ಖರಾಬು ಟ್ಯೂನ್‌ ಸುತ್ತ …


Team Udayavani, May 25, 2020, 4:22 AM IST

tune kharabu

ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಖರಾಬು ಹಾಡು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದೆ. ಮಾಸ್‌ ಪ್ರಿಯರು ಸಖತ್‌ ಇಷ್ಟಪಟ್ಟಿದ್ದಾ ರೆ. ಈಗ ಈ ಚಿತ್ರದ ಸಣ್ಣ ವಿವಾದವೊಂದು  ಎದ್ದಿ ದೆ. ಅದು ಚಿತ್ರದ ಟ್ಯೂನ್‌ ಕುರಿತು. ಚಿತ್ರದ  ಟ್ಯೂನ್‌ ತೆಲುಗು ಹಾಗೂ ತಮಿಳಿನ ಚಿತ್ರವೊಂದರ ಟ್ಯೂನ್‌ನಂತಿದೆ ಎಂದು. ಆ ಟ್ಯೂನ್‌ ಅನ್ನು ಖರಾಬು ಟ್ಯೂನ್‌ಗೆ ಸಾಮ್ಯತೆ  ಇದೆ ಎಂದು.

ಆದರೆ, ಚಿತ್ರತಂಡ ಮಾತ್ರ ಇದನ್ನು ಸಂಪೂರ್ಣವಾಗಿ ನಿರಾಕರಿಸಿದೆ. ಇದು ಒರಿಜಿನಲ್‌  ಟ್ಯೂನ್‌ ಆಗಿದ್ದು, ಬೇರೆ ಯಾವುದೇ ಸಿನಿಮಾದ ಟ್ಯೂನ್‌ ಅನ್ನು ಹೋಲುತ್ತಿಲ್ಲ ಎಂದಿದೆ. ಜೊತೆಗೆ ಇವತ್ತು ಕಾಪಿ ರೈಟ್‌ ಕಾಯ್ದೆ ಕಠಿಣವಾಗಿದ್ದು, ಆ ತರಹ ಏನಾದರೂ ಬಳಸಿಕೊಂಡರೆ ಖಂಡಿತಾ ಕೇಸ್‌ ಹಾಕಬಹುದು ಎಂದು ಚಿತ್ರತಂಡ  ಹೇಳಿದೆ. ಜೊತೆಗೆ ತೆಲುಗು-ತಮಿಳು ಟ್ಯೂನ್‌ಗೆ ಇರುವ ವ್ಯತ್ಯಾಸ ಹಾಗೂ ತಮ್ಮ ಖರಾಬು ಸಾಂಗ್‌ನ ಟ್ಯೂನ್‌ಗೆ ಇರುವ ವ್ಯತ್ಯಾಸವನ್ನು ಚಿತ್ರತಂಡ ವಿವರಿಸಿದೆ.

ನಂದಕಿಶೋರ್‌ ನಿರ್ದೇಶನದ ಪೊಗರು ಚಿತ್ರದಲ್ಲಿ ರಶ್ಮಿ ಕಾ ಮಂದಣ್ಣ  ನಾಯಕಿ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಡೈಲಾಗ್‌ ಟೀಸರ್‌ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದೆ. ಧ್ರುವ ನಟನೆಯ ಭರ್ಜರಿ ಚಿತ್ರ 2017ರಲ್ಲಿ ಬಿಡುಗಡೆಯಾಗಿದ್ದು, ಆ ನಂತರ ಅವರ ಯಾವ ಸಿನಿಮಾವೂ ಬಿಡುಗಡೆಯಾಗಿಲ್ಲ.  ಈಗ ಪೊಗರು ಬಿಡುಗಡೆಯ ಹಂತಕ್ಕೆ ಬಂದಿದ್ದು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.

ಧ್ರುವ ಬಗ್ಗೆ ಹರಿಪ್ರಿಯಾ ಮಾತು: ಲಾಕ್‌ಡೌನ್‌ನಿಂದ  ಸಿನಿಮಾ ಶೂಟಿಂಗ್‌ ಇಲ್ಲದೇ ಮನೆಯಲ್ಲೇ ಕುಳಿತಿರುವ ಹರಿಪ್ರಿಯಾ ಅವರು, ತಮ್ಮ ಬೇಬ್‌ ನೋಸ್‌  ಬ್ಲಾಗ್‌ನಲ್ಲಿ ಕಥೆಗಳನ್ನು ಅವರ ಅನುಭವಗಳನ್ನು ಬರೆಯುತ್ತಿರುತ್ತಾರೆ. ಹೀಗೆ ಹರಿಪ್ರಿಯಾ ತಮ್ಮ ಬ್ಲಾಗ್‌ನಲ್ಲಿ ನಟ ಧ್ರುವ ಸರ್ಜಾ ಅವರ ಬಗ್ಗೆ ಬರೆದಿದ್ದು, ಧ್ರುವ ಸಿಂಪಲ್‌ ಹುಡುಗ ಎಂದು ಹಾಡಿಹೊಗಳಿದ್ದಾರೆ. ಜೊತೆಗೆ ಲಾಕ್‌ಡೌನ್‌  ನಡುವೆ ಧ್ರುವ ಸರ್ಜಾಗೆ ಕರೆ ಮಾಡಿ ಮಾತನಾಡಿರುವ ಹರಿಪ್ರಿಯಾ, ಆ ಸಂಭಾಷಣೆಯನ್ನು ತಮ್ಮ ಬ್ಲಾಗ್‌ನಲ್ಲಿ  ಬರೆದುಕೊಂಡಿದ್ದಾರೆ.

ನಾನು ನನ್ನ ಫೋನಿಗೆ ಯಾವುದೇ ಅಂಜನೇಯನ ಫೋಟೋ ಬಂದ್ರೆ ಅದನ್ನು ಧ್ರುವಗೆ  ಕಳುಹಿಸುತ್ತೇನೆ. ಹಾಗೇ ಇತ್ತೀಚೆಗೆ ಧ್ರುವಗೆ ಒಂದು ಅಂಜನೇಯನ ಫೋಟೋ ಕಳುಹಿಸಿದೆ. ಆಗ ಅವರು ಥ್ಯಾಂಕ್ಸ್‌ ರೀ ಎಂದು ರಿಪ್ಲೆ ಮಾಡಿದರು. ಅವರು ರೀ ಎಂದು ರೇಗಿಸುತ್ತಾರೆ ಎಂದು ಹರಿಪ್ರಿಯಾ ಹೇಳಿದ್ದಾರೆ. ಧ್ರುವ ರೀ ಎಂದು ಯಾಕೆ ರೇಗಿಸುತ್ತಾರೆ ಎಂದು ಹೇಳಿರುವ ಹರಿಪ್ರಿಯಾ, ಒಂದು ದಿನ ಶೂಟಿಂಗ್‌ನಲ್ಲಿ ನಾವಿಬ್ಬರೂ ಫೋಟೋಶೂಟ್‌ಗೆ ಹೋಗಬೇಕಿತ್ತು.

ನಾನು ಫೋನಿನಲ್ಲಿ ಬ್ಯುಸಿ ಇದ್ದೇ ಫೋಟೋಗ್ರಾಫ‌ರ್‌ ಧ್ರುವ ಸರ್ಜಾ ಅವರು ಬಂದ ಮೇಲೆ ಅವರನ್ನು ಕರೆದುಕೊಂಡು ಬನ್ನಿ ಎಂದು  ಹೇಳಿ ಹೋದರು. ನಂತರ ಬಂದ ಧ್ರುವಗೆ ನಾನು ಫೋನ್‌ ನೋಡಿಕೊಂಡೇ ಫೋಟೋಶೂಟ್‌ಗೆ ಹೋಗಬೇಕಂತೆ ಬನ್ರಿ ಎಂದೆ, ಆಗಿನಿಂದ ಅವರು ನನ್ನನ್ನು ರೀ ಎಂದು ರೇಗಿಸುತ್ತಾರೆ ಎಂದು ಹರಿಪ್ರಿಯ ತಿಳಿಸಿದ್ದಾರೆ. ನನಗೆ ಜಿರಳೆ ಕಂಡರೆ  ಭಯ ಹಾಗೇ ಧ್ರುವ ಅವರಿಗೆ ಎತ್ತರ ಜಾಗ ಎಂದರೆ ಭಯಪಡುತ್ತಾರೆ ಎಂದು ಹೇಳಿರುವ ಹರಿಪ್ರಿಯಾ,

ನಾವು ಭರ್ಜರಿ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೆವು. ಆ ಸಿನಿಮಾದ ಹಾಡಿನ ಶೂಟಿಂಗ್‌ ಮಾಡಲು ನಾವು ಸ್ಲೊವೆನಿಯಾಗೆ ಹೋಗಿದ್ದೇವು.  ಅಲ್ಲಿ ಎತ್ತರ ಪ್ರದೇಶದ ತುದಿಯಲ್ಲಿ ನಿಂತು ನಟಿಸಬೇಕಿತ್ತು. ಆಗ ಧ್ರುವ ಅವರು ಭಯದಿಂದ ನಡುಗುತ್ತಿದ್ದರು ಎಂದು ಹರಿಪ್ರಿಯ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

ಟಾಪ್ ನ್ಯೂಸ್

ಭಾರತದ ಜಯಕ್ಕೆ ಅಡ್ಡಿಯಾದ ರವೀಂದ್ರ ಮತ್ತು ಮಂದಬೆಳಕು: ಕಾನ್ಪುರ ಟೆಸ್ಟ್ ಡ್ರಾನಲ್ಲಿ ಅಂತ್ಯ

ಭಾರತದ ಜಯಕ್ಕೆ ಅಡ್ಡಿಯಾದ ರವೀಂದ್ರ ಮತ್ತು ಮಂದಬೆಳಕು: ಕಾನ್ಪುರ ಟೆಸ್ಟ್ ಡ್ರಾನಲ್ಲಿ ಅಂತ್ಯ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 153 ಅಂಕ ಏರಿಕೆ; 17 ಸಾವಿರ ಗಡಿ ದಾಟಿದ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 153 ಅಂಕ ಏರಿಕೆ; 17 ಸಾವಿರ ಗಡಿ ದಾಟಿದ ನಿಫ್ಟಿ

1-nirani

ಮುಖ್ಯಮಂತ್ರಿಯಾಗುತ್ತಾರೆ: ಈಶ್ವರಪ್ಪ ಹೇಳಿಕೆಗೆ ನಾನು ಋಣಿ ಎಂದ ನಿರಾಣಿ

yaddi

‘ತಮಾಷೆಗಾಗಿ ಹೇಳಿದ್ದು’ ಎಂದು ಈಶ್ವರಪ್ಪ ಹೇಳಿದ್ದಾರಲ್ಲ : ಯಡಿಯೂರಪ್ಪ ಸ್ಪಷ್ಟನೆ

1-sdsd

ಸಂಕಷ್ಟದ ಸಂದರ್ಭ ಬೊಮ್ಮಾಯಿ ಬದಲಾವಣೆ ಅಸಾಧ್ಯ: ಕಾರಜೋಳ

ರಾಜ್ಯಸಭೆಯಲ್ಲಿ ಕಾಂಗ್ರೆಸ್, ಟಿಎಂಸಿ ಗದ್ದಲ, ಕೋಲಾಹಲ; 12 ಮಂದಿ ಸಂಸದರ ಅಮಾನತು

ರಾಜ್ಯಸಭೆಯಲ್ಲಿ ಕಾಂಗ್ರೆಸ್, ಸಿಪಿಎಂ ಗದ್ದಲ, ಕೋಲಾಹಲ; 12 ಮಂದಿ ಸಂಸದರ ಅಮಾನತು

cm-b-bommai

ಒಮಿಕ್ರಾನ್ ಬಗ್ಗೆ ರಾಜ್ಯ ಸರ್ಕಾರ ತುರ್ತು ಕ್ರಮ ಕೈಗೊಳ್ಳುತ್ತಿದೆ: ಸಿಎಂ ಬೊಮ್ಮಾಯಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಯವಿಟ್ಟು ಥಿಯೇಟರ್‌ ಒಳಗೆ ಪಟಾಕಿ ಹೊಡೆಯಬೇಡಿ : ಅಭಿಮಾನಿಗಳಲ್ಲಿ ಸಲ್ಮಾನ್‌ ಮನವಿ

ದಯವಿಟ್ಟು ಥಿಯೇಟರ್‌ ಒಳಗೆ ಪಟಾಕಿ ಹೊಡೆಯಬೇಡಿ : ಅಭಿಮಾನಿಗಳಲ್ಲಿ ಸಲ್ಮಾನ್‌ ಮನವಿ

ಪಣಜಿ: 52 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ತೆರೆ

ಪಣಜಿ: 52 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ತೆರೆ

ಆಸ್ಪತ್ರೆಯಿಂದಲೇ ಕಮಲ ಹಾಸನ್‌ ಬಿಗ್‌ಬಾಸ್‌ ಶೋ

ಆಸ್ಪತ್ರೆಯಿಂದಲೇ ಕಮಲ ಹಾಸನ್‌ ಬಿಗ್‌ಬಾಸ್‌ ಶೋ

ಟ್ವಿಟರ್‌ ಖಾತೆ ನಿಷ್ಕ್ರಿಯಗೊಳಿಸಿದ ನಟ ಹರ್ಷವರ್ದನ್‌

ಟ್ವಿಟರ್‌ ಖಾತೆ ನಿಷ್ಕ್ರಿಯಗೊಳಿಸಿದ ನಟ ಹರ್ಷವರ್ದನ್‌

RRR

ಬೆಂಗಳೂರಿನಲ್ಲಿ ನಡೆಯಲಿದೆ ‘ಆರ್‌ಆರ್‌ಆರ್‌’ ಪ್ರೀ ರಿಲೀಸ್‌ ಇವೆಂಟ್‌

MUST WATCH

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

udayavani youtube

Suratkal : ಮತ್ತೆ ATM ಕೇಂದ್ರ ಪುಡಿ ಪುಡಿ! 2ತಿಂಗಳ ಅಂತರದಲ್ಲಿ ನಡೆದ 2ನೇ ಘಟನೆ

udayavani youtube

ದಾಂಡೇಲಿ : ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು, ಮನೆಯ ವಸ್ತುಗಳೆಲ್ಲ ಚೆಲ್ಲಾಪಿಲ್ಲಿ

udayavani youtube

ಭೀಕರ ರಸ್ತೆ ಅಪಘಾತ : ಅಂತ್ಯಕ್ರಿಯೆಗೆ ತೆರಳುತ್ತಿದ್ದ 18 ಮಂದಿ ದುರ್ಮರಣ

udayavani youtube

ಬೂದು ಬಾಳೆ ಸೇವನೆಯಿಂದ ಆರೋಗ್ಯವಾಗಿರುವುದು ನಿಮ್ಮ ನಾಳೆ

ಹೊಸ ಸೇರ್ಪಡೆ

20indresh

ಶಹಾಪುರಕ್ಕೆ ನ್ಯಾಯಮೂರ್ತಿ ಇಂದ್ರೀಶ್‌ ಭೇಟಿ

ಭಾರತದ ಜಯಕ್ಕೆ ಅಡ್ಡಿಯಾದ ರವೀಂದ್ರ ಮತ್ತು ಮಂದಬೆಳಕು: ಕಾನ್ಪುರ ಟೆಸ್ಟ್ ಡ್ರಾನಲ್ಲಿ ಅಂತ್ಯ

ಭಾರತದ ಜಯಕ್ಕೆ ಅಡ್ಡಿಯಾದ ರವೀಂದ್ರ ಮತ್ತು ಮಂದಬೆಳಕು: ಕಾನ್ಪುರ ಟೆಸ್ಟ್ ಡ್ರಾನಲ್ಲಿ ಅಂತ್ಯ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 153 ಅಂಕ ಏರಿಕೆ; 17 ಸಾವಿರ ಗಡಿ ದಾಟಿದ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 153 ಅಂಕ ಏರಿಕೆ; 17 ಸಾವಿರ ಗಡಿ ದಾಟಿದ ನಿಫ್ಟಿ

1-nirani

ಮುಖ್ಯಮಂತ್ರಿಯಾಗುತ್ತಾರೆ: ಈಶ್ವರಪ್ಪ ಹೇಳಿಕೆಗೆ ನಾನು ಋಣಿ ಎಂದ ನಿರಾಣಿ

19crop

ಬೆಳೆ ಪರಿಹಾರದಲ್ಲಿ ಸರ್ಕಾರ ತಾರತಮ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.