Udayavni Special

ಸದ್ಯ ರಾಜ್ಯ ಬಿಜೆಪಿ ನಾಯಕರು ನಿರಾಳ

Team Udayavani, May 21, 2019, 6:00 AM IST

BJP-545

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಯು ಸರಾಸರಿ 18ರಿಂದ 20 ಸ್ಥಾನ ಗೆಲ್ಲುವುದಾಗಿ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಹೇಳಿರುವುದು ಸದ್ಯ ರಾಜ್ಯ ಬಿಜೆಪಿ ನಾಯಕರಲ್ಲಿ ನಿರಾಳ ಭಾವ ಮೂಡಿಸಿದೆ.

ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಕಾರಣಕ್ಕೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್‌- ಜೆಡಿಎಸ್‌ ಲೋಕಸಭೆ ಚುನಾವಣೆಗೂ ಮೈತ್ರಿ ಮುಂದುವರಿಸಿದವು. ಇದು ಪಕ್ಷಕ್ಕೆ ವರದಾನವಾಗಲಿದ್ದು, ಮುಖ್ಯವಾಗಿ ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಲಾಭವಾಗಲಿದೆ ಎಂಬುದು ಬಿಜೆಪಿ ಲೆಕ್ಕಾಚಾರವಾಗಿತ್ತು. ಸದ್ಯ ಬಹಿರಂಗವಾಗಿರುವ ಬಹುತೇಕ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ನಿರೀಕ್ಷೆಯಷ್ಟೇ ಸ್ಥಾನಗಳನ್ನು ಗೆಲ್ಲುವುದಾಗಿ ಭವಿಷ್ಯ ಹೇಳಿರುವುದು ಬಿಜೆಪಿ ನಾಯಕರ ಆತ್ಮವಿಶ್ವಾಸ ಹೆಚ್ಚಿಸಿದೆ.

ಈ ಬಾರಿ ರಾಜ್ಯದಲ್ಲಿ ಬಿಜೆಪಿ 22 ಸ್ಥಾನ ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್‌.ಯಡಿಯೂರಪ್ಪ ಸೇರಿ ಹಲವು ನಾಯಕರು ನಿರಂತರವಾಗಿ ಹೇಳುತ್ತಲೇ ಬಂದಿದ್ದಾರೆ. ಮೇಲ್ನೋಟಕ್ಕೆ ಎಲ್ಲರೂ 22 ಸ್ಥಾನ ಗೆಲ್ಲುವುದಾಗಿ ಹೇಳುತ್ತಿದ್ದರೂ ಅಷ್ಟೂ ಸ್ಥಾನ ಗೆಲ್ಲುವ ವಿಶ್ವಾಸ ಬಹುತೇಕ ನಾಯಕರಿಗೆ ಇದ್ದಂತಿರಲಿಲ್ಲ. ಮೈತ್ರಿ ಪಕ್ಷಗಳ ಮತದಾರರು ಒಂದಾಗಿ ಮತ ಚಲಾಯಿಸಿದರೆ ಬಿಜೆಪಿ ಕೇವಲ 14ರಿಂದ 15 ಕ್ಷೇತ್ರವನ್ನಷ್ಟೇ ಗೆಲ್ಲಲು ಸಾಧ್ಯ ಎಂಬುದು ನಾಯಕರ ಆತಂಕಕ್ಕೆ ಕಾರಣವಾಗಿತ್ತು.

ಎರಡು ಹಂತದ ಮತದಾನ ಮುಗಿದ ನಂತರವೂ ಬಹುಪಾಲು ನಾಯಕರ ಅಭಿಪ್ರಾಯವೂ ಅದೇ ರೀತಿ ಇತ್ತು. ಮೈತ್ರಿ ಪಕ್ಷಗಳ ಕಿತ್ತಾಟ ಇತರೆ ಕಾರಣಗಳಿಗೆ ಕೆಲವೆಡೆ ಬಿಜೆಪಿಗೆ ಅನುಕೂಲವಾದರೂ ಗರಿಷ್ಠವೆಂದರೆ 17- 18 ಸ್ಥಾನ ಗೆಲ್ಲುವ ನಿರೀಕ್ಷೆಯನ್ನಷ್ಟೇ ಇಟ್ಟುಕೊಂಡಿದ್ದರು. ಹಾಗಾಗಿ ಹಲವು ನಾಯಕರಿಗೆ ಒಳಗೊಳಗೆ ಸ್ವಲ್ಪ ಅಂಜಿಕೆ ಇದ್ದಂತಿತ್ತು ಎನ್ನಲಾಗಿದೆ.

ಆತಂಕ ನಿವಾರಿಸಿದ ಸಮೀಕ್ಷೆಗಳು: ಈ ನಡುವೆ ಭಾನುವಾರ ಬಹಿರಂಗವಾಗಿರುವ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ಸರಾಸರಿ 18ರಿಂದ 20 ಸ್ಥಾನ ಗೆಲ್ಲುವುದಾಗಿ ಭವಿಷ್ಯ ನುಡಿದಿವೆ. ಎಬಿಪಿ ಹಾಗೂ ನೀಲ್ಸನ್‌ ಸಂಸ್ಥೆಗಳು ಬಿಜೆಪಿ 15 ಸ್ಥಾನ ಗೆಲ್ಲುವುದಾಗಿ ಹೇಳಿರುವುದನ್ನು ಹೊರತುಪಡಿಸಿದರೆ ಉಳಿದ ಸಮೀಕ್ಷೆಗಳು ಬಿಜೆಪಿ ಕನಿಷ್ಠ 18ರಿಂದ ಗರಿಷ್ಠ 23 ಸ್ಥಾನ ಗೆಲ್ಲುವುದಾಗಿ ಅಂದಾಜಿಸಿವೆ. ಇಂಡಿಯಾ ಟುಡೆ- ಆ್ಯಕ್ಸಿಸ್‌ ಸಮೀಕ್ಷೆಯು ಬಿಜೆಪಿ ಕನಿಷ್ಠ 21ರಿಂದ ಗರಿಷ್ಠ 25 ಸ್ಥಾನ ಗೆಲ್ಲುವುದಾಗಿ ಹೇಳಿದೆ. ಇದರಿಂದ ಸಹಜವಾಗಿಯೇ ರಾಜ್ಯ ಬಿಜೆಪಿ ನಾಯಕರು ಸದ್ಯದ ಮಟ್ಟಿಗೆ ನಿರಾಳರಾಗಿದ್ದಾರೆ. ಬಿಜೆಪಿ ನಾಯಕರ ಜತೆಗೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಲ್ಲೂ ಸಮೀಕ್ಷಾ ವರದಿಗಳು ನಿರಾಳ ಭಾವ ಮೂಡಿಸಿದೆ.

ಕರ್ನಾಟಕ 2ನೇ ಸ್ಥಾನದಲ್ಲಿ
ದೇಶದಲ್ಲಿ ಪ್ರಧಾನಿ ಮೋದಿ ಅಲೆ ದೊಡ್ಡ ಮಟ್ಟದಲ್ಲಿರುವ ರಾಜ್ಯಗಳ ಪೈಕಿ ಬಿಹಾರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಹಾಗಾಗಿ ಮೋದಿ ಅಲೆ ಈ ಬಾರಿಯ ಚುನಾವಣೆಯಲ್ಲೂ ಪಕ್ಷದ ಕೈಹಿಡಿಯುವ ನಿರೀಕ್ಷೆಯನ್ನು ಸಮೀಕ್ಷಾ ವರದಿಗಳು ಇನ್ನಷ್ಟು ಗಟ್ಟಿಗೊಳಿಸಿವೆ. ರಾಜ್ಯದಲ್ಲಿ ಬಿಜೆಪಿ ಈವರೆಗೆ 19 ಲೋಕಸಭಾ ಸ್ಥಾನ ಗೆದ್ದ ದಾಖಲೆ ಇದೆ. ಅದನ್ನು ಈ ಚುನಾವಣೆಯಲ್ಲಿ ಹಿಂದಿಕ್ಕುವ ನಿರೀಕ್ಷೆ ಮೂಡಿದೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

1 ಗಂಟೆ 26 ನಿಮಿಷ ಭಾಷಣ; ಭಾರತ ಕೆಣಕಲು ಬಂದವರಿಗೆ ತಕ್ಕ ಉತ್ತರ ಕೊಟ್ಟಿದ್ದೇವೆ: ಪ್ರಧಾನಿ

1 ಗಂಟೆ 26 ನಿಮಿಷ ಭಾಷಣ; ಭಾರತ ಕೆಣಕಲು ಬಂದವರಿಗೆ ತಕ್ಕ ಉತ್ತರ ಕೊಟ್ಟಿದ್ದೇವೆ: ಪ್ರಧಾನಿ

ಕಲಬುರಗಿ: ಜಿಟಿಜಿಟಿ ಮಳೆ ನಡುವೆ ಸ್ವಾತಂತ್ರ್ಯೋತ್ಸವ ಸಂಭ್ರಮ

ಕಲಬುರಗಿ: ಜಿಟಿಜಿಟಿ ಮಳೆ ನಡುವೆ ಸ್ವಾತಂತ್ರ್ಯೋತ್ಸವ ಸಂಭ್ರಮ

ಕೋವಿಡ್ ಮಧ್ಯೆ ಮಂಗಳೂರಿನಲ್ಲಿ ಸರಳ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ

ಕೋವಿಡ್ ಮಧ್ಯೆ ಮಂಗಳೂರಿನಲ್ಲಿ ಸರಳ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ

ಕಲ್ಯಾಣ ರಾಜ್ಯ ಕಟ್ಟುವುದೇ ನಮ್ಮ ಗುರಿ: ಸ್ವಾಂತ್ರ್ಯೋತ್ಸವ ಭಾಷಣದಲ್ಲಿ ಸಿಎಂ ಯಡಿಯೂರಪ್ಪ

ಕಲ್ಯಾಣ ರಾಜ್ಯ ಕಟ್ಟುವುದೇ ನಮ್ಮ ಗುರಿ: ಸ್ವಾಂತ್ರ್ಯೋತ್ಸವ ಭಾಷಣದಲ್ಲಿ ಸಿಎಂ ಯಡಿಯೂರಪ್ಪ

ಕೋವಿಡ್ ವಾರಿಯರ್ಸ್ ಗೆ ನಾನು ತಲೆಬಾಗಿ ನಮಿಸುತ್ತೇನೆ: ಪ್ರಧಾನಿ ಮೋದಿ

ಕೋವಿಡ್ ವಾರಿಯರ್ಸ್ ಗೆ ನಾನು ತಲೆಬಾಗಿ ನಮಿಸುತ್ತೇನೆ: ಪ್ರಧಾನಿ ಮೋದಿ

bird freedom

ಸ್ವಾತಂತ್ರ್ಯ ಜೀವನದ ಅವಿಭಾಜ್ಯ ಅಂಗ

ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವ ಸಂಭ್ರಮ: ಕೆಂಪುಕೋಟೆಯಲ್ಲಿ ಪ್ರಧಾನಿ ನರೆಂದ್ರ ಮೋದಿ

LIVE ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವ ಸಂಭ್ರಮ: ಕೆಂಪುಕೋಟೆಯಲ್ಲಿ ಪ್ರಧಾನಿ ನರೆಂದ್ರ ಮೋದಿ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಲ್ಯಾಣ ರಾಜ್ಯ ಕಟ್ಟುವುದೇ ನಮ್ಮ ಗುರಿ: ಸ್ವಾಂತ್ರ್ಯೋತ್ಸವ ಭಾಷಣದಲ್ಲಿ ಸಿಎಂ ಯಡಿಯೂರಪ್ಪ

ಕಲ್ಯಾಣ ರಾಜ್ಯ ಕಟ್ಟುವುದೇ ನಮ್ಮ ಗುರಿ: ಸ್ವಾಂತ್ರ್ಯೋತ್ಸವ ಭಾಷಣದಲ್ಲಿ ಸಿಎಂ ಯಡಿಯೂರಪ್ಪ

ಶೈಕ್ಷಣಿಕ ಸಾಲ: ಕೇಂದ್ರ ಸರಕಾರಕ್ಕೆ ನೋಟಿಸ್‌

ಶೈಕ್ಷಣಿಕ ಸಾಲ: ಕೇಂದ್ರ ಸರಕಾರಕ್ಕೆ ನೋಟಿಸ್‌

ಪಕ್ಷದ ಕಾರ್ಯಾಲಯದಿಂದ ಸಂಸ್ಕಾರ: ನಡ್ಡಾ

ಪಕ್ಷದ ಕಾರ್ಯಾಲಯದಿಂದ ಸಂಸ್ಕಾರ: ನಡ್ಡಾ

ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ?

ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ?

ರಾಜ್ಯದ 19 ಮಂದಿ ಪೊಲೀಸರಿಗೆ ರಾಷ್ಟ್ರಪತಿ ಪದಕ

ರಾಜ್ಯದ 19 ಮಂದಿ ಪೊಲೀಸರಿಗೆ ರಾಷ್ಟ್ರಪತಿ ಪದಕ

MUST WATCH

udayavani youtube

ಬೆಂಗಳೂರು ಗಲಭೆ: ಹತ್ತಾರು ಪ್ರಶ್ನೆಗಳು !

udayavani youtube

ಕರಂಬಾರು ಭಜನಾ ಮಂದಿರದಲ್ಲಿ ವಿದ್ಯಾಗಮ ಯೋಜನೆಯಡಿಯಲ್ಲಿ ಮಕ್ಕಳಿಗೆ ಪಾಠ

udayavani youtube

Gendun Gyatso Lama : ನಾನೇಕೆ ಭಾರತಕ್ಕೆ ಓಡಿ ಬಂದೆ? ಸ್ವಾತಂತ್ರ್ಯದ ಓಟ

udayavani youtube

ಅನಂತ ಕುಮಾರ್ ಹೇಳಿಕೆ ವಿರೋಧಿಸಿ BSNL Employees Union ಮಂಗಳೂರು ವತಿಯಿಂದ ಪ್ರತಿಭಟನೆ

udayavani youtube

ವರ್ಷಕ್ಕೊಮ್ಮೆಯಾದರೂ ಭೂಮಿತಾಯಿಯ ಸೇವೆಯನ್ನು ಮಾಡೋಣ ಎಂದು ವಿನಂತಿಸಿದ ಕೃಷಿಕ Rangayya Naikಹೊಸ ಸೇರ್ಪಡೆ

youth25

ಯುವ ಭಾರತ ನಿರ್ಮಾಣಕ್ಕೆ ಮುನ್ನುಡಿ

ಬೆಳಗಾವಿ: ಧ್ವಜಾರೋಹಣ ನೆರವೇರಿಸಿದ ಸಚಿವ ರಮೇಶ್ ಜಾರಕಿಹೊಳಿ

ಬೆಳಗಾವಿ: ಧ್ವಜಾರೋಹಣ ನೆರವೇರಿಸಿದ ಸಚಿವ ರಮೇಶ್ ಜಾರಕಿಹೊಳಿ

1 ಗಂಟೆ 26 ನಿಮಿಷ ಭಾಷಣ; ಭಾರತ ಕೆಣಕಲು ಬಂದವರಿಗೆ ತಕ್ಕ ಉತ್ತರ ಕೊಟ್ಟಿದ್ದೇವೆ: ಪ್ರಧಾನಿ

1 ಗಂಟೆ 26 ನಿಮಿಷ ಭಾಷಣ; ಭಾರತ ಕೆಣಕಲು ಬಂದವರಿಗೆ ತಕ್ಕ ಉತ್ತರ ಕೊಟ್ಟಿದ್ದೇವೆ: ಪ್ರಧಾನಿ

indian education

ಬದಲಾದ ಶಿಕ್ಷಣ ವ್ಯವಸ್ಥೆ ಮತ್ತು ಯುವ ಭಾರತ

ಕಲಬುರಗಿ: ಜಿಟಿಜಿಟಿ ಮಳೆ ನಡುವೆ ಸ್ವಾತಂತ್ರ್ಯೋತ್ಸವ ಸಂಭ್ರಮ

ಕಲಬುರಗಿ: ಜಿಟಿಜಿಟಿ ಮಳೆ ನಡುವೆ ಸ್ವಾತಂತ್ರ್ಯೋತ್ಸವ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.