ಕೋಪವೇ ಹೇಳಿದ ಮಾತಿದು…


Team Udayavani, Jul 7, 2020, 4:51 AM IST

kopa-maatu

“ಕೋಪದ ಕೈಗೆ ಬುದ್ಧಿ ಕೊಡಬೇಡ. ಬದಲಿಗೆ, ಬುದ್ಧಿಯ ಕೈಗೆ ಕೋಪವನ್ನು ಕೊಡು’ ಎನ್ನುವ ಮಾತಿದೆ. ಈ ಮಾತು ಅಕ್ಷರಶಃ ಸತ್ಯ. ಏಕೆಂದರೆ, ಕೋಪ ಬಂದಾಗ ನಾವು ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು  ಊಹಿಸುವುದೂ ಅಸಾಧ್ಯ. ಅನಿವಾರ್ಯ ಸಮಯ, ಸಂದರ್ಭ, ಸನ್ನಿವೇಶಗಳು ಮನುಷ್ಯನಿಗೆ ಸಿಟ್ಟು ತರಿಸುತ್ತವೆ. ಆಗ, ಎದುರಿಗೆ ಯಾರಿದ್ದಾರೆ ಎಂಬುದನ್ನು ಗಮನಿಸದೆ ಮನುಷ್ಯ ಕೂಗಾಡಿಬಿಡುತ್ತಾನೆ.

ಇದರಿಂದ ಅದೆಷ್ಟೋ  ಸಂಬಂಧಗಳು, ಬಾಂಧವ್ಯಗಳು ಕಡಿದು ಹೋಗುತ್ತವೆ. ಹೀಗಾಗಿ, ಸಿಟ್ಟಿಗೆದ್ದ ಸಂದರ್ಭದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂಬ ವಿವೇಚನೆ ಹೊಂದಿರಬೇಕು. ಕೋಪ ಬಂದಾಗ ಮೆದುಳಿನಲ್ಲಿ ಆಡ್ರಿ ನಲಿನ್‌ ಹಾಗೂ ನಾನ್‌ ಆಡ್ರಿನ ಲಿನ್‌ ಎಂಬ ಹಾರ್ಮೋನ್‌ ಹೆಚ್ಚಾಗಿ ಸ್ರವಿಸುತ್ತದೆ. ಇದರಿಂದ ಹೃದಯದ ಬಡಿತ ಹಾಗೂ ರಕ್ತದ ಒತ್ತಡವೂ ಅಧಿಕವಾಗುತ್ತದೆ.

ಈ ಹಾರ್ಮೋನ್‌ ಸ್ರವಿಕೆಯು ಕ್ಷಣಿಕವಾದರೂ, ಆಗಿಂದಾಗ್ಗೆ ಕೋಪ ಮಾಡಿಕೊಳ್ಳು ವುದರಿಂದ  ದೈಹಿಕ, ಮಾನಸಿಕ ಸ್ಥಿತಿಗತಿಯ ಮೇಲೆ ಗಾಢ ಪರಿಣಾಮ ಬೀರುತ್ತದೆ. ಕೋಪ ಬಂದಾಗ, ತಕ್ಷಣವೇ ಆ ಸ್ಥಳದಿಂದ ಬೇರೆಡೆಗೆ ಹೋಗಿ, ಕಣ್ಣು ಮುಚ್ಚಿ ಸುಮ್ಮನೆ ಕುಳಿತುಕೊಳ್ಳಿ. ನಿಧಾನಕ್ಕೆ ಉಸಿರಾಡಿ. ಆ ಸಂದರ್ಭದಲ್ಲಿ ಮಾತು ಕಡಿಮೆ  ಮಾಡಬೇಕು.

ಯಾವುದೇ ನಿರ್ಧಾರವನ್ನೂ ಕೈಗೊಳ್ಳಬಾರದು. ಕೆಟ್ಟ ಭಾಷೆಯನ್ನು ಯಾವುದೇ ಕಾರಣಕ್ಕೂ ಬಳಸಬಾರದು. ಒಂದೇ ಒಂದು ಕೆಟ್ಟ ಮಾತಿಂದ ಒಂದು ಸಂಬಂಧವೇ ಹಾಳಾಗಬಹುದು. ಆ ಬಾಂಧವ್ಯವನ್ನು ಮತ್ತೆ ಸರಿ  ಮಾಡಿಕೊಳ್ಳುವುದು ಬಹಳ ಕಷ್ಟ. ಹಾಗಾಗಿ, ಸಿಟ್ಟು ಬಂದಾಗ ಸುಮ್ಮನೇ ಕೂತುಬಿಡುವುದು ಜಾಣರ ಲಕ್ಷಣ. ಕೋಪ ಶಮನಗೊಂಡ ನಂತರ- ಕೋಪ ಏಕೆ ಬಂತು,

ಆಗ ಏನೇ ನಾಯ್ತು, ಮನಸ್ಸಿನಲ್ಲಿ ಏನೇನು ವಿಚಾರ ಮೂಡಿ ಬಂತು ಎಂಬುದನ್ನೆಲ್ಲಾ ಒಂದು ಡೈರಿಯಲ್ಲಿ ಬರೆದು ಇಡಿ. ಮುಂದೆ ಯಾವತ್ತೋ ಒಮ್ಮೆ ಅದನ್ನು ನೋಡಿದಾಗ, ಹಳೆಯ ದಿನದ ನೆನಪಾಗಿ ಖುಷಿಯಾಗಬಹುದು, ನಗುವೂ ಬರಬಹುದು. ಕೋಪವೆನ್ನುವುದು ಮನುಷ್ಯನ ಬಹುದೊಡ್ಡ ಶತ್ರು.  ಅದು ಮನುಷ್ಯನಿಗೆ ಕೆಡುಕನ್ನುಂಟು ಮಾಡುವುದೇ ವಿನಃ ಒಳಿತನ್ನಂತೂ ಮಾಡಲಾರದು.

ಟಾಪ್ ನ್ಯೂಸ್

4-sdsda

ಮಂದಾರ್ತಿ ಸಮೀಪ ಕಾರಿನಲ್ಲಿ ಭಸ್ಮವಾಗಿದ್ದು ಬೆಂಗಳೂರಿನ ನವ ಜೋಡಿ!

ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಈ ವೇಗಿ ಇರಲೇಬೆಕು: ಸುನಿಲ್ ಗವಾಸ್ಕರ್

ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಈ ವೇಗಿ ಇರಲೇಬೆಕು: ಸುನಿಲ್ ಗವಾಸ್ಕರ್

sidda dkshi

ಪರಿಷತ್ : ಹಿಂದುಳಿದ ವರ್ಗ,ಮುಸ್ಲಿಂ ಅಥವಾ ಕ್ರೈಸ್ತರಿಗೆ ಅವಕಾಶಕ್ಕೆ ಸಿದ್ದರಾಮಯ್ಯ ಮನವಿ

ಅಲ್ಲಿ ಲವ್- ಇಲ್ಲಿ ಮದುವೆ: ತಾಳಿ ಕಟ್ಟುವ ವೇಳೆ ಮದುವೆಗೆ ‘ನೋ ‘ಎಂದು ವಧುವಿನ ಹೈಡ್ರಾಮಾ

ಅಲ್ಲಿ ಲವ್- ಇಲ್ಲಿ ಮದುವೆ: ತಾಳಿ ಕಟ್ಟುವ ವೇಳೆ ಮದುವೆಗೆ ‘ನೋ ‘ಎಂದು ವಧುವಿನ ಹೈಡ್ರಾಮಾ

Raj THakre

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಪ್ರಧಾನಿಯನ್ನು ಒತ್ತಾಯಿಸಿದ ರಾಜ್ ಠಾಕ್ರೆ

ವಿಜಯಪುರ ಸರ್ಕಾರಿ ಆಸ್ಪತ್ರೆ ಪ್ರಕರಣ: ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ದೂರು

ವಿಜಯಪುರ ಸರ್ಕಾರಿ ಆಸ್ಪತ್ರೆ ಪ್ರಕರಣ: ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ದೂರು

1-adadasd

ಅಸ್ಸಾಂನಲ್ಲಿ ಪೊಲೀಸ್ ಠಾಣೆಗೆ ಬೆಂಕಿ: ದುಷ್ಕರ್ಮಿಗಳ 5 ಮನೆಗಳು ನೆಲಸಮಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

udayavani youtube

ದತ್ತಪೀಠದಲ್ಲಿ ನಮಾಜ್.. ವಿಡಿಯೋ ವೈರಲ್ : ಜಿಲ್ಲಾಧಿಕಾರಿ ಹೇಳಿದ್ದೇನು ?

udayavani youtube

ಮೆಸ್ಕಾಂ ಸಿಬ್ಬಂದಿ ಮೇಲೆ ತಂಡದಿಂದ ಹಲ್ಲೆ! ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹೊಸ ಸೇರ್ಪಡೆ

15

ಒಂದಾಗಿ ಕೆಲಸ ಮಾಡಲು ನಾಯಕರಿಗೆ ಕರೆ

4-sdsda

ಮಂದಾರ್ತಿ ಸಮೀಪ ಕಾರಿನಲ್ಲಿ ಭಸ್ಮವಾಗಿದ್ದು ಬೆಂಗಳೂರಿನ ನವ ಜೋಡಿ!

ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಈ ವೇಗಿ ಇರಲೇಬೆಕು: ಸುನಿಲ್ ಗವಾಸ್ಕರ್

ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಈ ವೇಗಿ ಇರಲೇಬೆಕು: ಸುನಿಲ್ ಗವಾಸ್ಕರ್

14

ರಸ್ತೆಯಲ್ಲಿ ಕಾಗದದ ದೋಣಿ ಬಿಟ್ಟು ವಿನೂತನ ಪ್ರತಿಭಟನೆ

13rain

ಬಳ್ಳಾರಿಯಲ್ಲಿ ಮಳೆಗೆ 2.39 ಕೋಟಿ ರೂ. ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.