ಪುತ್ರನ ಬಂಧನ ಎಂದು ಉದ್ಯಮಿಗೆ ಹಣದ ಬೇಡಿಕೆ ಇಟ್ಟ ಅನಾಮಿಕರು !

Team Udayavani, Jun 16, 2024, 6:50 AM IST

ಪುತ್ರನ ಬಂಧನ ಎಂದು ಉದ್ಯಮಿಗೆ ಹಣದ ಬೇಡಿಕೆ ಇಟ್ಟ ಅನಾಮಿಕರು !

ಪುತ್ತೂರು: ಬೊಳುವಾರಿನ ಜವುಳಿ ಮಳಿಗೆಯೊಂದರ ಮಾಲಕರಿಗೆ ಅನಾಮಿಕರು ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಳಿಗೆಯ ಮಾಲಕ ಗೋಪಾಲ ದೂರು ನೀಡಿದವರು. ನಾಲ್ಕು ದಿನಗಳ ಹಿಂದೆ ಕರೆ ಮಾಡಿದ ಅನಾಮಿಕ ವ್ಯಕ್ತಿ ಹಿಂದಿಯಲ್ಲಿ ಮಾತನಾಡಿ, ಸಿಬಿಐ ಕ್ರೈಂ ಬ್ರ್ಯಾಂಚ್‌ನಿಂದ ಮಾತನಾಡುತ್ತಿದ್ದೇನೆ ಎಂದು ಪರಿಚಯಿಸಿ, ಕೃಷ್ಣ ಪ್ರಣಾಮ್‌ ಯಾರು ಎಂದು ಪ್ರಶ್ನಿಸಿದ್ದಾನೆ.

ಉತ್ತರಿಸಿದ ಗೋಪಾಲ್‌ ಆತ ನನ್ನ ಪುತ್ರ ಎಂದು ಹೇಳಿದ್ದರು. ನಿಮ್ಮ ಮಗನನ್ನು ಡ್ರಗ್ಸ್‌ ಕೇಸ್‌ನಲ್ಲಿ ಬಂಧಿಸಿದ್ದೇವೆ. ನಿಮ್ಮ ಮಗ ಸೇರಿದಂತೆ ಮೂವರನ್ನು ಈ ಕೇಸ್‌ನಲ್ಲಿ ಬಂಧಿಸಿ ದಿಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ. ಈ ಸಂದರ್ಭದಲ್ಲಿ ಗೋಪಾಲ ಪುತ್ರನ ಜತೆ ಮಾತನಾಡಿಸಿ ಎಂದಾಗ ಆ ಕಡೆಯಿಂದ ರಾಜಿ ಮಾಡೋಣ ಎಂದು ಹೇಳಿ ಹಣಕ್ಕೆ ಬೇಡಿಕೆ ಇಟ್ಟರು. ಇದರಿಂದ ಸಂಶಯಗೊಂಡ ಗೋಪಾಲ, ಹಣ ನೀಡುವುದಿಲ್ಲ, ಜೈಲಿಗೆ ಕರೆದುಕೊಂಡು ಹೋಗಿ ಎಂದಾಗ ಕರೆ ಕಟ್‌ ಆಯಿತು. ಆ ಬಳಿಕ ಗೋಪಾಲ ಅವರು ಪುತ್ರನಿಗೆ ಕರೆ ಮಾಡಿ ವಿಚಾರಿಸಿದ್ದು ಈ ವೇಳೆ ಆತ ಯಾವುದೇ ಸಮಸ್ಯೆ ಇಲ್ಲದೆ ಇರುವುದು ಕಂಡು ಬಂದಿತ್ತು.

ಮತ್ತೆ ಕರೆ !
ಅನಾಮಿಕರು ಕೆಲವು ದಿನ ಕಳೆದು ಗೋಪಾಲ ಅವರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಗೋಪಾಲ ಅವರು ಫೋನ್‌ ಪೇ ನಂಬರ್‌ ಕಳಿಸಲು ಹೇಳಿದ್ದರು. ನಂಬರ್‌ ಹೇಳಿದ ಅನಾಮಿಕ 50,000 ರೂ. ಹಾಕುವಂತೆ ತಿಳಿಸಿದ್ದ. ಅರ್ಧ ಗಂಟೆ ಕಳೆದು ಹಣ ಕಳಿಸುತ್ತೇನೆ ಎಂದು ಹೇಳಿ ಗೋಪಾಲ್‌ ಕರೆ ಮಾಡಿದ್ದಾರೆ. ಪೋನ್‌ ನಂಬರ್‌ ಅನ್ನು ಟ್ರೂಕಾಲರ್‌ನಲ್ಲಿ ಪರಿಶೀಲಿಸಿದಾಗ ಫಝಲ್‌ ಎಂಬ ಹೆಸರು ಬಂದಿದ್ದು ಪಾಕಿಸ್ಥಾನದ ಕೋಡ್‌ ಸಂಖ್ಯೆ ಆರಂಭವಾಗುವ ನಂಬರ್‌ ಆಗಿತ್ತು.

ಟಾಪ್ ನ್ಯೂಸ್

Ammonia Gas: ಮೀನು ಸಂಸ್ಕರಣಾ ಘಟಕದಲ್ಲಿ ಅನಿಲ ಸೋರಿಕೆ… 30 ಮಹಿಳಾ ಕಾರ್ಮಿಕರು ಅಸ್ವಸ್ಥ

Ammonia Gas: ಮೀನು ಸಂಸ್ಕರಣಾ ಘಟಕದಲ್ಲಿ ಅನಿಲ ಸೋರಿಕೆ… 30 ಮಹಿಳಾ ಕಾರ್ಮಿಕರು ಅಸ್ವಸ್ಥ

7-Hebri-2

Hebri ನಾಡ್ಪಾಲು: 2 ದಿನಗಳ ಹಿಂದೆ ನೀರು ಪಾಲಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

Thirthahalli: ಕ್ಷೇತ್ರಕ್ಕೆ ಒಳ್ಳೆಯ ಕೆಲಸ ಮಾಡುವುದು ನನ್ನ ಜವಾಬ್ದಾರಿ: ಆರಗ ಜ್ಞಾನೇಂದ್ರ

Thirthahalli: ಕ್ಷೇತ್ರಕ್ಕೆ ಒಳ್ಳೆಯ ಕೆಲಸ ಮಾಡುವುದು ನನ್ನ ಜವಾಬ್ದಾರಿ: ಆರಗ ಜ್ಞಾನೇಂದ್ರ

rishabh pant

Delhi Capitals ತಂಡ ತೊರೆಯುವತ್ತ ರಿಷಭ್ ಪಂತ್; ಕೀಪರ್ ಖರೀದಿಗೆ ಮುಂದಾದ ಯಶಸ್ವಿ ಟೀಮ್

6-ankola

Ankola:ಶಿರೂರು ಗುಡ್ಡ ಕುಸಿತ ಪ್ರಕರಣ:ಲಾರಿ ಚಾಲಕನ ಪತ್ತೆಗಾಗಿ ಮೆಟಲ್ ಡಿಟೆಕ್ಟರ್‌ ಬಳಸಿ ಶೋಧ

Mumbai: ಭಾರಿ ಮಳೆಗೆ ಕಟ್ಟಡ ಭಾಗ ಕುಸಿತ… ಓರ್ವ ಮಹಿಳೆ ಮೃತ್ಯು, ಹಲವರು ಸಿಲುಕಿರುವ ಶಂಕೆ

Mumbai: ಭಾರಿ ಮಳೆಗೆ ಕಟ್ಟಡ ಭಾಗ ಕುಸಿತ… ಮಹಿಳೆ ಮೃತ್ಯು, ಕಟ್ಟದಲ್ಲಿದ್ದವರ ರಕ್ಷಣೆ

Desi Swara: ಭಾವನೆಗಳ ನವರೂಪವೋ ಅಥವಾ ಗತ ಕಾಲದ ಭಾಷೆಯೋ…..

Desi Swara: ಇಮೋಜಿ… ಭಾವನೆಗಳ ನವರೂಪವೋ ಅಥವಾ ಗತ ಕಾಲದ ಭಾಷೆಯೋ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-bantwala

Bantwala: ಶಾಮಿಯಾನದ ಕೆಲಸಗಾರ ವಿದ್ಯುತ್ ಶಾಕ್ ಗೆ ಬಲಿ

WhatsApp ಮಾಹಿತಿ ನಂಬಿ 22 ಲಕ್ಷ ರೂ. ಕಳೆದುಕೊಂಡ ಪುತ್ತೂರಿನ ವ್ಯಕ್ತಿ!

WhatsApp ಮಾಹಿತಿ ನಂಬಿ 22 ಲಕ್ಷ ರೂ. ಕಳೆದುಕೊಂಡ ಪುತ್ತೂರಿನ ವ್ಯಕ್ತಿ!

Sampaje: ನಡುರಾತ್ರಿ ರಸ್ತೆಯಲ್ಲಿ ಸಿಲುಕಿದವರಿಗೆ ಖಾದರ್‌ ಸಹಾಯಹಸ್ತ

Sampaje: ನಡುರಾತ್ರಿ ರಸ್ತೆಯಲ್ಲಿ ಸಿಲುಕಿದವರಿಗೆ ಖಾದರ್‌ ಸಹಾಯಹಸ್ತ

Heavy Rains ಸುಬ್ರಹ್ಮಣ್ಯ: ಹೆದ್ದಾರಿಗೆ ನುಗ್ಗಿದ ಕುಮಾರಧಾರೆ

Heavy Rains ಸುಬ್ರಹ್ಮಣ್ಯ: ಹೆದ್ದಾರಿಗೆ ನುಗ್ಗಿದ ಕುಮಾರಧಾರೆ

Charmadi ಹೆದ್ದಾರಿ ಅವ್ಯವಸ್ಥೆ: ಕೆಸರಿನಲ್ಲಿ ಹುದುಗಿದ ಬಸ್‌, ಲಾರಿ

Charmadi ಹೆದ್ದಾರಿ ಅವ್ಯವಸ್ಥೆ: ಕೆಸರಿನಲ್ಲಿ ಹುದುಗಿದ ಬಸ್‌, ಲಾರಿ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Ammonia Gas: ಮೀನು ಸಂಸ್ಕರಣಾ ಘಟಕದಲ್ಲಿ ಅನಿಲ ಸೋರಿಕೆ… 30 ಮಹಿಳಾ ಕಾರ್ಮಿಕರು ಅಸ್ವಸ್ಥ

Ammonia Gas: ಮೀನು ಸಂಸ್ಕರಣಾ ಘಟಕದಲ್ಲಿ ಅನಿಲ ಸೋರಿಕೆ… 30 ಮಹಿಳಾ ಕಾರ್ಮಿಕರು ಅಸ್ವಸ್ಥ

gfe

Shimoga; ಡೆಂಗ್ಯೂ ಜ್ವರದಿಂದ ಬಾಲಕ ಸಾವು

7-Hebri-2

Hebri ನಾಡ್ಪಾಲು: 2 ದಿನಗಳ ಹಿಂದೆ ನೀರು ಪಾಲಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

Thirthahalli: ಕ್ಷೇತ್ರಕ್ಕೆ ಒಳ್ಳೆಯ ಕೆಲಸ ಮಾಡುವುದು ನನ್ನ ಜವಾಬ್ದಾರಿ: ಆರಗ ಜ್ಞಾನೇಂದ್ರ

Thirthahalli: ಕ್ಷೇತ್ರಕ್ಕೆ ಒಳ್ಳೆಯ ಕೆಲಸ ಮಾಡುವುದು ನನ್ನ ಜವಾಬ್ದಾರಿ: ಆರಗ ಜ್ಞಾನೇಂದ್ರ

rishabh pant

Delhi Capitals ತಂಡ ತೊರೆಯುವತ್ತ ರಿಷಭ್ ಪಂತ್; ಕೀಪರ್ ಖರೀದಿಗೆ ಮುಂದಾದ ಯಶಸ್ವಿ ಟೀಮ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.