ಅಪ್ಪನಿಗೆ ಹೆದರಿ ಬಾಂಗ್ಲಾದಿಂದ ಭಾರತಕ್ಕೆ ಓಡಿ ಬಂದ ಬಾಲಕಿ!
Team Udayavani, Feb 20, 2022, 8:10 AM IST
ಕೋಲ್ಕತ: ಅಪ್ಪನಿಗೆ ಹೆದರಿ ಬಾಂಗ್ಲಾದೇಶದ 15 ವರ್ಷದ ಬಾಲಕಿಯೊಬ್ಬಳು ಗುರುವಾರ ಬಾಂಗ್ಲಾ-ಭಾರತ ಅಂತಾರಾಷ್ಟ್ರೀಯ ಗಡಿ ದಾಟಿ ಪಶ್ಚಿಮ ಬಂಗಾಳಕ್ಕೆ ಬಂದಿದ್ದಾಳೆ. ಆಕೆಯನ್ನು ಗಡಿ ಭದ್ರತಾ ಪಡೆಯ(ಬಿಎಸ್ಎಫ್) ಯೋಧರು ರಕ್ಷಿಸಿದ್ದು, ಚೈಲ್ಡ್ಲೈನ್ ಇಂಡಿಯಾ ಫೌಂಡೇಷನ್ ಹೆಸರಿನ ಎನ್ಜಿಒಗೆ ಹಸ್ತಾಂತರಿಸಿದ್ದಾರೆ.
“ಪ್ರತಿ ದಿನ ಅಪ್ಪ ಹೊಡೆಯುತ್ತಾನೆ. ಅದಕ್ಕೆ ಮನೆ ಬಿಟ್ಟು ಓಡಿ ಬಂದಿದ್ದೇನೆ. ನನ್ನನ್ನು ಮನೆಗೆ ಕಳುಹಿಸಬೇಡಿ’ ಎಂದು ಬಾಲಕಿ ಮನವಿ ಮಾಡಿದ ಹಿನ್ನೆಲೆ ಆಕೆಯನ್ನು ಎನ್ಜಿಒಗೆ ಹಸ್ತಾಂತರಿಸಿರುವುದಾಗಿ ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಕಿಯು ಬಾಂಗ್ಲಾದ ಜೆನಯ್ದಾಹ ಜಿಲ್ಲೆಯ ಬನ್ಸಬೇರಿಯಾ ಗ್ರಾಮದ ನಿವಾಸಿಯಾಗಿದ್ದಾಳೆ. ಆಕೆಯ ಮನೆ ಅಂತಾರಾಷ್ಟ್ರೀಯ ಗಡಿಯಿಂದ 3ಕಿ.ಮೀ ದೂರವಿದ್ದು, ಆಕೆ ಮನೆಯಿಂದ ನಡೆದು ಬಂದು ಗಡಿ ದಾಟಿರುವುದಾಗಿ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ