ಗೋ ಹತ್ಯೆ ನಿಷೇಧಕ್ಕೆ ಸರ್ಕಾರ ಬದ್ಧ , ಮತಾಂತರಿಗಳ ವಿರುದ್ಧ ಕಠಿಣ ಕ್ರಮ: ಬೊಮ್ಮಾಯಿ
Team Udayavani, Dec 5, 2020, 2:31 PM IST
ಕಾರವಾರ: ಗೋಹತ್ಯೆ ನಿಷೇಧ ಕಾಯಿದೆಯನ್ನು ಶೀಘ್ರದಲ್ಲಿ ರೂಪಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಈ ಕುರಿತು ಶಾಸಕಿ ರೂಪಾಲಿ ನಾಯ್ಕ ಅವರಿಗೆ ಮನವಿ ನೀಡಿದಾಗ, ಸರ್ಕಾರ ಗೋ ಹತ್ಯೆ ನಿಷೇಧಕ್ಕೆ ಬದ್ಧವಾಗಿದ್ದು, ಗೋಹತ್ಯೆ ನಿಷೇಧಿಸಿ ಸದ್ಯದಲ್ಲೇ ಕಠಿಣ ಕಾನೂನು ರೂಪಿಸಲಾಗುವುದು ಎಂದು ತಿಳಿಸಿದರು. ಗೋಹತ್ಯೆ ನಿಷೇಧದ ಬಗ್ಗೆ ಸಚಿವರ ಗಮನ ಸೆಳೆದ ಶಾಸಕರು, ಗೋವುಗಳ ಹತ್ಯೆ, ಹಿಂಸಾತ್ಮಕ ಸಾಗಾಟ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಕೂಡಲೇ ಬಲಿಷ್ಠ ಕಾನೂನಿನ ಮೂಲಕ ಇವುಗಳನ್ನು ತಡೆಗಟ್ಟುವ ಅನಿವಾರ್ಯತೆ ಎದುರಾಗಿದೆ ಎಂದು ವಿನಂತಿಸಿದರು.
ಗೋ ಹತ್ಯೆ ನಿಷೇಧ ಕಾಯಿದೆ ಜಾರಿಗೊಳಿಸುವ ಮೂಲಕ ಗೋ ಸಂರಕ್ಷಣೆಗೆ ಆದ್ಯತೆ ನೀಡಬೇಕಾಗಿದೆ. ಹಿಂದುಗಳಿಗೆ ಗೋವು ಪೂಜನೀಯ. ಗೋವಿಗೆ ದೇವರ ಸ್ಥಾನಮಾನ ನೀಡಲಾಗಿದೆ. ಗೋ ಹತ್ಯೆ, ಹಿಂಸೆಯಿಂದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುತ್ತಿದೆ.
ಇದನ್ನೂ ಓದಿ:ಕೌರವನ ವಿರುದ್ಧ ಕೆರಳಿದ ಅನ್ನದಾತ : ರೈತ ಸಂಘಟನೆಯಿಂದ ಪ್ರತಿಕೃತಿ ದಹಿಸಿ ಪ್ರತಿಭಟನೆ
ಕಳೆದ ಚುನಾವಣೆಯಲ್ಲಿ ಗೋಹತ್ಯೆ ನಿಷೇಧ ಬಿಜೆಪಿಯ ಪ್ರಮುಖ ಚುನಾವಣಾ ಪ್ರಣಾಳಿಕೆಯಾಗಿತ್ತು. ಬಿಜೆಪಿ ಚುನಾವಣೆ ಗೆಲ್ಲಲು ಪ್ರಣಾಳಿಕೆಯಲ್ಲಿನ ಈ ಅಂಶವೂ ಒಂದು. ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಮಾಡುವುದಾದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬ ನಂಬಿಕೆ ಜನತೆಯದ್ದಾಗಿದೆ. ಅದು ವಾಸ್ತವವೂ ಹೌದು. ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ವ್ಯಾಪಕವಾಗಿ ಚರ್ಚೆಯೂ ನಡೆಯುತ್ತಿದೆ. ಸಾರ್ವಜನಿಕವಾಗಿಯೂ ಕೂಡ ಗೋ ಹತ್ಯೆ ನಿಷೇಧದ ಬಗ್ಗೆ ಬಲವಾದ ಕೂಗು ಕೇಳಿಬರುತ್ತಿದೆ. ಈ ಬಗ್ಗೆ ಸರ್ಕಾರದ ಮೇಲೆ ಭಾರಿ ನಿರೀಕ್ಷೆಯನ್ನು ಸಹ ಜನತೆ ಹೊಂದಿದ್ದಾರೆ ಎಂದರು.
ಗೋವುಗಳ ಹಿಂಸಾತ್ಮಕ ಸಾಗಾಟ ತಡೆಯಬೇಕು: ಈ ಹಿಂದೆ ಅಂದರೆ 1964ರಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಾಗಿ ಅಲ್ಪಸ್ವಲ್ಪ ಬದಲಾವಣೆಗಳಾದರೂ ಗೋ ಹತ್ಯೆ ನಿಷೇಧ ಪರಿಣಾಮಕಾರಿಯಾಗಿ ಆಗಿಲ್ಲ. 2008 ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಜಾರಿಗೆ ಮುಂದಾಗಲಾಯಿತಾದರೂ ಕಾರಣಾಂತರಗಳಿಂದ ಕಾಯಿದೆ ಜಾರಿಗೆ ಬರಲಿಲ್ಲ. ಆದರೆ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ ಗೋ ಹತ್ಯೆ ನಿಷೇಧದ ಕಟ್ಟುನಿಟ್ಟಿನ ಕಾಯಿದೆ ಆದಷ್ಟು ಶೀಘ್ರದಲ್ಲಿ ಜಾರಿಗೆ ಬರುವಂತೆ ಕ್ರಮ
ಕೈಗೊಳ್ಳಬೇಕಾಗಿ ಮನವಿ ಮಾಡಿದ್ದರು.
ಜನತೆಯ ಧಾರ್ಮಿಕ ಭಾವನೆಯನ್ನು ಗಮನದಲ್ಲಿಟ್ಟುಕೊಂಡು ಪ್ರಾಣಿಗಳಿಗೆ ಹಿಂಸೆ ನೀಡುವುದನ್ನು ತಪ್ಪಿಸಲು ಹಾಗೂ
ಗೋ ಸಂರಕ್ಷಣೆಯನ್ನು ಮಾಡುವ ಉದ್ದೇಶದಿಂದ ಗೋ ಹತ್ಯೆ ನಿಷೇಧ ಕಾಯಿದೆಯನ್ನು ಆದಷ್ಟು ಶೀಘ್ರದಲ್ಲಿ ಜಾರಿಗೊಳಿಸುವಂತೆ ಶಾಸಕಿ ರೂಪಾಲಿ ನಾಯ್ಕ ಆಗ್ರಹಿಸಿದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444