ಬೀಜಿಂಗ್‌: ಹಬ್ಬುತ್ತಿರುವ ಸೋಂಕು ಅನ್ಯ ರಾಷ್ಟ್ರಗಳಲ್ಲಿ ತಳಮಳ!

Team Udayavani, Jun 19, 2020, 11:41 AM IST

ಬೀಜಿಂಗ್‌: ಹಬ್ಬುತ್ತಿರುವ ಸೋಂಕು ಅನ್ಯ ರಾಷ್ಟ್ರಗಳಲ್ಲಿ ತಳಮಳ!

ಬೀಜಿಂಗ್‌: ಚೀನದ ರಾಜಧಾನಿ ಬೀಜಿಂಗ್‌ನಲ್ಲಿ ಎರಡನೇ ಬಾರಿಗೆ ಕೋವಿಡ್‌ ಅಪಾಯ ಸೃಷ್ಟಿಸುತ್ತಿರುವ ಬೆನ್ನಲ್ಲೇ ವಿಶ್ವದ ಇತರೆಲ್ಲ ದೇಶಗಳಲ್ಲಿ ತಳಮಳ ಆರಂಭಗೊಂಡಿದೆ.

ವುಹಾನ್‌ನಲ್ಲಿ ವೈರಸ್‌ ಪತ್ತೆಯಾಗಿ, ಇಡೀ ವಿಶ್ವಕ್ಕೆ ಅಲ್ಲಿಂದ ವೈರಸ್‌ ಹರಡಿದ ಬಳಿಕ ಆ ಸ್ಥಳದಲ್ಲಿ ವೈರಸ್‌ ಅನ್ನು ಸಂಪೂರ್ಣವಾಗಿ ನಿಯಂತ್ರಿಸಿದ್ದಾಗಿ ಚೀನ ಹೇಳಿತ್ತು. ಆದರೆ, ಸೋಂಕು ಪ್ರಕರಣಗಳು ಈಗ ಚೀನದ ಇತರ ಭಾಗಗಳಲ್ಲಿ ಕಂಡು ಬರುತ್ತಿರುವುದು, ಕೋವಿಡ್‌ ರೂಪಾಂತರಗೊಂಡು ಪುನರಾ ವರ್ತನೆಯಾಗುತ್ತದೆ ಎಂಬ ವೈಜ್ಞಾನಿಕ ಅಧ್ಯಯನ ಕಾರರ ಮಾತುಗಳು ವಿವಿಧ ದೇಶಗಳ ಆತಂಕವನ್ನು ಮತ್ತಷ್ಟು ಹೆಚ್ಚು ಮಾಡಿದೆ.

ಮಹಿಳೆಗೆ ಕೋವಿಡ್ : 2 ಕಾಂಪ್ಲೆಕ್ಸ್‌ ಸೀಲ್‌ಡೌನ್‌

ಈಗಾಗಲೇ ಹಲವು ದೇಶಗಳಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಕೆಲವು ದೇಶಗಳಲ್ಲಿ ನಿತ್ಯದ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದರೂ ಈಗಾಗಲೇ ಇರುವ ದೊಡ್ಡ ಸಂಖ್ಯೆಯ ಸೋಂಕಿತರಿಂದಾಗಿ ಆರೋಗ್ಯ ವಲಯ ನಿಭಾಯಿಸಲಾಗದೆ ಹಳಿತಪ್ಪಿದೆ.

ಸೋಂಕು ಮತ್ತೆ ಹಾವಳಿ ಮಾಡಬಹುದೆಂಬ ಆತಂಕ ಅಮೆರಿಕದ ಫ್ಲೋರಿಡಾ, ಟೆಕ್ಸಾಸ್‌, ಅರಿಜೋನಾ, ಇರಾನ್‌, ಭಾರತವನ್ನೂ ಕಾಡುತ್ತಿದೆ. ಐರೋಪ್ಯ ಒಕ್ಕೂಟದ ದೇಶಗಳೂ ಸಹಿತ ವಿವಿಧ ದೇಶಗಳು ಲಾಕ್‌ಡೌನ್‌ ಅನ್ನು ಸಡಿಲಿಕೆ ಮಾಡಿದ್ದು ಸೋಂಕು ಪುನರಾವರ್ತನೆಯಾದರೆ? ಎಂಬ ಭೀತಿ ಒಳಗಿಂದಲೇ ಕಾಡುತ್ತಿದೆ. ಬೀಜಿಂಗ್‌ನ ಸದ್ಯದ ಪರಿಸ್ಥಿತಿಯನ್ನು ಅಲ್ಲಿನ ಅಧಿಕಾರಿಗಳು ಅತೀ ಗಂಭೀರ ಮತ್ತು ಎಚ್ಚರಿಕೆಯ ಗಂಟೆಯೂ ಹೌದು ಎಂದಿದ್ದಾರೆ.

ಬೀಜಿಂಗ್‌ನ ಪರಿಸ್ಥಿತಿಯಿಂದಾಗಿ ಅಲ್ಲಿಗೆ ಬರುವ ಸುಮಾರು 1,225 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಅತಿ ಹೆಚ್ಚು ವಿಮಾನಗಳ ಸಂಚಾರವಿರುವ ವಿಶ್ವದ 2ನೇ ಅತಿ ದೊಡ್ಡ ವಿಮಾನ ನಿಲ್ದಾಣ ಬೀಜಿಂಗ್‌ ಆಗಿದ್ದು, ಅಲ್ಲಿಂದಲೂ ವೈರಸ್‌ ಹರಡಬಹುದೇ ಎಂಬ ಭೀತಿ ಇದೆ. ಇದೇ ವೇಳೆ ಅಮೆರಿಕದಲ್ಲಿ ಪ್ರಕರಣಗಳು ಸಂಖ್ಯೆ ಏರುತ್ತಿರುವಂತೆ ಹೊಸ ಹೊಸ ಕಡೆಗಳಲ್ಲಿ ಕೇಸುಗಳು ಪತ್ತೆಯಾಗುತ್ತಿವೆ. ಈ ಕಾರಣ ಅಮೆರಿಕದೊಂದಿಗಿನ ಗಡಿ ಯನ್ನು ತುರ್ತು ಬಳಕೆಗಳಲ್ಲದ ವಿಚಾರಗಳಿಗೆ ಮುಚ್ಚುವುದಾಗಿ ಕೆನಡಾ ಹೇಳಿದೆ.

ದ.ಕೊರಿಯಾದಲ್ಲೂ ಹೊಸ 43 ಕೇಸುಗಳೂ ಪುನರಾವರ್ತನೆಯ ಸಾಧ್ಯತೆಗಳನ್ನು ಬೊಟ್ಟು ಮಾಡಿದೆ. ಜನರ ಓಡಾಟ ಹೆಚ್ಚಾಗುತ್ತಿರುವಂತೆ ಪ್ರಕರಣಗಳೂ ಏರತೊಡಗಿರುವುದು ಸಮಸ್ಯೆ ಸೃಷ್ಟಿಸಿದೆ. ನ್ಯೂಜಿಲೆಂಡ್‌ನ‌ಲ್ಲೂ ಸಮಸ್ಯೆ ಇದೇ ರೀತಿ ಇದೆ. ಇಲ್ಲೆಲ್ಲ ಸಾರ್ವಜನಿಕರ ಓಡಾಟಕ್ಕೆ, ನೈಟ್‌ಕ್ಲಬ್‌ಗಳು, ಚರ್ಚ್‌, ರೆಸ್ಟೋರೆಂಟ್‌ಗಳ ತೆರೆಯುವಿಕೆಗೆ ಅವಕಾಶ ಕಲ್ಪಿಸಿ ಮೂರ್‍ನಾಲ್ಕು ದಿನಗಳಾಗುತ್ತಿರವಂತೆ ಸಮ ಸ್ಯೆಗೆ ಕಾರಣವಾಗಿದೆ. ಆರ್ಥಿಕ ವ್ಯವಹಾರ ಉತ್ತೇಜನಕ್ಕೆ ಮಳಿಗೆಗಳನ್ನು ತೆರೆಯುವಂತೆಯೂ ಇಲ್ಲ, ಮುಚ್ಚಲು ಹೇಳುವಂತೆಯೂ ಇಲ್ಲ ಎನ್ನುವ ಸಂಕಷ್ಟ ದೇಶಗಳದ್ದಾಗಿದೆ ಹೆಚ್ಚು ಕಡೆಗಳಲ್ಲಿ ರೋಗ ಲಕ್ಷಣಗಳೇ ಇಲ್ಲದೆ ವೈರಸ್‌ ಹರಡುತ್ತಿ ರುವುದು, ಪತ್ತೆ ಹಚ್ಚುವಿಕೆ, ನಿಯಂತ್ರಣ ಇನ್ನಷ್ಟು ಸವಾಲಾಗಿದೆ ಎಂದು ಡೆನ್ಮಾರ್ಕ್‌ನ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.