ಬಿ.ಸಿ.ಪಾಟ್ನಾಯಕ್ ಎಲ್ಐಸಿ ಎಂಡಿ
Team Udayavani, Oct 1, 2021, 10:13 PM IST
ಮುಂಬೈ: ಜೀವ ವಿಮಾ ನಿಗಮ (ಎಲ್ಐಸಿ)ಯ ಎಂಡಿಯಾಗಿ ಬಿ.ಸಿ.ಪಾಟ್ನಾಯಕ್ ಶುಕ್ರವಾರ ನೇಮಕವಾಗಿದ್ದಾರೆ.
ಅವರು 1986ರಲ್ಲಿಅಧಿಕಾರಿಯಾಗಿ ಎಲ್ಐಸಿಯಲ್ಲಿ ಕರ್ತವ್ಯ ಆರಂಭಿಸಿದರು. ಇನ್ಶೂರೆನ್ಸ್ ಒಂಬುಡ್ಸ್ಮೆನ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಅವರನ್ನು ಎಂಡಿಯಾಗಿ ಸರ್ಕಾರ ನೇಮಿಸಿದೆ.
ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಅವರು, ಮಾರ್ಕೆಟಿಂಗ್, ವೈಯಕ್ತಿಕ, ಪಿಂಚಣಿ, ಗುಂಪು ಉಳಿತಾಯ, ಗ್ರಾಹಕರ ಸಂಬಂಧ ನಿರ್ವಹಣೆ ಸೇರಿ ಅನೇಕ ಕ್ಷೇತ್ರಗಳಲ್ಲಿ ಪ್ರಧಾನವಾಗಿ ಗುರುತಿಸಿಕೊಂಡಿದ್ದಾರೆ.
ಪಶ್ಚಿಮ ವಲಯದ ಪ್ರಾದೇಶಿಕ ಮ್ಯಾನೇಜರ್, ಉತ್ತರ ಕೇಂದ್ರ ವಲಯದ ಪ್ರಾದೇಶಿಕ ಮ್ಯಾನೇಜರ್ ಸೇರಿ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಇದನ್ನೂ ಓದಿ:“ಬಿಜೆಪಿ ತುಕ್ಡೆ-ತುಕ್ಡೆ ಮಾಡುತ್ತೇನೆ”: ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್