ಅಸ್ಸಾಂ : 8 ಮಂದಿ ಬಾಂಗ್ಲಾ ವಲಸಿಗರ ಬಂಧನ
Team Udayavani, Apr 24, 2019, 2:52 PM IST
ಗುವಾಹಟಿ: ಇಲ್ಲಿನ ರೈಲು ನಿಲ್ದಾಣದಲ್ಲಿ 8 ಮಂದಿ ಬಾಂಗ್ಲಾ ದೇಶಿ ವಲಸಿಗಯುವಕರನ್ನು ಪೊಲೀಸರು ಬಂಧಿಸಿದ ಘಟನೆ ಎಪ್ರಿಲ್ 22 ರಂದು ನಡೆದಿದೆ.
ಎಪ್ರಿಲ್ 20 ರಂದು ಚಿತ್ತಗಾಂಗ್ನಿಂದ 8 ಮಂದಿ ಪಶ್ಚಿಮ ತ್ರಿಪುರಾ ಮೂಲಕ ಗಡಿ ಪ್ರವೇಶಿಸಿದ್ದರು ಎಂದು ರೈಲ್ವೆ ಡಿಐಜಿ ಅಬು ಸೂಫಿಯಾನ್ ಅವರು ಮಾಹಿತಿ ನೀಡಿದ್ದಾರೆ.
8 ಮಂದಿ ಉದ್ಯೋಗ ಅರಸಿಕೊಂಡು ಚೆನ್ನೈನತ್ತ ಹೊರಟಿದ್ದರು ಎಂದು ತಿಳಿದು ಬಂದಿದೆ.