ಆ್ಯತ್ಲೆಟಿಕ್ಸ್ : ಅಕ್ಷದೀಪ್, ಹರೇಂದ್ರ ಕುಮಾರ್ ಕೂಟ ದಾಖಲೆ
Team Udayavani, Jan 6, 2022, 4:30 AM IST
ಮೂಡುಬಿದಿರೆ: ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ಅಖೀಲ ಭಾರತ ಅಂತರ್ ವಿ.ವಿ. ಪುರುಷರ ಆ್ಯತ್ಲೆಟಿಕ್ಸ್ ಕೂಟದ ಎರಡನೇ ದಿನ ಮಂಗಳೂರು ವಿ.ವಿ. 2 ಚಿನ್ನ, 2 ಬೆಳ್ಳಿ, 2 ಕಂಚಿನ ಪದಕ ಗೆದ್ದು ಮುನ್ನಡೆ ಸಾ ಧಿಸಿದೆ. ಈ ಎಲ್ಲ ಕ್ರೀಡಾಳುಗಳು ಆತಿಥೇಯ ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳು.
ಬುಧವಾರ ಎರಡು ಕೂಟ ದಾಖಲೆಗಳು ನಿರ್ಮಾಣಗೊಂಡವು. 20 ಕಿ.ಮೀ. ನಡಿಗೆಯಲ್ಲಿ ಪಟಿಯಾಲದ ಪಂಜಾಬಿ ವಿ.ವಿ.ಯ ಅಕ್ಷದೀಪ್ ಸಿಂಗ್ ಹಾಗೂ 1,500 ಮೀ. ಓಟದಲ್ಲಿ ಗುರುನಾನಕ್ ವಿ.ವಿ.ಯ ಹರೇಂದ್ರ ಕುಮಾರ್ ನೂತನ ದಾಖಲೆ ನಿರ್ಮಿಸಿದರು.
20 ಕಿ.ಮೀ. ನಡಿಗೆಯಲ್ಲಿ ಅಕ್ಷದೀಪ್ ಸಿಂಗ್ (1:26 ಗ. 09.08ನಿ) ಮಂಗಳೂರು ವಿ.ವಿ.ಯ ಜುನೇದ್ ಕೆ.ಟಿ. ಅವರ ದಾಖಲೆಯನ್ನು ಹಿಂದಿಕ್ಕಿದರು. 1,500 ಮೀ. ಓಟದಲ್ಲಿ ಪ್ರಥಮ ಸ್ಥಾನಿಯಾದ ಹರೇಂದ್ರ ಕುಮಾರ್ (3 ನಿ., 43.97ಸೆ) ನೂತನ ಕೂಟ ದಾಖಲೆ ನಿರ್ಮಿಸಿದರು. ಅವರು ಯೂನಿವರ್ಸಿಟಿ ಆಫ್ ಕೇರಳದ ಅಭಿನಂದ್ ಸುರೇಶನ್ ದಾಖಲೆಯನ್ನು ಹಿಂದಿಕ್ಕಿದರು.