ಹೈಕೋರ್ಟಿಗೆ ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕ

ಬಂಟ್ವಾಳ ಮೂಲದ ರಾಜೇಶ್‌ ರೈ ಕಲ್ಲಂಗಾಲ ಸಹಿತ ಇಬ್ಬರ ನೇಮಕಕ್ಕೆ ಕೇಂದ್ರ ಸರಕಾರ ಆದೇಶ

Team Udayavani, Feb 7, 2023, 6:40 AM IST

ಹೈಕೋರ್ಟಿಗೆ ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕ

ಬೆಂಗಳೂರು: ನ್ಯಾಯವಾದಿಗಳಾದ ವಿಜಯಕುಮಾರ್‌ ಅಡಗೌಡ ಪಾಟೀಲ್‌ ಮತ್ತು ರಾಜೇಶ್‌ ರೈ ಕಲ್ಲಂಗಾಲ ಅವರನ್ನು ಹೈಕೋರ್ಟಿನ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ಕೇಂದ್ರ ಸರಕಾರ ನೇಮಿಸಿದೆ.

ಈ ಸಂಬಂಧ ಕೇಂದ್ರ ಕಾನೂನು ಮತ್ತು ನ್ಯಾಯ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.
ಜ.19ರಂದು ಸಿಜೆಐ ಡಿ.ವೈ. ಚಂದ್ರಚೂಡ್‌ ನೇತೃತ್ವದ ಸುಪ್ರೀಂಕೋರ್ಟ್‌ ಕೊಲೀಜಿಯಂ ಇವರಿಬ್ಬರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿತ್ತು.

ನ್ಯಾಯವಾದಿ ತಜಲಿ ಮೌಲಾಸಾಬ್‌ ನದಾಫ್‌ ಅವರ ಹೆಸರನ್ನೂ ಕೊಲೀಜಿಯಂ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಆದರೆ ಆ ಹೆಸರನ್ನು ಕೇಂದ್ರ ಅನುಮೋದಿಸಿಲ್ಲ.

ಮೂಲತಃ ಉತ್ತರ ಕರ್ನಾಟಕ ಭಾಗದ ವಿಜಯಕುಮಾರ್‌ ಪಾಟೀಲ್‌ ಸುಮಾರು 10 ವರ್ಷಗಳಿಂದಲೂ ಸರಕಾರಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜೇಶ್‌ ರೈ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಂಗಾಲದವರು. ಅವರು 1999ರಿಂದ ಹೈಕೋರ್ಟಿನಲ್ಲಿ ವಕೀಲಿಕೆ ಮಾಡುತ್ತಿದ್ದು, ಸಿವಿಲ್‌ ಹಾಗೂ ಕ್ರಿಮಿನಲ್‌ ಕೇಸುಗಳನ್ನು ನಡೆಸುವುದರಲ್ಲಿ ಖ್ಯಾತರಾಗಿದ್ದಾರೆ.

ಹೈಕೋರ್ಟಿನ ಬೆಂಗಳೂರು ಪ್ರಧಾನ ಪೀಠ, ಧಾರವಾಡ ಮತ್ತು ಕುಲಬುರಗಿ ಪೀಠಗಳಿಗೆ ಒಟ್ಟು 62 ನ್ಯಾಯಮೂರ್ತಿಗಳ ಹುದ್ದೆ ಮಂಜೂರಾಗಿದ್ದು, ಸದ್ಯ 51 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಇಬ್ಬರು ನೇಮಕಗೊಂಡಿರುವುದರಿಂದ ಆ ಸಂಖ್ಯೆ 53ಕ್ಕೆ ಏರಿಕೆಯಾಗಲಿದ್ದು, ಇನ್ನೂ 9 ಹುದ್ದೆಗಳು ಖಾಲಿ ಇರಲಿವೆ.

ಟಾಪ್ ನ್ಯೂಸ್

lok adalat

ಚೆಕ್‌ ಅಮಾನ್ಯ ಪ್ರಕರಣ: 5.69 ಲಕ್ಷ ರೂ. ದಂಡ

police karnataka

ಕುರ್ಕಾಲು:ಯುವತಿ ನಾಪತ್ತೆ

ನೂತನ ನೇಕಾರ ನಿಗಮ ಸ್ಥಾಪನೆ: ಸಿಎಂಗೆ ಅಭಿನಂದನೆ

ನೂತನ ನೇಕಾರ ನಿಗಮ ಸ್ಥಾಪನೆ: ಸಿಎಂಗೆ ಅಭಿನಂದನೆ

cON-AA

15ಕ್ಕೂ ಹೆಚ್ಚು ದಲಿತ ನಾಯಕರು ಕಾಂಗ್ರೆಸ್‌ ಸೇರ್ಪಡೆ

police siren

ಬೆಳಾಲು ಎರ್ಮಲದಲ್ಲಿ ಅಕ್ರಮವಾಗಿ ಶೇಖರಿಸಿಟ್ಟ ಮದ್ಯ ವಶ

ಮಕ್ಕಳ ಪರೀಕ್ಷೆ ಜತೆಗೆ ಆಟವಾಡುವುದು ಬೇಡ

ಮಕ್ಕಳ ಪರೀಕ್ಷೆ ಜತೆಗೆ ಆಟವಾಡುವುದು ಬೇಡ

ಸಾರ್ವಜನಿಕ ಶಿಕ್ಷಣ ಇಲಾಖೆ ಪದನಾಮ ಬದಲಾವಣೆ

ಸಾರ್ವಜನಿಕ ಶಿಕ್ಷಣ ಇಲಾಖೆ ಪದನಾಮ ಬದಲಾವಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೂತನ ನೇಕಾರ ನಿಗಮ ಸ್ಥಾಪನೆ: ಸಿಎಂಗೆ ಅಭಿನಂದನೆ

ನೂತನ ನೇಕಾರ ನಿಗಮ ಸ್ಥಾಪನೆ: ಸಿಎಂಗೆ ಅಭಿನಂದನೆ

cON-AA

15ಕ್ಕೂ ಹೆಚ್ಚು ದಲಿತ ನಾಯಕರು ಕಾಂಗ್ರೆಸ್‌ ಸೇರ್ಪಡೆ

ಸಾರ್ವಜನಿಕ ಶಿಕ್ಷಣ ಇಲಾಖೆ ಪದನಾಮ ಬದಲಾವಣೆ

ಸಾರ್ವಜನಿಕ ಶಿಕ್ಷಣ ಇಲಾಖೆ ಪದನಾಮ ಬದಲಾವಣೆ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ

ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

lok adalat

ಚೆಕ್‌ ಅಮಾನ್ಯ ಪ್ರಕರಣ: 5.69 ಲಕ್ಷ ರೂ. ದಂಡ

police karnataka

ಕುರ್ಕಾಲು:ಯುವತಿ ನಾಪತ್ತೆ

ನೂತನ ನೇಕಾರ ನಿಗಮ ಸ್ಥಾಪನೆ: ಸಿಎಂಗೆ ಅಭಿನಂದನೆ

ನೂತನ ನೇಕಾರ ನಿಗಮ ಸ್ಥಾಪನೆ: ಸಿಎಂಗೆ ಅಭಿನಂದನೆ

cON-AA

15ಕ್ಕೂ ಹೆಚ್ಚು ದಲಿತ ನಾಯಕರು ಕಾಂಗ್ರೆಸ್‌ ಸೇರ್ಪಡೆ

police siren

ಬೆಳಾಲು ಎರ್ಮಲದಲ್ಲಿ ಅಕ್ರಮವಾಗಿ ಶೇಖರಿಸಿಟ್ಟ ಮದ್ಯ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.