Updated: ಸಚಿವರ ರಾಜೀನಾಮೆಗೆ ಮಣಿದ ಬ್ರಿಟನ್ ಪ್ರಧಾನಿ ಬೋರಿಸ್ ರಾಜೀನಾಮೆ

ಜಾನ್ಸನ್‌ ರಾಜೀನಾಮೆ ನೀಡಿದರೆ ರಿಷಿ ಸುನಕ್‌ರನ್ನು ಆ ಹುದ್ದೆಗೆ ನೇಮಕ ಮಾಡುವ ಸಾಧ್ಯತೆಗಳು ಇವೆ

Team Udayavani, Jul 7, 2022, 3:48 PM IST

Boris

ಬ್ರಿಟನ್: ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಶಿವಸೇನಾದ ಏಕನಾಥ ಶಿಂಧೆ ಮಹಾ ವಿಕಾಸ್ ಅಘಾಡಿ ನೇತೃತ್ವದ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಸಾರಿದ್ದು, ಸುಮಾರು 40ಕ್ಕೂ ಅಧಿಕ ಶಾಸಕರು ಬೆಂಬಲ ವ್ಯಕ್ತಪಡಿಸಿದ್ದರು. ಇದರ ಪರಿಣಾಮ ಶಿಂಧೆ ಸಿಎಂ ಪಟ್ಟ ಅಲಂಕರಿಸಿದ್ದಾರೆ. ಇದೀಗ ಬ್ರಿಟನ್ ನಲ್ಲಿಯೂ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಸಂಪುಟಕ್ಕೆ 50ಕ್ಕೂ ಅಧಿಕ ಸಚಿವರು ರಾಜೀನಾಮೆ ನೀಡಿ ಬಂಡಾಯ ಸಾರಿದ್ದಾರೆ. ರಾಜಕೀಯ ಬಿಕ್ಕಟ್ಟಿನ ನಿಟ್ಟಿನಲ್ಲಿ ಪ್ರಧಾನಿ ಸ್ಥಾನಕ್ಕೆ ಬೋರಿಸ್ ಗುರುವಾರ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ:ಮಾಜಿ ಕಾರ್ಪೋರೇಟರ್ ಬಳಿ ಲಂಚ ಸ್ವೀಕರಿಸುತ್ತಿದ್ದಾಗಲೇ ಸಿಕ್ಕಿಬಿದ್ದ ಬಿಬಿಎಂಪಿ ಅಧಿಕಾರಿ

ಗುರುವಾರ ಸಂಜೆ ಅಥವಾ ತಡರಾತ್ರಿ ತಮ್ಮ ರಾಜೀನಾಮೆ ಬಗ್ಗೆ ಬೋರಿಸ್ ಜಾನ್ಸನ್ ಘೋಷಿಸುವ ಸಾಧ್ಯತೆ ಇರುವುದಾಗಿ ಬಿಬಿಸಿ ವರದಿ ಈ ಮೊದಲು ತಿಳಿಸಿತ್ತು. ಅದೇ ರೀತಿ ಕನ್ಸರ್ವೇಟಿವ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ತೊರೆಯಲಿದ್ದಾರೆ ಎಂದು ವರದಿ ವಿವರಿಸಿದೆ.

ಕಳೆದ 48 ಗಂಟೆಗಳಲ್ಲಿ ಬ್ರಿಟನ್ ಸರ್ಕಾರದ 50ಕ್ಕೂ ಹೆಚ್ಚು ಸಚಿವರುಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದೇಶದಲ್ಲಿ ಸರಣಿ ಹಗರಣಗಳು ನಡೆಯುತ್ತಿದ್ದು, ಪ್ರಧಾನಿ ಸ್ಥಾನದಲ್ಲಿ ಬೋರಿಸ್ ಮುಂದುವರಿಯಲು ಅರ್ಹರಲ್ಲ ಎಂದು ಕನ್ಸರ್ವೇಟಿವ್ ಪಕ್ಷದ ಸಚಿವರು ಆರೋಪಿಸಿ, ಬಂಡಾಯ ಎದ್ದಿದ್ದರು.

ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಬೋರಿಸ್ ತಮ್ಮ ಅಧಿಕೃತ ನಿವಾಸದಲ್ಲಿ ಪಾರ್ಟಿ ಮಾಡಿದ್ದರ ವಿರುದ್ಧ ಮೇ ತಿಂಗಳಲ್ಲಿ ಜಾನ್ಸನ್ ವಿರುದ್ಧ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ಸೋಲು ಅನುಭವಿಸಿತ್ತು. ಹೀಗಾಗಿ ಮುಂದಿನ ಒಂದು ವರ್ಷ ಕಾಲ ಬೋರಿಸ್ ವಿರುದ್ಧ ಮತ್ತೊಂದು ಬಾರಿ ಗೊತ್ತುವಳಿ ಮಂಡಿಸುವಂತೆ ಇಲ್ಲ. ಹೀಗಾಗಿ ಸಚಿವರು ಸಾಮೂಹಿಕವಾಗಿ ರಾಜೀನಾಮೆ ನೀಡುವ ಮೂಲಕ ಬೋರಿಸ್ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ಮುಂದಾಗಿರುವುದಾಗಿ ವರದಿ ತಿಳಿಸಿದೆ.

ಮುಂದಿನ ಪ್ರಧಾನಿ ರಿಷಿ ?
ಒಂದು ವೇಳೆ ಹಾಲಿ ಪ್ರಧಾನಿ ಬೋರಿಸ್‌ ಜಾನ್ಸನ್‌ ರಾಜೀನಾಮೆ ನೀಡಿದರೆ ರಿಷಿ ಸುನಕ್‌ರನ್ನು ಆ ಹುದ್ದೆಗೆ ನೇಮಕ ಮಾಡುವ ಸಾಧ್ಯತೆಗಳು ಇವೆ. ಇದೇ ವೇಳೆ, ಸುನಕ್‌ ತಮ್ಮ ರಾಜೀನಾಮೆ ಪತ್ರದಲ್ಲಿ ಬೋರಿಸ್‌ ಜಾನ್ಸನ್‌ ನಾಯಕತ್ವದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದೇಶ ಹಲವು ಸವಾಲುಗಳನ್ನು ಎದುರಿಸುತ್ತಿದೆ. ನಾಗರಿಕರಿಗೆ ಕಡಿಮೆ ಪ್ರಮಾಣದಲ್ಲಿ ತೆರಿಗೆ ವಿಧಿಸುವುದು ಮತ್ತು ಹೆಚ್ಚಿನ ಪ್ರಮಾಣದ ಅಭಿವೃದ್ಧಿ ಸಾಧಿಸಲು ಬಯಸುತ್ತೇನೆ. ಈ ಉದ್ದೇಶ ಈಡೇರಲು ಒಂದು ಸದೃಢ ಮತ್ತು ಸಮರ್ಥ ಸರ್ಕಾರದ ಅಗತ್ಯ ಇದೆ. ಈ ಸತ್ಯವನ್ನು ಕೇಳಲು ದೇಶದ ಜನರು ಕಾತರರಾಗಿದ್ದಾರೆ’ ಎಂದು ರಾಜೀನಾಮೆ ಪತ್ರದಲ್ಲಿ ಸುನಕ್‌ ಬರೆದಿದ್ದಾರೆ.

ಟಾಪ್ ನ್ಯೂಸ್

HDK

ಬೂಟಾಟಿಕೆ ದಾಸಯ್ಯನಿಗೆ ಮೈಯೆಲ್ಲ ಪಂಗನಾಮ: ಅಶ್ವತ್ಥನಾರಾಯಣ ವಿರುದ್ದ ಹೆಚ್ ಡಿಕೆ

B K HARi

ಅಮಿತ್ ಶಾ ಬಿಜೆಪಿ ನಾಯಕರಿಗೆ ವಿಳ್ಯದೆಲೆ ಶಾಸ್ತ್ರ ಮಾಡಲು ಬಂದಿದ್ದರಾ?: ಬಿ.ಕೆ. ಹರಿಪ್ರಸಾದ್

ಹಾಸ್ಯ ನಟ ರಾಜು ಶ್ರೀವಾತ್ಸವಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ಹಾಸ್ಯ ನಟ ರಾಜು ಶ್ರೀವಾತ್ಸವಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ಮನೆ ಮೇಲೆ ಮರ ಬಿದ್ದು ಮಹಿಳೆಯರು ಸಾವು: 2 ತಿಂಗಳ ಹಿಂದೆಯೇ ಮರ ತೆರವಿಗೆ ಮನವಿ ಮಾಡಿದ್ದ ಮೃತರು

ಮನೆ ಮೇಲೆ ಮರ ಬಿದ್ದು ಮಹಿಳೆಯರು ಸಾವು: 2 ತಿಂಗಳ ಹಿಂದೆಯೇ ಮರ ತೆರವಿಗೆ ಮನವಿ ಮಾಡಿದ್ದ ಮೃತರು

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಪ್ರಮಾಣವಚನ ಸ್ವೀಕಾರ, ತೇಜಸ್ವಿ ಯಾದವ್ ಡಿಸಿಎಂ

ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಪ್ರಮಾಣವಚನ ಸ್ವೀಕಾರ, ತೇಜಸ್ವಿ ಯಾದವ್ ಡಿಸಿಎಂ

ಧ್ವಜ ತಯಾರಿಕೆ ಹೇಗೆ? ದೇಶದ ಮನೆ ಮನಗಳಲ್ಲಿ ಹರ್‌ ಘರ್‌ ತಿರಂಗಾ ಅಭಿಯಾನ

ಧ್ವಜ ತಯಾರಿಕೆ ಹೇಗೆ? ದೇಶದ ಮನೆ ಮನಗಳಲ್ಲಿ ಹರ್‌ ಘರ್‌ ತಿರಂಗಾ ಅಭಿಯಾನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಸರೆಗೆ ದುಬಾೖ ದೇಗುಲ ಅರ್ಪಣೆ; ಅ.4ರಂದು ಲೋಕಾರ್ಪಣೆ; ಅ.5ರಿಂದ ಸಾರ್ವಜನಿಕರಿಗೆ ಪ್ರವೇಶ

ದಸರೆಗೆ ದುಬಾೖ ದೇಗುಲ ಅರ್ಪಣೆ; ಅ.4ರಂದು ಲೋಕಾರ್ಪಣೆ; ಅ.5ರಿಂದ ಸಾರ್ವಜನಿಕರಿಗೆ ಪ್ರವೇಶ

thumb 5 rishi

ರಿಷಿ ಸುನಕ್‌ಗಾಗಿ ಬ್ರಿಟನ್‌ ಭಾರತೀಯರ ಹೋಮ-ಹವನ

ಆತ್ಮಾಹುತಿ ಬಾಂಬ್ ದಾಳಿಗೆ ನಾಲ್ವರು ಪಾಕ್ ಸೈನಿಕರ ಸಾವು

ಆತ್ಮಾಹುತಿ ಬಾಂಬ್ ದಾಳಿಗೆ ನಾಲ್ವರು ಪಾಕ್ ಸೈನಿಕರ ಸಾವು

FBI raids Donald trump’s florida resort

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನೆ ಮೇಲೆ ಎಫ್ ಬಿಐ ದಾಳಿ

ಟ್ವಿಟರ್‌ ನ್ನು ಮನಸ್ಸು ಮಾಡಿದರೆ ಈಗಲೂ ಖರೀದಿಸಲು ಸಿದ್ಧ: ಎಲಾನ್‌ ಮಸ್ಕ್

ಟ್ವಿಟರ್‌ ಮನಸ್ಸು ಮಾಡಿದರೆ ಈಗಲೂ ಖರೀದಿಸಲು ಸಿದ್ಧ: ಎಲಾನ್‌ ಮಸ್ಕ್

MUST WATCH

udayavani youtube

ನಟ ದರ್ಶನ್‌ ವಿರುದ್ದ ದೂರು ದಾಖಲಿಸಿದ ನಿರ್ಮಾಪಕ

udayavani youtube

ಪ್ರವೀಣ್‌ ಹತ್ಯೆ ಪ್ರಕರಣ : ಮುಖ್ಯ ಆರೋಪಿಗಳ ಕುರಿತು ಮಹತ್ವದ ಮಾಹಿತಿ ಬಿಚ್ಚಿಟ್ಟ ಎಡಿಜಿಪಿ

udayavani youtube

ಧಮ್ ಇದ್ದರೆ ಸಿಎಂ ಅಭ್ಯರ್ಥಿ ಘೋಷಿಸಲಿ : ಕಾಂಗ್ರೆಸ್ ಗೆ ಸವಾಲು ಹಾಕಿದ ಸಚಿವ ಅಶೋಕ್

udayavani youtube

ಪಡುಬಿದ್ರಿ : ಬೆಳ್ಳಂಬೆಳಗ್ಗೆ ತೆಂಗಿನೆಣ್ಣೆ ಮಿಲ್ ನಲ್ಲಿ ಅಗ್ನಿ ಅವಘಡ

udayavani youtube

3೦ವರ್ಷದಿಂದ ಕೃಷಿಯಲ್ಲಿ ಖುಷಿ ಮತ್ತು ಪ್ರೀತಿಯನ್ನು ಕಂಡಿದ್ದೇವೆ

ಹೊಸ ಸೇರ್ಪಡೆ

HDK

ಬೂಟಾಟಿಕೆ ದಾಸಯ್ಯನಿಗೆ ಮೈಯೆಲ್ಲ ಪಂಗನಾಮ: ಅಶ್ವತ್ಥನಾರಾಯಣ ವಿರುದ್ದ ಹೆಚ್ ಡಿಕೆ

goa

ಗೋವಾದಲ್ಲಿ ಹೆಚ್ಚಿದ ಪ್ರವಾಸಿಗರು: ದರಗಳು ದುಪ್ಪಟ್ಟು

5sports

ಕ್ರೀಡೆ ದೈಹಿಕ-ಮಾನಸಿಕ ಆರೋಗ್ಯಕ್ಕೆ ಸಹಕಾರಿ

B K HARi

ಅಮಿತ್ ಶಾ ಬಿಜೆಪಿ ನಾಯಕರಿಗೆ ವಿಳ್ಯದೆಲೆ ಶಾಸ್ತ್ರ ಮಾಡಲು ಬಂದಿದ್ದರಾ?: ಬಿ.ಕೆ. ಹರಿಪ್ರಸಾದ್

ಹಾಸ್ಯ ನಟ ರಾಜು ಶ್ರೀವಾತ್ಸವಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ಹಾಸ್ಯ ನಟ ರಾಜು ಶ್ರೀವಾತ್ಸವಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.