ವಿಶ್ವದ ನಂ.2 ಟೆನಿಸ್ ಆಟಗಾರ್ತಿ ಅರಿನಾ ಸಬಲೆಂಕಾಗೆ ಕೋವಿಡ್ ಪಾಸಿಟಿವ್
Team Udayavani, Oct 3, 2021, 11:14 PM IST
ಇಂಡಿಯನ್ ವೆಲ್ಸ್: ವಿಶ್ವದ ನಂ.2 ಟೆನಿಸ್ ಆಟಗಾರ್ತಿ, ಬೆಲರೂಸ್ನ ಅರಿನಾ ಸಬಲೆಂಕಾಗೆ ಕೋವಿಡ್-19 ದೃಢಪಟ್ಟಿದೆ. ಹೀಗಾಗಿ “ಇಂಡಿಯನ್ ವೆಲ್ಸ್ ಟೆನಿಸ್ ಪಂದ್ಯಾವಳಿ’ಯಿಂದ ದೂರ ಸರಿದಿದ್ದಾರೆ.
ಈ ಡಬ್ಲ್ಯುಟಿಎ 1000 ಪಂದ್ಯಾವಳಿಯಿಂದ ನಂ.1 ಆಟಗಾರ್ತಿ ಆ್ಯಶ್ಲಿ ಬಾರ್ಟಿ ಹಿಂದೆ ಸರಿದುದರಿಂದ ಅರಿನಾ ಸಬಲೆಂಕಾಗೆ ಅಗ್ರ ಶ್ರೇಯಾಂಕ ಲಭಿಸಿತ್ತು.
ಸಬಲೆಂಕಾ ಅವರ ಗೈರಿನಿಂದ ಇಂಡಿಯನ್ ವೆಲ್ಸ್ ಕೂಟದ ಆಕರ್ಷಣೆ ಇನ್ನಷ್ಟು ಕಡಿಮೆಯಾಗಿದೆ.
ಈಗಾಗಲೇ ನಂ.1 ಆಟಗಾರ ನೊವಾಕ್ ಜೊಕೋವಿಕ್, 2018ರ ಚಾಂಪಿಯನ್ ನವೋಮಿ ಒಸಾಕಾ, 23 ಗ್ರ್ಯಾನ್ಸ್ಲಾಮ್ಗಳ ಒಡತಿ ಸೆರೆನಾ ವಿಲಿಯಮ್ಸ್ ಕೂಡ ಹಿಂದೆ ಸರಿದಿದ್ದಾರೆ.
ಇದನ್ನೂ ಓದಿ:ಕಾಬೂಲ್ ಮಸೀದಿಯಲ್ಲಿ ಬಾಂಬ್ ಸ್ಫೋಟ: ಇಬ್ಬರು ಸಾವು, ಹಲವರಿಗೆ ಗಾಯ
ಸೋಮವಾರದಿಂದ ಆರಂಭವಾಗಲಿರುವ ಈ ಪಂದ್ಯಾವಳಿ ಅ. 17ರ ತನಕ ಸಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
Mollywood: ಸೂಪರ್ ಹಿಟ್ ʼಪ್ರೇಮಲುʼ ಸೀಕ್ವೆಲ್ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ
Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು
Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ
Box office: ಈ ವಾರ ಬಾಲಿವುಡ್ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?