ಬೆಂಗಳೂರೇ ಬೇಗ ಹುಷಾರಾಗು…

Team Udayavani, Jul 8, 2020, 5:21 AM IST

bng-husharagu

ಬೆಂಗಳೂರು ಬಿಡುವುದು ನನಗೆ ಸುಲಭದ ವಿಚಾರವಾಗಿರಲಿಲ್ಲ. ಅದೂ ಹೀಗೆ ಏಕಾಏಕಿ ಈ ಊರನ್ನು ಬಿಟ್ಟು ಹೋಗಲು ನನಗೆ ಇಷ್ಟವೂ ಇರಲಿಲ್ಲ. ಅದೆಷ್ಟು ಕನಸುಗಳೊಂದಿಗೆ ಈ ನಗರಕ್ಕೆ ಕಾಲಿಟ್ಟಿದ್ದೆ? ದುಡಿಯಬೇಕು. ನನ್ನ ಕಾಲ  ಮೇಲೆ ನಾನು ನಿಲ್ಲಬೇಕು. ಊರಿನಲ್ಲಿ ಅಪ್ಪ-ಅಮ್ಮ- “ನನ್ನ ಮಗಳು ಬೆಂಗಳೂರಿನಲ್ಲಿ ದುಡಿಯುತ್ತಿದ್ದಾಳೆ’ ಅಂತ ಎಲ್ಲರೆದುರು ಹೆಮ್ಮೆಯಿಂದ ಹೇಳುವಂತೆ ಬೆಳೆಯಬೇಕು…. 

“ಆದಷ್ಟು ಬೇಗ ಹೊರಟು ಬಂದ್ಬಿಡು. ಟಿವಿಯಲ್ಲಿ ಬೆಂಗಳೂರಿನ ಸುದ್ದಿ ನೋಡಿ ನಮಗಿಲ್ಲಿ ಕಣ್ಣಿಗೆ ನಿದ್ದೆ ಹತ್ತುತ್ತಿಲ್ಲ…’ ಕಳೆದೆರಡು ತಿಂಗಳಿನಿಂದ ದಿನಾ ಇದೇ ಮಾತು ಕೇಳುವುದಾಗಿತ್ತು. ಕೆಲಸದ ನೆಪದಲ್ಲಿ ಬೆಂಗಳೂರಿನಲ್ಲಿದ್ದ ನನ್ನನ್ನು  ಆದಷ್ಟು ಬೇಗ ಮನೆಗೆ ಕರೆಸಿಕೊಳ್ಳುವ ಧಾವಂತ ಹೆತ್ತವರದ್ದು. ಮನೆಗೆ ಹೋದರೆ ಕೆಲಸ ಮಾಡೋಕೆ ಆಗೋದಿಲ್ಲ. ಹಾಗಾಗಿ ಊರಿಗೆ ಬರೋದಿಲ್ಲ ಅನ್ನೋ ಕಾರಣ ನನ್ನದು. ಆದರೆ, ಕೊನೆಗೂ ಅವರ ಹಠವೇ ಗೆದ್ದಿತ್ತು.

ಅವತ್ತೂಂದು ದಿನ ಕೇಳಿಬಂದ ಪಕ್ಕದ ಏರಿಯಾದಲ್ಲಿ ಕೋವಿಡ್‌ 19 ಕಾಲಿಟ್ಟಿದೆ ಅನ್ನೋ ಸುದ್ದಿ ಎದೆ ನಡುಗಿಸಿತು. ನಾನಿದ್ದ ಹಾಸ್ಟೆಲ್‌ ಬಹುತೇಕ ಖಾಲಿಯಾಯ್ತು. ಒಲ್ಲದ ಮನಸ್ಸಿನಿಂದಲೇ ಕೆಲಸಕ್ಕೆ ರಾಜೀನಾಮೆ ನೀಡಿ, ಊರಿಗೆ ಹೊರಟುಬಿಟ್ಟೆ. ಬೆಂಗಳೂರು ಬಿಡುವುದು ನನಗೆ ಸುಲಭದ ವಿಚಾರ  ವಾಗಿರಲಿಲ್ಲ. ಅದೂ ಹೀಗೆ ಏಕಾಏಕಿ ಈ ಊರನ್ನು ಬಿಟ್ಟು ಹೋಗಲು ನನಗೆ ಇಷ್ಟವೂ ಇರಲಿಲ್ಲ. ಅದೆಷ್ಟು ಕನಸುಗ ಳೊಂದಿಗೆ ಈ ನಗರಕ್ಕೆ ಕಾಲಿಟ್ಟಿದ್ದೆ? ದುಡಿಯಬೇಕು.

ನನ್ನ ಕಾಲ  ಮೇಲೆ ನಾನು ನಿಲ್ಲಬೇಕು. ಊರಿನಲ್ಲಿ ಅಪ್ಪ-ಅಮ್ಮ- “ನನ್ನ ಮಗಳು ಬೆಂಗಳೂರಿನಲ್ಲಿ ದುಡಿಯುತ್ತಿದ್ದಾಳೆ’ ಅಂತ ಎಲ್ಲರೆದುರು ಹೆಮ್ಮೆಯಿಂದ ಹೇಳುವಂತೆ ಬೆಳೆಯ ಬೇಕು…. ಹೀಗೆ, ಐದು ವರ್ಷಗಳ ಹಿಂದೆ ಕೆಂಪು ಬಸ್ಸು ಹತ್ತಿ ಬರುವಾಗ  ಕಣ್ಣ ತುಂಬಾ ತುಂಬಿ ದ್ದುದು ಕನಸುಗಳೇ. ಈ ನಗರವೂ ಅಷ್ಟೇ; ತೆರೆದ ಬಾಹುಗಳಿಂದ ನನ್ನನ್ನು ಸ್ವೀಕರಿಸಿತು. ಕೆಲವೊಮ್ಮೆ ಹೆದರಿಸಿತು. ಹಲವು ಬಾರಿ ಒಂಟಿಯನ್ನಾ ಗಿಸಿ ದಿಕ್ಕೆಡಿ ಸಿತು. ಆದರೆ ಯಾವತ್ತೂ ಕನಸುಗಳನ್ನು ಕೊಲ್ಲಲಿಲ್ಲ.

ದುಡಿಯುವ ಛಲ ನಿನ್ನಲ್ಲಿದ್ದರೆ ಅವಕಾಶಗಳನ್ನು ನಾನು ಕಲ್ಪಿಸುತ್ತೇನೆ ಅಂತ ಧೈರ್ಯ ಹೇಳಿತು. ಕೆಲಸ ಹುಡುಕಿ ಕೊಂಡೆ. ಆ ಕೆಲಸ ಬಿಟ್ಟು, ಬೇರೊಂದು ಕೆಲಸ ಹಿಡಿದೆ. ನಾನಾಗಿಯೇ ಓಡಾಡಿ ಪಿ.ಜಿ.ಗಳನ್ನು ಬದಲಾಯಿಸಿದೆ. ಬೇಜಾರಾ  ದಾಗ, ಒಬ್ಬಳೇ ಸಿನಿಮಾಗೆ ಹೋಗು ವಷ್ಟು ಸ್ವತಂತ್ರ ಳಾದೆ. ಬೇರೆ ಭಾಷೆಯ, ಬೇರೆ ರಾಜ್ಯದ ಹುಡುಗಿಯರೊಡನೆ ಬೆರೆತು, ನನ್ನದೇ ಸ್ನೇಹ ಬಳಗವನ್ನು ಕಟ್ಟಿಕೊಂಡೆ. ಮೋಜು-ಮಸ್ತಿ ಅಂತ ಹಾದಿ ತಪ್ಪುತ್ತಿರುವವರ ಮಧ್ಯೆ ಸಿಲುಕಿದರೂ ನನ್ನ ತನವನ್ನು ಉಳಿಸಿಕೊಳ್ಳುವ ಸಂಯಮ, ಸ್ವಾಭಿಮಾನವನ್ನು ಕಲಿತೆ.

ನಾನು ಅದನ್ನೆಲ್ಲ ಕಲಿತೆ ಅನ್ನುವುದಕ್ಕಿಂತ, ಬೆಂಗಳೂರು ಇದೆಲ್ಲವನ್ನೂ ಕಲಿಸಿತು. ನಾನಷ್ಟೇ ಅಲ್ಲ, ನನ್ನಂಥ ಲಕ್ಷಾಂತರ ಜನರ ಬದುಕನ್ನು ಈ ಊರು  ರೂಪಿಸಿದೆ. ವಿದ್ಯೆ-ಪ್ರತಿಭೆಗೆ ತಕ್ಕ ಅವಕಾಶ ನೀಡಿ ಬೆಳೆಸಿದೆ. ದೇಶದ ಮೂಲೆ ಮೂಲೆಯಿಂದ ಜನರು ಹಂಬಲಿಸಿ, ಕನವರಿಸಿ ಬಂದು ಸೇರುವ ನಗರವಿದು. ಹುಟ್ಟಿದ ಊರನ್ನು ನಾನೆಷ್ಟೇ ಪ್ರೀತಿಸಿದರೂ, ಬೆಂಗಳೂರಿನ ಮೇಲಿನ ಪ್ರೀತಿಗೆ  ಬೇರೆಯದೇ ತೂಕ. ಆದರೇನು ಮಾಡಲಿ? ಈಗ ಕನಸಿನ ಊರನ್ನು ಬಿಡಲೇ ಬೇಕಾದ ಪರಿಸ್ಥಿತಿ.

ನಿಂತಿದ್ದ ನೆಲೆಯನ್ನು ತೊರೆದು, ಕೈಲಿದ್ದ ಕೆಲಸ ಬಿಟ್ಟು ಊರಿಗೆ ಮರಳಿದ್ದೇನೆ. ಇನ್ನು ಮುಂದೆ ಬೆಂಗಳೂರು ಮೊದಲಿ ನಷ್ಟೇ ದೂರ. ವಿವಿ  ಪುರಂನ ಚಾಟ್ಸ್‌, ಲಾಲ್‌ಬಾಗ್‌ನ ಮಾರ್ನಿಂಗ್‌ ವಾಕ್‌, ಸಂಪಿಗೆ ರಸ್ತೆಯ ಮಂತ್ರಿ ಮಾಲ್‌, ಪಿವಿಆರ್‌ ಸಿನಿಮಾ, ರಭಸದಿ ಚಲಿಸೋ ಮೆಟ್ರೋ, ಕಮರ್ಷಿ ಯಲ್‌ ಸ್ಟ್ರೀಟ್‌ನ ಶಾಪಿಂಗ್‌, ಮಲ್ಲೇಶ್ವರಂನ ಮಸಾಲೆ ದೋಸೆ… ಯಾವುದೂ  ನನ್ನವಲ್ಲ. ಸದ್ಯಕ್ಕೆ ಜೊತೆಗಿರುವುದು ಬೆಂಗಳೂರು ಮೊದಲಿ ನಂತಾಗಲಿ, ಊರು ಬಿಟ್ಟವರೆಲ್ಲ ವಾಪಸಾಗಿ ಹೊಸ ಕನಸುಗಳು ಅಲ್ಲಿ ಚಿಗುರಲಿ ಎಂಬ ಪ್ರಾರ್ಥನೆಯಷ್ಟೇ…

(ಇಲ್ಲಿ ಬೆಂಗಳೂರು ಎಂಬುದು ಒಂದು ಸಂಕೇತ ಅಷ್ಟೇ. ನಾನು ಬೆಂಗಳೂರನ್ನು ಬಿಟ್ಟು ಬಂದಂತೆಯೇ, ಬಾಂಬೆಯನ್ನು, ಪುಣೆಯನ್ನು, ಹೈದ್ರಾಬಾದನ್ನು ಅಥವಾ ಉದ್ಯೋಗ- ಆಶ್ರಯ ನೀಡಿದ್ದ ಮತ್ಯಾವುದೋ ನಗರವನ್ನು ಬಿಟ್ಟು  ಬಂದವರಿದ್ದಾರೆ. ನಾನು ಬೆಂಗಳೂರನ್ನು ನೆನಪು ಮಾಡಿಕೊಂಡಂತೆಯೇ, ಬೆಂಗಳೂರಿನ ವಿಷಯದಲ್ಲಿ ಪ್ರಾರ್ಥಿಸಿದಂತೆಯೇ, ತಮ್ಮನ್ನು ಇಷ್ಟು ದಿನ ಪೊರೆದ ನಗರಗಳ ಬಗ್ಗೆ ಉಳಿದವರು ಹೇಳುವ ಮಾತುಗಳೂ ಹೆಚ್ಚುಕಡಿಮೆ ಹೀಗೇ ಇರುತ್ತವೆ ಅಂದುಕೊಳ್ಳುತ್ತೇನೆ…)

* ರೋಹಿಣಿ

ಟಾಪ್ ನ್ಯೂಸ್

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.