ಗೃಹರಕ್ಷಕ ಸಿಬ್ಬಂದಿಯನ್ನು ಪೊಲೀಸ್‌ ಇಲಾಖೆಗೆ ನೇಮಕ ಮಾಡಿಕೊಳ್ಳಿ: ಗೌರ್ನರ್‌

Team Udayavani, Nov 9, 2019, 3:06 AM IST

ಬೆಂಗಳೂರು: ಅತ್ಯುತ್ತಮ ಸೇವೆ ಸಲ್ಲಿಸುವ ಗೃಹರಕ್ಷಕ ಸಿಬ್ಬಂದಿಯನ್ನು ಆದ್ಯತೆ ಮೇರೆಗೆ ಪೊಲೀಸ್‌ ಇಲಾಖೆಗೆ ನೇಮಕ ಮಾಡಿಕೊಳ್ಳಬೇಕೆಂದು ರಾಜ್ಯಪಾಲ ವಜೂಭಾಯ್‌ ವಾಲಾ ಸಲಹೆ ನೀಡಿದ್ದಾರೆ. ಸೇವಾವಧಿಯಲ್ಲಿ ಅತ್ಯುತ್ತಮ ಸೇವೆಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ, ರಾಷ್ಟ್ರಪತಿಗಳ ಪದಕ, ಅಗ್ನಿಶಾಮಕ ದಳ, ಗೃಹರಕ್ಷಕ ಹಾಗೂ ಪೌರರಕ್ಷಣೆ ರಾಜ್ಯ ವಿಪತ್ತು ನಿರ್ವಹಣಾ ಪಡೆ ಅಧಿಕಾರಿಗಳು, ಸಿಬ್ಬಂದಿಗೆ ಶುಕ್ರವಾರ ಪದಕ ಪ್ರದಾನ ಮಾಡಿ ಅವರು ಮಾತನಾಡಿದರು.

ಗೃಹ ರಕ್ಷಕ ಸಿಬ್ಬಂದಿ ಕೂಡ ಪೊಲೀಸರಂತೆ ಕರ್ತವ್ಯ ನಿರ್ವಹಿಸುತ್ತಾರೆ. ಕಾನೂನು ಸುವ್ಯವಸ್ಥೆ ಕಾಪಾಡು ವಲ್ಲಿಯೂ ಪೊಲೀಸರಿಗೆ ನೆರವಾಗುತ್ತಾರೆ. ಅವರಲ್ಲಿ ಮತ್ತಷ್ಟು ಆತ್ಮಸ್ಥೈರ್ಯ, ಭದ್ರತೆ ನೀಡಲು ಅಸಾಧಾರಣ ಸೇವೆ ಸಲ್ಲಿಸಿ, ಪದಕಗಳು ಹಾಗೂ ಪ್ರಶಂಸಾ ಪತ್ರಗಳನ್ನು ಪಡೆದವರನ್ನು ಪೊಲೀಸ್‌ ಇಲಾಖೆಗೆ ನೇಮಕ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಪದಕ ಪಡೆದವರಷ್ಟೇ ಅಲ್ಲದೆ ಅತ್ಯುತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಯನ್ನೂ ಗುರುತಿಸಿ ಅರ್ಹತೆ ಆಧಾರ ದಲ್ಲಿ ಅವರನ್ನು ನೇಮಕ ಮಾಡಿಕೊಂಡು ತರಬೇತಿ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ರಾಜ್ಯ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಪೊಲೀಸ್‌ ಮಹಾನಿರ್ದೇಶಕ ಎಂ.ಎನ್‌.ರೆಡ್ಡಿ, ಎಡಿಜಿಪಿ ಸುನೀಲ್‌ ಅಗರ್‌ವಾಲ್‌, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಉಪಸ್ಥಿತರಿದ್ದರು.

ರಾಷ್ಟ್ರಪತಿ ಸೇವಾ ಪದಕ ಹಾಗೂ ವಿಶಿಷ್ಟ ಸೇವಾ ಪದಕ ಪಡೆದ ಅಧಿಕಾರಿಗಳು: ಜಿ.ಎಚ್‌ ರವಿಶಂಕರ್‌- ಮುಖ್ಯ ಅಗ್ನಿಶಾಮಕ ಅಧಿಕಾರಿ, ಬೆಂಗಳೂರು, ನರಸಿಂಹಮೂರ್ತಿ ಎಂ.ಆರ್‌ – ಮುಖ್ಯ ಅಗ್ನಿಶಾಮಕ ಅಧಿಕಾರಿ, ಕಲಬುರಗಿ ಪ್ರಾಂತ್ಯ. ಸಿ.ಗುರುಲಿಂಗಯ್ಯ – ಮುಖ್ಯ ಅಗ್ನಿಶಾಮಕ ಅಧಿಕಾರಿ, ಬೆಂಗಳೂರು ಪೂರ್ವ ಪ್ರಾಂತ್ಯ. ಶೇಖರ್‌ ಬಿ.ಎಂ – ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಬೆಂಗಳೂರು. ಬಸವರಾಜ ಜಿ. – ಅಗ್ನಿಶಾಮಕ ಠಾಣಾಧಿಕಾರಿ, ಬಳ್ಳಾರಿ. ಸುನೀಲ್‌ ಕುಮಾರ್‌ – ಅಗ್ನಿಶಾಮಕ ಠಾಣಾಧಿಕಾರಿ, ಕದ್ರಿ. ವೆಂಕಟಸ್ವಾಮಿ – ಅಗ್ನಿಶಾಮಕ ಠಾಣಾಧಿಕಾರಿ, ಬೆಂಗಳೂರು ಉತ್ತರ ಅಗ್ನಿಶಾಮಕ ಠಾಣೆ. ಶಿವಾನಂದಪ್ಪ ಎಂ.ಎನ್‌ – ಸಹಾಯಕ ಅಗ್ನಿಶಾಮಕ ಅಧಿಕಾರಿ, ಹೊಳಲ್ಕೆರೆ. ಆನಂದ್‌ – ಅಗ್ನಿಶಾಮಕ ಠಾಣೆ, ಬಂಗಾರಪೇಟೆ. ಶಿವಕುಮಾರ್‌ ಎಸ್‌.ಕೆ – ನಂಜನಗೂಡು. ಪಾಪಯ್ಯ ವೆಂಕಟಪ್ಪ – ಕೋಲಾರ. ಹೀರಣ್ಣಗೌಡ ಬಿ.ಎಚ್‌- ಜಗಳೂರು . ರಾಜನ್‌ ಪಾಪಣ್ಣ – ರಾಜಭವನ ಅಗ್ನಿ ನಿಯಂತ್ರಕ ಘಟಕ ಬೆಂಗಳೂರು. ರೇವಣಸಿದ್ದೇಶ್ವರ – ದಾವಣಗೆರೆ ಅಗ್ನಿಶಾಮಕ ಠಾಣೆ.

ಗೃಹ ರಕ್ಷಕ ಹಾಗೂ ಪೌರ ರಕ್ಷಣೆ: ಎನ್‌.ಎಸ್‌ ಲಕ್ಷ್ಮೀ ನರಸಿಂಹ – ಸೆಕೆಂಡ್‌ ಇನ್‌ ಕಮಾಂಡ್‌, ಬಳ್ಳಾರಿ ಜಿಲ್ಲಾ ಗೃಹ ರಕ್ಷಕ ದಳ ( 2015ರ ಗಣರಾಜ್ಯೋತ್ಸವ ವಿಶಿಷ್ಟ ಸೇವಾ ಪದಕ). ಚಿಕ್ಕವೆಂಕಟಪ್ಪ – ಬೋಧಕರು, ಗೃಹ ರಕ್ಷಕ ಹಾಗೂ ಪೌರ ರಕ್ಷಣಾ ಅಕಾಡೆಮಿ, ಬೆಂಗಳೂರು (2016ರ ಗಣರಾಜ್ಯೋತ್ಸವ ವಿಶಿಷ್ಟ ಸೇವಾ ಪದಕ). ರಮೇಶ್‌ – ಉಪ ಸಮಾದೇಷ್ಟರು, ಜಿಲ್ಲಾ ಗೃಹ ರಕ್ಷಕ ದಳ, ದಕ್ಷಿಣ ಕನ್ನಡ ಜಿಲ್ಲೆ .

2016ರ ಸ್ವಾತಂತ್ರ್ಯೋತ್ಸವ ವಿಶಿಷ್ಟ ಸೇವಾ ಪದಕ ಹಾಗೂ 2014ರ ಸ್ವಾತಂತ್ರ್ಯೋತ್ಸವ ಶ್ಲಾಘನೀಯ ಸೇವಾ ಪದಕ: ಟಿ.ಭಾರತಿ – ಫ್ಲಟೂನ್‌ ಕಮಾಂಡರ್‌, ಜಿಲ್ಲಾಗೃಹ ರಕ್ಷಕ ದಳ, ಬೆಂಗಳೂರು ಉತ್ತರ. ಹನುಮಂತಪ್ಪ – ಸಹಾಯಕ ಬೋಧಕರು, ಜಿಲ್ಲಾ ಗೃಹರಕ್ಷಕ ದಳ, ಚಿಕ್ಕಮಗಳೂರು. ಸೋಮದಾಸ – ಘಟಕಾಧಿಕಾರಿ, ಜಿಲ್ಲಾ ಗೃಹರಕ್ಷಕ ದಳ ಮೈಸೂರು ಜಿಲ್ಲೆ. ಕ್ರಿಸ್ತಾ ದಯಾಕುಮಾರ್‌- ಫ್ಲಟೂನ್‌ ಕಮಾಂಡರ್‌, ಜಿಲ್ಲಾ ಗೃಹರಕ್ಷಕ ದಳ, ಚಿಕ್ಕಮಗಳೂರು.

2015ರ ಗಣರಾಜ್ಯೋತ್ಸವ ದಿನಾಚರಣೆ – ಶ್ಲಾಘನೀಯ ಸೇವಾ ಪದಕ: ಶಿವಕುಮಾರ್‌ – ಬೋಧಕರು, ಬೆಂಗಳೂರು ಗೃಹರಕ್ಷಕ ದಳ ( ಶಿವಕುಮಾರ್‌ ಮೃತಪಟ್ಟಿದ್ದು ಅವರ ಪತ್ನಿ ವಿಜಯಲಕ್ಷ್ಮೀ ಪದಕ ಸ್ವೀಕರಿಸಿದರು). ಚೆಲುವ ಶೆಟ್ಟಿ-ಸಹಾಯಕ ಬೋಧಕ, ಬೆಂಗಳೂರು. ಶಿವಣ್ಣ – ಚಾಲಕ ಜಿಲ್ಲಾ ಗೃಹರಕ್ಷಕ ದಳ, ಹಾಸನ. ಡಾ.ಶರೀಫ್ ಎಂ.ಎಸ್‌ – ಡಿವಿಜನಲ್‌ ವಾರ್ಡನ್‌, ಪೌರರಕ್ಷಣೆ ಬೆಂ. ನಗರ .

2015ನೇ ಸಾಲಿನ ಸ್ವಾತಂತ್ರೊತ್ಸವ ದಿನಾಚರಣೆ – ಶ್ಲಾಘನೀಯ ಸೇವಾ ಪದಕ: ಶ್ರೀನಿವಾಸ ಮೂರ್ತಿ ಎಂ. – ಕಂಪನಿ ಕಮಾಂಡರ್‌, ಬೆಂಗಳೂರು ಗ್ರಾಮಾಂತರ ಗೃಹರಕ್ಷಕ ದಳ. ಶಂಕರ್‌ರಾವ್‌ ಪಿ.- ಸೀನಿಯರ್‌ ಫ್ಲಟೂನ್‌ ಕಮಾಂಡರ್‌, ಬಳ್ಳಾರಿ ಗೃಹರಕ್ಷಕ ದಳ. ಎಂ.ರಾಜಣ್ಣ – ಬೋಧಕರು, ಗೃಹರಕ್ಷಕ ಮತ್ತು ಪೌರರಕ್ಷಣೆ ಅಕಾಡೆಮಿ, ಬೆಂಗಳೂರು .

2016ನೇ ಗಣರಾಜ್ಯೋತ್ಸವ ದಿನಾಚರಣೆ – ಶ್ಲಾಘನೀಯ ಸೇವಾ ಪದಕ: ಸುಧಾಕರ – ಫ‌ೂಟೂನ್‌ ಕಮಾಂಡರ್‌, ಜಿಲ್ಲಾ ಗೃಹರಕ್ಷಕ ದಳ, ಬೀದರ್‌. ನಾಗರಾಜ ವೀರಪ್ಪ ಆಲದಕಟ್ಟಿ – ಫ‌ೂಟೂನ್‌ ಕಮಾಂಡರ್‌, ಜಿಲ್ಲಾ ಗೃಹರಕ್ಷಕ ದಳ, ಧಾರವಾಡ. ಎಸ್‌.ಡಿ ಭಂಡಾರಿ – ಡಿವಿಜನಲ್‌ ವಾರ್ಡನ್‌, ಪೌರರಕ್ಷಣೆ, ಬೆಂ. ನಗರ .

2016ನೇ ಸಾಲಿನ ಸ್ವಾತಂತ್ರೊತ್ಸವ ದಿನಾಚರಣೆ – ಶ್ಲಾಘನೀಯ ಸೇವಾ ಪದಕ: ಜಿ.ಬಸವರಾಜು – ಎಸ್‌ಪಿಎಲ್‌ಸಿ, ಗೃಹರಕ್ಷಕ ದಳ, ಬಳ್ಳಾರಿ. ಮಂಜುನಾಥ್‌ ಶೆಟ್ಟಿಗಾರ್‌-ಎಸ್‌ಪಿಎಲ್‌ಸಿ, ಗೃಹರಕ್ಷಕ ದಳ, ಉಡುಪಿ. ಆರ್‌.ಸಿದ್ದಪ್ಪಾಜಿ – ಘಟಕಾಧಿಕಾರಿ, ಗೃಹರಕ್ಷಕ ದಳ, ಮೈಸೂರು.

2017ನೇ ಗಣರಾಜ್ಯೋತ್ಸವ ದಿನಾಚರಣೆ – ಶ್ಲಾಘನೀಯ ಸೇವಾ ಪದಕ: ಎಂ.ಶ್ರೀನಿವಾಸ – ಫ‌ೂಟೂನ್‌ ಕಮಾಂಡರ್‌, ಜಿಲ್ಲಾ ಗೃಹರಕ್ಷಕ ದಳ, ಬೆಂಗಳೂರು ಉತ್ತರ. ಕೆ.ಎಚ್‌ ಬ್ಯಾಡಗಿ – ಫ‌ೂಟೂನ್‌ ಕಮಾಂಡರ್‌, ಜಿಲ್ಲಾ ಗೃಹರಕ್ಷಕ ದಳ, ಧಾರವಾಡ. ದೇವಿಪ್ರಸಾದ ಶೆಟ್ಟಿ – ಡಿವಿಜನಲ್‌ ವಾರ್ಡನ್‌, ಪೌರರಕ್ಷಣೆ, ಬೆಂಗಳೂರು ನಗರ.

2017ನೇ ಸಾಲಿನ ಸ್ವಾತಂತ್ರ್ಯೋತ್ಸವ ದಿನಾಚರಣೆ – ಶ್ಲಾಘನೀಯ ಸೇವಾ ಪದಕ: ಡಾ.ಎಚ್‌.ಜೆ ಚಂದ್ರಕಾಂತ – ಸೀನಿಯರ್‌ ಫ್ಲಟೂನ್‌ ಕಮಾಂಡರ್‌, ದಾವಣಗೆರೆ ಗೃಹರಕ್ಷಕ ದಳ. ಬಿ.ಕೆ.ಬಸವಲಿಂಗ – ಫ್ಲಟೂನ್‌ ಕಮಾಂಡರ್‌, ಬಳ್ಳಾರಿ ಗೃಹರಕ್ಷಕ ದಳ. ಪಿ.ಟಿ. ಬಸವರಾಜಪ್ಪ – ಫ್ಲಟೂನ್‌ ಕಮಾಂಡರ್‌, ತುಮಕೂರು ಗೃಹರಕ್ಷಕ ದಳ. ಕೆ.ವಿ.ಮಂಜುನಾಥ – ಫ್ಲಟೂನ್‌ ಕಮಾಂಡರ್‌, ಗೃಹರಕ್ಷಕ ದಳ, ಬೆಂಗಳೂರು ಉತ್ತರ ಜಿಲ್ಲೆ

ಗೃಹ ಸಚಿವರ ಶ್ಲಾಘನೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಪೊಲೀಸ್‌ ಇಲಾಖೆಯನ್ನು ಬಲಪಡಿಸಲು ಇಲಾಖೆಯ ಸಿಬ್ಬಂದಿಯಲ್ಲಿ ನೈತಿಕ ಬಲ, ಆರ್ಥಿಕ ಬಲ ತುಂಬಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಉತ್ತರ ಕರ್ನಾಟಕದ ಪ್ರವಾಹ, ಹುಬ್ಬಳ್ಳಿಯಲ್ಲಿ ಸಂಭವಿಸಿದ ಕಟ್ಟಡ ದುರಂತ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಸಂಭವಿಸಿದ ಅವಘಡಗಳಲ್ಲಿ ಕ್ಷಿಪ್ರವಾಗಿ ಸ್ಪಂದಿಸಿ, ಅಗ್ನಿಶಾಮಕ ದಳ ಹಾಗೂ ವಿಪತ್ತು ನಿರ್ವಹಣಾ ಪಡೆ ಅತ್ಯುತ್ತಮ ಕಾರ್ಯ ನಿರ್ವಹಿಸಿದೆ ಎಂದು ಶ್ಲಾಘಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಆಪರೇಷನ್‌ ಕಮಲದ ಪಿತಾಮಹ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಯಶವಂತಪುರದ ಅಭ್ಯರ್ಥಿ ಪಿ. ನಾಗರಾಜ್‌...

  • ಬೆಂಗಳೂರು: ಉಪಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ಗೆ ಸೋಲಿನ ಭೀತಿ ಕಾಡುತ್ತಿದ್ದು, ಒಳ ಒಪ್ಪಂದ ಮಾಡಿಕೊಂಡಿರುವುದು ಕಾಣುತ್ತಿದೆ. ಜೆಡಿಎಸ್‌ ದಿನಕ್ಕೊಂದು...

  • ಬೆಂಗಳೂರು: ರಾಜ್ಯದಲ್ಲಿ 15 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದು ಕಾಂಗ್ರೆಸ್‌ ಹಿರಿಯ ನಾಯಕರು ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಡುವಿನ ಮುಸುಕಿನ...

  • ಬೆಂಗಳೂರು: ಲೋಕಸಭೆ ಚುನಾವಣೆ ಲೆಕ್ಕಾಚಾರದಲ್ಲಿ ಯಡಿಯೂರಪ್ಪ ಅವರು ಹದಿನೈದು ಕ್ಷೇತ್ರ ಗೆಲ್ಲುತ್ತೇವೆಂದು ಹೇಳುತ್ತಿದ್ದಾರೆ. ಆದರೆ, ಜನತೆ ಬದಲಾವಣೆ ಬಯಸಿದ್ದಾರೆಂದು...

  • ಬೆಂಗಳೂರು: ರಾಜ್ಯ ಸರ್ಕಾರ 2020ನೇ ಸಾಲಿನ ಸರ್ಕಾರಿ ರಜಾ ದಿನಗಳನ್ನು ಘೋಷಣೆ ಮಾಡಿದ್ದು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಎರಡನೇ ಹಾಗೂ ನಾಲ್ಕನೇ ಶನಿವಾರ ಹಾಗೂ ಭಾನುವಾರಗಳನ್ನು...

ಹೊಸ ಸೇರ್ಪಡೆ