ಶತಮಾನೋತ್ಸವ ಕಂಡ ಅಂಜುಮಾನ್‌ ಹಾಮಿ-ಇ-ಮುಸ್ಲಿಮೀನ್‌ ಶಿಕ್ಷಣ ಸಂಸ್ಥೆ

ಹೆಮ್ಮರವಾಗಿ ಬೆಳೆದ ಅಂಜುಮಾನ್‌  ಹಾಮಿ- ಇ-ಮುಸ್ಲಿಮೀನ್‌ ಸಂಸ್ಥೆ

Team Udayavani, Jul 1, 2022, 11:58 AM IST

ad muslimin college

ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ವಿಶಾಲ ತಳಹದಿಯ ದೊಡ್ಡ ಸಂಸ್ಥೆಯೊಂದರ ತುರ್ತು ಅಗತ್ಯ ತಲೆದೋರಿದುದರ ಫಲವಾಗಿ 1919ರ ಆಗಸ್ಟ್‌ 2 ರಂದು ಅಂಜುಮಾನ್‌ ಹಾಮಿ-ಇ-ಮುಸ್ಲಿಮೀನ್‌ ಸಂಸ್ಥೆ ಸ್ಥಾಪಿಸಲ್ಪಟ್ಟಿತು. ಅಂಜುಮಾನ್‌ 1919ರ ಸೆಪ್ಟೆಂಬರ್‌ ಒಂದರಂದು ತನ್ನ ಮೊತ್ತ ಮೊದಲ ಶಾಲೆಯನ್ನು ಬರೇ ಹನ್ನೊಂದು ವಿದ್ಯಾರ್ಥಿಗಳಿಂದ ಆರಂಭಿಸಿತು. 1929ರಲ್ಲಿ ಪ್ರಾಥಮಿಕ ದರ್ಜೆಗಳನ್ನೂ ಆರಂಭಿಸಿ ಈ ಶಾಲೆ ಸರಕಾರದ ಅಂಗೀಕಾರ ಪಡೆಯಲು ಶಕ್ತವಾಯಿತು. ಅಂದಿನಿಂದ ಸತತ ಉನ್ನತಿಗೇರಿ, 1939ರ ಜೂನ್‌ನಲ್ಲಿ ಪ್ರೌಢ ಶಾಲೆಯ ದರ್ಜೆಗೇರಿತು. ಹೀಗೆ ಭಟ್ಕಳದಲ್ಲಿ ಇಸ್ಲಾಮಿಯಾ ಆಂಗ್ಲೋ ಉರ್ದು ಹೈಸ್ಕೂಲ್‌ ಬೆಳಕು ಕಂಡಿತು. ಪ್ರಸ್ತುತ ಈ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸಾಕಷ್ಟು ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಇದ್ದಾರೆ.

ಕಳೆದ ಒಂದು ಶತಮಾನದಿಂದ ಸದ್ದಿಲ್ಲದೇ ವಿದ್ಯಾದಾನ ಮಾಡುತ್ತ, ದೇಶ-ವಿದೇಶಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ ಅಂಜುಮಾನ್‌ ಹಾಮಿ- ಇ-ಮುಸ್ಲಿಮೀನ್‌ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಸಂಸ್ಥೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯೆಯನ್ನು ಕಲಿತಿದ್ದು, ಪ್ರಪಂಚದಾದ್ಯಂತ ಉದ್ಯೋಗ ಮಾಡುತ್ತಿದ್ದಾರೆ. ಉದ್ದಿಮೆ ನಡೆಸುತ್ತಿದ್ದಾರೆ ಎಂದರೆ ಹೆಮ್ಮೆಯಾಗದೇ ಇರದು. ವಿದ್ಯಾದಾನಂ ಮಹಾದಾನಂ ಎನ್ನುವಂತೆ ತನ್ನ ಹತ್ತಾರು ಸಂಸ್ಥೆಗಳ ಮೂಲಕ ವಿದ್ಯಾದಾನ ಮಾಡುತ್ತಿದೆ.

ಅವುಗಳಲ್ಲಿ ಪ್ರಮುಖವಾದವು:

ಕಿಂಡರ್‌ ಗಾರ್ಡನ್‌, ಪ್ರಾಥಮಿಕ ಶಾಲೆ

ಅಂಜುಮಾನ್‌ ನರ್ಸರಿ ಮತ್ತು ಪ್ರಾಥಮಿಕ ಶಾಲೆ, ಅಂಜುಮಾನ್‌ ನೂರ್‌ ಪ್ರಾಥಮಿಕ ಶಾಲೆ, ಅಂಜುಮಾನ್‌ ಆಜಾದ್‌ ಪ್ರಾಥಮಿಕ ಶಾಲೆ ಮತ್ತು ಅಂಜುಮಾನ್‌ ತಕಿಯಾ ಪ್ರಾಥಮಿಕ ಶಾಲೆ, 1973ರಲ್ಲಿ ಪ್ರಥಮ ಪ್ರಾಥಮಿಕ ಶಾಲೆ ಆರಂಭವಾಗಿದೆ. ನಂತರದ ದಿನಗಳಲ್ಲಿ ಆಯಾಯ ಭಾಗಗಳಲ್ಲಿ ಅಗತ್ಯತೆಗನುಗುಣವಾಗಿ ಶಾಲೆಗಳು ಆರಂಭವಾಗಿವೆ. ಪ್ರಸ್ತುತ ಈ ಶಾಲೆಗಳಲ್ಲಿ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದು, ವರ್ಷದಿಂದ ವರ್ಷಕ್ಕೆ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೇ ಇದೆ. ಹೀಗಾಗಿ ಹೆಚ್ಚೆಚ್ಚು ಕಟ್ಟಡ, ಕ್ಲಾಸ್‌ರೂಮ್‌ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದವರೇ ಹೆಚ್ಚಾಗಿ ವಾಸಿಸುವಲ್ಲಿ ಹೆಚ್ಚೆಚ್ಚು ಶಾಲೆಗಳನ್ನು ತೆರೆಯುವುದು ಅವಶ್ಯವಾಯಿತು.

ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆ

ಪ್ರಾಥಮಿಕ ಶಾಲೆಗಳ ಆರಂಭದ ನಂತರ ಪ್ರೌಢಶಾಲೆ ಆರಂಭವು ಅನಿವಾರ್ಯವಾಯಿತು. ಬಹಳ ವರ್ಷಗಳವರೆಗೆ ಭಟ್ಕಳದ ಎಲ್ಲಾ ವರ್ಗದವರಿಗೂ ಕೂಡಾ ಇದು ವಿದ್ಯೆ ಪಡೆಯಲು ಅನುಕೂಲವಾಯಿತು. ಇಂದು ಶಾಲೆ ಉತ್ತಮ ಶಿಕ್ಷಣ ಕೊಡುವುದರೊಂದಿಗೆ ಸರಕಾರದ ಅನುದಾನಕ್ಕೂ ಪಾತ್ರವಾಗಿದೆ.

ಅಂಜುಮಾನ್‌ ಬಾಲಕರ ಪ್ರೌಢಶಾಲೆ ಅಂಜುಮಾನ್‌ ಬಾಲಕರ ಪ್ರೌಢಶಾಲೆ 1999ರಲ್ಲಿ ನಗರ ಮಧ್ಯದಲ್ಲಿ ಆರಂಭವಾಯಿತು. ಇಲ್ಲಿ 8ನೇ ತರಗತಿಯಿಂದ 10ನೇ ತರಗತಿಯ ತನಕ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಆರಂಭಗೊಂಡಿದ್ದು ಅಂದಿನ ವಿದ್ಯಾರ್ಥಿಗಳಿಗೊಂದು ವರದಾನವಾಯಿತು.

ಅಂಜುಮಾನ್‌ ನವಾಯತ ಕಾಲೋನಿ ಪ್ರೌಢಶಾಲೆ  

ಈ ಪ್ರೌಢಶಾಲೆ 2000ರಲ್ಲಿ ಆರಂಭಗೊಂಡಿತು. ನವಾಯತ ಕಾಲೋನಿಯೆನ್ನುವ ಹೊಸ ಬಡಾವಣೆಯಿಂದ ನಗರದ ಪ್ರೌಢ ಶಾಲೆಗೆ ಬರುವುದಕ್ಕೆ ಆಗುತ್ತಿರುವ ತೊಂದರೆ ಮನಗಂಡು ಶಾಲೆ ಆರಂಭಿಸಲಾಯಿತು. ಇಲ್ಲಿ 6ನೇ ತರಗತಿಯಿಂದ 10ನೇ ತರಗತಿ ತನಕ ವಿದ್ಯಾರ್ಥಿಗಳು ಓದುತ್ತಿದ್ದಾರೆ.

ಅಂಜುಮಾನ್‌ ಬಾಲಕಿಯರ ಪ್ರೌಢಶಾಲೆ

ಅಂದಿನ ಪರಿಸ್ಥಿತಿಗನುಗುಣವಾಗಿ ಮಹಿಳಾ ಸಾಕ್ಷರತೆಯನ್ನು ಮನದಲ್ಲಿಟ್ಟುಕೊಂಡ ಅಂಜುಮಾನ್‌ ಸಂಸ್ಥೆ 1971ರಲ್ಲಿ ಅಂಜುಮಾನ್‌ ಬಾಲಕಿಯರ ಪ್ರೌಢಶಾಲೆ ಆರಂಭಿಸಿತು. ಇದು ಮಹಿಳಾ ಸಾಕ್ಷರತೆಗೆ ಸಾಕ್ಷಿಯಾಯಿತಲ್ಲದೇ, ಮಹಿಳಾ ಸಬಲೀಕರಣಕ್ಕೂ ಮುನ್ನುಡಿ ಬರೆದಂತಾಯಿತು. ಇಲ್ಲಿ ಆಂಗ್ಲ-ಉರ್ದು ಮಾಧ್ಯಮದಲ್ಲಿ ಬಾಲಕಿಯರು ಓದುತ್ತಿದ್ದಾರೆ.

ಅಂಜುಮಾನ್‌ ಬಾಲಕಿಯರ ಪ್ರೌಢಶಾಲೆ ನವಾಯತ ಕಾಲೋನಿ

ನವಾಯತ ಕಾಲೋನಿಯಲ್ಲಿನ ಬೇಡಿಕೆಯನ್ನು ಪರಿಗಣಿಸಿ 2001ರಲ್ಲಿ ಅಂಜುಮಾನ್‌ ಬಾಲಕಿಯ ಪ್ರೌಢಶಾಲೆ ಸ್ಥಾಪಿಸಲಾಗಿದ್ದು, ಇಲ್ಲಿ ನೂರಾರು ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದಾರೆ.

ಅಂಜುಮಾನ್‌ ಪದವಿ ಪೂರ್ವ ಕಾಲೇಜು

1968ರಲ್ಲಿ ಆರಂಭವಾದ ಅಂಜುಮಾನ್‌ ಪದವಿ ಪೂರ್ವ ಕಲಾ ಕಾಲೇಜು ಇಂದು ಪದವಿ ಪೂರ್ವ ಕಾಲೇಜಾಗಿ ಸ್ವತಂತ್ರಗೊಂಡಿದ್ದು ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಷಯಗಳನ್ನು ಹೊಂದಿದೆ.

ಅಂಜುಮಾನ್‌ ಕಲಾ, ವಾಣಿಜ್ಯ, ವಿಜ್ಞಾನ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ, ಪಿಜಿಡಿಸಿಎ ಕಾಲೇಜು

ಅಂಜುಮಾನ್‌ ಪದವಿ ಕಾಲೇಜು 1968ರಲ್ಲಿ ಕಲಾ ಕಾಲೇಜಾಗಿ ಆರಂಭವಾಗಿದ್ದು ಇಂದು ಕಲಾ, ವಾಣಿಜ್ಯ, ವಿಜ್ಞಾನ ಕಾಲೇಜಾಗಿ ಪರಿವರ್ತಿತವಾಗಿದೆ. ಕನ್ನಡದಲ್ಲಿ ಸ್ನಾತಕೋತ್ತರ ಕೋರ್ಸ್‌ ಎಂ.ಎ., ಸ್ನಾತಕೋತ್ತರ ಡಿಪ್ಲೋಮಾ  ಇನ್‌ ಕಂಪ್ಯೂಟರ್‌ ಎಪ್ಲಿಕೇಶನ್‌ (ಪಿಜಿಡಿಸಿಎ) 2007ರಲ್ಲಿ ಆರಂಭಿಸಲಾಯಿತು.

ಮಹಿಳಾ ಪದವಿ ಪೂರ್ವ, ಪದವಿ ಕಾಲೇಜು

1980ರಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಪದವಿ ಪೂರ್ವ ಹಾಗೂ ಪದವಿ ಕಾಲೇಜು ಆರಂಭಿಸಲಾಯಿತು. ಮಹಿಳೆಯರಿಗೆ ಕಲಾ ಮತ್ತು ವಿಜ್ಞಾನ ವಿಭಾಗ ಬೋಧಿಸಲಾಯಿತು. ನಂತರ 2008-09ನೇ ಸಾಲಿನಲ್ಲಿ ವಾಣಿಜ್ಯ ವಿಭಾಗ ಸಹ ಆರಂಭಿಸಲಾಯಿತು.

ಅಂಜುಮಾನ್‌ ಮಹಿಳಾ ಕಲಾ, ವಾಣಿಜ್ಯ,ವಿಜ್ಞಾನ ಕಾಲೇಜು:

ಮಹಿಳೆಯರ ವಿದ್ಯಾಭ್ಯಾಸದ ಮಹತ್ವವನ್ನರಿತ ಅಂಜುಮಾನ್‌ 1995ರಲ್ಲಿ ಮಹಿಳಾ ಪದವಿ ಕಾಲೇಜು ಆರಂಭಿಸಿತು. ವಾಣಿಜ್ಯ ಮತ್ತು ಬಿಬಿಎ ವಿಷಯವನ್ನು ಸದ್ಯದಲ್ಲಿಯೇ ಆರಂಭಿಸುವ ಕುರಿತು ಚಿಂತನೆ ನಡೆದಿದೆ.

ಅಂಜುಮಾನ್‌ ಇಂಜಿನಿಯರಿಂಗ್‌ ಕಾಲೇಜು

ಪುರುಷರಿಗಾಗಿ ಅಂಜುಮಾನ್‌ ಇಂಜಿನಿಯರಿಂಗ್‌ ಕಾಲೇಜನ್ನು 1980ರಲ್ಲಿ ಆರಂಭಿಸಿದ್ದು, ಇದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಸಂಲಗ್ನಗೊಂಡಿದೆ. ಎ.ಐ.ಸಿ.ಟಿ.ಇ. ನವ ದೆಹಲಿಯಿಂದ ಕೂಡಾ ಮಾನ್ಯತೆ ಪಡೆದಿದೆ. ಕಾಲೇಜಿನಲ್ಲಿ ಸಿವಿಲ್‌, ಮೆಕ್ಯಾನಿಕಲ್‌, ಇಲೆಕ್ಟ್ರಿಕಲ್‌ ಮತ್ತು ಇಲೆಕ್ಟ್ರಾನಿಕ್ಸ್‌, ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಶನ್‌, ಕಂಪ್ಯೂಟರ್‌ ಸೈನ್ಸ್‌ ಹಾಗೂ ಇನ್‌ಫಾರ್ಮೇಶನ್‌ ಸೈನ್ಸ್‌  ಶಾಖೆಗಳನ್ನು ಹೊಂಂದಿದೆ. ಸಂಸ್ಥೆಯ ಆರಂಭದಿಂದಲೇ ಇಂಜಿನಿಯರಿಂಗ್‌ ಕಾಲೇಜು ಅತ್ಯುನ್ನತ ಫಲಿತಾಂಶಕ್ಕಾಗಿ ಹೆಸರು ಗಳಿಸಿದೆ. ಕಾಲೇಜಿನ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಮಟ್ಟದ ಅನೇಕ ರ್‍ಯಾಂಕ್‌ಗಳನ್ನು ಗಳಿಸಿದ್ದಾರೆ. ಇಂದು ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಅತ್ಯುನ್ನತ ಹುದ್ದೆಗಳಲ್ಲಿದ್ದಾರೆ.

ಅಂಜುಮಾನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌

1996ರಲ್ಲಿ ಆರಂಭವಾದ ಈ ಕಾಲೇಜಿನಲ್ಲಿ 3 ವರ್ಷದ ಬಿ.ಬಿ.ಎ. ಕೋರ್ಸ್‌ನ್ನು ಅಳವಡಿಸಿಕೊಳ್ಳಲಾಗಿದೆ. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಪಠ್ಯಕ್ರಮ ಅಳವಡಿಸಿಕೊಂಡಿದ್ದು, ನವೀನ ಕಂಪ್ಯೂಟರ್‌ಗಳನ್ನು ಅಳವಡಿಸಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.

ಅಂಜುಮಾನ್‌ ಕಾಲೇಜ್‌ ಆಫ್‌ ಎಜ್ಯುಕೇಶನ್‌

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಅಫಿಲಿಯೇಶನ್‌ ನೊಂದಿಗೆ ಬಿ.ಇಡಿ. 2007ರಲ್ಲಿ ಆರಂಭಗೊಂಡಿದ್ದು, ಉತ್ತಮ ಫಲಿತಾಂಶ ಪಡೆಯುತ್ತಿರುವ ಕಾಲೇಜಿನಲ್ಲಿ ಊರು-ಪರವೂರು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಜಿಲ್ಲೆಯಲ್ಲಿ ಶತಮಾನೋತ್ಸವ ಕಂಡ ಕೆಲವೇ ಶಿಕ್ಷಣ ಸಂಸ್ಥೆಗಳಲ್ಲಿ ಹೆಮ್ಮೆಯ ಅಂಜುಮಾನ್‌ ಹಾಮಿ-ಇ-ಮುಸ್ಲಿಮೀನ್‌ ಶಿಕ್ಷಣ ಸಂಸ್ಥೆಯೂ ಕೂಡಾ ಒಂದು.

ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ವಿಶಾಲ ತಳಹದಿಯ ದೊಡ್ಡ ಸಂಸ್ಥೆಯೊಂದರ ತುರ್ತು ಅಗತ್ಯ ತಲೆದೋರಿದುದರ ಫಲವಾಗಿ 1919ರ ಆಗಸ್ಟ್‌ 2 ರಂದು ಅಂಜುಮಾನ್‌ ಹಾಮಿ-ಇ-ಮುಸ್ಲಿಮೀನ್‌ ಸಂಸ್ಥೆ ಸ್ಥಾಪಿಸಲ್ಪಟ್ಟಿತು. ಅಂಜುಮಾನ್‌ 1919ರ ಸೆಪ್ಟೆಂಬರ್‌ ಒಂದರಂದು ತನ್ನ ಮೊತ್ತ ಮೊದಲ ಶಾಲೆಯನ್ನು ಬರೇ ಹನ್ನೊಂದು ವಿದ್ಯಾರ್ಥಿಗಳಿಂದ ಆರಂಭಿಸಿತು. 1929ರಲ್ಲಿ ಪ್ರಾಥಮಿಕ ದರ್ಜೆಗಳನ್ನೂ ಆರಂಭಿಸಿ ಈ ಶಾಲೆ ಸರಕಾರದ ಅಂಗೀಕಾರ ಪಡೆಯಲು ಶಕ್ತವಾಯಿತು. ಅಂದಿನಿಂದ ಸತತ ಉನ್ನತಿಗೇರಿ, 1939ರ ಜೂನ್‌ನಲ್ಲಿ ಪ್ರೌಢ ಶಾಲೆಯ ದರ್ಜೆಗೇರಿತು. ಹೀಗೆ ಭಟ್ಕಳದಲ್ಲಿ ಇಸ್ಲಾಮಿಯಾ ಆಂಗ್ಲೋ ಉರ್ದು ಹೈಸ್ಕೂಲ್‌ ಬೆಳಕು ಕಂಡಿತು. ಆ ಶಾಲೆಯ ಮೊದಲ ತಂಡದಲ್ಲಿದ್ದ ವಿದ್ಯಾರ್ಥಿಗಳ ಸಂಖ್ಯೆ ಕೇವಲ ಎಂಟು ಆದರೂ ದಿನೇ ದಿನೇ ಉನ್ನತಿಗೇರಿದ ಈ ಶಾಲೆ ಮರಳಿ ಹಿಂದಿರುಗಿ ನೋಡಲೇ ಇಲ್ಲ. ಪ್ರಸ್ತುತ ಈ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸಾಕಷ್ಟು ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಇದ್ದಾರೆ. 1966ರ ಶಾಲಾ ವರ್ಷದಲ್ಲಿ ಇಲ್ಲಿ ಆಂಗ್ಲ ಮಾಧ್ಯಮ ವಿಭಾಗ ತೆರೆಯಲಾಗಿದೆ.

1968ರಲ್ಲಿ ಅಂಜುಮಾನ್‌ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಸ್ಥಾಪಿಸಲ್ಪಟ್ಟಿತು. ಆರಂಭದಲ್ಲಿ ವಿಜ್ಞಾನೇತರ ವಿಷಯಗಳನ್ನಷ್ಟೇ ಕಲಿಸಲಾಯಿತಾದರೂ ಒಂದೇ ವರ್ಷದಲ್ಲಿ ವಿಜ್ಞಾನ ವ್ಯಾಸಂಗವನ್ನೂ ಬಳಕೆಗೆ ತರಲಾಯಿತು. ಮೊದಲ ವರ್ಷಗಳಲ್ಲಿ  ಹೈಸ್ಕೂಲ್‌ ಕಟ್ಟಡದಲ್ಲೇ ನಡೆಯುತ್ತಿದ್ದ ಈ ಸಂಸ್ಥೆಯನ್ನು ತರುವಾಯ ಅಂಜುಮಾನಾಬಾದ್‌ ಗುಡ್ಡದಲ್ಲಿರುವ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.

1971ರ ಜೂನ್‌ನಲ್ಲಿ ಅಂಜುಮಾನ್‌ ಗರ್ಲ್ಸ್‌ ಹೈಸ್ಕೂಲ್‌ ಸ್ಥಾಪಿಸಲಾಯಿತು. 1979ರಲ್ಲಿ ಇಂಗ್ಲಿಷ್‌ ಮಾಧ್ಯಮ ವಿಭಾಗವನ್ನು ಬಳಕೆಗೆ ತರಲಾಯಿತು. ಹಾಗೆಯೇ 1980ರಲ್ಲಿ ಹೆಣ್ಣು ಮಕ್ಕಳಿಗಾಗಿ ಅಂಜುಮಾನ್‌ ಪ.ಪೂ.ವಿದ್ಯಾಲಯ ಜನ್ಮ ತಾಳಿತು. ಈಗ ಹುಡುಗಿಯರ ಹೈಸ್ಕೂಲ್‌, ಪ.ಪೂ.ಕಾಲೇಜು,  ಮಹಿಳೆಯರ ಕಾಲೇಜು ಒಂದೇ ಕ್ಯಾಂಪಸ್‌ನಲ್ಲಿ ನಡೆಯುತ್ತಿದ್ದು ಸಾವಿರಾರು ವಿದ್ಯಾರ್ಥಿನಿಯರು ವಿದ್ಯಾರ್ಜನೆಗೈಯುತ್ತಿದ್ದಾರೆ.  ಬಿ.ಎ., ಬಿಎಸ್‌ಸಿ, ಬಿಕಾಂ, ಬಿಬಿಎ, ಬಿಬಿಎಂ, ಎಂಬಿಬಿಎಸ್‌, ಬಿ.ಡಿ.ಎಸ್‌., ಬಿಎಡ್‌ ಪದವಿ ಗಳಿಸುತ್ತ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿರುವುದು ಕೂಡಾ ಹೆಮ್ಮೆಯ ವಿಷಯವಾಗಿದೆ.

1980ರ ದಶಕದಲ್ಲಿ ಆರಂಭವಾದ ಅಂಜುಮಾನ್‌ ಇಂಜಿನಿಯರಿಂಗ್‌ ಕಾಲೇಜು ಉತ್ತರ ಕನ್ನಡ ಜಿಲ್ಲೆಯ ಪ್ರಥಮ ಖಾಸಗಿ ತಾಂತ್ರಿಕ ಕಾಲೇಜು ಎನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು. ಜಿಲ್ಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ಶುಲ್ಕದೊಂದಿಗೆ ಯಾವುದೇ ಭೇದ ಭಾವವಿಲ್ಲದೇ ಶಿಕ್ಷಣ ನೀಡಿದೆ. ಇಂದಿಗೂ ಈ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವುದು ನಮ್ಮ ಊರಿಗೆ ಹೆಮ್ಮೆ. ಅನೇಕ ಬಡ ಕುಟುಂಬದ ಮಕ್ಕಳು ಇಂದು ತಾಂತ್ರಿಕ ಶಿಕ್ಷಣ ಹೊಂದಲು ಅನುಕೂಲವಾಯಿತು.

1996ರಲ್ಲಿ ಸ್ಥಾಪನೆಗೊಂಡ ಅಂಜುಮಾನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯ ಕೀರ್ತಿಯನ್ನು ಇನ್ನಷ್ಟು ವೃದ್ಧಿಸಿದೆ. ಐದು ವಿಷಯಗಳಲ್ಲಿ ಆರು ಸೆಮಿಸ್ಟರ್‌ ನಡೆಸಲು ಪರವಾನಗಿಯಂತೆ ಬಿಬಿಎ ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ. ಕಂಪ್ಯೂಟರ್‌ ವಿಷಯ, ಕಂಪ್ಯೂಟರ್‌ ಲ್ಯಾಬ್‌ ಅತ್ಯಂತ ಮಹತ್ವದ ಮತ್ತು ತಾಜಾ ಮಾಹಿತಿ ಪಡೆಯಲು ಇಂಟರ್‌ನೆಟ್‌ ಸೌಲಭ್ಯ ಕೂಡ ಇದೆ. ಎಂಬಿಎ ಮತ್ತು ಎಂಸಿಎ ಕೋರ್ಸ್‌ಗಳನ್ನು ಕೂಡ ಆರಂಭಿಸುವ ಬಗ್ಗೆ ಕಾರ್ಯಾರಂಭವಾಗಿದೆ. ಉತ್ತಮ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ವಿದ್ಯಾರ್ಥಿಗಳಿಗೆ ವರದಾನವಾಗಿದೆ.

 

ರ್‍ಯಾಂಕ್‌ಗಳ ಸರಮಾಲೆ: ಅಂಜುಮಾನ್‌ ಸಂಸ್ಥೆ ಅಂಜುಮಾನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಆ್ಯಂಡ್‌ ಮ್ಯಾನೇಜ್‌ಮೆಂಟ್‌ ಕಾಲೇಜು ಸ್ಥಾಪನೆ ಮಾಡಿದಾಗಿನಿಂದ ಹಿಡಿದು ಇಂದಿನ ತನಕ ರ್‍ಯಾಂಕ್‌ಗಳ ಸರಮಾಲೆಯನ್ನು ಸೃಷ್ಟಿಸಿದ್ದಾರೆ. ಈಗಾಗಲೇ ಸಂಸ್ಥೆಯ ವಿದ್ಯಾರ್ಥಿ ಪ್ರಥಮ ರ್‍ಯಾಂಕ್‌ ಪಡೆದು ಅಂದಿನ ರಾಷ್ಟ್ರಪತಿ ಡಾ| ಎ.ಪಿ.ಜೆ. ಅಬ್ದುಲ್‌ ಕಲಾಂ ಅವರಿಗೆ ಪ್ರಶಸ್ತಿ ಸ್ವೀಕರಿಸಿದ್ದನ್ನು ನಾವು ಸ್ಮರಿಸಬಹುದು.

ಸಿವಿಲ್‌ ವಿಭಾಗದಲ್ಲಿ ನಾಲ್ಕು ಪ್ರಥಮ ರ್‍ಯಾಂಕ್‌ಗಳೊಂದಿಗೆ ಓರ್ವ ನಾಲ್ಕು ಚಿನ್ನದ ಪದಕ, ಇನ್ನೋರ್ವ 12 ಚಿನ್ನದ ಪದಕ ಗಳಿಸಿದ್ದಾರೆ. ಇಎನ್‌ಸಿಯಲ್ಲಿ ಎರಡು ಪ್ರಥಮ ರ್‍ಯಾಂಕ್‌ ಹಾಗೂ ಸಿಎಸ್‌ಸಿಯಲ್ಲಿ ಒಂದು ಪ್ರಥಮ ರ್‍ಯಾಂಕ್‌ಗಳನ್ನು ಗಳಿಸಿದ ಕೀರ್ತಿ ಇಲ್ಲಿನ ವಿದ್ಯಾರ್ಥಿಗಳಿಗೆ ಸಲ್ಲುತ್ತದೆ.

1986-87 ಅಶೋಕ ಕುಮಾರ್‌ ಬೆಳ್ಳೆ ಇಎನ್‌ಸಿನಲ್ಲಿ ಪ್ರಥಮ ರ್‍ಯಾಂಕ್‌, 1988-89 ವಿನೋದ ಡಿ ನಾಯ್ಕ ಸಿವಿಲ್‌ ದ್ವಿತೀಯ ರ್‍ಯಾಂಕ್‌, 1990-91 ರಾಹುಲ್‌ ಸಿಂಗ್‌ ಇಎನ್‌ಸಿಯಲ್ಲಿ ಪ್ರಥಮ ರ್‍ಯಾಂಕ್‌, 1994-95 ವಿವೇಕ ಆರ್‌. ಪ್ರಭು ಸಿವಿಲ್‌ ದ್ವಿತೀಯ ರ್‍ಯಾಂಕ್‌, 1994-95 ರವಿ ಹೆಗಡೆ ಸಿವಿಲ್‌ ಮೂರನೇ ರ್‍ಯಾಂಕ್‌, 1995-96 ನಶಿಮುದ್ದೀನ್‌ ಸಿವಿಲ್‌ ಪ್ರಥಮ ರ್‍ಯಾಂಕ್‌, 1996-97 ಬಿ. ವಿಠಲಕಿರಣ ಇಎನ್‌ಸಿಯಲ್ಲಿ ಮೂರನೇ ರ್‍ಯಾಂಕ್‌, 1997-98 ರೋಹಿತ್‌ ರಾಘವನ್‌ ಸಿವಿಲ್‌ ನಾಲ್ಕನೇ ರ್‍ಯಾಂಕ್‌, 1997-98 ಗೋವಿಂದರಾಜ್‌ ಭಟ್ಟ ಸಿವಿಲ್‌ ಐದನೇ ರ್‍ಯಾಂಕ್‌, 1997-98 ಸಿದ್ಧಿಕ್‌ ಎ.ಕೆ. ಮೆಕ್ಯಾನಿಕಲ್‌ ನಾಲ್ಕನೇ ರ್‍ಯಾಂಕ್‌, 1997-98 ಅಬ್ದುಲ ಹಶೀಬ ಕತ್ತಲ್‌ ಇಎನ್‌ಸಿಯಲ್ಲಿ ಐದನೇ ರ್‍ಯಾಂಕ್‌, 1998-99  ಜಮಾಲ್‌ ಬಾಷಾ ಪಿ., ಇಎನ್‌ಸಿಯಲ್ಲಿ ಮೂರನೇ ರ್‍ಯಾಂಕ್‌, 1998-99 ಸಂತೋಶ್‌ ನಾಯ್ಕ ಇಎನ್‌ಸಿಯಲ್ಲಿ ನಾಲ್ಕನೇ ರ್‍ಯಾಂಕ್‌, 1998-99 ಸಿ. ಫೆರ್ನಾಂಡೀಸ್‌ ಇಎನ್‌ಸಿಯಲ್ಲಿ ನಾಲ್ಕನೇ ರ್‍ಯಾಂಕ್‌, 1999-2000 ಮೊಹಮ್ಮದ್‌ ಅರ್ಫಾತ್‌ ಪಿ., ಸಿವಿಲ್‌ ಪ್ರಥಮ ರ್‍ಯಾಂಕ್‌, 1999-2000 ಸುನಿಲ್‌ ಕುಮಾರ್‌ ಕೆ.ವಿ. ಇಎನ್‌ಸಿಯಲ್ಲಿ ಪ್ರಥಮ ರ್‍ಯಾಂಕ್‌, 2000-01 ಮೊಹಮ್ಮದ್‌ ಶಾಕೀರ್‌ ಎಂ.ಟಿ.ಪಿ. ಇಎನ್‌ಸಿಯಲ್ಲಿ ದ್ವಿತೀಯ ರ್‍ಯಾಂಕ್‌, 2004-05 ಅಬ್ದುಲ್‌ ರಹಮಾನ್‌ ಪಿ. ಸಿವಿಲ್‌ ಪ್ರಥಮ ರ್‍ಯಾಂಕ್‌, 2005-06 ಪ್ರಸನ್ನ ಕುಮಾರ್‌ ಪಿ. (4 ಚಿನ್ನದ ಪದಕದೊಂದಿಗೆ) ಸಿವಿಲ್‌ ಪ್ರಥಮ ರ್‍ಯಾಂಕ್‌, 2008-09 ಗಣೇಶ ಪೂಜಾರಿ ಇಎನ್‌ಸಿಯಲ್ಲಿ ನಾಲ್ಕನೇ ರ್‍ಯಾಂಕ್‌, 2008-09 ಮೊಹಮ್ಮದ್‌ ಹುಸೇನ್‌ ಸಿವಿಲ್‌ ಎಂಟನೇ ರ್‍ಯಾಂಕ್‌, 2012-13 ನಬೀಲ್‌ ಮುಸ್ತಫಾ (12 ಚಿನ್ನದ ಪದಕದೊಂದಿಗೆ) ಸಿವಿಲ್‌ ಪ್ರಥಮ ರ್‍ಯಾಂಕ್‌, 2013-14 ಅಜಯ್‌ ರಮೇಶ ಪ್ರಭು ಸಿವಿಲ್‌ ಎಂಟನೇ ರ್‍ಯಾಂಕ್‌, 2013-14 ನರಸಿಂಹ್‌ ಸೂರ್ಯಕಾಂತ ಪ್ರಭು ಮೆಕ್ಯಾನಿಕಲ್‌ ವಿಷಯವಾರು ಚಿನ್ನದ ಪದಕ, 2014-15 ಅಕ್ಷಯ್‌ ಕಾಮತ್‌ ಸಿವಿಲ್‌ ವಿಷಯವಾರು ಚಿನ್ನದ ಪದಕ, 2018-19 ಮುಷ್ಪಿರಾ ಶಾಬಂದ್ರಿ ಎಂಬಿಎದಲ್ಲಿ ಒಂಬತ್ತನೇ ರ್‍ಯಾಂಕ್‌ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.       -ಆರ್ಕೆ, ಭಟ್ಕಳ

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

1-weqewqe

Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.