಷಿ ಅರ್ಥಾತ್‌ ಪ್ರೇರೇಪಿಸುವವಳು, ವಾಂಛಿತ ಅಭಿಷ್ಟಗಳನ್ನು ದಾನ ಮಾಡುವವಳು. ಸುವರ್ಣ ಸ್ವರೂಪಿ ಲಕ್ಷ್ಮೀಯನ್ನು ಮನೆ ತುಂಬಿಸಿದರೆ, ಅಕ್ಷಯವಾಗಿ, ಸಕಲ ಸಂಕಷ್ಟಗಳನ್ನು ನಿವಾರಿಸುತ್ತದೆ ಎಂಬುದೇ ಅಕ್ಷಯ ತೃತೀಯಾದ ಹಿಂದಿನ ಸಂದೇಶ.

ಲಕ್ಷ್ಮೀ ಪ್ರಾಪ್ತಿಗೆ ಧರ್ಮಾಚರಣೆ
ಹಿರಣ್ಯ ವರ್ಣ ಲಕ್ಷ್ಮೀಯ ವಾಸವೆಲ್ಲಿ ಎಂದು ಶಾಕ್ತಾಗಮ, ಲಕ್ಷ್ಮೀ ತಂತ್ರ ಮುಂತಾದ ಪಾಂಚರಾತ್ರಾದಿಗಳು ವಿವರಿಸಿವೆ. ಧರ್ಮಾತ್ಮರಿಂದ ಮಾತ್ರ ಲಕ್ಷ್ಮೀಯನ್ನು ಗಳಿಸಲು ಸಾಧ್ಯ. ಶ್ರೀ ಮಹಾವಿಷ್ಣುವಿನ ಬಳಿಯಲ್ಲದೆ ಬೇರೆ ಎಲ್ಲೆಲ್ಲಿ ನೀನು ವಾಸಿಸುತ್ತಿ ಎಂದು ಲಕ್ಷ್ಮೀಗೆ ಕೇಳಲಾಗಿ, ಅದಕ್ಕವಳು “ನಾನು ಯಾರ ಬಳಿ ಹೋಗುವೆನೋ ಅವರನ್ನು ಸಂಪತ್ತಿನಿಂದ (ಲಕ್ಷ್ಮೀ) ಸಂತುಷ್ಟಗೊಳಿಸುವೆನು. ಸ್ವಧರ್ಮ ಪಾಲಕರಲ್ಲಿ ನೆಲೆಸುವೆನು. ಯುವತಿ, ಸ್ತ್ರೀ, ಕುಮಾರಿ, ಕನ್ಯೆ, ಯಜ್ಞ, ಇತ್ಯಾದಿಗಳನ್ನು ಮಾಡುವ ವ್ಯಕ್ತಿಗಳಲ್ಲಿ ನೆಲೆಸುತ್ತೇನೆ…’ ಧರ್ಮ ಪಾರಾಯಣರಲ್ಲೇ ಲಕ್ಷ್ಮೀ ಸನ್ನಿಹಿತಳಾಗುತ್ತಾಳೆ. ಆದರೆ ಆತನಿಗೆ ಲಕ್ಷ್ಮೀಯಿಂದ ಪ್ರಯೋಜನವಿಲ್ಲ. ಅವನು ಧರ್ಮಕಾರ್ಯಕ್ಕಾಗಿ ಸಂಪತ್ತನ್ನು ಖರ್ಚು ಮಾಡಿದರೆ ಲಕ್ಷ್ಮೀ ಧನ್ಯಳಾಗುತ್ತಾಳೆ. ಆದ್ದರಿಂದ ಲಕ್ಷ್ಮೀ ಪ್ರಾಪ್ತಿಗೆ ಶುದ್ಧ ಧರ್ಮಾಚರಣೆ ಅಗತ್ಯ.

ಐಶ್ವರ್ಯ, ಕೀರ್ತಿ, ರೂಪಗಳನ್ನಿತ್ತು ಸಲಹುವ ಪುಷ್ಕರಣೀ ಆದ ಲಕ್ಷ್ಮೀ, ಕರಗಿಸಿದ ಚಿನ್ನದಂತಿರುವ ಮೈ ಬಣ್ಣವುಳ್ಳ ಪಿಂಗಲಾಂ ಅಂದರೆ ಕುಬೇರನಿಗೆ ಪಿಂಗ ಎಂದು ಕರೆಯುತ್ತಾರೆ; ಐಶ್ವರ್ಯವನ್ನು ನೀಡಿದ್ದರಿಂದ ಪಿಂಗಳಾ (ಲಾ=ದಾನ) ಸಮಸ್ತ ಜನರಿಗೂ ಸರ್ವ ಸಮೃದ್ಧಿ, ಸನ್ಮಂಗಳವನ್ನುಂಟು ಮಾಡಲಿ.

-ಜಲಂಚಾರು ರಘುಪತಿ ತಂತ್ರಿ, ಉಡುಪಿ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.