Udayavni Special

ಹಿಂಬಾಲಕರ ಅಬ್ಬರ; ಕಾರ್ಯಕರ್ತರ ಅಪಸ್ವರ

ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿ ಬಿಜೆಪಿ ನಾಯಕರು

Team Udayavani, Nov 20, 2019, 6:00 AM IST

BJP LoGO

ಬೆಂಗಳೂರು: ಉಪ ಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಿ ಅನರ್ಹಗೊಂಡ ಶಾಸಕರು ಬಿಜೆಪಿ ಯಿಂದ ಕಣಕ್ಕಿಳಿದಿದ್ದು, ಹಲವು ಕ್ಷೇತ್ರಗಳಲ್ಲಿ ಇವರ ಬೆಂಬಲಿಗರು, ಹಿಂಬಾಲಕರ ಆರ್ಭಟವೇ ಹೆಚ್ಚಾ ಗಿದ್ದು ಬಿಜೆಪಿಯ ಮೂಲ ಕಾರ್ಯಕರ್ತರಿಗೆ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಕಾಡಲಾರಂಭಿಸಿದೆ.

ಅನರ್ಹ ಶಾಸಕರ ಪಕ್ಷ ಸೇರ್ಪಡೆ ಬೆನ್ನಲ್ಲೇ ಅವರ ಬೆಂಬಲಿಗರು ಉಪ ಚುನಾವಣ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಚುನಾವಣ ಕಾರ್ಯತಂತ್ರ, ಪ್ರಚಾರ ಸಭೆ, ಸಮಾ ರಂಭ, ಇತರ ಕಾರ್ಯಗಳಲ್ಲೂ ಬೆಂಬಲಿಗರೇ ಮುಂಚೂಣಿಯಲ್ಲಿರುವುದರಿಂದ ಬಿಜೆಪಿಯ ಮೂಲ ಕಾರ್ಯಕರ್ತರ ಇರುವಿಕೆ ಪ್ರಧಾನವಾಗಿ ಕಾಣದಂತಾಗಿದೆ. ಪರಿಸ್ಥಿತಿ ಹೀಗೇ ಮುಂದು ವರಿದರೆ ಮುಂದೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಟಿಕೆಟ್‌, ಸ್ಥಾನಮಾನ, ಮಾನ್ಯತೆಯಿಂದಲೂ ವಂಚಿತರಾಗುವ ಭೀತಿ ಕಾರ್ಯಕರ್ತರದ್ದು.

ಅನರ್ಹಗೊಂಡ 17 ಶಾಸಕರ ಪೈಕಿ 16 ಮಂದಿ ಬಿಜೆಪಿ ಸೇರಿದ್ದು, 13 ಮಂದಿ ಸದ್ಯ ಎದು ರಾಗಿರುವ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ಇವರೊಂದಿಗೆ ಅವರ ಬೆಂಬಲಿಗರು, ಹಿಂಬಾಲಕರ ದೊಡ್ಡ ಬಳಗವೇ ಬಿಜೆಪಿಯಲ್ಲಿ ವಿಲೀನವಾಗಿದೆ. ಕಳೆದ ಲೋಕಸಭಾ ಚುನಾವಣೆಯವರೆಗೂ ಪರಸ್ಪರ ಹೋರಾಟ ನಡೆಸಿದವರೇ ಬದಲಾದ ಸನ್ನಿವೇಶದಲ್ಲಿ ಪರಸ್ಪರ ಸ್ವಪಕ್ಷೀಯರಾಗಿದ್ದಾರೆ.

ಮೂಡದ ಸಮನ್ವಯ
ಮೇಲ್ಮಟ್ಟದಲ್ಲಿ ಹೊಂದಾಣಿಕೆಯಾದರೂ ಕೆಳ ಹಂತದಲ್ಲಿ ಇನ್ನೂ ಮೂಲ ಕಾರ್ಯಕರ್ತರು, ಅನರ್ಹರ ಬೆಂಬಲಿಗರ ನಡುವೆ ಸಮನ್ವಯ ಮೂಡಿಲ್ಲ. ಏಕೆಂದರೆ ಕ್ಷೇತ್ರದಲ್ಲಿ ಬಿಜೆಪಿಯ ಪ್ರತ್ಯೇಕ ವ್ಯವಸ್ಥೆಯಿದ್ದು, ಅಲ್ಲಿಯೂ ಕ್ಷೇತ್ರ ಹಂತದ ಪದಾಧಿಕಾರಿಗಳು, ಬೂತ್‌ ಸಮಿತಿ ಅಧ್ಯಕ್ಷರು, ಸದಸ್ಯರಿದ್ದಾರೆ. ಆದರೆ ಅನರ್ಹ ಶಾಸಕರ ಪಕ್ಷ ಸೇರ್ಪಡೆ ಮೂಲಕ ಪಕ್ಷಕ್ಕೆ ಬಂದ ಬೆಂಬಲಿಗರು ಹಾಗೂ ಆಯಾ ಕ್ಷೇತ್ರದ ಬಿಜೆಪಿ ಪದಾಧಿಕಾರಿಗಳು ಬಹುತೇಕ ಕಡೆ ಇನ್ನೂ ಒಂದುಗೂಡಿಲ್ಲ. ಹಾಗಾಗಿ ಸಮನ್ವಯವಿಲ್ಲದ ಕಾರಣ ಕೆಲವು ವ್ಯತ್ಯಾಸಗಳಾಗಿರಬಹುದು ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.

ಕಾರ್ಯಕರ್ತರಿಗೆ ಅವಗಣನೆಯ ಭೀತಿ
ಈಗಿನ ಸ್ಥಿತಿ ಮುಂದುವರಿದು ಅನರ್ಹ ಶಾಸಕರ ಬೆಂಬಲಿಗರಿಗೆ ಹೆಚ್ಚು ಮಾನ್ಯತೆ ಸಿಗುತ್ತಾ ಹೋದರೆ ಮುಂದೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಟಿಕೆಟ್‌ ಹಂಚಿಕೆ ಸಹಿತ ಇತರ ಸ್ಥಾನಮಾನ ನೀಡುವ ಸಂದರ್ಭದಲ್ಲೂ ಮೂಲ ಕಾರ್ಯಕರ್ತರು ಅವಗಣನೆಗೆ ಒಳಗಾಗುವ ಆತಂಕವೂ ಹಲವು ಕ್ಷೇತ್ರದಲ್ಲಿ ಕಾಡುತ್ತಿದೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ
ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಹಿರಿಯ ನಾಯಕರ ನಡುವೆ ಬಣ ರಾಜಕೀಯ ಹೆಚ್ಚಾಗಿರುವುದರಿಂದ ಅಸಮಾಧಾನಗೊಂಡಿರುವ ಹೈಕಮಾಂಡ್‌, ವಸ್ತುಸ್ಥಿತಿಯ ಮಾಹಿತಿ ಪಡೆಯಲು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ಖಂಡ್ರೆ ಅವರಿಗೆ ಬುಲಾವ್‌ ನೀಡಿದೆ. ಪಕ್ಷದ ಹೈಕಮಾಂಡ್‌ ಸೂಚನೆ ಮೇರೆಗೆ ದಿಲ್ಲಿಗೆ ತೆರಳಿರುವ ಈಶ್ವರ್‌ ಖಂಡ್ರೆ, ಇತ್ತೀಚಿನ ದಿನಗಳಲ್ಲಿ ಪಕ್ಷದಲ್ಲಿ ನಡೆಯುತ್ತಿರುವ ಬಣ ರಾಜಕೀಯದ ಸಂಪೂರ್ಣ ಮಾಹಿತಿ ಒದಗಿಸುವ ಸಾಧ್ಯತೆಯಿದೆ. ನಾಯಕರ ನಡುವಿನ ಬಣ ರಾಜಕೀಯದಿಂದ ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ಆರಂಭದಲ್ಲಿಯೇ ಮಾಹಿತಿ ಪಡೆದು, ಎಲ್ಲ ನಾಯಕರನ್ನೂ ಒಗ್ಗಟ್ಟಿನಿಂದ ಕರೆದುಕೊಂಡು ಹೋಗುವಂತೆ ಸಿದ್ದರಾಮಯ್ಯಗೆ ಸೂಚನೆ ನೀಡುವ ಸಾಧ್ಯತೆ ಇದೆ.

- ಎಂ. ಕೀರ್ತಿಪ್ರಸಾದ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಹುಲ್, ಪ್ರಿಯಾಂಕಾ ಎಂಟ್ರಿ: ಪೈಲಟ್ ಮರಳಿ ಗೂಡಿಗೆ, ರಾಜಸ್ಥಾನ ಬಿಕ್ಕಟ್ಟು ಬಹುತೇಕ ಅಂತ್ಯ?

ರಾಹುಲ್, ಪ್ರಿಯಾಂಕಾ ಎಂಟ್ರಿ: ಪೈಲಟ್ ಮರಳಿ ಗೂಡಿಗೆ, ರಾಜಸ್ಥಾನ ಬಿಕ್ಕಟ್ಟು ಬಹುತೇಕ ಅಂತ್ಯ?

ಬೈರೂತ್ ಮಹಾಸ್ಫೋಟಕ್ಕೆ ತಲೆದಂಡ! ಲೆಬನಾನ್ ಪ್ರಧಾನಿ ಹಸನ್ ದಿಯಾಬ್ ರಾಜೀನಾಮೆ

ಬೈರೂತ್ ಮಹಾಸ್ಫೋಟಕ್ಕೆ ತಲೆದಂಡ! ಲೆಬನಾನ್ ಪ್ರಧಾನಿ ಹಸನ್ ದಿಯಾಬ್ ರಾಜೀನಾಮೆ

ಕೋವಿಡ್ 19 ಸೋಂಕು ಪಾಸಿಟಿವ್ ಬೆನ್ನಲ್ಲೇ ಪ್ರಣಬ್ ಮುಖರ್ಜಿಗೆ ಮೆದುಳು ಸರ್ಜರಿ: ವರದಿ

ಕೋವಿಡ್ 19 ಸೋಂಕು ಪಾಸಿಟಿವ್ ಬೆನ್ನಲ್ಲೇ ಪ್ರಣಬ್ ಮುಖರ್ಜಿಗೆ ಮೆದುಳು ಸರ್ಜರಿ: ವರದಿ

ಸುಶಾಂತ್ ಕೇಸ್: ಗೆಳತಿ ರಿಯಾ ಚಕ್ರವರ್ತಿಯನ್ನು ವಶಕ್ಕೆ ತೆಗೆದುಕೊಳ್ಳಿ; ಬಿಜೆಪಿ ನಾಯಕ

ಸುಶಾಂತ್ ಕೇಸ್: ಗೆಳತಿ ರಿಯಾ ಚಕ್ರವರ್ತಿಯನ್ನು ವಶಕ್ಕೆ ತೆಗೆದುಕೊಳ್ಳಿ; ಬಿಜೆಪಿ ನಾಯಕ

ಐಪಿಎಲ್‌ ಶೀರ್ಷಿಕೆ ಪ್ರಾಯೋಜಕತ್ವ ಸ್ಪರ್ಧೆಯಲ್ಲಿ ಪತಂಜಲಿ

ಐಪಿಎಲ್‌ ಶೀರ್ಷಿಕೆ ಪ್ರಾಯೋಜಕತ್ವ ಸ್ಪರ್ಧೆಯಲ್ಲಿ ಪತಂಜಲಿ

ಏಮ್ಸ್ ಹಾಸ್ಟೆಲ್ ಮಹಡಿಯಿಂದ ಕೆಳಕ್ಕೆ ಹಾರಿ ಬೆಂಗಳೂರು ಮೂಲದ ಯುವ ವೈದ್ಯ ಸಾವು

ಏಮ್ಸ್ ಹಾಸ್ಟೆಲ್ ಮಹಡಿಯಿಂದ ಕೆಳಕ್ಕೆ ಹಾರಿ ಬೆಂಗಳೂರು ಮೂಲದ ಯುವ ವೈದ್ಯ ಸಾವು

ಹಾವೇರಿ: ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ : ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣು

ಹಾವೇರಿ: ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ : ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣು
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಲಬುರಗಿ: ಎಎಸ್ಐ ಹಾಗೂ ಕುಟುಂಬದ ಮೇಲೆ ಪುಡಿರೌಡಿಗಳ ಅಟ್ಟಹಾಸ

ಕಲಬುರಗಿ: ಎಎಸ್ಐ ಹಾಗೂ ಕುಟುಂಬದ ಮೇಲೆ ಪುಡಿರೌಡಿಗಳ ಅಟ್ಟಹಾಸ

ಕೋವಿಡ್ ನಿಂದ ಚೇತರಿಸಿದ ಸಿಎಂ ಯಡಿಯೂರಪ್ಪ ಆಸ್ಪತ್ರೆಯಿಂದ ಡಿಸ್ಚಾರ್ಜ್

ಕೋವಿಡ್ ನಿಂದ ಚೇತರಿಸಿದ ಸಿಎಂ ಯಡಿಯೂರಪ್ಪ ಆಸ್ಪತ್ರೆಯಿಂದ ಡಿಸ್ಚಾರ್ಜ್

ಯೋಜನೆಗಳ ತ್ವರಿತ ಅನುಷ್ಟಾನಕ್ಕೆ ಕ್ರಮವಹಿಸದ ಅಧಿಕಾರಿಗಳ ವಿರುದ್ಧ ಕ್ರಮ :ಕಾರಜೋಳ

ಯೋಜನೆಗಳ ತ್ವರಿತ ಅನುಷ್ಟಾನಕ್ಕೆ ಕ್ರಮವಹಿಸದ ಅಧಿಕಾರಿಗಳ ವಿರುದ್ಧ ಕ್ರಮ :ಕಾರಜೋಳ

ಕಾರ್ಮಿಕರ ಬೆಂಬಲಕ್ಕೆ ಕಾಂಗ್ರೆಸ್ ಸದಾ ನಿಲ್ಲಲಿದೆ: ಡಿ.ಕೆ ಶಿವಕುಮಾರ್

ಕಾರ್ಮಿಕರ ಬೆಂಬಲಕ್ಕೆ ಕಾಂಗ್ರೆಸ್ ಸದಾ ನಿಲ್ಲಲಿದೆ: ಡಿ.ಕೆ ಶಿವಕುಮಾರ್

ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟ

ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟ: ಶೇ. 71.80 ಫಲಿತಾಂಶ, 73.70 ಈ ಬಾರಿಯೂ ಬಾಲಕಿಯರೇ ಮೇಲುಗೈ

MUST WATCH

udayavani youtube

ಮಿತ್ತಬಾಗಿಲು ಗ್ರಾಮದ ಕಾಡುಮನೆ ಬಳಿ ಭಾರಿ ಭೂಕುಸಿತ: ಆತಂಕದಲ್ಲಿ ನಿವಾಸಿಗಳು

udayavani youtube

SSLC ಪರೀಕ್ಷೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಹಂಚಿಕೊಂಡ ನಿಧಿ ರಾವ್

udayavani youtube

ದೇಶದ ಕೃಷಿಕ ಒಬ್ಬ ಉದ್ಯಮಿ ಯಾಗಬೇಕು ಪ್ರಧಾನಿಗಳ ಆಶಾಯ | Narendra Modi Agriculture

udayavani youtube

ಅಮೃತ’ ಗಾನ ಧಾರೆ: ಮದುವೆ ಔತಣ ಕೂಟದಲ್ಲಿ ಪತಿ-ಪತ್ನಿ ‘ಯಕ್ಷ ಗಾನ ವೈಭವ’

udayavani youtube

ರಾಂಬೂಟಾನ್ ಬೆಳೆಯುವ ಸೂಕ್ತ ವಿಧಾನ | How To Grow Rambutan Fruit | FULL INFORMATIONಹೊಸ ಸೇರ್ಪಡೆ

ರಾಹುಲ್, ಪ್ರಿಯಾಂಕಾ ಎಂಟ್ರಿ: ಪೈಲಟ್ ಮರಳಿ ಗೂಡಿಗೆ, ರಾಜಸ್ಥಾನ ಬಿಕ್ಕಟ್ಟು ಬಹುತೇಕ ಅಂತ್ಯ?

ರಾಹುಲ್, ಪ್ರಿಯಾಂಕಾ ಎಂಟ್ರಿ: ಪೈಲಟ್ ಮರಳಿ ಗೂಡಿಗೆ, ರಾಜಸ್ಥಾನ ಬಿಕ್ಕಟ್ಟು ಬಹುತೇಕ ಅಂತ್ಯ?

ಬೈರೂತ್ ಮಹಾಸ್ಫೋಟಕ್ಕೆ ತಲೆದಂಡ! ಲೆಬನಾನ್ ಪ್ರಧಾನಿ ಹಸನ್ ದಿಯಾಬ್ ರಾಜೀನಾಮೆ

ಬೈರೂತ್ ಮಹಾಸ್ಫೋಟಕ್ಕೆ ತಲೆದಂಡ! ಲೆಬನಾನ್ ಪ್ರಧಾನಿ ಹಸನ್ ದಿಯಾಬ್ ರಾಜೀನಾಮೆ

ಕೋವಿಡ್ 19 ಸೋಂಕು ಪಾಸಿಟಿವ್ ಬೆನ್ನಲ್ಲೇ ಪ್ರಣಬ್ ಮುಖರ್ಜಿಗೆ ಮೆದುಳು ಸರ್ಜರಿ: ವರದಿ

ಕೋವಿಡ್ 19 ಸೋಂಕು ಪಾಸಿಟಿವ್ ಬೆನ್ನಲ್ಲೇ ಪ್ರಣಬ್ ಮುಖರ್ಜಿಗೆ ಮೆದುಳು ಸರ್ಜರಿ: ವರದಿ

ಸುಶಾಂತ್ ಕೇಸ್: ಗೆಳತಿ ರಿಯಾ ಚಕ್ರವರ್ತಿಯನ್ನು ವಶಕ್ಕೆ ತೆಗೆದುಕೊಳ್ಳಿ; ಬಿಜೆಪಿ ನಾಯಕ

ಸುಶಾಂತ್ ಕೇಸ್: ಗೆಳತಿ ರಿಯಾ ಚಕ್ರವರ್ತಿಯನ್ನು ವಶಕ್ಕೆ ತೆಗೆದುಕೊಳ್ಳಿ; ಬಿಜೆಪಿ ನಾಯಕ

ನದಿಗಳಲ್ಲಿ ಸಿಲುಕಿರುವ ಮರಗಳು: ಅಪಾಯಕ್ಕೆ ಆಹ್ವಾನ

ನದಿಗಳಲ್ಲಿ ಸಿಲುಕಿರುವ ಮರಗಳು: ಅಪಾಯಕ್ಕೆ ಆಹ್ವಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.