ಬಲಗೈ ಸಾಧಕ ಭರತ್‌ಕುಮಾರ್‌

Team Udayavani, Jul 19, 2020, 7:44 PM IST

ಬಲಗೈ ಸಾಧಕ ಭರತ್‌ಕುಮಾರ್‌

ಕಣ್ಣ ತುಂಬಾ ಕನಸು ಸಾಧಿಸುವ ಛಲ ಹೊಂದಿದವರಿಗೆ ಅಡ್ಡಿಗಳು ಲೆಕ್ಕವೇ ಇಲ್ಲವಂತೆ. ಎಷ್ಟೋ ಸಾಧಕರು ತಾವು ಬಂದ ಹಾದಿ ಮರೆಯದೆ ಅದನ್ನೇ ಜೀವನ ಹೊತ್ತಿಗೆಯ ಪಾಠವೆಂದು ಇತರ ವ್ಯಕ್ತಿಗೆಗಳಿಗೆ ಉತ್ತಮ ಮಾರ್ಗದರ್ಶಿಯಾಗಿ ಬೆಳೆದಿದ್ದಾರೆ.

ಬಹುತೇಕರಿಗೆ ನಿಕೊಲಸ್‌ ಜೆಮ್ಸ್‌ ಬಗ್ಗೆ ತಿಳಿದಿರಬಹುದು. ಕೈ ಇಲ್ಲ, ಕಾಲು ಇಲ್ಲ , ಚಿಂತೆಯೂ ಇಲ್ಲ ಎಂಬ ಅವರ ನಡೆ ವಿಶ್ವಕ್ಕೆ ಒಂದು ಪ್ರೇರಣೆ ಇದ್ದಂತೆ. ಅದರಂತೆ ಭಾರತದಲ್ಲಿಯೂ ಅಂಗವೈಕಲ್ಯ ಹೊಂದಿದ ಅನೇಕರ ಸಾಧನೆ ನಮ್ಮ ನಿಮ್ಮಂತವರಿಗೆ ಹೆಮ್ಮೆಯ ವಿಚಾರವೂ ಆಗಿದೆ. ಜೀವನ ಸವಾಲುಗಳನ್ನು ಎದುರಿಸಿದ ಹೆಮ್ಮೆಯ ಸಾಧಕರಲ್ಲಿ ಭರತ್‌ ಕುಮಾರ್‌ ಒಬ್ಬರು.

ಹರಿಯಾಣ ಮೂಲದ ಭರತ್‌ಗೆ ಹುಟ್ಟುತ್ತಲೆ ಎಡಗೈ ಇರಲಿಲ್ಲ. ಕುಟುಂಬದವರ ಪ್ರೀತಿ, ಸಹಕಾರ ಮುಂದೆ ತನಗೆ ಎಡಗೈ ಇಲ್ಲ ಎಂಬ ಕೊರತೆ ಅವರನ್ನು ಬಾಧಿಸಲೇ ಇಲ್ಲ. ಕ್ರೀಡೆಯಲ್ಲಿ ತಾನು ಬೆಳೆಯಬೇಕು, ಏನಾದರೂ ಸಾಧಿಸಬೇಕು ಎನ್ನುವ ಹಂಬಲ ಇವರಲ್ಲೂ ಇತ್ತು. ಆದರೆ ವಾಲಿಬಾಲ್‌, ತ್ರೋ ಬಾಲ್‌, ಖೋ-ಖೋ ಆಟಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿದ್ದರೂ ಈಜಿನಲ್ಲಿ ಸಾಧಿಸಬೇಕೆಂಬ ಹೆಬ್ಬಯಕೆ ಸದಾ ಹಸುರಾಗಿತ್ತು.

ಸಾಧನೆಯ ಕನಸಿಗೆಲ್ಲಿದೆ ಬಡತನ?
ತಂದೆ ತಾಯಿ ಕೂಲಿ ಕಾರ್ಮಿಕರಾದ ಕಾರಣ ಭರತ್‌ಗೆ ಆರ್ಥಿಕ ಸಂಕಷ್ಟ ಇತ್ತು. ಪಾಲಕರಿಗೆ ಮಗನ ಕನಸಿನ ಅರಿವಿದ್ದರೂ ಅದಕ್ಕೆ ಪೂರಕ ವಾತಾವರಣ ಕಲ್ಪಿಸಲು ಸಾಧ್ಯವಾಗಲಿಲ್ಲ ಎಂಬ ಕೊರಗು. ಹೀಗಿದ್ದರೂ ಈಜು ಪಟುವಾಗುವ ಕನಸನ್ನು ಬೆನ್ನಟ್ಟಿದ ಭರತ್‌ ಈಜು ಕಲಿತದ್ದು ವಿಶೇಷ. ಎಮ್ಮೆಯ ಬಾಲವನ್ನು ಬಲಗೈಯಲ್ಲಿ ಹಿಡಿದು ಈಜಿನ ಅಭ್ಯಾಸ ಮಾಡಿದರು. 2004ರಲ್ಲಿ ದೆಹಲಿಯ ಜವಹರ್‌ಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಈಜು ಸೇರಿದಂತೆ ಇತರ ಕ್ರೀಡೆಯನ್ನು ಅಭ್ಯಾಸ ಮಾಡಿದರು. ಆದರೆ ವಯಸ್ಸಾದ ತಂದೆ ತಾಯಿ, ಜತೆಗೆ ಸರಕಾರದ ಸೌಲಭ್ಯದ ಅಲಭ್ಯತೆ ಇವರ ಕನಸನ್ನು ಸ್ವಲ್ಪ ಮಟ್ಟಿಗೆ ಅಡ್ಡಿಪಡಿಸಿತ್ತು. ಕಾರು ತೊಳೆಯುವ, ಸಣ್ಣ ಪುಟ್ಟ ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಭರತ್‌, ಬಳಿಕ ಪ್ಯಾರಾ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ ಪದಕಕ್ಕೆ ಕೊರಳೊಡ್ಡಿದರು. 2010ರಲ್ಲಿ 40 ದೇಶೀಯ ಮತ್ತು 2 ಅಂತಾಷ್ಟ್ರೀಯ ಪದೆಸಸ್ತಿ ಪಡೆದರು.

ಐರ್‌ಲ್ಯಾಂಡ್‌ನ‌ಲ್ಲಿ ನಡೆದ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಶಿಪ್‌ನಲ್ಲಿ ಒಂದು ಬೆಳ್ಳಿ ಒಂದು ಚಿನ್ನ ಸೇರಿದಂತೆ 40ಕ್ಕೂ ಅಧಿಕ ರಾಷ್ಟ್ರಮಟ್ಟದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಕ್ರೀಡೆಯೊಂದಿಗೆ ದೆಹಲಿ ವಿ.ವಿ.ಯಲ್ಲಿ ಪದವಿ ಪಡೆದ ಭರತ್‌ ಸಾಧನೆ ಚೀನ, ಮಲೇಷ್ಯಾ, ಇಂಗ್ಲೆಂಡ್‌, ಹಾಲೆಂಡ್‌ ದೇಶಗಳಲ್ಲೂ ಹಬ್ಬಿದೆ.

-ರಾಧಿಕಾ, ಕುಂದಾಪುರ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.