Udayavni Special

ತ್ವರಿತ ಜನಸೇವೆಗೆ ಆದ್ಯತೆ; ಅಭಿವೃದ್ಧಿಯತ್ತ ದಾಪುಗಾಲು : ಬಜಪೆ ಗ್ರಾಮ ಪಂಚಾಯತ್‌


Team Udayavani, Aug 15, 2020, 9:27 AM IST

ತ್ವರಿತ ಜನಸೇವೆಗೆ ಆದ್ಯತೆ; ಅಭಿವೃದ್ಧಿಯತ್ತ ದಾಪುಗಾಲು : ಬಜಪೆ ಗ್ರಾಮ ಪಂಚಾಯತ್‌

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಾಗಿ ಪ್ರಸಿದ್ಧಿ ಪಡೆದಿರುವ ಬಜಪೆ ಅಭಿವೃದ್ಧಿಯತ್ತ ದಾಪುಗಾಲು ಹಾಕಿದೆ. ಗ್ರಾಮ ಪಂಚಾಯತ್‌ನ ಜನಪರವಾದ ದಕ್ಷ ಆಡಳಿತ, ದೂರದೃಷ್ಟಿಯ ಯೋಜನೆಗಳು ಈ ಪ್ರದೇಶದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿವೆ. ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿ, ಸಿಬಂದಿವರ್ಗ ಗ್ರಾಮಸ್ಥರ ಪೂರ್ಣ ಸಹಕಾರದೊಂದಿಗೆ ಗ್ರಾ.ಪಂ.ನ ಶ್ರೇಯೋಭಿವೃದ್ಧಿಗೆ ಕಟಿಬದ್ಧವಾಗಿರುವುದರಿಂದ ಮಾದರಿ ಗ್ರಾಮ ಪಂಚಾಯತ್‌ ಆಗಿ ರೂಪುಗೊಳ್ಳುತ್ತಿದೆ. ಬೆಳೆಯುತ್ತಿರುವ ಬಜಪೆಗೆ ಭವಿಷ್ಯದಲ್ಲಿ ಇನ್ನಷ್ಟು ಮೂಲಸೌಕರ್ಯಗಳ ಅವಶ್ಯಕತೆ ಇದ್ದು ಇದನ್ನು ಪೂರೈಸುವ ದಿಸೆಯಲ್ಲಿ ಮತ್ತಷ್ಟು ಮಹತ್ವದ ಹೆಜ್ಜೆಗಳನ್ನು ಇಡಬೇಕಾಗಿದೆ.

ಮಂಗಳೂರು ನಗರದಿಂದ ಸುಮಾರು 19 ಕಿಲೋ ಮೀಟರ್‌ ದೂರದಲ್ಲಿರುವ ಬಜಪೆ ಪಂಚಾಯತ್‌ರಾಜ್‌ ಕಾಯಿದೆ 1993 ಜಾರಿಗೆ ಬರುವ ಮೊದಲು ಮಂಡಲ ಪಂಚಾಯತಿ ಆಗಿ ಪ್ರಸಿದ್ಧಿ ಪಡೆದಿತ್ತು. ಬಜಪೆಯ ಅಭಿವೃದ್ಧಿಗೂ ಬ್ರಿಟಿಷರಿಗೂ ನಂಟಿದೆ. ಬ್ರಿಟಿಷರು ಇಲ್ಲಿನ ತೊಟ್ಟಿಲಗುರಿ ಪ್ರದೇಶವನ್ನು ಅಭಿವೃದ್ಧಿಪಡಿಸಿ ಹರಿಯುವ ತೋಡಿಗೆ ಜಲಪಾತವನ್ನು ನಿರ್ಮಿಸಿ ಪ್ರವಾಸಿ ತಾಣವನ್ನಾಗಿಸಿದ್ದರು. ಗ್ರಾ.ಪಂ. ಕಚೇರಿ ವಠಾರದಲ್ಲಿ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂ ಧಿಯವರು ಉದ್ಘಾಟನೆ ಮಾಡಿದ ರೇಡಿಯೋ ಕಟ್ಟಡ ಪಾರಂಪರಿಕ ಕಟ್ಟಡದಲ್ಲಿ ಒಂದಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಪ್ರಸಿದ್ಧವಾಗಿರುವ ಬಜಪೆ ವಿಮಾನ ನಿಲ್ದಾಣ, ಕೈಗಾರಿಕೆ, ವಿವಿಧ ಉದ್ಯಮಗಳ, ಶಾಲಾ ಕಾಲೇಜುಗಳು, ಧಾರ್ಮಿಕ ಕೇಂದ್ರಗಳು, ಕೃಷಿ ಪ್ರದೇಶವನ್ನೊಳಗೊಂಡಿರುವ ಬಜಪೆ ಭೌಗೋಳಿಕವಾಗಿಯೂ ವಿಶಿಷ್ಟವಾಗಿ ಗುರುತಿಸಲ್ಪಡುತ್ತಿದೆ. ಇಂತಹ ಗ್ರಾ.ಪಂ.ನ್ನು ಮುನ್ನಡೆಸುವ ಪಂಚಾಯತ್‌ ಆಡಳಿತ ವರ್ಗ ಕಾಲಕಾಲಕ್ಕೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ.

ಜನಸಂಖ್ಯೆ 13,250
ಬಜಪೆ ಗ್ರಾಮ ಪಂಚಾಯತ್‌ ಬಜಪೆ ಕಂದಾಯ ಗ್ರಾಮವನ್ನು ಹೊಂದಿದ್ದು ಗ್ರಾಮದ ವಿಸ್ತೀರ್ಣ ಸುಮಾರು 722.70 ಹೆಕ್ಟೇರ್‌ (164.30 ಹೆಕ್ಟೇರ್‌ ಜಮೀನು ಕೈಗಾರಿಕಾ ವಲಯಕ್ಕೆ ಸ್ವಾಧೀನವಾಗಿದೆ) . 2011 ರ ಜನಗಣತಿ ಪ್ರಕಾರ ಗ್ರಾಮದ ಜನಸಂಖ್ಯೆ 9,701 ಆಗಿದ್ದು ಪ್ರಸ್ತುತ ಅಂದಾಜು 13, 250 ಜನಸಂಖ್ಯೆ ಹೊಂದಿದೆ. ಜನಸಾಂದ್ರತೆ ಒಂದು ಚ.ಕೀ.ಗೆ 1,343.62 ಇದೆ.

ಆರ್ಥಿಕ, ಶೈಕ್ಷಣಿಕ ಚಟುವಟಿಕೆ
ಗ್ರಾಮದ ಬಲಭಾಗದಲ್ಲಿ ಶೇ.50ರಷ್ಟು ಪ್ರದೇಶದಲ್ಲಿ ವಿವಿಧ ಕಂಪೆನಿಗಳು ಕಾರ್ಯನಿರ್ವಹಿಸುತ್ತಿದ್ದು ಗ್ರಾಮದ ಅಭಿವೃದ್ಧಿಗೆ ಪೂರಕ ವಾತಾವರಣವಿದೆ. ಇದು ಶೇ.95ರಷ್ಟು ಅಕ್ಷರಸ್ಥರನ್ನು ಹೊಂದಿರುವ ಗ್ರಾಮ. 7 ಕಿ.ಮೀ ವಿಸ್ತಾರದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಬಜಪೆ ಗ್ರಾಮದಲಿ Éಒಎನ್‌ಜಿಸಿ/ಎಂಆರ್‌ಪಿಎಲ್‌ ಸಂಸ್ಥೆ, ಜೆಬಿಎಫ್‌ ಕೈಗಾರಿಕಾ ಕಂಪನಿ, ಕಾಡೋìಲೈಟ್‌ ಕಂಪೆನಿ, ಟ್ರಿಡೆಂಟ್‌ ಕಂಪೆನಿ, ಮೀನು ಸಂಸ್ಕರಣಾ ಘಟಕಗಳು, ಸಿಂಜಿನ್‌, ಕ್ಯಾಟಾಸಿಂಥ್‌ ಹಾಗೂ ಎಂ.ಆರ್‌. ಪಿ.ಎಲ್‌.ವಿದ್ಯುತ್‌ ಉತ್ಪಾದನಾ ಘಟಕ ಕಾರ್ಯ ನಿರ್ವಹಿಸುತ್ತಿವೆ. 2 ಅಕ್ಕಿ ಹಾಗೂ ಎಣ್ಣೆ ಮಿಲ್‌ಗ‌ಳು, 2 ಮರದ ಮಿಲ್‌ಗ‌ಳು, 1 ಹೋಲೋ ಬ್ಲಾಕ್‌ ತಯಾರಿಕ ಘಟಕ, 725 ವಾಣಿಜ್ಯ ಕಟ್ಟಡಗಳು, 67 ವಾಸ್ತವ್ಯದ ವಸತಿ ಸಮುತ್ಛಯಗಳು, ಎಂ.ಎಸ್‌.ಇ.ಝೆಡ್‌ ನಿರಾಶ್ರಿತರ ಕಾಲನಿಗಳು, 4 ಕಂಪ್ಯೂಟರ್‌ ತರಬೇತಿ ಸಂಸ್ಥೆಗಳು, ನಾಟ್ಯಾಲಯಗಳು, 16 ಬ್ಯಾಂಕ್‌ ಶಾಖೆಗಳು, 2 ದೇವಸ್ಥಾನಗಳು, 4 ಗ್ರಾಮದ ದೈವಸ್ಥಾನಗಳು, 6 ಮಸೀದಿಗಳು, 1 ಇಗರ್ಜಿ, 1 ದೂರವಾಣಿ ಕಚೇರಿ, 1 ಅಂಚೆ ಕಚೇರಿ , 9 ಸಭಾಂಗಣಗಳು, 1 ಆರಕ್ಷಕ ಠಾಣೆ, 18 ಖಾಸಗಿ ವೈದ್ಯರ ಕ್ಲಿನಿಕ್‌, 2 ರಕ್ತ ಪರೀಕ್ಷಾ ಹಾಗೂ ಇತರ ವೈದ್ಯಕೀಯ ತಪಾಸಣಾ ಹೆಲ್ತ್‌ಕೇರ್‌ ಸೆಂಟರ್‌ , 6 ಮೆಡಿಕಲ್‌, 2 ಆಯುರ್ವೇದ ಕ್ಲಿನಿಕ್‌ , 1 ಹೋಮಿಯೋಪತಿ ಕ್ಲಿನಿಕ್‌, 1 ನ್ಯಾಯ ಬೆಲೆ ಅಂಗಡಿ , 1 ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಪಶು ಚಿಕಿತ್ಸಾಲಯ, 6 ಅಂಗನವಾಡಿಗಳಿವೆ. ಗ್ರಾಮದ ಹೃದಯ ಭಾಗದಲ್ಲಿ ಸುಸಜ್ಜಿತ ಬಸ್‌ ನಿಲ್ದಾಣವಿದೆ. ಪ್ರೈಮರಿ ಹಾಗೂ ಪದವಿ ಪೂರ್ವಕಾಲೇಜು ಒಳಗೊಂಡಂತೆ ಆಂಗ್ಲ ಮಾಧ್ಯಮ ಹಾಗೂ ಕನ್ನಡ ಮಾಧ್ಯಮದ ಒಟ್ಟು 8 ವಿದ್ಯಾಸಂಸ್ಥೆಗಳಿವೆ.

ಗ್ರಾಮಕ್ಕೆ ಬೇಕಾದ ಶಾಶ್ವತ ಯೋಜನೆಗಳು
– ಬಜಪೆ ಗ್ರಾಮ ಪಂಚಾಯತ್‌ ಪಟ್ಟಣ ಪಂಚಾಯತ್‌ ಆಗಲು ಅರ್ಹತೆ ಹೊಂದಿದ್ದು ಈಗಾಗಲೇ ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
– ಬಜಪೆಗೆ ಸುಸಜ್ಜಿತ ಬಸ್‌ ನಿಲ್ದಾಣದ ಅವಶ್ಯಕತೆ ಇದ್ದು ಈ ಬಗ್ಗೆ ಈಗಾಗಲೇ ನೀಲನಕ್ಷೆ ತಯಾರಿಸಲಾಗಿದೆ.
– ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸರಕಾರದ ಹಂತದಲ್ಲಿದೆ.
– ಸಂಚಾರಿ ಪೊಲೀಸ್‌ ಠಾಣೆಯ ಅವಶ್ಯಕತೆ ಇದೆ. ಕಾವೂರುವರೆಗೆ ಕಾರ್ಯನಿರ್ವಹಿಸುತ್ತಿರುವ ಸಂಚಾರಿ ಪೊಲೀಸರ ಕಾರ್ಯವ್ಯಾಪ್ತಿಯನ್ನು ಬಜಪೆಗೂ ವಿಸ್ತರಿಸಬೇಕಾಗಿದೆ.
– ಬಜಪೆ ದಿನವಹಿ ಮಾರುಕಟ್ಟೆ ನಾದುರಸ್ತಿಯಲ್ಲಿದ್ದು ಹೊಸದಾಗಿ ಸಂಕೀರ್ಣ ನಿರ್ಮಾಣ ಮಾಡಬೇಕಾಗಿದೆ.
– ಬಜಪೆ ಚರ್ಚ್‌ನಿಂದ ಪೊರ್ಕೋಡಿ ದ್ವಾರದವರೆಗೆ ಚತುಷ್ಪಥ ರಸ್ತೆ ನಿರ್ಮಾಣವಾಗಬೇಕಾಗಿದೆ.
– ಪಂಚಾಯತ್‌ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಸಮಸ್ಯೆಯಾಗಿದ್ದು ಒಳಚರಂಡಿ ನಿರ್ಮಾಣವಾಗಬೇಕಿದೆ.
– ಹಿರಿಯ ನಾಗರಿಕರಿಗೆ ಮತ್ತು ವåಕ್ಕಳಿಗೆ ವ್ಯಾಯಾಮ ಹಾಗೂ ಆಟೋಟಕ್ಕಾಗಿ ಉದ್ಯಾನವನ, ಸಾರ್ವಜನಿಕ ಆಟದ ಮೈದಾನದ ಅಗತ್ಯವಿದೆ.
– ಬಹು ಗ್ರಾಮ ತ್ಯಾಜ್ಯ ಘಟಕ ನಿರ್ಮಾಣವಾಗಬೇಕಾಗಿದೆ.
– ಬಜಪೆ ಚರ್ಚ್‌ನಿಂದ ಪೊರ್ಕೋಡಿ ದ್ವಾರದವರೆಗೆ ರಸ್ತೆಗೆ ವೃತ್ತ ನಿರ್ಮಿಸಿ ಸುಗುಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ.

ಮಾದರಿ ಅಂಗನವಾಡಿ ನಿರ್ಮಾಣ
ಬಜಪೆ ಗ್ರಾಮ ಪಂಚಾಯತ್‌ನ ವಾರ್ಡ ಸಂಖ್ಯೆ 3 ರಲ್ಲಿ ತಾರಿಕಂಬಳ ಎಂಬಲ್ಲಿ ಸುಮಾರು 25 ಲಕ್ಷ ರೂ.ವೆಚ್ಚದಲ್ಲಿ ಮಾದರಿ ಅಂಗನವಾಡಿ ನಿರ್ಮಾಣ ಮಾಡಲಾಗಿದೆ. ಪಂಚಾಯತ್‌ನ ನರೇಗಾ ಯೋಜನೆ, ಶಾಸಕರ ನಿಧಿ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಂಚಾಯತ್‌ ನಿಧಿ  ಹಾಗೂ ಕೈಗಾರಿಕೆಗಳ ಸಿಎಸ್‌ಆರ್‌ ಫಂಡ್‌, ಊರವರ ಮತ್ತು ದಾನಿಗಳ ಸಹಾಯದಿಂದ ಅಂಗನವಾಡಿ ನಿರ್ಮಾಣವಾಗಿದೆ. ಮಕ್ಕಳಿಗೆ ವಿಶಾಲವಾದ ಹಾಲ್‌, ಅಡುಗೆ ಮನೆ, ಗೋಡೆಗಳಲ್ಲಿ ಬಣ್ಣ ಬಣ್ಣದ ಚಿತ್ರಣ, ಜಾರುಬಂಡಿ, ಕಾಲುಸಂಕ, ಸುತ್ತ ಆವರಣ ಗೋಡೆ ನಿರ್ಮಾಣ ಮಾಡಿ ಮೂಲ ಸೌಕರ್ಯ ಒದಗಿಸಲಾಗಿದೆ.

ಕೊರೊನಾ  ನಿಯಂತ್ರಣ: ನಿರಂತರ ಶ್ರಮ
ಬಜಪೆ ಗ್ರಾಮದಲ್ಲಿ ಹೊರ ರಾಜ್ಯದವರು ಹಾಗು ಜಿಲ್ಲೆಯವರು ಅಧಿ ಕ ಮಂದಿ ಇದ್ದು ಸದ್ರಿ ಕೊರೊನಾ ವೈರಸ್‌ ತಡೆಗಟ್ಟುವುದು ಬಹು ದೊಡ್ಡ ಸವಾಲು. ಆದರೂ ಹಲವು ಕ್ರಮಗಳನ್ನು ಕೈಗೊಂಡು ಕೊರೊನಾ ನಿಯಂತ್ರಣಕ್ಕೆ ಅವಿರತ ಪ್ರಯತ್ನ ನಡೆದಿದೆ. ಪ್ರಾರಂಭದಲ್ಲಿ ಬಸ್‌ ನಿಲಾœಣದಲ್ಲಿ ನೀರಿನ ಟ್ಯಾಂಕ್‌ ನಿರ್ಮಿಸಿ ಸಾರ್ವಜನಿಕರು ಸಾಬೂನಿನಿಂದ ಕೈ ತೊಳೆಯಲು ಅನುಕೂಲ ಕಲ್ಪಿಸಲಾಯಿತು. ಅನಂತರ ದಿನವಹಿ ಮಾರುಕಟ್ಟೆಯಲ್ಲಿ ಜನಸಂದಣಿ ಜಾಸ್ತಿಯಾದಾಗ ಅದನ್ನು ಕೇಂದ್ರ ಮೈದಾನಕ್ಕೆ ಸ್ಥಳಾಂತರಿಸಿ ತಾತ್ಕಾಲಿಕ ಅಂಗಡಿ ಕೋಣೆಗಳನ್ನು ನಿರ್ಮಿಸಲಾಯಿತು. ಇದರಿಂದಾಗಿ ಜನರಿಗೆ ಸಾಮಾಜಿಕ ಅಂತರದೊಂದಿಗೆ ವ್ಯಾಪಾರ-ಖರೀದಿ ಮಾಡಲು ಸಾಧ್ಯವಾಯಿತು. ಜನರು ಮನೆಯಿಂದ ಹೊರಬಾರದೆಂಬ ಸಂದೇಶವುಳ್ಳ ಕಿರುಚಿತ್ರವನ್ನು ನಿರ್ಮಾಣ ಮಾಡಿ ಸಾಮಾಜಿಕ ಜಾಲತಾಣದ ಮೂಲಕ ಪ್ರದರ್ಶಿಸಲಾಯಿತು. ಸ್ವ-ಸಹಾಯ ಸಂಘದ ಕಾಯಕರ್ತೆಯರ ಮೂಲಕ ಬಟ್ಟೆಯ ಮಾಸ್ಕ್ ತಯಾರಿಸಿ ಹಂಚಲಾಯಿತು. ಪ್ರತಿ ಅಂಗಡಿಗಳಿಗೆ ಕೊರೋನ ವೈರಸ್‌ ಬಗ್ಗೆ ಎಚ್ಚರಿಕೆಯ ನೋಟೀಸ್‌ ಅಂಟಿಸಿ ಕರಪತ್ರ ವಿತರಿಸಲಾಯಿತು. ವಾರಕ್ಕೊಮ್ಮೆ ಧ್ವನಿವರ್ಧಕದಲ್ಲಿ ಪ್ರಕಟನೆ ಹೊರಡಿಸಲಾಯಿತು. ವರ್ತಕರ, ಸಮಾಜದ ಗಣ್ಯ ವ್ಯಕ್ತಿಗಳ ಸಭೆಯನ್ನು ಕರೆದು ಸ್ವಯಂ ಪ್ರೇರಿತ ಬಂದ್‌ಗೆ ಅವಕಾಶ ನೀಡಲಾಯಿತು. ಕೋವಿಡ್‌ ಕಾರ್ಯಪಡೆಯಲ್ಲಿ ಪಂಚಾಯತ್‌ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ ಮತ್ತು ಸರ್ವ ಸದಸ್ಯರು ಹಾಗೂ ಅ ಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಂಡು ಕೊರೊನಾ ಹರಡುವಿಕೆ ನಿಯಂತ್ರಣಕ್ಕೆ ಶ್ರಮಿಸಿದ್ದಾರೆ.

ಆಧುನಿಕತೆಗೆ ತೆರೆದುಕೊಂಡಿರುವ ಕಚೇರಿ ಮತ್ತು ಸಂಜೀವಿನಿ ಕಟ್ಟಡ
ಬಜಪೆ ಕಚೇರಿ ಪ್ರಾಂಗಣದಲ್ಲಿ ಹಳೆಯ ಪಾರಂಪರಿಕ ಕಟ್ಟಡವನ್ನು ಉಳಿಸಿ ಪಕ್ಕದಲ್ಲಿಯೇ ಆಧುನಿಕ ಕಚೇರಿ ಕಾರ್ಯನಿರ್ವಹಿಸಿತ್ತಿದೆ. ಅಧ್ಯಕ್ಷರು, ಉಪಾಧ್ಯಕ್ಷರು,ಪಂಚಾಯತ್‌ ಅಭಿವೃದ್ಧಿ ಅಧಿ ಕಾರಿ ಮತ್ತು ಕಾರ್ಯದರ್ಶಿ ಕೊಠಡಿ ಒಳಗೊಂಡಂತೆ ಸಿಬಂದಿಗೆ ಕ್ಯಾಬಿನ್‌ ವ್ಯವಸ್ಥೆ ಮಾಡಲಾಗಿದೆ. ಕಚೇರಿಗೆ ಸಂಪೂರ್ಣವಾಗಿ ಸೋಲಾರ್‌ ವ್ಯವಸ್ಥೆ ಮಾಡಲಾಗಿದೆ. ಶಾಸಕರಿಗೆ ಪ್ರತ್ಯೇಕ ಕೊಠಡಿಯನ್ನು ಕಾದಿರಿಸಲಾಗಿದೆ. ಜನಪ್ರತಿನಿ ಗಳಿಗೆ ಸಭೆ ನಡೆಸಲು ಸುಸಜ್ಜಿತ ಸಭಾಂಗಣ, ವಾಣಿಜ್ಯ ಸಭೆ ನಡೆಸಲು 250 ಜನರು ಭಾಗವಹಿಸುವ ಮಿನಿ ಸಭಾಂಗಣ ಪ್ರಾಂಗಣದಲ್ಲಿದ್ದು ಅಂಗಳದಲ್ಲಿ ಉದ್ಯಾನವನ ಮಾಡಲಾಗಿದೆ. ನರೇಗಾ ಯೋಜನೆಯಡಿ ಸ್ವ-ಸಹಾಯ ಒಕ್ಕೂಟಗಳಿಗೆ ನೆರವಾಗುವ ಉದ್ದೇಶಕ್ಕಾಗಿ ಸಂಜೀವಿನಿ ಕಟ್ಟಡವನ್ನು ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ನಿರ್ಮಾಣ ಮಾಡಲಾಗಿದೆ.

ಗ್ರಾ. ಪಂ. ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು
ಪಂಚಾಯತ್‌ರಾಜ್‌ ಕಾಯಿದೆ 1993 ಜಾರಿಗೆ ಬಂದಂದಿನಿಂದ ಇದುವರೆಗೆ 8 ಮಂದಿ ಅಧ್ಯಕ್ಷರು ಆಡಳಿತ ನಡೆಸಿದ್ದಾರೆ. ಶ್ರೀಮತಿ ಮರಿನಾ ಡಿಕುನ್ಹ (1994-2000), ಮರಿಯಾ ಡಿ ಕೋಸ್ತ (2000-2003), ಮಹಮ್ಮದ್‌ ಶರೀಫ್‌ (2003-2005), ಸುರೇಂದ್ರ ಪೆರ್ಗಡೆ (2005-2007), ಹರಿಣಾಕ್ಷಿ (2007-2009), ಸಾಹುಲ್‌ ಹಮೀದ್‌ (2010-2012),ಪ್ರದೀಪ ಸುವರ್ಣ (2012-2015) ಹಾಗೂ ರೋಝೀ ಮಥಾಯಸ್‌ (2015-2020) ಅವರು ಅಧ್ಯಕ್ಷರಾಗಿ ಪಂಚಾಯತ್‌ನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ.

ಬಸ್‌ ನಿಲ್ದಾಣದ ಅಭಿವೃದ್ಧಿ
ಬಜಪೆ ಬಸ್‌ ನಿಲ್ದಾಣ ವಾಹನ ದಟ್ಟಣೆ ಇರುವ ಸ್ಥಳ. ಈ ಬಸ್‌ ನಿಲ್ದಾಣ ಪಂಚಾಯತ್‌ ಸುಪರ್ದಿಯಲ್ಲಿದ್ದು 70 ಲ.ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಇದರಿಂದಾಗಿ ಸ್ಥಳೀಯ ಹಾಗೂ ವಿವಿಧೆಡೆಗಳಿಂದ ಬರುವ ಪ್ರಯಾಣಿಕರಿಗೆ ಅನುಕೂಲವಾಗಿದೆ.

ಗ್ರಾಮ ಪಂಚಾಯತ್‌ಗೆ ಸಂದ ಪ್ರಶಸ್ತಿ
2006-07 ರಲ್ಲಿ ಸುರೇಂದ್ರ ಪೆರ್ಗಡೆ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಿರ್ಮಲ ಗ್ರಾಮ ಪುರಸ್ಕಾರ ಲಭಿಸಿದೆ.

ನವೀಕೃತ ಮಾರುಕಟ್ಟೆ

ಹಕ್ಕುಪತ್ರ, ಮನೆ ನೀಡಿದ ತೃಪ್ತಿ
ನಮ್ಮ ಅವಧಿಯಲ್ಲಿ ಸರಕಾರವು ಪಂಚಾಯತ್‌ರಾಜ್‌ ಇತಿಹಾಸದಲ್ಲಿ ಐದು ವರ್ಷದ ಅಧ್ಯಕ್ಷೆಯಾಗಿ ಆಡಳಿತ ನೀಡಲು ಅವಕಾಶ ನೀಡಿತು. ತೊಟ್ಟಿಲಗುರಿ ದುರಂತದಲ್ಲಿ ನಿರಾಶ್ರಿತರಾದವರಿಗೆ ಸರಕಾರದ ವಿವಿಧ ಇಲಾಖೆ, ದಾನಿಗಳಿಂದ ಅನುದಾನ ಪಡೆದು ಹಕ್ಕುಪತ್ರ ನೀಡಿ ಮನೆಗಳನ್ನು ನಿರ್ಮಿಸಿಕೊಟ್ಟಿರುವುದು ಸಾರ್ಥಕತೆಯಲ್ಲಿ ಒಂದು. ಜನರಿಗೆ ಮೂಲಸೌಕರ್ಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಪಟ್ಟಿದ್ದು ಜನರ ಪ್ರೀತಿ ಗೌರವಾಧರಕ್ಕೆ ಪಾತ್ರವಾಗಿರುವುದು ಹೆಮ್ಮೆ ತಂದಿದೆ. ಜಾತಿ ಮತ ಧರ್ಮ ಭೇದವಿಲ್ಲದೆ ಆಡಳಿತ ನಡೆಸಿರುವುದು ಆತ್ಮತೃಪ್ತಿ ನೀಡಿದೆ.
– ರೋಝಿ ಮಥಾಯಸ್‌, ಅಧ್ಯಕ್ಷರು, ಬಜಪೆ ಗ್ರಾಮ ಪಂಚಾಯತ್‌

ಪಾರದರ್ಶಕ ಆಡಳಿತ
ರಾಜಕೀಯ ರಹಿತ ಪಾರದರ್ಶಕ ಆಡಳಿತ ನೀಡಿದ್ದೇವೆ. ಮುಖ್ಯವಾಗಿ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಕುಡಿಯುವ ನೀರು, ತ್ಯಾಜ್ಯದ ಸಮಸ್ಯೆಯನ್ನು ಬಹುಮಟ್ಟಿಗೆ ನಿವಾರಿಸಲಾಗಿದೆ. ಹೆಚ್ಚಿನ ಕಡೆಗಳಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮಾಡಲು ಶ್ರಮಿಸಿದ್ದೇವೆ. ಸಣ್ಣಪುಟ್ಟ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗಿದೆ. ಐದು ವರ್ಷ ಪ್ರಾಮಾಣಿಕ ಆಡಳಿತ ನಡೆಸಿದ ಸಂತೃಪ್ತಿ ಇದೆ.
– ಮಹಮ್ಮದ್‌ ಶರೀಫ್, ಉಪಾಧ್ಯಕ್ಷರು, ಬಜಪೆ ಗ್ರಾಮ ಪಂಚಾಯತ್‌

ನಿಗದಿತ ಅವಧಿಯಲ್ಲಿ ಕೆಲಸ
ಜನರಿಗೆ ಸರಕಾರದ ಸೇವೆಗಳು ತ್ವರಿತವಾಗಿ ದೊರೆಯುವುದು ಅಗತ್ಯ. ಅದರಂತೆಯೇ ಯಾವುದೇ ಕೆಲಸಗಳನ್ನು ನಿಗದಿತ ಅವಧಿಯಲ್ಲಿ ಮುಗಿಸುವುದು ನಮ್ಮ ಕರ್ತವ್ಯದ ಒಂದು ಭಾಗವಾಗಿತ್ತು.ಜನರ ಕಾರ್ಯವನ್ನು ತ್ವರಿತವಾಗಿ ನಡೆಸಿಕೊಡಲಾಗಿದೆ. ಕಾನೂನಿನ ಚೌಕಟ್ಟಿನಡಿ ಜನಪ್ರತಿನಿಧಿಗಳು ಮತ್ತು ಗ್ರಾಮಸ್ಥರೊಂದಿಗೆ ಉತ್ತಮ ಭಾಂದವ್ಯ ಹೊಂದಿ ಪಂಚಾಯತಿಯನ್ನು ಅಭಿವೃದ್ಧಿ ಪಥದೆಡೆಗೆ ಕೊಂಡೊಯ್ದ ತೃಪ್ತಿ ಇದೆ.
– ಸಾಯಿಶ್‌ ಚೌಟ ಕೆ, ಪಿಡಿಒ, ಗ್ರಾಮ ಪಂಚಾಯತ್‌

ಪಂಚಾಯತ್ ಸದಸ್ಯರು:

ಪಂಚಾಯತ್ ಸಿಬ್ಬಂದಿಗಳು

 

 

 

 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕರಣ್‌ ಜೋಹರ್‌ಗೆ “ಡ್ರಗ್‌ ಪಾರ್ಟಿ’ ಕಂಟಕ?

ಕರಣ್‌ ಜೋಹರ್‌ಗೆ “ಡ್ರಗ್‌ ಪಾರ್ಟಿ’ ಕಂಟಕ?

ಸಾವಿನಲ್ಲಿ ಶೇ.60 ಮಂದಿ ಅನಿಲ ದುರಂತ ಸಂತ್ರಸ್ತರು?

ಸಾವಿನಲ್ಲಿ ಶೇ.60 ಮಂದಿ ಅನಿಲ ದುರಂತ ಸಂತ್ರಸ್ತರು ?

ಕೋವಿಡ್ : ಶೇ.78.86 ಚೇತರಿಕೆ

ಕೋವಿಡ್ : ಶೇ.78.86 ಚೇತರಿಕೆ

ಏರ್‌ಇಂಡಿಯಾಗೆ ನಿರ್ಬಂಧ

ಏರ್ ‌ಇಂಡಿಯಾಗೆ ನಿರ್ಬಂಧ

ಕೃಷಿ ಬಿಲ್‌: ಎನ್‌ಡಿಎನಲ್ಲೇ ಒಡಕು

ಕೃಷಿ ಬಿಲ್‌: ಎನ್‌ಡಿಎನಲ್ಲೇ ಒಡಕು

ಕುಡಿಯುವ ನೀರು ಯೋಜನೆಗಳಿಗೆ 540 ಕೋಟಿ ಮಂಜೂರು

ಕುಡಿಯುವ ನೀರು ಯೋಜನೆಗಳಿಗೆ 540 ಕೋಟಿ ಮಂಜೂರು

ಚೆನ್ನೈ ಪ್ರತಿಮೆ ಮನುಷ್ಯ ನಿವೃತ್ತಿ?

ಚೆನ್ನೈ ಪ್ರತಿಮೆ ಮನುಷ್ಯ ನಿವೃತ್ತಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜನನ, ಮರಣ ಪ್ರಮಾಣ ಪತ್ರ: ಡಿಜಿಟಲ್‌ ಸಹಿ ಕಡ್ಡಾಯ: ಎಂ ಜೆ. ರೂಪಾ

ಜನನ, ಮರಣ ಪ್ರಮಾಣ ಪತ್ರ: ಡಿಜಿಟಲ್‌ ಸಹಿ ಕಡ್ಡಾಯ: ಎಂ ಜೆ. ರೂಪಾ

ಸಿಆರ್‌ಝಡ್‌ ಮರಳುಗಾರಿಕೆ ಶೀಘ್ರ?

ಸಿಆರ್‌ಝಡ್‌ ಮರಳುಗಾರಿಕೆ ಶೀಘ್ರ?

ಸೆ. 22: ಮಂಗಳೂರು-ಮಹಾರಾಷ್ಟ್ರ ಕೆಎಸ್ಸಾರ್ಟಿಸಿ ಸಂಚಾರ ಆರಂಭ

ಸೆ. 22: ಮಂಗಳೂರು-ಮಹಾರಾಷ್ಟ್ರ ಕೆಎಸ್ಸಾರ್ಟಿಸಿ ಸಂಚಾರ ಆರಂಭ

ಪಿಲಿಕುಳ: ‘ಚಿಂಟು’ ಚಿರತೆಗೆ ಸಿಸೇರಿಯನ್ : ಬದುಕುಳಿಯಲಿಲ್ಲ ಮರಿಗಳು!

ಪಿಲಿಕುಳ: ‘ಚಿಂಟು’ ಚಿರತೆಗೆ ಸಿಸೇರಿಯನ್ : ಬದುಕುಳಿಯಲಿಲ್ಲ ಮರಿಗಳು!

ವಿಮಾನ ನಿಲ್ದಾಣ ಬಳಿಯ ನೀರಿನ ಟ್ಯಾಂಕ್ ತೆರವು: ರಸ್ತೆಗೆ ಬಿದ್ದ ಟ್ಯಾಂಕ್, ಸಂಚಾರ ಸ್ಥಗಿತ

ವಿಮಾನ ನಿಲ್ದಾಣ ಬಳಿಯ ನೀರಿನ ಟ್ಯಾಂಕ್ ತೆರವು: ರಸ್ತೆಗೆ ಬಿದ್ದ ಟ್ಯಾಂಕ್, ಸಂಚಾರ ಸ್ಥಗಿತ

MUST WATCH

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆಹೊಸ ಸೇರ್ಪಡೆ

ಬಯಲಾಯ್ತು ಪಾಕ್‌ ಕುತಂತ್ರ ತಕ್ಕ ಪ್ರತ್ಯುತ್ತರ ಅಗತ್ಯ

ಬಯಲಾಯ್ತು ಪಾಕ್‌ ಕುತಂತ್ರ ತಕ್ಕ ಪ್ರತ್ಯುತ್ತರ ಅಗತ್ಯ

ಕರಣ್‌ ಜೋಹರ್‌ಗೆ “ಡ್ರಗ್‌ ಪಾರ್ಟಿ’ ಕಂಟಕ?

ಕರಣ್‌ ಜೋಹರ್‌ಗೆ “ಡ್ರಗ್‌ ಪಾರ್ಟಿ’ ಕಂಟಕ?

 ಕಮಲಶಿಲೆ-ಹಳ್ಳಿಹೊಳೆ ಮುಖ್ಯ ರಸ್ತೆ; 6 ಕಿ.ಮೀ. ಅಂತರದಲ್ಲಿ 5ಕ್ಕೂ ಹೆಚ್ಚು ಅಪಾಯಕಾರಿ ತಿರುವು

 ಕಮಲಶಿಲೆ-ಹಳ್ಳಿಹೊಳೆ ಮುಖ್ಯ ರಸ್ತೆ; 6 ಕಿ.ಮೀ. ಅಂತರದಲ್ಲಿ 5ಕ್ಕೂ ಹೆಚ್ಚು ಅಪಾಯಕಾರಿ ತಿರುವು

ಜನನ, ಮರಣ ಪ್ರಮಾಣ ಪತ್ರ: ಡಿಜಿಟಲ್‌ ಸಹಿ ಕಡ್ಡಾಯ: ಎಂ ಜೆ. ರೂಪಾ

ಜನನ, ಮರಣ ಪ್ರಮಾಣ ಪತ್ರ: ಡಿಜಿಟಲ್‌ ಸಹಿ ಕಡ್ಡಾಯ: ಎಂ ಜೆ. ರೂಪಾ

ಸಿಆರ್‌ಝಡ್‌ ಮರಳುಗಾರಿಕೆ ಶೀಘ್ರ?

ಸಿಆರ್‌ಝಡ್‌ ಮರಳುಗಾರಿಕೆ ಶೀಘ್ರ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.