Udayavni Special

ಲವ್‌- ಮ್ಯಾರೇಜ್‌ ಮೊದಲು ಮತ್ತು ನಂತರ…


Team Udayavani, Jun 3, 2020, 4:34 AM IST

arrenge love

ಹಠಕ್ಕೆ ಬಿದ್ದು ಪ್ರೀತಿಸಿದವನನ್ನೇ ಮದುವೆಯಾದವಳಿಗೆ, ಈಗ ಸಂಸಾರದಲ್ಲಿ ವೈರಾಗ್ಯ ಬಂದಂತಾಗಿದೆ. ಇತ್ತೀಚೆಗೆ, ಇವಳು ಯಾವುದೋ ಕಾರಣಕ್ಕೆ ಅತ್ತೆಗೆ ಎದುರುತ್ತರ ಕೊಟ್ಟಿದ್ದಕ್ಕೆ, ಅವರು ಅಳುತ್ತಾ ಕುಳಿತಿದ್ದಾರೆ. ಆಗ ಗಂಡ, ಅಮ್ಮನ  ಬಳಿ ಸಾರಿ ಕೇಳು ಎಂದು ಒತ್ತಾಯಿಸಿದ್ದಾನೆ. ಮಾಡದಿದ್ದ ತಪ್ಪಿಗೆ ಅವರು ಬೈದರೆ, ತಾನ್ಯಾಕೆ ಕ್ಷಮೆ ಕೇಳಬೇಕು ಎಂದು ಆಕೆ ವಾದಿಸಿದ್ದಾಳೆ. ಅವನು ತಾಳ್ಮೆಗೆಟ್ಟು ಕೆನ್ನೆಗೆ ಎರಡೇಟು ಹಾಕಿದ್ದಾನೆ. ಆನಂತರದಲ್ಲಿ ಇವಳಿಗೆ ಅವರ ಮನೆಯೇ  ಬೇಡವೆನಿಸಿ, ಡೈವೋರ್ಸ್‌ ಬೇಕು ಎಂದಿದ್ದಾಳೆ.

ಹೆಂಡತಿಯ ಕುಗ್ಗಿದ ಮನಃಸ್ಥಿತಿ ನೋಡಿ, ಅವನೇ ಕೌನ್ಸೆಲಿಂಗ್‌ ಗೆ ಕರೆದು ತಂದಿದ್ದ. ಕಾಲೇಜಿಗೆ ಚಕ್ಕರ್‌ ಹೊಡೆದು, ಬೈಕಿನಲ್ಲಿ ಹೊರಟುಬಿಟ್ಟರೆ, ಪ್ರೇಮವೆಂಬ ಭ್ರಮಾ ಪ್ರಪಂಚದಲ್ಲಿ  ಅದೆಷ್ಟು ಆತ್ಮವಿಶ್ವಾಸ! ಒಂದು ದಿನ ನೋಡದಿದ್ದರೆ ಸತ್ತೇ ಹೋಗುವಷ್ಟು ಚಡಪಡಿಕೆ. ಮುಂದೆ ಮದುವೆಯಾಗಲು ಸಾಧ್ಯ ವಾಗದಿದ್ದರೆ, ಎಂಬ ಭಯ. ಜೀವಮಾನ ದಲ್ಲಿ ಮುಗಿಯದಷ್ಟು ಪ್ರೀತಿಯ ಧಾರೆ ಹರಿಸಿ, ಮನೆಯವರ  ವಿರೋಧವನ್ನು ಲೆಕ್ಕಿಸದೆ ಮದುವೆಯಾಗಿದ್ದ ಜೋಡಿ ಅದು.

ಈ ಪರಿ ಲವ್‌ ಮಾಡಿದವರು, ಮದುವೆಯ ನಂತರ ಅಸುಖೀಗಳಾಗಿ ಕಿತ್ತಾಡುವುದೇಕೆ ಎಂದು ತಿಳಿಯಲು, ಅಧ್ಯಯನ ಮಾಡಬೇಕಾಗುತ್ತದೆ. ಪ್ರೀತಿ ಎನ್ನುವ  ಸ್ವೇಚ್ಛೆಯಲ್ಲಿದ್ದವರಿಗೆ, ಮದುವೆ ಎಂಬ ಜವಾಬ್ದಾರಿಗೆ ಹೊಂದಿ  ಕೊಳ್ಳಲು ಸಮಯ ಕೊಡಬೇಕು. ಅದು ಬಿಟ್ಟು, ಭಾನುವಾರಗಳಂದು ನೆಂಟರನ್ನು ಊಟಕ್ಕೆ ಕರೆದು, ಸೊಸೆಯನ್ನು ಕೆಲಸಕ್ಕೆ ಹಚ್ಚಿದರೆ? ನೆಂಟರ ವೇಷದಲ್ಲಿ ಬಂದವರು-  “ನಿನ್ನನ್ನು ವರದಕ್ಷಿಣೆಯಿಲ್ಲ ದೆ ಮದುವೆಯಾಗಿರೋದೇ ಹೆಚ್ಚು’ ಎಂಬ ಧೋರಣೆ ತಳೆದು ಮಾತಾಡಿದರೆ… ಆ ಮನೆಗೆ ಬಂದ ಹೆಣ್ಣಿನ ಕಲ್ಪನಾಸೌಧ ಕುಸಿಯುತ್ತದೆ.

ಎಲ್ಲಾ ಆತ್ತೆಯಂದಿರೂ ಉದಾರಿಗಳಲ್ಲ. ಕೆಲವರಿಗೆ ನಿಜಕ್ಕೂ  ಪ್ರಳಯಾಂತಕ ಬುದ್ಧಿ ಇರುತ್ತದೆ. (ಕೆಲವರು ನಿಜಕ್ಕೂ ಒಳ್ಳೆಯವರಿರುತ್ತಾ ರೆ) ನವ ದಂಪತಿಗೆ ಕೆಲವರು ಏಕಾಂತದ ಸುಖವನ್ನೂ ಕಲ್ಪಿಸಿಕೊಡುವುದಿಲ್ಲ. ಕಾಫಿ ಕೊಡುವ ನೆಪದಲ್ಲಿ ಕೋಣೆಗೆ ಬಂದವರು, ಎದ್ದೇ ಹೋಗುವುದಿಲ್ಲ. ಅವನಿಗೆ,  ಕಾಫಿ ತಂದುಕೊಟ್ಟ ತಾಯಿಯ ಮೇಲೆ ಅಭಿಮಾನ. ಆದರೆ, ಇವಳು ಗಂಡನ ಜೊತೆ ಸರಸ ತಪ್ಪಿತಲ್ಲಾ ಎಂದು ಕುದಿಯುತ್ತಾಳೆ. ಪ್ರೀತಿ ಎನ್ನುವ ಅಫಿಮು ಸಿಗದೇ, ಸೊಸೆ ರೆಬೆಲ್‌ ಆಗಿ ಒಂಟಿತನ ಅನುಭವಿಸುತ್ತಾಳೆ.

ತನ್ನ ಪ್ರೀತಿಯ  ವಿಚಾರವನ್ನು ತಾಯಿ ಒಪ್ಪಿಬಿಡುತ್ತಾಳಲ್ಲ; ಆ ಹೊತ್ತಿನಲ್ಲಿ ತಾಯಿಯ ಉದಾರ ಮನಸ್ಸಿಗೆ ಮಗ ಮಾರು ಹೋಗುತ್ತಾನೆ. ಅವನಿಗೆ ತಾಯಿಯ ದೊಡ್ಡತನದ ಬಗ್ಗೆ ಗರ್ವಭಾವ. ಸೊಸೆಯ ಬಗ್ಗೆ ಆಕೆಯಲ್ಲಿ ಅಸೂಯೆ  ಮೂಡಬಹುದೆಂದು ಆತ ಯೋಚಿಸಲಾರ. ಹಾಗಾಗಿ, ತಾಯಿಯ ಬಗ್ಗೆ ದೂರು ಹೇಳಿದಷ್ಟೂ, ಆತ ಹೆಂಡತಿಯಿಂದ ದೂರವಾಗುತ್ತಾ ನೆ. ಹೆಂಡತಿ ಚಿಕ್ಕವಳು, ಆಕೆಯೇ ಮೊದಲು ಕ್ಷಮೆ ಕೇಳಬೇಕು ಎಂಬ ಜಿದ್ದಿನಲ್ಲಿರುತ್ತಾನೆ. ಸಮಸ್ಯೆ  ಉಲ್ಬಣವಾಗುವುದು ಆಗಲೇ. ಆಪ್ತ ಸಮಾಲೋಚನೆಯ ನಂತರ, ಇಬ್ಬರೂ ಸಂಬಂಧಗಳ ಹಂದರವನ್ನು ಅರ್ಥಮಾಡಿಕೊಂಡರು.

ಮನೆಯ ಮಹಿಳೆಯರ ಚೂಪುಗಾರಿಕೆ ತಿಳಿದ ಮೇಲೆ, ಎಲ್ಲರನ್ನೂ, ಎಲ್ಲವನ್ನೂ ನಿಭಾಯಿಸುವ  ಹೊಣೆಗಾರಿಕೆಯನ್ನು ಆತ ಅರಿತುಕೊಂಡ. ಅತ್ತೆಯ ಇಗೋ ಸರಿ ಮಾಡಲು, ಅವಳು  ಕ್ಷಮಾಪಣೆ ಕೇಳುವುದಾಗಿ ಒಪ್ಪಿಕೊಂಡಳು. ಆ ಸಂದರ್ಭ ಮರುಕಳಿಸದ ಹಾಗೆ ನೋಡಿಕೊಳ್ಳುತ್ತೇನೆಂಬ ಆಶ್ವಾಸನೆಯನ್ನು ಅವನು ನೀಡಿದ. ಸುಮಧುರ ಸಂಬಂಧಗಳ ಬೆಸುಗೆ, ದೇಹದ ರೋಗನಿರೋಧಕ ಶಕ್ತಿಯನ್ನು ಬೆಳೆಸುತ್ತದೆ.  ಎಲ್ಲರೂ ಒಗ್ಗಟ್ಟಿನಲ್ಲಿ ಇದ್ದಾಗ, ಬದುಕು ಬಂಗಾರವಾಗುತ್ತದೆ.

* ಡಾ. ಶುಭಾ ಮಧುಸೂದನ್‌, ಚಿಕಿತ್ಸಾ ಮನೋವಿಜ್ಞಾನಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಗಂಗೊಳ್ಳಿಯಲ್ಲಿ ಎರಡು ಅಂಗಡಿ ಸಂಪೂರ್ಣ ಬೆಂಕಿಗಾಹುತಿ

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಗಂಗೊಳ್ಳಿಯಲ್ಲಿ ಎರಡು ಅಂಗಡಿ ಸಂಪೂರ್ಣ ಬೆಂಕಿಗಾಹುತಿ

39ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಜಾದೂಗಾರ ಮಹೇಂದ್ರ ಸಿಂಗ್ ಧೋನಿ

39ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಜಾದೂಗಾರ ಮಹೇಂದ್ರ ಸಿಂಗ್ ಧೋನಿ

pulwama

ಪುಲ್ವಾಮ ಎನ್ ಕೌಂಟರ್: ಓರ್ವ ಉಗ್ರನನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

–tiktok

ಫೇಸ್ ಬುಕ್, ಇನ್ ಸ್ಟಾಗ್ರಾಂ ನಲ್ಲಿ ಟಿಕ್ ಟಾಕ್ ಮಾದರಿಯ ಫೀಚರ್ ? ಇಲ್ಲಿದೆ ಮಾಹಿತಿ

ತೆಂಗಿನೆಣ್ಣೆಯಿಂದ ಕೋವಿಡ್ ನಿಯಂತ್ರಣ?

ತೆಂಗಿನೆಣ್ಣೆಯಿಂದ ಕೋವಿಡ್ ನಿಯಂತ್ರಣ?

ಗೂರ್ಖಾಗಳಿಗೆ ವರವಾಯ್ತು ನಿವಾಸ ದೃಢೀಕರಣ ಪತ್ರ

ಗೂರ್ಖಾಗಳಿಗೆ ವರವಾಯ್ತು ನಿವಾಸ ದೃಢೀಕರಣ ಪತ್ರ

ಐಪಿಎಲ್‌ ಆತಿಥ್ಯಕ್ಕೆ ಒಲವು ತೋರಿದ ನ್ಯೂಜಿಲ್ಯಾಂಡ್‌

ಐಪಿಎಲ್‌ ಆತಿಥ್ಯಕ್ಕೆ ಒಲವು ತೋರಿದ ನ್ಯೂಜಿಲ್ಯಾಂಡ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bondage

ಮದುವೆ ಎಂಬುದು ಬಂಧನವಾದಾಗ…

self teach

ಸ್ವಾವಲಂಬನೆಯ ಪಾಠ ಕಲಿಸಿತು ಕೋವಿಡ್‌ 19!

balya-male

ಬಾಲ್ಯದ ಮಳೆ ದಿನಗಳು…

utsaha

ಉತ್ಸಾಹವಿದ್ದರೆ ಸಾಲದು ಧೈರ್ಯವೂ ಬೇಕು

i know

ನಿಂಗೆ ಗೊತ್ತಿರುತ್ತೆ ಅಂದುಕೊಂಡೆ…‌

MUST WATCH

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani

udayavani youtube

Manoj Kumar : Success story of Indigenous Dairy Farmer from Moodbidri


ಹೊಸ ಸೇರ್ಪಡೆ

ಬಾಬು ಜಗಜೀವನರಾಂ ಆದರ್ಶ ಪಾಲಿಸಿ

ಬಾಬು ಜಗಜೀವನರಾಂ ಆದರ್ಶ ಪಾಲಿಸಿ

ಮಾಸಾಂತ್ಯದೊಳಗೆ ತೊಗರಿ ಬೆಳೆ ವಿಮೆ ಪ್ರೀಮಿಯಂ ತುಂಬಿ

ಮಾಸಾಂತ್ಯದೊಳಗೆ ತೊಗರಿ ಬೆಳೆ ವಿಮೆ ಪ್ರೀಮಿಯಂ ತುಂಬಿ

gb-tdy-2

7ತಿಂಗಳ ಮಗು ಸೇರಿ 53 ಜನರಿಗೆ ಸೋಂಕು

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಗಂಗೊಳ್ಳಿಯಲ್ಲಿ ಎರಡು ಅಂಗಡಿ ಸಂಪೂರ್ಣ ಬೆಂಕಿಗಾಹುತಿ

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಗಂಗೊಳ್ಳಿಯಲ್ಲಿ ಎರಡು ಅಂಗಡಿ ಸಂಪೂರ್ಣ ಬೆಂಕಿಗಾಹುತಿ

olegadukja

ಕೋವಿಡ್‌ 19 ಪರೀಕ್ಷೆ ನಡೆಸದ ಕೊಲೆಗಡುಕ ಸರ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.