Bantwal; ಧಾರ್ಮಿಕ ಕೇಂದ್ರಗಳು, ಶಿಶುಮಂದಿರದಿಂದ ಸಾವಿರಾರು ರೂ. ಕಳವು

ಪೊಲೀಸರ ನಿದ್ಧೆಕೆಡಿಸಿದ ಕಳ್ಳರ ಹಾವಳಿ

Team Udayavani, Jun 24, 2024, 9:11 PM IST

1–ncxcx.

ಬಂಟ್ವಾಳ: ಎರಡು ಗ್ರಾಮಗಳ ಎರಡು ಧಾರ್ಮಿಕ ಕೇಂದ್ರ ಹಾಗೂ ಶಿಶುಮಂದಿರವೊಂದಕ್ಕೆ ಕಳ್ಳರು ನುಗ್ಗಿ ಸಾವಿರಾರು ರೂ. ನಗದು ಕಳವು ಮಾಡಿದ ಘಟನೆ ಆದಿತ್ಯವಾರ ಮಧ್ಯ ರಾತ್ರಿ ವೇಳೆ ನಡೆದಿದೆ.

ನರಿಕೊಂಬು ಗ್ರಾಮದಲ್ಲಿರುವ ಪೊಯಿತಾಜೆ ಏರಮಲೆ ಶ್ರೀ ಕೋದಂಡ ರಾಮ ಭಜನಾ ಮಂದಿರದ ಮುಂಬಾಗಿಲು ಮುರಿದು ಮಂದಿರದೊಳಗೆ ಇದ್ಧ ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 3000 ಸಾವಿರ ನಗದನ್ನು ಕಳವು ಮಾಡಿದ್ದಾರೆ. ಮತ್ತು ಗೊದ್ರೇಜ್ ನ ಬಾಗಿಲು ಮುರಿದು ಅದರೊಳಗೆ ಇದ್ದ ಅಗತ್ಯವಾದ ಪತ್ರಗಳನ್ನು ಚೆಲ್ಲಾಪಿಲ್ಲಿಯಾಗಿ ಮಾಡಿ ಹೋಗಿದ್ದಾರೆ.

ಕೊಪ್ಪಳಕೋಡಿ ಎಂಬಲ್ಲಿರುವ ಶಿಶು ಮಂದಿರದೊಳಗೆ ನುಗ್ಗಿದ ಕಳ್ಳರು ಅದರಲ್ಲಿದ್ದ ಡಬ್ಬಿಯನ್ನು ಮುರಿದು ಸುಮಾರು 600 ರೂ ನಗದನ್ನು ದೋಚಿದ್ದಾರೆ.

ನರಿಕೊಂಬು ಗ್ರಾಮದ ಅಂತರ ಎಂಬಲ್ಲಿರುವ ಸಾಲ್ಯಾನ್ ಕುಟುಂಬದ ತರವಾಡು ದೇವಸ್ಥಾನ ಇದ್ದು ಅದರ ಬಾಗಿಲು ಮುರಿದು ಒಳಪ್ರವೇಶ ಮಾಡಿದ ಕಳ್ಳರು ಕಾಣಿಕೆ ಡಬ್ಬಿಯನ್ನು‌ಪುಡಿಗೈದು ಅದರಲ್ಲಿದ್ದ ಸುಮಾರು 1000 ಸಾವಿರ ನಗದು ಕಳವು ಮಾಡಿದ್ದಾರೆ.

ಬಾಳ್ತಿಲ ಗ್ರಾಮದ ಸುಧೆಕ್ಕಾರು ಎಂಬಲ್ಲಿರುವ ರಕ್ತೇಶ್ವರಿ ಗುಳಿಗ ನ ಗರ್ಭಗುಡಿಯ ಬಾಗಿಲ ಚಿಲಕ ಮುರಿದು ಒಳಗೆ ಪ್ರವೇಶ ಮಾಡಿದ ಕಳ್ಳರು ಗರ್ಭಗುಡಿಯೊಳಗಿನ ವಸ್ತುಗಳನ್ನು ‌ಚೆಲ್ಲಾಪಿಲ್ಲಿ ಮಾಡಿದ್ದಲ್ಲದೆ, ಕಾಣಿಕೆ ಡಬ್ಬಿ ಒಡೆದು ಹಾಕಿ ಅದರಲ್ಲಿದ್ದ ಹಣ ಮತ್ತು ಭಜನೆಯಿಂದ ಹೊಂದಾಣಿಕೆ ಗೊಂಡ ಒಟ್ಟು 10,000 ನಗದನ್ನು ಕಳ್ಳರು ಎಗರಿಸಿದ್ದಾರೆ.

ಮೂರು ಪ್ರಕರಣಗಳ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,ನಗರ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ ಮತ್ತು ಎಸ್.ಐ.ರಾಮಕೃಷ್ಣ ಅವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ‌ನಡೆಸಿದ್ದಾರೆ.

ಪಾಣೆಮಂಗಳೂರು ಮತ್ತು ಕೈಕಂಬ ಭಾಗದಲ್ಲಿ ಕಳೆದ ಒಂದು ವಾರಗಳಿಂದ ಕಳ್ಳತನ ನಡೆಯುತ್ತಿದ್ದು, ಪೋಲೀಸರ ತಲೆಕೆಡಿಸಿದೆ.ಮಳೆಗಾಲದಲ್ಲಿ ಜೋರಾಗಿ ಮಳೆ ಬರುವ ದಿನಗಳಲ್ಲಿ ಪೇಟೆ ಅಂಗಡಿಗಳ ಹಾಗೂ ಮನೆಗಳ ಕಳ್ಳತನ ಪ್ರತಿ ವರ್ಷ ವರದಿಯಾಗುತ್ತಿದೆ. ಇದೀಗ ಮತ್ತೆ ಈ ವರ್ಷದಲ್ಲಿ ಕಳ್ಳರ ಆಟ ಶುರುವಾಗಿದ್ದು, ಪೊಲೀಸರ ನಿದ್ಧೆಕೆಡಿಸಿದೆ.

ಟಾಪ್ ನ್ಯೂಸ್

Heavy Rain: ಧಾರವಾಡ ಜಿಲ್ಲೆಯಾದ್ಯಂತ ಜು.25, 26 ರಂದು ಶಾಲಾ ಕಾಲೇಜುಗಳಿಗೆ ರಜೆ

Heavy Rain: ಧಾರವಾಡ ಜಿಲ್ಲೆಯಾದ್ಯಂತ ಜು.25, 26 ರಂದು ಶಾಲಾ ಕಾಲೇಜುಗಳಿಗೆ ರಜೆ

Honor 200 Pro 5G, Honor 200 5G ಫೋನ್ ಗಳು ಭಾರತದಲ್ಲಿ ಬಿಡುಗಡೆ

Honor 200 Pro 5G, Honor 200 5G ಫೋನ್ ಗಳು ಭಾರತದಲ್ಲಿ ಬಿಡುಗಡೆ

Kalaburagi ರೈಲ್ವೆ ವಲಯ ಸ್ಥಾಪಿಸುವ ಪ್ರಸ್ತಾವ ಕೇಂದ್ರದ ಮುಂದಿಲ್ಲ: ಕೇಂದ್ರ ಸಚಿವ

Kalaburagi ರೈಲ್ವೆ ವಲಯ ಸ್ಥಾಪಿಸುವ ಪ್ರಸ್ತಾವ ಕೇಂದ್ರದ ಮುಂದಿಲ್ಲ: ಕೇಂದ್ರ ಸಚಿವ

Nityananda Rai: ಕಾಶ್ಮೀರದ ಉಗ್ರರು ಜೈಲಿಗೆ ಇಲ್ಲವೇ ನರಕಕ್ಕೆ: ಸಚಿವ ನಿತ್ಯಾನಂದ ರಾಯ್‌

Nityananda Rai: ಕಾಶ್ಮೀರದ ಉಗ್ರರು ಜೈಲಿಗೆ ಇಲ್ಲವೇ ನರಕಕ್ಕೆ: ಸಚಿವ ನಿತ್ಯಾನಂದ ರಾಯ್‌

Shivakumar

Bengaluru: ಅಧಿವೇಶನದ ಬಳಿಕ ಕಾವೇರಿ ನೀರಿನ ದರ ಪರಿಷ್ಕರಣೆ: ಡಿ.ಕೆ.ಶಿವಕುಮಾರ್‌

Donald Trump: ಹತ್ಯೆಗೆ ಯತ್ನ ಹಿನ್ನೆಲೆ: ಇನ್ನು ಟ್ರಂಪ್‌ ಬಹಿರಂಗ ಚುನಾವಣಾ ಪ್ರಚಾರ ಇಲ್ಲ?

Donald Trump: ಹತ್ಯೆಗೆ ಯತ್ನ ಹಿನ್ನೆಲೆ: ಇನ್ನು ಟ್ರಂಪ್‌ ಬಹಿರಂಗ ಚುನಾವಣಾ ಪ್ರಚಾರ ಇಲ್ಲ?

Madikeri: ಕಾವೇರಿ ನದಿಗೆ ಹಾರಿ ಪ್ರಥಮ ದರ್ಜೆ ಸಹಾಯಕ ಆತ್ಮಹತ್ಯೆಗೆ ಶರಣು

Madikeri: ಕಾವೇರಿ ನದಿಗೆ ಹಾರಿ ಪ್ರಥಮ ದರ್ಜೆ ಸಹಾಯಕ ಆತ್ಮಹತ್ಯೆಗೆ ಶರಣು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vitla: ಅಂಗನವಾಡಿಗೆ ಕನ್ನ… ಗರ್ಭಿಣಿಯರಿಗೆ, ಮಕ್ಕಳಿಗೆ ತರಿಸಿದ್ದ ಆಹಾರ ಸಾಮಗ್ರಿ ಕಳವು

Vitla: ಅಂಗನವಾಡಿಗೆ ಕನ್ನ… ಗರ್ಭಿಣಿಯರಿಗೆ, ಮಕ್ಕಳಿಗೆ ತರಿಸಿದ್ದ ಆಹಾರ ಸಾಮಗ್ರಿ ಕಳವು

14-mla

Mangaluru-Subramanya; ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಚೌಟ ಒತ್ತಾಯ 

12-vitla

Vitla: ನೇಣು ಬಿಗಿದು ಯುವಕ ಆತ್ಮಹತ್ಯೆ

10-savanur

Savanur: ತೋಟದಲ್ಲಿ ಕುಸಿದು ಬಿದ್ದು ಮಹಿಳೆ ಮೃತ್ಯು

7-bantwala

Bantwala: ಗರ್ಭವತಿ ಮಾಡಿದ ಆರೋಪ; ಪ್ರಕರಣ ದಾಖಲು

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Heavy Rain: ಧಾರವಾಡ ಜಿಲ್ಲೆಯಾದ್ಯಂತ ಜು.25, 26 ರಂದು ಶಾಲಾ ಕಾಲೇಜುಗಳಿಗೆ ರಜೆ

Heavy Rain: ಧಾರವಾಡ ಜಿಲ್ಲೆಯಾದ್ಯಂತ ಜು.25, 26 ರಂದು ಶಾಲಾ ಕಾಲೇಜುಗಳಿಗೆ ರಜೆ

Honor 200 Pro 5G, Honor 200 5G ಫೋನ್ ಗಳು ಭಾರತದಲ್ಲಿ ಬಿಡುಗಡೆ

Honor 200 Pro 5G, Honor 200 5G ಫೋನ್ ಗಳು ಭಾರತದಲ್ಲಿ ಬಿಡುಗಡೆ

Kalaburagi ರೈಲ್ವೆ ವಲಯ ಸ್ಥಾಪಿಸುವ ಪ್ರಸ್ತಾವ ಕೇಂದ್ರದ ಮುಂದಿಲ್ಲ: ಕೇಂದ್ರ ಸಚಿವ

Kalaburagi ರೈಲ್ವೆ ವಲಯ ಸ್ಥಾಪಿಸುವ ಪ್ರಸ್ತಾವ ಕೇಂದ್ರದ ಮುಂದಿಲ್ಲ: ಕೇಂದ್ರ ಸಚಿವ

Nityananda Rai: ಕಾಶ್ಮೀರದ ಉಗ್ರರು ಜೈಲಿಗೆ ಇಲ್ಲವೇ ನರಕಕ್ಕೆ: ಸಚಿವ ನಿತ್ಯಾನಂದ ರಾಯ್‌

Nityananda Rai: ಕಾಶ್ಮೀರದ ಉಗ್ರರು ಜೈಲಿಗೆ ಇಲ್ಲವೇ ನರಕಕ್ಕೆ: ಸಚಿವ ನಿತ್ಯಾನಂದ ರಾಯ್‌

Shivakumar

Bengaluru: ಅಧಿವೇಶನದ ಬಳಿಕ ಕಾವೇರಿ ನೀರಿನ ದರ ಪರಿಷ್ಕರಣೆ: ಡಿ.ಕೆ.ಶಿವಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.