ಏಕದಿನ ಪಂದ್ಯ : ದಕ್ಷಿಣ ಆಫ್ರಿಕಾವನ್ನು ಸೋಲಿಸಿ ದಾಖಲೆ ಬರೆದ ಬಾಂಗ್ಲಾ
Team Udayavani, Mar 19, 2022, 3:03 PM IST
ಸೆಂಚುರಿಯನ್ : ದಕ್ಷಿಣ ಆಫ್ರಿಕಾ ನೆಲದಲ್ಲಿ ಬಾಂಗ್ಲಾದೇಶ ಮೊದಲ ಬಾರಿಗೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಐತಿಹಾಸಿಕ ದಾಖಲೆ ಬರೆದಿದೆ.
ಶುಕ್ರವಾರ ನಡೆದ ಸರಣಿಯ ಆರಂಭಿಕ ಪಂದ್ಯವನ್ನು 38 ರನ್ಗಳಿಂದ ಗೆದ್ದ ಬಾಂಗ್ಲಾದೇಶ ಸರಣಿ ಮುನ್ನಡೆ ಸಾಧಿಸಿ ಹೊಸ ಹುರುಪು ಪಡೆದುಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ ಪಟ್ಟ ಬಾಂಗ್ಲಾದೇಶದ ಬ್ಯಾಟ್ಸ್ಮನ್ಗಳು ಅಮೋಘ ಆಟವಾಡಿ 7 ವಿಕೆಟ್ ನಷ್ಟಕ್ಕೆ 314 ರನ್ ಗಳ ಭಾರಿ ಮೊತ್ತ ಪೇರಿಸಿದರು. ಶಕಿಬ್ ಅಲ್ ಹಸನ್ (77), ಲಿಟ್ಟನ್ ದಾಸ್ (50) ಮತ್ತು ಯಾಸಿರ್ ಅಲಿ (50) ಅರ್ಧಶತಕಗಳ ನೆರವಿನಿಂದ ದೊಂದಿಗೆ ಭರ್ಜರಿ ಮೊತ್ತ ಕಲೆ ಹಾಕಲಾಯಿತು.
ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, ಸ್ಪಿನ್ನರ್ ಮೆಹಿದಿ ಹಸನ್ ಬಿಗಿ ದಾಳಿಗೆ ಸಿಲುಕಿ 48.5 ಓವರ್ಗಳಲ್ಲಿ 276 ರನ್ಗಳಿಗೆ ಆಲೌಟ್ ಆಯಿತು. ಮಿರಾಜ್ 9 ಓವರ್ಗಳಲ್ಲಿ 61 ರನ್ ನೀಡಿದರೂ ಕೊನೆಯಲ್ಲಿ ಪ್ರಮುಖ 4 ವಿಕೆಟ್ ಗಳನ್ನು ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ರೋಚಕ ಹಣಾಹಣಿಯ ಪಂದ್ಯದ 46 ನೇ ಓವರ್ನಲ್ಲಿ ಡೇವಿಡ್ ಮಿಲ್ಲರ್(79) ಸ್ಟಂಪ್ ಔಟಾಗುವ ಮೂಲಕ ದಕ್ಷಿಣ ಆಫ್ರಿಕಾ ಗೆಲುವಿನ ಕೊನೆಯ ಭರವಸೆ ತೊಡೆದುಹಾಕಿತು. ಕೊನೆಯ ವಿಕೆಟ್ ಆಟದಲ್ಲೂ ಗೆಲುವಿನ ಭರವಸೆ ಮೂಡಿಸಿದ ಕೇಶವ್ ಮಹಾರಾಜ್ 23 ರನ್ ಗಳಿಗೆ ಔಟಾಗಿ ನಿರಾಶೆ ಮೂಡಿಸಿದರು. ಕೊನೆಯಲ್ಲಿ ಬಂದ ಲುಂಗಿ ನಿಗಿಡಿ 15 ರನ್ ಗಳಿಸಿ ಅಜೇಯರಾಗಿ ಉಳಿದರು. ರಾಸ್ಸಿ ವಾನ್ ಡೆರ್ ಡುಸ್ಸೇನ್ ಗರಿಷ್ಟ 86 ರನ್ ಗಳಿಸಿದರು.
ಬಾಂಗ್ಲಾ ಪರ ತಕ್ಸೀನ್ ಅಹಮದ್ 3, ಶೋರೀಫುಲ್ ಇಸ್ಲಾಮ್ 2 ವಿಕೆಟ್ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?