ಬಿಜೆಪಿ ಯುವಕರ ದಾರಿ ತಪ್ಪಿಸುತ್ತಿದೆ: ಖಂಡ್ರೆ

Team Udayavani, Nov 20, 2019, 5:11 AM IST

ಬೆಂಗಳೂರು: ಬಿಜೆಪಿಯವರ ಹುಸಿ ರಾಷ್ಟ್ರೀಯತೆ ಯುವ ಜನತೆಯ ದಿಕ್ಕು ತಪ್ಪಿಸುತ್ತಿದೆ. ಬಿಜೆಪಿಯ ಯಾವ ನಾಯಕರೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ. ಬ್ರಿಟಿಷರ ಜತೆ ಕೈ ಜೋಡಿಸಿ ದ್ದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 103ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟ್ರದ ಏಕತೆ, ಅಖಂಡತೆಗೆ ಇಂದಿರಾ ಗಾಂಧಿ ಹೋರಾಟ ಮಾಡಿದರು. ಆಧುನಿಕ ಭಾರತದ ಕನಸು ನನಸು ಮಾಡಲು ಇಂದಿರಾ ಗಾಂಧಿ ದೇಶಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ನೆಹರೂ ಕುಟುಂಬದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಅದನ್ನು ತಪ್ಪಿಸಲು ಕಾಂಗ್ರೆಸ್‌ ಕೆಲಸ ಮಾಡಬೇಕು. ದೇಶದ ಏಕತೆ ದುರ್ಬಲ ಆಗುತ್ತಿದೆ. ಆರ್ಥಿಕ ಕುಸಿತ ಉಂಟಾಗುತ್ತಿದೆ. ಕೇಂದ್ರ ಸರಕಾರದ ತಪ್ಪು ಆರ್ಥಿಕ ನೀತಿಯಿಂದಾಗಿ ದೇಶದಲ್ಲಿ ನಾಗರಿಕ ಯುದ್ಧ ಜಾರಿಯಾಗುವ ಸಾಧ್ಯತೆ ಇದೆ. ಕೇಂದ್ರ ಸರಕಾರದ ಬಂಡವಾಳಶಾಹಿಗಳ ಪರ ನೀತಿಯಿಂದ ಸಾರ್ವಜನಿಕ ಉದ್ಯಮಗಳು ಮುಚ್ಚುವ ಸ್ಥಿತಿ ನಿರ್ಮಾಣ ವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರಾಜ್ಯ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ರಾಜ್ಯದಲ್ಲಿ ಬಿಜೆಪಿಯವರು ಅನೈತಿಕ ಸರಕಾರ ರಚನೆ ಮಾಡಿಕೊಂಡು ಅನರ್ಹರಿಗೆ ಟಿಕೆಟ್‌ ನೀಡಿದ್ದಾರೆ. ರಾಜ್ಯದಲ್ಲಿ ಪಕ್ಷಾಂತರಿಗಳನ್ನು ಸೋಲಿಸಿ ಕಾಂಗ್ರೆಸ್‌ ಬಲಿಷ್ಠವಾಗಿ ಬೆಳೆಯಲು ಶ್ರಮಿಸಬೇಕು ಎಂದು ಹೇಳಿದರು.

ದೇಶ ವಿಭಜನೆಯಾಗುತ್ತಿತ್ತು: ಪರಂ
ಸ್ವಾತಂತ್ರ್ಯ ಬಂದ ಅನಂತರ ಭಾರತ ಹಿಂದೂ ರಾಷ್ಟ್ರ ಎಂದು ಘೋಷಣೆಯಾಗಿದ್ದರೆ ದೇಶ ಮತ್ತೂಂದು ಬಾರಿ ವಿಭಜನೆಯಾಗುತ್ತಿತ್ತು ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ್‌ ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ