4 ಗ್ರ್ಯಾನ್ಸ್ಲಾಮ್ ವಿಜೇತ ಆ್ಯಶ್ಲೆ ಕೂಪರ್ ನಿಧನ
Team Udayavani, May 23, 2020, 5:30 AM IST
ಮೆಲ್ಬರ್ನ್: ನಾಲ್ಕು ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳ ಒಡೆಯ, ಆಸ್ಟ್ರೇಲಿಯದ ಚಾಂಪಿಯನ್ ಟೆನಿಸಿಗ ಆ್ಯಶ್ಲೆ ಕೂಪರ್ ಶುಕ್ರವಾದ ನಿಧನ ಹೊಂದಿದರು. 83 ವರ್ಷದ ಅವರು ವಯೋಸಹಜ ಸಮಸ್ಯೆಗಳಿಂದ ನರಳುತ್ತಿದ್ದರು ಎಂಬುದಾಗಿ “ಟೆನಿಸ್ ಆಸ್ಟ್ರೇಲಿಯ’ ತಿಳಿಸಿದೆ.
ವಿಶ್ವದ ಮಾಜಿ ನಂಬರ್ ವನ್ ಆಟಗಾರನಾಗಿದ್ದ ಆ್ಯಶ್ಲೆ ಕೂಪರ್ 1958ರಲ್ಲಿ ಆಸ್ಟ್ರೇಲಿಯನ್ ಓಪನ್, ವಿಂಬಲ್ಡನ್ ಮತ್ತು ಯುಎಸ್ ಓಪನ್ ಚಾಂಪಿಯನ್ ಆಗಿದ್ದರು. ಆ ವರ್ಷ ಅವರ ಏಕೈಕ ಗ್ರ್ಯಾನ್ಸ್ಲಾಮ್ ಸೋಲು ಫ್ರೆಂಚ್ ಓಪನ್ ಸೆಮಿಫೈನಲ್ನಲ್ಲಿ ಎದುರಾಗಿತ್ತು. 1957ರಲ್ಲಿ ಆಸ್ಟ್ರೇಲಿಯದ ಡೇವಿಸ್ ಕಪ್ ತಂಡವನ್ನು ಮುನ್ನಡೆಸಿದ ಅವರು, ಬೆನ್ನು ನೋವಿನ ಸಮಸ್ಯೆಯಿಂದ 1959ರಲ್ಲಿ ಸ್ಪರ್ಧಾತ್ಮಕ ಟೆನಿಸ್ನಿಂದ ದೂರ ಸರಿದಿದ್ದರು.
“ಆ್ಯಶ್ಲೆ ಕೂಪರ್ ಆಸ್ಟ್ರೇಲಿಯನ್ ಟೆನಿಸ್ ದೈತ್ಯ. ಓರ್ವ ಆಟಗಾರನಾಗಿ ಹಾಗೂ ಟೆನಿಸ್ ಆಡಳಿತಗಾರನಾಗಿ ಅವರು ನಿರ್ವಹಿಸಿದ ಸೇವೆ ಅನುಪಮ. ಅವರನ್ನು ಕಳೆದುಕೊಂಡ ಆಸೀಸ್ ಟೆನಿಸ್ ಬಡವಾಗಿದೆ. ಟೆನಿಸ್ ಗೆಳೆಯನಿಗೆ ವಿದಾಯ…’ ಎಂದು ಕಾಂಗರೂ ನಾಡಿನ ಟೆನಿಸ್ ಗ್ರೇಟ್ ರಾಡ್ ಲೆವರ್ ದುಃಖ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
RCB ; ರವಿವಾರ ಕೆಕೆಆರ್ ವಿರುದ್ಧ ಈಡನ್ನಲ್ಲಿ ಗೋ ಗ್ರೀನ್ ಗೇಮ್
MUST WATCH
ಹೊಸ ಸೇರ್ಪಡೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!
Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್ ಟಿಆರ್ – ಪ್ರಶಾಂತ್ ನೀಲ್ ಸಿನಿಮಾ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ