ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ನಾಲ್ಕು ಸಿಬ್ಬಂದಿಗಳಿಗೆ ಕೋವಿಡ್ ಪಾಸಿಟಿವ್
Team Udayavani, Jul 21, 2020, 6:16 PM IST
ಬೈಂದೂರು : ಸಮುದಾಯ ಆರೋಗ್ಯ ಕೇಂದ್ರದ ನಾಲ್ಕು ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಅರೋಗ್ಯ ಕೇಂದ್ರದ ಒಟ್ಟು ನಾಲ್ಕು ಸಿಬ್ಬಂದಿಗಳಲ್ಲಿ ಸೋಂಕು ಧ್ರಡಪಟ್ಟಿದ್ದು ಅರೋಗ್ಯ ಕೇಂದ್ರವನ್ನು ಮೂರು ದಿನದ ಕಾಲ ಸೀಲ್ ಡೌನ್ ಮಾಡಲಾಗಿದೆ.
ಕೋವಿಡ್ ಸೋಂಕಿತರನ್ನು ಕುಂದಾಪುರ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದೆ. ಉಳಿದ ಸಿಬ್ಬಂದಿಗಳಿಗೆ ಹೋಮ್ ಕ್ವಾರಂಟೈನ್ ಮಾಡಿದ್ದು ಐದು ದಿನದ ಬಳಿಕ ಗಂಟಲು ಧ್ರವ ಪರೀಕ್ಷೆ ನಡೆಸಲಾಗುತ್ತದೆ ಎಂದು ಅರೋಗ್ಯ ಇಲಾಖೆ ತಿಳಿಸಿದೆ.