ಕೋಟ: ಕಾರ್ಪೆಂಟರ್ ಮಗ ಶ್ರೀನಿಧಿ ಆಚಾರ್ ಎಸೆಸೆಲ್ಸಿಯಲ್ಲಿ 625 ಅಂಕದ ಸಾಧನೆ
Team Udayavani, Aug 9, 2021, 7:31 PM IST
ಕೋಟ: ವಿವೇಕ ವಿದ್ಯಾಸಂಸ್ಥೆ ಕೋಟ ಇಲ್ಲಿನ ಬಾಲಕರ ಪ್ರೌಢಶಾಲೆಯ ವಿದ್ಯಾರ್ಥಿ, ಕುಂಭಾಶಿ ಸಮೀಪ ಕೊರವಾಡಿ ನಿವಾಸಿ ಶ್ರೀನಿಧಿ ಆಚಾರ್ ಎಸೆಸೆಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 625 ಅಂಕಗಳಿಸಿದ್ದಾನೆ.
ಈ ಬಾರಿ ಹೊಸ ವಿಧಾನದಲ್ಲಿ ಪರೀಕ್ಷೆ ನಡೆಸಿದ್ದರಿಂದ ಪೂರ್ಣ ಅಂಕಗಳಿಸುವ ಬಗ್ಗೆ ಅನುಮಾನವಿತ್ತು. ಆದರೆ ನನ್ನ ಪರಿಶ್ರಮಕ್ಕೆ ಬೆಲೆ ಸಿಕ್ಕಿದೆ ಎಂದು ಶ್ರೀನಿಧಿ ಉದಯವಾಣಿಯೊಂದಿಗೆ ಸಂತಸ ಹಂಚಿಕೊಂಡರು ಹಾಗೂ ನನ್ನ ಈ ಸಾಧನೆಗೆ ಶಾಲಾ ಮುಖ್ಯ ಶಿಕ್ಷಕ ವೆಂಕಟೇಶ್ ಉಡುಪ ಮತ್ತು ಎಲ್ಲಾ ಶಿಕ್ಷಕರ ಸಹಕಾರ, ಹೆತ್ತವರ ಉತ್ತೇಜನ ಕಾರಣ ಎಂದಿದ್ದಾರೆ.
ಭವಿಷ್ಯದಲ್ಲಿ ಇಂಜಿನಿಯರ್ ಆಗುವಾಸೆ ವ್ಯಕ್ತಪಡಿಸಿದ್ದಾರೆ. ಕ್ರೀಡೆ, ಚಿತ್ರರಚನೆಯಲ್ಲೂ ಪ್ರಾವಿಣ್ಯತೆಯನ್ನು ಪಡೆದಿರುವ ಶ್ರೀನಿಧಿ ಉತ್ತಮ ಕಲಿಕೆ ಮೂಲಕ ಗುರುಗಳ ಮೆಚ್ಚಿನ ವಿದ್ಯಾರ್ಥಿಯಾಗಿದ್ದ. ಈತನ ತಂದೆ ರಮೇಶ್ ಆಚಾರ್ ಉದ್ಯೋಗದಲ್ಲಿ ಕಾರ್ಪೆಂಟರ್ ಆಗಿದ್ದು, ತಾಯಿ ಸುಜಾತ ಗೃಹಿಣಿ.
ಇದನ್ನೂ ಓದಿ :ರಾಜ್ಯದಲ್ಲಿ ತಗ್ಗಿದ ಕೋವಿಡ್ : ಇಂದು 1186 ಪ್ರಕರಣ ಪತ್ತೆ| 24 ಜನರ ಸಾವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್