ಬೆಳಗಾವಿ : ಖಂಜರಗಲ್ಲಿ ಯುವಕನಿಗೆ ಚಾಕು ಇರಿತ

Team Udayavani, Oct 22, 2019, 11:56 PM IST

ಬೆಳಗಾವಿ: ಕಾರು ಚಾಲಕ ಲೈಟ್ ಹಾಕಿದ ನೆಪ ಇಟ್ಟುಕೊಂಡು ಎರಡು ಗುಂಪುಗಳ ಮಧ್ಯೆ ನಡೆದ ಗಲಾಟೆಯಲ್ಲಿ ಯುವಕನೋರ್ವನಿಗೆ ಚಾಕು‌ ಇರಿದ ಘಟನೆ ನಗರದ ಖಂಜರಗಲ್ಲಿ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.

ಖಂಜರ ಗಲ್ಲಿಯ ರಿಜ್ವಾನ್ ಶಫಿ ಮೋಮಿನ ಎಂಬಾತ ಗಾಯಗೊಂಡಿದ್ದು, ಕೂಡಲೇ ಈತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಾಕು‌ ಇರಿದ ಗೋವಾ ಮೂಲದ ಲಾಯಿಕ್ ಅಹ್ಮದ ಹರೂಣ ಮೋತಿವಾಲೆ ಹಾಗೂ ಸವೇಜ ಶೇರಖಾನ‌ ಪಠಾಣ ಎಂಬವರು ಪರಾರಿಯಾಗಿದ್ದು ಇವರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

ಗೋವಾ ಮೂಲದ ವ್ಯಕ್ತಿ ತನ್ನ ಸ್ಕಾರ್ಪಿಯೋ ವಾಹನ ತೆಗದುಕೊಂಡು ಬರುವಾಗ ಇನ್ನೊಂದು ವಾಹನ ಅಲ್ಲಯೇ ನಿಂತಿದ್ದು. ಆಗ ಫೆಡ್ ಲೈಟ್(ಪ್ರಖರ ಬೆಳಕು) ಹಚ್ಚಿದ ಎಂಬ ಕಾರಣಕ್ಕೆ ಜಗಳ ನಡೆದಿದೆ.‌ ಮಾತಿಗೆ‌ ಮಾತು ಬೆಳೆದು ಇಬ್ಬರ ಮಧ್ಯೆ ಗಲಾಟೆಯಾಗಿದೆ. ಆಗ ರಿಜ್ವಾನ್ ಶಫಿ ಮೇಲೆ ಚಾಕು ಇರಿದು ಇಬ್ಬರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.‌ ಗಾಯಗೊಂಡಿರುವ ರಿಜ್ವಾನ ಶಫಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಪ್ರದೇಶದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು ಯಾವುದೇ ಗಲಭೆ ನಡೆಯದಂತೆ ಬಂದೋಬಸ್ತ್ ಹಾಕಿದ್ದಾರೆ. ವೈಯಕ್ತಿಕ ಕಾರಣಕ್ಕೆ ಈ ಜಗಳವಾಗಿದೆ. ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ