ಏಷ್ಯಾ ಬ್ಯಾಡ್ಮಿಂಟನ್ : ಸೈನಾ ನೆಹ್ವಾಲ್, ಪಿ.ವಿ. ಸಿಂಧು ಗೆಲುವು
Team Udayavani, Apr 27, 2022, 11:07 PM IST
ಮನಿಲಾ: ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಮತ್ತು ಸೈನಾ ನೆಹ್ವಾಲ್ ಅವರು ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲಿ ಪ್ರಬಲವಾಗಿ ಹೋರಾಡಿ ಗೆಲುವು ಸಾಧಿಸಿದ್ದಾರೆ. ಆದರೆ ಲಕ್ಷ್ಯ ಸೇನ್ ಮತ್ತು ಬಿ. ಸಾಯಿ ಪ್ರಣೀತ್ ಆಘಾತಕಾರಿ ಸೋಲನ್ನು ಕಂಡು ಹೊರಬಿದ್ದಿದ್ದಾರೆ.
ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಚೈನೀಸ್ ತೈಪೆಯ ಪೈ ಯು ಪೊ ಅವರನ್ನು 18-21, 27-25, 21-9 ಗೇಮ್‌ಗಳಿಂದ ಉರುಳಿಸುವಲ್ಲಿ ಯಶಸ್ವಿಯಾದರು. ಸುದೀರ್ಘ ಅವಧಿಯವರೆಗೆ ಸಾಗಿದ ಈ ಪಂದ್ಯದ ದ್ವಿತೀಯ ಗೇಮ್‌ನಲ್ಲಿ ಸಿಂಧು ಗೆಲ್ಲಲು ತೀವ್ರ ಹೋರಾಟ ನಡೆಸಿದರು. ಈ ಹೋರಾಟ ಒಂದು ಗಂಟೆ, 17 ನಿಮಿಷಗಳವರೆಗೆ ಸಾಗಿತ್ತು. ಸಿಂಧು ಮುಂದಿನ ಪಂದ್ಯದಲ್ಲಿ ಸಿಂಗಾಪುರದ ಯೂಯಿ ಯಾನ್ ಜಾಸ್ಲಿನ್ ಹೂಯಿ ಅವರನ್ನು ಎದುರಿಸಲಿದ್ದಾರೆ.
ಸೈನಾ ಮುನ್ನಡೆ
ಗಾಯದ ಸಮಸ್ಯೆಯಿಂದ ಚೇತರಿಸಿ ಸ್ಪರ್ಧೆಗೆ ಮರಳಿರುವ ಸೈನಾ ಅವರು ಆರಂಭಿಕ ಪಂದ್ಯದಲ್ಲಿ ದಕ್ಷಿಣ ಕೊರಿಯದ ಸಿಮ್ ಯೂಜಿನ್ ಅವರನ್ನು 21-15, 17-21, 21-13 ಗೇಮ್‌ಗಳಿಂದ ಮಣಿಸಿದರು. ಅವರು ಮುಂದಿನ ಪಂದ್ಯದಲ್ಲಿ ಚೀನದ ಝೀ ಯಿ ವಾಂಗ್ ಅವರ ಸವಾಲನ್ನು ಎದುರಿಸಲಿದ್ದಾರೆ.
ಸೇನ್‌ಗೆ ಸೋಲು
ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ವಿಜೇತ ಲಕ್ಷ್ಯ ಸೇನ್ ಅವರು ಚೀನದ ಶ್ರೇಯಾಂಕರಹಿತ ಆಟಗಾರ ಲಿ ಶಿ ಫೆಂಗ್ ಅವರೆದುರು ಸೋತು ಆಘಾತಕ್ಕೆ ಒಳಗಾದರು. 5ನೇ ಶ್ರೇಯಾಂಕದ ಸೇನ್ 21-12, 10-21, 19-21 ಗೇಮ್‌ಗಳಿಂದ ಶರಣಾದರು. ಈ ಹೋರಾಟ 56 ನಿಮಿಷಗಳವರೆಗೆ ಸಾಗಿತ್ತು. ವಿಶ್ವದ 19ನೇ ರ್‍ಯಾಂಕಿನ ಪ್ರಣೀತ್ ಇಂಡೋನೇಶ್ಯದ ಜೊನಾಥನ್ ಕ್ರಿಸ್ಟಿ ಕೈಯಲ್ಲಿ 17-21, 13-21 ಗೇಮ್‌ಗಳಿಂದ ಸೋತು ಹೊರಬಿದ್ದರು.
ವನಿತೆಯರ ಸಿಂಗಲ್ಸ್‌ನಲ್ಲಿ ಆಕರ್ಷಿ ಕಶ್ಯಪ್ ಜಪಾನಿಯ ಅಗ್ರ ಶ್ರೇಯಾಂಕದ ಆಕಾನೆ ಯಮಾಗುಚಿ ಕೈಯಲ್ಲಿ 15-21, 9-21 ಗೇಮ್‌ಗಳಿಂದ ಸೋತಿದ್ದಾರೆ.
ಶ್ರೀಕಾಂತ್‌ಗೆ ಗೆಲುವು
ಕೆ. ಶ್ರೀಕಾಂತ್ ಕಠಿನ ಹೋರಾಟದಲ್ಲಿ ಮಲೇಶ್ಯದ ಟಿಝಿ ಯಾಂಗ್ ಎನ್‌ಜಿ ಅವರನ್ನು 22-20, 21-15 ಗೇಮ್‌ಗಳಿಂದ ಉರುಳಿಸಿ ಮುನ್ನಡೆದರು. ಮುಂದಿನ ಹೋರಾಟದಲ್ಲಿ ಅವರು ಚೀನದ ಅರ್ಹತಾ ಆಟಗಾರ ವೆಂಗ್ ಹಾಂಗ್ ಯಾಂಗ್ ಅವರನ್ನು ಎದುರಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ