
ಈಗ ಲ್ಯಾಟಿನ್ ಅಮೆರಿಕದ ಮೇಲೆ ಚೀನ ಗುಪ್ತಚರ ಬಲೂನ್ ಹಾರಾಟ
ಮುಂದುವರಿದ ಬಲೂನ್ ಕಾಟ!
Team Udayavani, Feb 5, 2023, 7:30 AM IST

ವಾಷಿಂಗ್ಟನ್: ಇತ್ತೀಚೆಗಷ್ಟೇ ಅಮೆರಿಕದ ಭದ್ರತಾ ಸೂಕ್ಷ್ಮ ಪ್ರದೇಶ ಮೊಂಟಾನದ ಮೇಲೆ ಚೀನಾದ ಗುಪ್ತಚರ ಬಲೂನ್ ಹಾರಾಡಿತ್ತು. ಇದು ಚೀನಾ-ಅಮೆರಿಕದ ನಡುವೆ ಬಿಸಿಬಿಸಿಯ ಮಾತುಕತೆಗಳಿಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಲ್ಯಾಟಿನ್ ಅಮೆರಿಕದಲ್ಲಿ ಚೀನದ ಮತ್ತೊಂದು ಗುಪ್ತಚರ ಬಲೂನ್ ಹಾರಾಟ ಕಂಡುಬಂದಿದೆ. ಇಲ್ಲಿ ನಿರ್ದಿಷ್ಟವಾಗಿ ಯಾವ ದೇಶದ ಮೇಲೆ ಈ ಹಾರಾಟ ಕೇಂದ್ರೀಕರಣಗೊಂಡಿದೆ ಎಂದು ಸ್ಪಷ್ಟವಾಗಿಲ್ಲ.
ಇದು ಅಮೆರಿಕದ ಮೇಲಿನ ಹಾರಾಟವಲ್ಲವಾದ್ದರಿಂದ, ತನಗೆ ಹೆಚ್ಚಿನ ಮಾಹಿತಿಯಿಲ್ಲವೆಂದು ಪೆಂಟಗನ್ ಮಾಧ್ಯಮ ಕಾರ್ಯದರ್ಶಿ ಬ್ರಿಗೇಡಿಯರ್ ಜನರಲ್ ಪ್ಯಾಟ್ ರೈಡರ್ ತಿಳಿಸಿದ್ದಾರೆ. ಇವೆಲ್ಲದರ ಒಟ್ಟು ಪರಿಣಾಮವೆಂಬಂತೆ ಅಮೆರಿಕ ಗೃಹಸಚಿವ ಆ್ಯಂಟನಿ ಬ್ಲಿಂಕೆನ್ ಶುಕ್ರವಾರ ರಾತ್ರಿ ತಮ್ಮ ಚೀನ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.
ಬಹಳ ವರ್ಷಗಳ ನಂತರ ಅಮೆರಿಕದ ದೊಡ್ಡ ನಾಯಕರೊಬ್ಬರು ಚೀನಕ್ಕೆ ತೆರಳಿದ್ದರು. ಈ ವೇಳೆ ಎರಡೂ ದೇಶಗಳ ನಡುವಿರುವ ಹಲವು ಭಿನ್ನಮತಗಳ ಬಗ್ಗೆ ಚರ್ಚೆಯಾಗುವ ನಿರೀಕ್ಷೆಯಿತ್ತು. ಚೀನ ನಡೆಯನ್ನು ಅಮೆರಿಕ ಕಟುವಾಗಿ ಟೀಕಿಸಿದೆ. ಹಾಗಾಗಿ ಪರಿಸ್ಥಿತಿ ಯಾವ ತಿರುವು ಪಡೆಯುತ್ತದೆ ಎನ್ನುವುದು ಖಚಿತವಾಗಿಲ್ಲ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಉಡುಪಿ: ನಕಲಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಎಸ್ಪಿಗೆ ಮನವಿ

ರಾಮನವಮಿ: ದೇವಾಲಯದ ಬಾವಿಯ ಸಿಮೆಂಟ್ ಹಾಸು ಕುಸಿದು 13 ಭಕ್ತರ ಮೃತ್ಯು

ಸ್ವಿಗ್ಗಿ ಸಮೀಕ್ಷೆಯಲ್ಲಿ ಏನಿದೆ…ಇಡ್ಲಿ ಇಂದಿಗೂ ಜನಪ್ರಿಯ ಎಂಬುದಕ್ಕೆ ಈ ವ್ಯಕ್ತಿಯೇ ಸಾಕ್ಷಿ!

ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಸಂಕಷ್ಟ; ಬಂಧಿಸುವಂತೆ ಕೋರ್ಟ್ ಆದೇಶ

ರಚನೆಯಾಗಿ ಎಂಟು ವರ್ಷಕ್ಕೇ ಸೋಂದಾ ಗ್ರಾಪಂಗೆ ಒಲಿದ ಗಾಂಧಿ ಗ್ರಾಮ ಪುರಸ್ಕಾರ