ಬದುಕಿನ ಆಟಕ್ಕೆ ವಿದಾಯ ಹೇಳಿದ ಭೇನು : ಧ್ಯಾನ್‌ಚಂದ್‌ರಿಂದ ಮೆಚ್ಚುಗೆ ಗಳಿಸಿದ್ದ ಹಾಕಿ ಆಟಗಾರ

Team Udayavani, Sep 17, 2020, 6:17 PM IST

ಬದುಕಿನ ಆಟಕ್ಕೆ ವಿದಾಯ ಹೇಳಿದ ಭೇನು : ಧ್ಯಾನ್‌ಚಂದ್‌ರಿಂದ ಮೆಚ್ಚುಗೆ ಗಳಿಸಿದ್ದ ಹಾಕಿ ಆಟಗಾರ

ಗದಗ: ಆರವತ್ತರ ದಶಕದಲ್ಲಿ ಇಡೀ ದೇಶದ ಹಾಕಿ ವಲಯ ದಕ್ಷಿಣ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದ ಖ್ಯಾತ ಹಾಕಿ ಪಟು ಭೇನು ಬಾಳು ಭಾಟ್‌ ಉರ್ಫ್‌ ಗಾಗಡೆ(85) ಅವರು ಬದುಕಿನ ಆಟ ಮುಗಿಸಿದ್ದಾರೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಿದ್ದ ಭಾಟ್‌, ಗದಗಿನ ಕೀರ್ತಿ ಪತಾಕೆ ಹಾರಿಸಿದ್ದರು. ಮೂರು ತಲೆಮಾರಿನೊಂದಿಗೆ ಹಾಕಿ ಸ್ಟಿಕ್‌ ಹಿಡಿದು, ಓಡಾಡಿದ್ದ ಹಿರಿಯ ಪಟು ಇದೀಗ ಬದುಕಿನ ಆಟಕ್ಕೆ ವಿದಾಯ ಹೇಳಿದ್ದಾರೆ.

ಹೌದು, ಬೆಟಗೇರಿಯ ಗಾಂಧಿ ನಗರದ ನಿವಾಸಿಯಾಗಿದ್ದ ಭೇನು ಭಾಟ್‌ ಅವರು ಹಾಕಿಯಲ್ಲಿ ಲೆಫ್ಟ್‌ ಔಟ್‌ ಸ್ಥಾನದಲ್ಲಿ ಮಿಂಚಿದ್ದರು. ಆ ಕಾಲದಲ್ಲಿ ಭಾಟ್‌ ಅವರಷ್ಟು ವೇಗದ ಓಟಗಾರ ಮತ್ತೂಬ್ಬರಿಲಿಲ್ಲ. ರೈಲ್ವೇ ನೌಕರನಾಗಿದ್ದ ಭಾಟ್‌, ಸದರನ್‌ ರೈಲ್ವೇ(ಚೆನ್ನೈ) ತಂಡವನ್ನು ಪ್ರತಿನಿಧಿ ಸುತ್ತಿದ್ದರು. ಬಳಿಕ ಇಂಡಿಯನ್‌ ರೈಲ್ವೇ ಹಾಗೂ ಭಾರತ ಹಾಕಿ ತಂಡದಲ್ಲೂ ಸ್ಥಾನ ಪಡೆದಿದ್ದರು. ಅಲ್ಲದೇ, ಭಾಟ್‌ ಮಿಂಚಿನ ಓಟದ ಮೂಲಕ ಎಲ್ಲರ ಹುಬ್ಬೇರಿಸುವಂತೆ ಆಡುತ್ತಿದ್ದರು. ಇಂಡಿಯನ್‌ ಎಲೆವೆನ್‌ ತಂಡದಿಂದ ಬೆಂಗಳೂರಿನಲ್ಲಿ ನಡೆದಿದ್ದ ಶ್ರೀಲಂಕಾ-ಭಾರತ, ವಿಜಯವಾಡದಲ್ಲಿ ಪೋಲೆಂಡ್‌- ಇಂಡಿಯಾ ತಂಡಗಳ ಸೆಣಸಾಟವನ್ನು ವೀಕ್ಷಿಸಿದ್ದ ಧ್ಯಾನಚಂದ್‌ ಹಾಗೂ ಮತ್ತಿತರರೆ ಹಿರಿಯ ಕ್ರೀಡಾಪಟುಗಳು ಮೆಚ್ಚುಗೆ ಸೂಚಿಸಿದ್ದರು. ಅದೇ ಸಂದರ್ಭದಲ್ಲಿ ಧ್ಯಾನ್‌ಚಂದ್‌, ಭಾಟ್‌ ಅವರನ್ನು “ದಿ ಸ್ಪೀಡ್‌’ ಎಂದು ಪ್ರೀತಿಯಿಂದ ಕರೆದಿದ್ದರಂತೆ ಎಂದು ಸ್ಮರಿಸುತ್ತಾರೆ ಸ್ಥಳೀಯ ಹಾಕಿ ಪಟು ಶಿವಪ್ಪ ಕೋರಸ್‌.

ಹಣವಿಲ್ಲದೇ ಒಲೆಂಪಿಕ್‌ನಿಂದ ದೂರ: ದೇಶದಲ್ಲಿ ನಡೆದ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದ ಭಾಟ್‌ ಅವರಿಗೆ 1964ರಲ್ಲಿ ಒಲಿಂಪಿಕ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಒಲಿದು ಬಂದಿತ್ತು. ಜಪಾನ್‌ನ ಟೊಕಿಯೋದಲ್ಲಿ ನಡೆಯಲಿದ್ದ ಪಂದ್ಯಕ್ಕೆ ಪ್ರಯಾಣಿಸಲು ಹಣಕಾಸಿನ ಅಡಚಣೆಯಿಂದಾಗಿ ಪಂದ್ಯದಿಂದ ವಂಚಿತರಾದರು.

ಇದನ್ನೂ ಓದಿ :LACಯಲ್ಲಿ ಚೀನಾ ಪಡೆಗಳಿಂದ ಪಂಜಾಬಿ ಗಾನ-ಬಜಾನ ; ಏನಿದು ಕೆಂಪು ಸೇನೆಯ ಹೊಸ ಗೇಮ್ ಪ್ಲ್ಯಾನ್?

ಆದರೆ ಆ ವರ್ಷದ ಒಲಿಂಪಿಕ್‌ನಲ್ಲಿ ಪಾಲ್ಗೊಂಡಿದ್ದ 15 ರಾಷ್ಟ್ರಗಳ ಪೈಕಿ ಅಂತಿಮ ಪಂದ್ಯದಲ್ಲಿ ಭಾರತ ನೆರೆಯ ಪಾಕಿಸ್ತಾನವನ್ನು ಮಣಿಸಿ, ಚಿನ್ನದ ಪದಕ ಮುಡಿಗೇರಿಸಿಕೊಂಡಿತು. ಆದರೆ ಬಾಲ್ಯದಿಂದ ಹಾಕಿಯೇ ತನ್ನ ಉಸಿರು ಎಂದು ನಂಬಿದ್ದ ಭಾಟ್‌ ಅವರಿಗೆ ಒಲಿಂಪಿಕ್‌ ಅಷ್ಟೇಯಲ್ಲ ಚಿನ್ನದ ಪದಕದಿಂದಲೂ ವಂಚಿಸಿತು ಎಂಬುದು ವಿಧಿಯಾಟ. ಕೊನೆವರಿಗೂ ಈ ನೋವು ಅವರನ್ನು ಕಾಡಿತು ಎನ್ನುತ್ತಾರೆ ಹತ್ತಿರದಿಂದ ಕಂಡವರು.

ಟಾಪ್ ನ್ಯೂಸ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.