ಹೈಡ್ರೋಕ್ಸಿಕ್ಲೋರೊಕ್ವಿನ್ಗೆ ವಿರೋಧ
Team Udayavani, May 17, 2020, 2:30 PM IST
ಬ್ರಝಿಲಿಯ: ಮಹಾಮಾರಿ ಕೋವಿಡ್ -19 ಚಿಕಿತ್ಸೆಗೆ ಹೈಡ್ರೋಕ್ಸಿಕ್ಲೋರೊಕ್ವಿನ್ ಬಳಸುವುದಕ್ಕೆ ಸಂಬಂಧಿಸಿ ಬ್ರಝಿಲ್ ಅಧ್ಯಕ್ಷ ಜೈರ್ ಬೊಲ್ಸನಾರೊ ಅವರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಆರೋಗ್ಯ ಸಚಿವ ನೆಲ್ಸನ್ ಟೀಕ್ ರಾಜೀನಾಮೆ ನೀಡಿದ್ದಾರೆ.
ಮಲೇರಿಯ ಚಿಕಿತ್ಸೆಗೆ ಹೆಚ್ಚಾಗಿ ಬಳಸಲಾಗುವ ಹೈಡ್ರೋಕ್ಸಿಕ್ಲೋರೊಕ್ವಿನ್ ಔಷಧವನ್ನು ಕೋವಿಡ್ ಚಿಕಿತ್ಸೆಗೆ ದೇಶದಲ್ಲಿ ವ್ಯಾಪಕವಾಗಿ ಬಳಸುವುದಕ್ಕೆ ಮಾರ್ಗಸೂಚಿ ಹೊರಡಿಸುವಂತೆ ಅಧ್ಯಕ್ಷರು ಆರೋಗ್ಯ ಸಚಿವರಿಗೆ ಆದೇಶಿಸಿದ್ದರು. ಆದರೆ ಕೋವಿಡ್ ಚಿಕಿತ್ಸೆಗೆ ಇದು ಪರಿಣಾಮಕಾರಿಯೆಂದು ಸಾಬೀತಾಗಿಲ್ಲ ಮತ್ತು ಇದರಿಂದ ಹೃದ್ರೋಗಿಗಳ ಮೇಲೆ ಅಡ್ಡ ಪರಿಣಾಮಗಳಾಗುತ್ತವೆಯೆಂದು ವಿರೋಧಿಸಿ ಟೀಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಟೀಕ್ ಅವರ ಪೂರ್ವಾಧಿಕಾರಿ ಲೂಯಿಸ್ ಹೆನ್ರಿಕ್ ಕೂಡ ಒಂದು ತಿಂಗಳ ಹಿಂದೆ ಇದೇ ಕಾರಣಕ್ಕೆ ಆರೋಗ್ಯ ಸಚಿವನ ಸ್ಥಾನ ತ್ಯಜಿಸಿದ್ದರು.
ಬ್ರಝಿಲ್ನ ಕೋವಿಡ್-19 ತೀವ್ರವಾಗಿ ಹಬ್ಬುತ್ತಿದ್ದು ಈತನಕ 2.20 ಲಕ್ಷ ಮಂದಿ ಸೋಂಕುಪೀಡಿತರಾಗಿದ್ದಾರೆ ಮತ್ತು 15,502 ಮಂದಿ ಸಾವಿಗೀಡಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು