ಅಯೋಧ್ಯೆ ತೀರ್ಪು: ಶಾಂತಿ ಸೌಹಾರ್ದತೆ ಬೆಳಗಲಿ: ಬಿಎಸ್ ವೈ ಟ್ವೀಟ್
Team Udayavani, Nov 9, 2019, 8:56 AM IST
ಬೆಂಗಳೂರು: ಬಹುನಿರೀಕ್ಷಿತ ಅಯೋಧ್ಯೆ ರಾಮ ಜನ್ಮ ಭೂಮಿ ವಿವಾದ ಸಂಬಂಧ ಇಂದು ಐತಿಹಾಸಿಕ ತೀರ್ಪು ಹೊರಬೀಳಲಿದ್ದು, ಎಲ್ಲರೂ ಶಾಂತಿ ಸೌಹಾರ್ದತೆ ಕಾಪಾಡಬೇಕೆಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
‘’ಶತಮಾನದಷ್ಟು ಹಳೆಯದಾದ ಅಯೋಧ್ಯೆ ವಿವಾದ ಕುರಿತು, ಸುಪ್ರೀಂ ಕೋರ್ಟ್ ಇಂದು ಐತಿಹಾಸಿಕ ತೀರ್ಪು ಪ್ರಕಟಿಸಲಿದೆ. ‘ತೀರ್ಪು ಏನೇ ಆಗಿರಲಿ ಶಾಂತಿ- ಸೌಹಾರ್ದತೆಯ ಅಂತಃಶಕ್ತಿ ಜಗದ ಬೆಳಕಾಗಲಿ’’ ಎಂದು ಸಿಎಂ ಆಫ್ ಕರ್ನಾಟಕ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
ಅಯೋಧ್ಯಾ ಪ್ರಕರಣದ ಕುರಿತು ತೀರ್ಪು ಯಾರದೇ ಪರವಿರಲಿ, ವಿರುದ್ಧವಿರಲಿ, ಉದ್ವೇಗಕ್ಕೆ ಒಳಗಾಗದೆ ಸಮಚಿತ್ತದಿಂದ ಸ್ವೀಕರಿಸೋಣ. ರಾಷ್ಟ್ರದ ಸಂವಿಧಾನ ಮತ್ತು ನ್ಯಾಯಂಗ ವ್ಯವಸ್ಥೆಯನ್ನು ಗೌರವಿಸೋಣ. ಶಾಂತಿ ಸೌಹಾರ್ದತೆ ಕಾಪಾಡಿಕೊಳ್ಳೋಣ ಎಂದು ಬಿ ಎಸ್ ವೈ ಟ್ವೀಟ್ ಮಾಡಿದ್ದಾರೆ.