ಹಿರಿಯ ನಾಗರಿಕರಿಗೆ ದಿಲ್‌ಖುಷ್; ಠೇವಣಿ ಮಿತಿ 30 ಲಕ್ಷಕ್ಕೇರಿಕೆ
ಮಾಸಿಕ ಆದಾಯ ಖಾತೆ ಯೋಜನೆಗೆ 9 ಲಕ್ಷ ರೂ.ಗಳ ಮಿತಿ
Team Udayavani, Feb 2, 2023, 7:10 AM IST
ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ ಈ ಬಜೆಟ್ “ಸಿಹಿ’ ನೀಡಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಠೇವಣಿ ಮಿತಿಯನ್ನು ದ್ವಿಗುಣಗೊಳಿಸಿದರೆ, ಮಹಿಳೆಯರಿಗೆಂದೇ ಹೊಸ ಉಳಿತಾಯ ಯೋಜನೆಯನ್ನು ಘೋಷಿಸಲಾಗಿದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಠೇವಣಿ ಮಿತಿಯನ್ನು 30 ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಈವರೆಗೆ ಇದು 15 ಲಕ್ಷ ರೂ.ಗಳಾಗಿತ್ತು. ಅದೇ ರೀತಿ, ಹಿರಿಯ ನಾಗರಿಕರ ಮಾಸಿಕ ಆದಾಯ ಖಾತೆ ಯೋಜನೆಯಲ್ಲಿ ಠೇವಣಿಯ ಗರಿಷ್ಠ ಮಿತಿಯನ್ನು 9 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಒಂದೇ ಖಾತೆಯಿದ್ದರೆ ಈವರೆಗೆ ಗರಿಷ್ಠವೆಂದರೆ 4.5 ಲಕ್ಷ ರೂ. ಠೇವಣಿ ಇಡಬೇಕಾಗಿತ್ತು. ಇನ್ನು ಮುಂದೆ 9 ಲಕ್ಷ ರೂ.ವರೆಗೆ ಠೇವಣಿ ಇಡಬಹುದು. ಇನ್ನು, ಜಂಟಿ ಖಾತೆಯಿದ್ದವರಿಗೆ ಈವರೆಗೆ 9 ಲಕ್ಷ ರೂ.ವರೆಗೆ ಠೇವಣಿಯಿಡುವ ಅವಕಾಶವಿತ್ತು. ಅದನ್ನು ಈಗ 15 ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಈ ಯೋಜನೆಗಳಿಗೆ ಯಾವುದೇ ಕ್ರೆಡಿಟ್ ರಿಸ್ಕ್ ಇರುವುದಿಲ್ಲ.
ಸ್ತ್ರೀಯರಿಗೆ “ಉಳಿತಾಯ’ದ ಸಮ್ಮಾನ
ಮಹಿಳೆಯರಿಗೆಂದೇ ಅತ್ಯುತ್ತಮ ಉಳಿತಾಯ ಯೋಜನೆಯೊಂದನ್ನು ಸರ್ಕಾರ ಪರಿಚಯಿಸಿದೆ. “ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್’ (ಮಹಿಳಾ ಸಮ್ಮಾನ್ ಉಳಿತಾಯ ಪತ್ರ) ಎಂಬ ಹೆಸರಿನ ಈ ಯೋಜನೆಯಡಿ ಹೆಣ್ಣು ಮಗು ಅಥವಾ ಮಹಿಳೆಯರ ಹೆಸರಲ್ಲಿ ಗರಿಷ್ಠ 2 ಲಕ್ಷ ರೂ.ಗಳನ್ನು 2 ವರ್ಷಗಳವರೆಗೆ ಠೇವಣಿ ಇಡಬಹುದು. ವಿಶೇಷವೆಂದರೆ, ಈ ಮೊತ್ತಕ್ಕೆ ಶೇ.7.5ರಷ್ಟು ಬಡ್ಡಿ ಸಿಗಲಿದೆ. ಇದು ಏಕಕಾಲಿಕ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಭಾಗಶಃ ಮೊತ್ತವನ್ನು ವಿತ್‌ಡ್ರಾ ಮಾಡುವ ಅವಕಾಶವನ್ನೂ ಕಲ್ಪಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ 25,448.75 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅನುದಾನದಲ್ಲಿ 267 ಕೋಟಿ ರೂ. ಹೆಚ್ಚಳವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
64 ಅಧಿಕೃತ ತಿದ್ದುಪಡಿಗಳೊಂದಿಗೆ ಹಣಕಾಸು ಮಸೂದೆ ಅಂಗೀಕರಿಸಿದ ಲೋಕಸಭೆ
ರಾಹುಲ್ ಅನರ್ಹ; ಖರ್ಗೆ ಸೇರಿ ವಿಪಕ್ಷ ನಾಯಕರಿಂದ ವ್ಯಾಪಕ ಆಕ್ರೋಶ
ಭಾರತೀಯ ರಕ್ಷಣಾ ಸಚಿವಾಲಯದೊಂದಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮಹತ್ವದ ಒಪ್ಪಂದ
ಝಾಕಿರ್ ನಾಯ್ಕನ ವಿಚಾರ ಒಮಾನ್ ನೊಂದಿಗೆ ಹಂಚಿಕೊಂಡಿದ್ದೇವೆ :ಅರಿಂದಮ್ ಬಾಗ್ಚಿ
ಅಂದು ರಾಹುಲ್ ಹರಿದು ಹಾಕಿದ್ದ ಸುಗ್ರೀವಾಜ್ಞೆ ಪ್ರತಿ ಇಂದು ಅವರಿಗೆ ಮುಳುವಾಯ್ತು!
MUST WATCH
ಹೊಸ ಸೇರ್ಪಡೆ
ಜಿಲ್ಲೆಯಲ್ಲಿ 60 ಚೆಕ್‌ಪೋಸ್ಟ್ ಆರಂಭ; 25 ಲಕ್ಷ ರೂ. ನಗದು, 16 ಲಕ್ಷ ರೂ. ಸೀರೆ ವಶಕ್ಕೆ
ತಾಯಿ – ಮಗ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ : ಬಾಲಕ ಮೃತ್ಯು
ಪಳ್ಳಿ ಶ್ರೀ ಉಮಾಮಹೇಶ್ವರ- ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ
ನೇಕಾರ ಸಮ್ಮಾನ್ ಯೋಜನೆ; ಯುವಕನ ವಿಶಿಷ್ಟ ಕೃತಜ್ಞತೆ
ಮಂಗಳೂರು/ಉಡುಪಿ: ಬಿಸಿಲ ನಡುವೆಯೂ ಪ್ರವಾಸಿಗರ ದಂಡು, ಚಾರಣಕ್ಕೆ ಸದ್ಯ ಅವಕಾಶವಿಲ್ಲ