ಯಲ್ಲಾಪುರ ಕ್ಷೇತ್ರದಲ್ಲಿ ಶಾಂತಿಯುತ ಮತದಾನ: ರನ್ನರ್ ಗಳಿಂದ ಮಾಹಿತಿ ಹಂಚಿಕೆ

Team Udayavani, Dec 5, 2019, 2:51 PM IST

ಕಾರವಾರ: ಯಲ್ಲಾಪುರ- ಮುಂಡಗೋಡ ವಿಧಾನಸಭಾ ಕ್ಷೇತ್ರದ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ.

ಯಲ್ಲಾಪುರ, ಮುಂಡಗೋಡ ತಾಲೂಕು ಹಾಗೂ ಶಿರಸಿ ತಾಲೂಕಿನ ಬನವಾಸಿ ಹೋಬಳಿ ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತಿವೆ. ಈ ಕ್ಷೇತ್ರದಲ್ಲಿ ಒಟ್ಟು 1.72 ಲಕ್ಷ‌ ಮತದಾರರಿದ್ದು, 87,899 ಪುರುಷ ಹಾಗೂ 84,647 ಮಹಿಳಾ ಮತದಾರರು ಇದ್ದಾರೆ.

ಚುನಾವಣೆಯಲ್ಲಿ ಯಾವುದೇ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕ್ಷೇತ್ರಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅಂಗವಿಕಲರು, ಹಿರಿಯರೂ ಸೇರಿದಂತೆ ಯುವ ಮತದಾರರು ಕೂಡ ಆಸಕ್ತಿಯಿಂದ ಬಂದು ಮತದಾನ ಮಾಡುತ್ತಿದ್ದಾರೆ.

ವಿಕಲಚೇತನ ಮತದಾರರಿಗೆ ಹಾಗೂ ಹಿರಿಯ ಮತದಾರರ ಸಹಾಯಕ್ಕಾಗಿ ಚುನಾವಣಾ ಆಯೋಗದಿಂದ ಗಾಲಿಕುರ್ಚಿ ಹಾಗೂ ಸಿಬ್ಬಂದಿ ನಿಯೋಜಿಸಲಾಗಿದ್ದು  ವಿಕಲಚೇತನರಿಗೆ ಗಾಲಿಕುರ್ಚಿಯ ಮೂಲಕ ನೆರವಾಗುತ್ತಿದ್ದು ಕಂಡುಬಂತು.

ಯಲ್ಲಾಪುರ ಕ್ಷೇತ್ರದ ದೂರಸಂಪರ್ಕ ಇಲ್ಲದ ಸ್ಥಳಗಳಲ್ಲಿ ರನ್ನರ್ ಗಳನ್ನು ನೇಮಿಸಲಾಗಿದೆ. ರನ್ನರ್ ಗಳು  ಎರಡು ಗಂಟೆಗೆ ಒಮ್ಮೆ  ನೆಟ್  ವರ್ಕ್ ಇರುವ ಸ್ಥಳಕ್ಕೆ ಬಂದು  ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಬೆಳಿಗ್ಗೆ 7ರಿಂದ ಆರಂಭವಾದ ಮತದಾನವು ಬೆಳಿಗ್ಗೆ 9 ಗಂಟೆ ಸುಮಾರಿಗೆ 7.54℅ ಹಾಗೂ 11 ಗಂಟೆಯ ಸುಮಾರಿಗೆ 23.87℅ ಮತದಾನವಾಗಿದೆ.  1ಗಂಟೆಗೆ 41.72% ಮತದಾನವಾಗಿದ್ದು, ಇತರ ಕ್ಷೇತ್ರಗಳಿಗಿಂತ ಉತ್ತಮ ಮತದಾನವಾಗು್ತತಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ