ವಿಧಾನಮಂಡಲದ ಸಮಿತಿಗಳಿಗೆ ನೇಮಕ

Team Udayavani, Sep 21, 2019, 3:07 AM IST

ಬೆಂಗಳೂರು: ರಾಜ್ಯ ವಿಧಾನಮಂಡಲದ 2019-20 ನೇ ಸಾಲಿನ ವಿವಿಧ ಸ್ಥಾಯಿ ಸಮಿತಿಗಳ ರಚನೆ ಮಾಡಲಾಗಿದ್ದು, ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಕಾಂಗ್ರೆಸ್‌ನ ಎಚ್‌.ಕೆ.ಪಾಟೀಲ್‌, ಸಾರ್ವಜನಿಕ ಉದ್ದಿಮೆಗಳ ಸಮಿತಿ ಅಧ್ಯಕ್ಷರಾಗಿ ಬಿಜೆಪಿ ಅರವಿಂದ ಲಿಂಬಾವಳಿ ನೇಮಕಗೊಂಡಿದ್ದಾರೆ.

ಸಾರ್ವಜನಿಕ ಲೆಕ್ಕಪತ್ರ ಸಮಿತಿ: ಎಚ್‌.ಕೆ.ಪಾಟೀಲ್‌ (ಅಧ್ಯಕ್ಷರು), ಉಮೇಶ್‌ ಕತ್ತಿ, ಕೆ.ಜಿ.ಬೋಪಯ್ಯ, ಮುರುಗೇಶ್‌ ನಿರಾಣಿ, ಬಿ.ಸಿ.ನಾಗೇಶ್‌, ಎಸ್‌.ಎಸ್‌. ಪಾಟೀಲ್‌, ಪಿ.ರಾಜೀವ್‌, ಸತೀಶ್‌ ರೆಡ್ಡಿ, ಸುನಿಲ್‌ಕುಮಾರ್‌, ರಮೇಶ್‌ಕುಮಾರ್‌, ಆರ್‌.ನರೇಂದ್ರ, ಯಶವಂತರಾಯಗೌಡ ವಿಠಲಗೌಡ ಪಾಟೀಲ, ಈಶ್ವರ್‌ ಖಂಡ್ರೆ, ಎಚ್‌.ಡಿ.ರೇವಣ್ಣ, ಎ.ಟಿ.ರಾಮಸ್ವಾಮಿ. (ಸದಸ್ಯರು).

ಸಾರ್ವಜನಿಕ ಉದ್ದಿಮೆ ಸಮಿತಿ: ಅರವಿಂದ ಲಿಂಬಾವಳಿ (ಅಧ್ಯಕ್ಷರು), ಎನ್‌.ವೈ.ಗೋಪಾಲ ಕೃಷ್ಣ , ಅರವಿಂದ ಬೆಲ್ಲದ್‌, ಲಾಲಾಜಿ ಆರ್‌.ಮೆಂಡನ್‌, ಬಾಲಚಂದ್ರ ಜಾರಕಿಹೊಳಿ, ಎಸ್‌.ರಘು, ಮಹಾದೇವಪ್ಪ ಶಿವಲಿಂಗಪ್ಪ ಯಾದವಾಡ್‌, ಜಿ.ಎಚ್‌.ತಿಪ್ಪಾರೆಡ್ಡಿ, ಆರ್‌.ವಿ.ದೇಶಪಾಂಡೆ, ಕೆ.ರಾಘ ವೇಂದ್ರ ಹಿಟ್ನಾಲ್‌, ತನ್ವೀರ್‌ ಸೇಠ್, ಎಂ.ಕೃಷ್ಣಪ್ಪ, ಎಸ್‌.ಆರ್‌.ಶ್ರೀನಿವಾಸ್‌, ವಿನಿಶಾ ನಿರೋ (ಸದಸ್ಯರು).

ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ: ಎಸ್‌.ಅಂಗಾರ (ಅಧ್ಯಕ್ಷರು), ಎಂ.ಚಂದ್ರಪ್ಪ, ಬಸವರಾಜ್‌ ಮತ್ತಿಮೂಡ್‌, ಶಂಕರ್‌ ಪಾಟೀಲ್‌ ಮುನೇನಕೊಪ್ಪ, ಅಮೃತ್‌ ಅಯ್ಯಪ್ಪ ದೇಸಾಯಿ, ಎನ್‌.ಲಿಂಗಣ್ಣ, ಎಂ.ಪಿ.ಕುಮಾರಸ್ವಾಮಿ, ನೆಹರು ಓಲೇಕಾರ್‌, ಪಿ.ಟಿ.ಪರಮೇಶ್ವರ್‌ ನಾಯ್ಕ, ಅಬ್ಬಯ್ಯ ಪ್ರಸಾದ್‌, ಬಸವಗೌಡ ದದ್ದಲ್‌, ಡಿ.ಎಸ್‌.ಹೊಗೇರಿ, ಎಚ್‌.ಕೆ.ಕುಮಾರಸ್ವಾಮಿ, ಡಾ.ಶ್ರೀನಿವಾಸಮೂರ್ತಿ, ಎನ್‌.ಮಹೇಶ್‌ (ಸದಸ್ಯರು).

ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ: ಕುಮಾರ್‌ ಬಂಗಾರಪ್ಪ (ಅಧ್ಯಕ್ಷರು), ದಿನಕರ್‌ ಕೇಶವ ಶೆಟ್ಟಿ, ಸುಭಾಷ್‌ ಗುತ್ತೇದಾರ್‌, ಡಿ.ವೇದ ವ್ಯಾಸ್‌ ಕಾಮತ್‌, ಉಮಾನಾಥ್‌ ಎ.ಕೋಟ್ಯಾನ್‌, ಬಳ್ಳಾರಿ ವಿರೂ ಪಾಕ್ಷಪ್ಪ ರುದ್ರಪ್ಪ, ಬಿ.ಹರ್ಷ ವರ್ಧನ್‌, ಎನ್‌.ಎ. ಹ್ಯಾರೀಸ್‌, ಕುಸುಮಾವತಿ ಶಿವಳ್ಳಿ, ಬಿ.ಶಿವಣ್ಣ, ಟಿ.ವೆಂಕಟರಮಣಯ್ಯ, ಡಾ.ಯತೀಂದ್ರ ಸಿದ್ದರಾಮಯ್ಯ, ದೇವಾನಂದ್‌ ಚವ್ಹಾಣ್‌, ರಾಜಾ ವೆಂಕಟಪ್ಪ ನಾಯ್ಕ, ಕೆ.ಮಹದೇವ (ಸದಸ್ಯರು).

ಅಧೀನ ಶಾಸನ ರಚನಾ ಸಮಿತಿ: ಎಸ್‌.ಎ.ರಾಮದಾಸ್‌ (ಅಧ್ಯಕ್ಷರು), ಬೆಳ್ಳಿ ಪ್ರಕಾಶ್‌, ಜ್ಯೋತಿ ಗಣೇಶ್‌, ಎಲ್‌. ನಾಗೇಂದ್ರ, ರಾಜ್‌ಕುಮಾರ್‌ ಪಾಟೀಲ್‌, ಹರೀಶ್‌ ಪೂಂಜಾ, ಎ.ಎಸ್‌.ಜಯರಾಂ, ಜಿ. ಕರುಣಾಕರ ರೆಡ್ಡಿ, ವಿ.ಮುನಿಯಪ್ಪ, ಎಂ.ವೈ.ಪಾಟೀಲ್‌, ಡಾ.ಎಚ್‌.ಡಿ .ರಂಗನಾಥ್‌, ಬಿ.ನಾಗೇಂದ್ರ, ನಂಜೇಗೌಡ, ಆರ್‌.ಮಂಜುನಾಥ್‌ , ಕೆ.ಎಸ್‌.ಲಿಂಗೇಶ್‌ (ಸದಸ್ಯರು).

ಸಭೆ ಮುಂದಿಡಲಾಗುವ ಕಾಗದ ಪತ್ರಗಳ ಸಮಿತಿ: ಸಾ.ರಾ.ಮಹೇಶ್‌ (ಅಧ್ಯಕ್ಷರು), ಎಂ.ಎಸ್‌.ಸೋಮಲಿಂಗಪ್ಪ, ಬಸವರಾಜ್‌ ದಡೇಸಗೂರ್‌, ಸುನಿಲ್‌ ನಾಯ್ಕ, ಅಶೋಕ್‌ ನಾಯ್ಕ, ಪ್ರೀತಂ ಗೌಡ, ರಾಮಪ್ಪ ಲಮಾಣಿ, ಪರಣ್ಣ ಮುನವಳ್ಳಿ, ಭೀಮಾನಾಯ್ಕ, ಟಿ.ರಘುಮೂರ್ತಿ, ರಹೀಂ ಖಾನ್‌, ಗಣೇಶ್‌ ಹುಕ್ಕೇರಿ, ಅಖಂಡ ಶ್ರೀನಿವಾಸಮೂರ್ತಿ, ಎಂ.ಶ್ರೀನಿವಾಸ್‌ (ಸದಸ್ಯರು).

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ: ಕೆ.ಪೂರ್ಣಿಮಾ (ಅಧ್ಯಕ್ಷರು), ರೂಪಾಲಿ ನಾಯಕ್‌, ಭರತ್‌ ಶೆಟ್ಟಿ, ಅನಿಲ್‌ ಎಸ್‌.ಬೆನಕೆ, ಎಂ.ಕೃಷ್ಣಪ್ಪ, ಎಸ್‌.ವಿ.ರಾಮಚಂದ್ರ, ದತ್ತಾತ್ರೇಯ ಪಾಟೀಲ್‌ ರೇವೂರ್‌, ವೆಂಕಟರೆಡ್ಡಿ ಮುದ್ನಾಳ್‌, ಡಾ.ಅಂಜಲಿ ಹೇಮಂತ್‌ ನಿಂಬಾಳ್ಕರ್‌, ಎಂ.ರೂಪಕಲಾ, ಕನೀಜ್‌ ಫಾತಿಮಾ, ಲಕ್ಷ್ಮಿ ಹೆಬ್ಟಾಳ್ಕರ್‌, ವೆಂಕಟರಮಣಪ್ಪ, ಅನಿತಾ ಕುಮಾರಸ್ವಾಮಿ, ಬಿ.ಸತ್ಯನಾರಾಯಣ(ಸದಸ್ಯರು).

ಗ್ರಂಥಾಲಯ ಸಮಿತಿ: ವಿಧಾನಪರಿಷತ್‌ ಸಭಾಪತಿಯವರು ಅಧ್ಯಕ್ಷರಾಗಿದ್ದು, ಎಸ್‌.ಆರ್‌.ವಿಶ್ವನಾಥ್‌ , ಉದಯ ಗರುಡಾಚಾರ್‌, ಡಾ.ಅವಿನಾಶ್‌ ಉಮೇಶ್‌ ಜಾದವ್‌, ಯು.ಟಿ.ಖಾದರ್‌, ಡಾ.ಕೆ.ಆನ್ನದಾನಿ ಸದಸ್ಯರಾಗಿದ್ದಾರೆ.

ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಗಳ ಸಮಿತಿ: ಅರಗ ಜ್ಞಾನೇಂದ್ರ (ಅಧ್ಯ ಕ್ಷರು), ಸಂಜೀವ್‌ ಮಠಂದೂರ್‌, ರಾಜೇಶ್‌ ನಾಯ್ಕ, ಸಿದ್ದು ಸವದಿ, ಕೆ.ಶಿವನಗೌಡ ನಾಯಕ್‌, ಜಿ.ಕರುಣಾಕರೆಡ್ಡಿ, ಹಾಲಪ್ಪ, ನರಸಿಂಹ ನಾಯಕ್‌, ಸಂಗಮೇಶ್ವರ್‌, ಅಜಯ್‌ ಧರ್ಮಸಿಂಗ್‌, ಬಿ.ನಾರಾಯಣರಾವ್‌, ರಾಜೇಗೌಡ, ಅನಿಲ್‌ ಚಿಕ್ಕಮಾದು, ಸಿ.ಎಸ್‌.ಪುಟ್ಟರಾಜು, ಮಾಗನಗೌಡ ಕುಂದಕೂರ (ಸದಸ್ಯರು).

ಸಮಿತಿಗಳಿಗೆ ವಿಧಾನಪರಿಷತ್‌ ಸದಸ್ಯರನ್ನು ವಿಧಾನ ಪರಿಷತ್‌ ಸಭಾಪತಿ ನಾಮನಿರ್ದೇಶನಗೊಳಿಸಬೇಕಾಗಿದೆ. ಪ್ರತಿ ಸಮಿತಿಗೆ ಐವರು ವಿಧಾನಪರಿಷತ್‌ ಸದಸ್ಯರನ್ನು ನೇಮಿಸಲಾಗುತ್ತದೆ.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ