ಚಾಮರಾಜನಗರ: ಸೋಂಕಿತ ಮದುವೆಗೆ ಹೋಗಿಲ್ಲ, ಆದರೆ ಊಟಕ್ಕೆ ಹೋಗಿದ್ದಾನೆ!

ಊಟದ ಸಾಲಿನಲ್ಲಿದ್ದ ಚಾ.ನಗರದ ಇಬ್ಬರು ಕ್ವಾರಂಟೈನ್‌ಗೆ!

Team Udayavani, May 23, 2020, 7:37 PM IST

ಚಾಮರಾಜನಗರ: ಸೋಂಕಿತ ಮದುವೆಗೆ ಹೋಗಿಲ್ಲ, ಆದರೆ ಊಟಕ್ಕೆ ಹೋಗಿದ್ದಾನೆ!

ಸಾಂದರ್ಭಿಕ ಚಿತ್ರ.

ಚಾಮರಾಜನಗರ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿಶು ಯೋಜನಾ ಅಭಿವೃದ್ಧಿ ಅಧಿಕಾರಿ (ಸಿಡಿಪಿಓ) ಹೆಳವರಹುಂಡಿಯ ಮದುವೆ ಸಮಾರಂಭದಲ್ಲಿ ಹಾಜರಿರಲಿಲ್ಲ. ಆದರೆ ಮದುವೆಯಲ್ಲಿ ಊಟ ಮಾಡಿದ್ದಾರೆಂದು ಖಚಿವಾಗಿದ್ದು ಆ ಸಾಲಿನಲ್ಲಿ ಊಟ ಮಾಡಿದ ನಗರದ ಇಬ್ಬರನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆ.

ಈ ಮಾಹಿತಿ ಶನಿವಾರ ಬೆಳಕಿಗೆ ಬಂದು, ಈ ಪ್ರಕರಣ ಮತ್ತೊಮ್ಮೆ ತಿರುವು ಪಡೆದಿದೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹೆಳವರಹುಂಡಿಯಲ್ಲಿ ನಡೆದಿದ್ದ ಮದುವೆಯ ವಧು ಚಾ.ನಗರದ ಸೋಮವಾರಪೇಟೆಯವರು. ಕೋವಿಡ್ ಸೋಂಕಿತ, ಮಂಡ್ಯ ಜಿಲ್ಲೆಯ ಸಿಡಿಪಿಓ ಹೆಳವರಹುಂಡಿಯ ತಮ್ಮ ಅಜ್ಜಿ ಮನೆಗೆ ಬಂದಿದ್ದರು. ಪಕ್ಕದ ಮನೆಯಲ್ಲೇ ಮದುವೆ ನಡೆಯುತ್ತಿತ್ತು. ಪಕ್ಕದ ಮನೆಯಾದ್ದರಿಂದ ಸಿಡಿಪಿಓ ಅವರ ಅಜ್ಜಿ ಮನೆಯವರು ಊಟಕ್ಕೆ ತೆರಳಿದ್ದರು. ಅವರ ಜೊತೆ ಸೋಂಕಿತ ಸಿಡಿಪಿಓ ಸಹ ಊಟಕ್ಕೆ ಕುಳಿತಿದ್ದರು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ.ಸಿ. ರವಿ ತಿಳಿಸಿದರು.

ಈ ವಿಷಯ ಶನಿವಾರ ಮಧ್ಯಾಹ್ನ ತಿಳಿದುಬಂದಿತು. ಮದುವೆಗೆ ಹೋಗಿದ್ದ ಸೋಮವಾರಪೇಟೆಯವರು ಈ ಮಾಹಿತಿ ನೀಡಿದರು. ನಂತರ ಸಿಡಿಪಿಓ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲಾಯಿತು. ಊಟ ಮಾಡಿದ್ದು ನಿಜ. ಆದರೆ ಮದುವೆ ಮನೆಗೆ ಹೋಗಲಿಲ್ಲ. ವಧೂವರರ ಬಳಿ ತೆರಳಿ ಶುಭಾಶಯ ಕೋರಿಲ್ಲ ಎಂದು ಸಿಡಿಪಿಓ ತಿಳಿಸಿದರು ಎಂದು ಡಿಎಚ್‌ಓ ಹೇಳಿದರು.

ಸಿಡಿಪಿಓ ಊಟಕ್ಕೆ ಕುಳಿತಿದ್ದ ಸಾಲಿನಲ್ಲಿ ಊಟ ಮಾಡಿದವರ ಪೈಕಿ ಇಬ್ಬರು ಚಾ.ನಗರದ ಸೋಮವಾರಪೇಟೆಯವರು. ಆ ಇಬ್ಬರು ಪುರುಷರನ್ನು ನಗರದ ಕ್ವಾರಂಟೈನ್ ಕೇಂದ್ರದಲ್ಲಿ ಕ್ವಾರಂಟೈನ್‌ನಲ್ಲಿರಿಸಲಾಗಿದೆ ಎಂದು ಅವರು ತಿಳಿಸಿದರು.

ಸೋಂಕಿತ ಸಿಡಿಪಿಓ, ಮದುವೆಗೆ ಹೋಗಿಲ್ಲ ಎಂದು ಶುಕ್ರವಾರ ಜಿಲ್ಲಾಧಿಕಾರಿ ಡಾ. ರವಿ ಸ್ಪಷ್ಟನೆ ನೀಡಿದ್ದರು. ಮದುವೆ ಮನೆಯಲ್ಲಿ ಊಟಕ್ಕೆಂದು ಹಾಕಲಾಗಿದ್ದ ಶಾಮಿಯಾನದಲ್ಲಿ ಕುಳಿತು ಸಿಡಿಪಿಓ ಊಟ ಮಾಡಿದ್ದು, ಆ ವಿಷಯವನ್ನು ಸಿಡಿಪಿಓ ಮುಚ್ಚಿಟ್ಟಿದ್ದರು. ಶನಿವಾರ ಆತ ಊಟ ಮಾಡುವ ಫೋಟೋ ನೋಡಿದ ಮದುವೆ ಮನೆಯವರು ಈ ವಿಷಯವನ್ನು ಆರೋಗ್ಯ ಇಲಾಖೆಯ ಗಮನಕ್ಕೆ ತಂದರು. ಆ ನಂತರ ಆರೋಗ್ಯಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ಟಾಪ್ ನ್ಯೂಸ್

DHAMMIKA

Sri Lanka : ಮಾಜಿ ಕ್ರಿಕೆಟಿಗ ಧಮ್ಮಿಕ ನಿರೋಶನ್‌ ಹತ್ಯೆ

Jaiswal

T20 Batting Ranking: ಮೂರಕ್ಕೇರಿದ ಯಶಸ್ವಿ ಜೈಸ್ವಾಲ್‌

Padubidri – Karkala ರಸ್ತೆ ಟೋಲ್‌ ಸಂಗ್ರಹಕ್ಕಾಗಿ ಕಾರ್ಯಾದೇಶ

Padubidri – Karkala ರಸ್ತೆ ಟೋಲ್‌ ಸಂಗ್ರಹಕ್ಕಾಗಿ ಕಾರ್ಯಾದೇಶ

Mangaluru ಸೆಂಟ್ರಲ್‌ ವಿಶ್ವದರ್ಜೆಗೇರಿಕೆ: ಸಚಿವ ಸೋಮಣ್ಣ

Mangaluru ಸೆಂಟ್ರಲ್‌ ವಿಶ್ವದರ್ಜೆಗೇರಿಕೆ: ಸಚಿವ ಸೋಮಣ್ಣ

Bantwal: ನೇತ್ರಾವತಿಯಲ್ಲಿ ಈ ವರ್ಷದ ಗರಿಷ್ಠ ಮಟ್ಟ

Bantwal: ಪ್ರವಾಹ ಭೀತಿ ಹಿನ್ನೆಲೆ: ಆಲಡ್ಕದ 6 ಕುಟುಂಬಗಳ ಸ್ಥಳಾಂತರ

Heavy Rain ಉಡುಪಿ: ಕೃಷಿ, ಮನೆಗಳಿಗೆ ವ್ಯಾಪಕ ಹಾನಿ

Heavy Rain ಉಡುಪಿ: ಕೃಷಿ, ಮನೆಗಳಿಗೆ ವ್ಯಾಪಕ ಹಾನಿ

Heavy Rain ಶಿರಾಡಿ: ಕೆಲವೆಡೆ ಗುಡ್ಡ ಕುಸಿತ; ವಾಹನ ಸಂಚಾರ ವ್ಯತ್ಯಯ

Heavy Rain ಶಿರಾಡಿ: ಕೆಲವೆಡೆ ಗುಡ್ಡ ಕುಸಿತ; ವಾಹನ ಸಂಚಾರ ವ್ಯತ್ಯಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud Case: ಲಾಭಾಂಶದ ಆಮಿಷ… ಮಹಿಳೆಗೆ ಆನ್‌ಲೈನ್‌ನಲ್ಲಿ 9.50 ಲಕ್ಷ ರೂ. ವಂಚನೆ

Fraud Case: ಲಾಭಾಂಶದ ಆಮಿಷ… ಮಹಿಳೆಗೆ ಆನ್‌ಲೈನ್‌ನಲ್ಲಿ 9.50 ಲಕ್ಷ ರೂ. ವಂಚನೆ

Governmnet-Emp

Government Employees; ಸರಕಾರದ ನಿಲುವುಗಳಿಗೆ ತಕ್ಕಂತೆ ಕೆಲಸ ಮಾಡಿ: ಸಿದ್ದರಾಮಯ್ಯ

Haveri: ಬಸ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆ ಮೃತ್ಯು

Haveri: ಬಸ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆ ಮೃತ್ಯು.. ಸಾರ್ವಜನಿಕರಿಂದ ಆಕ್ರೋಶ

ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ, ಕಳಸ, ಶೃಂಗೇರಿ ತಾಲೂಕಿನ ಶಾಲೆಗಳಿಗೆ ಜು.18 ರಂದು ರಜೆ

ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ, ಕಳಸ, ಶೃಂಗೇರಿ ತಾಲೂಕಿನ ಶಾಲೆಗಳಿಗೆ ಜು.18 ರಂದು ರಜೆ

CM-siddu

Reservation for Job; ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲು: ಸರ್ಕಾರ ಯೂಟರ್ನ್‌

MUST WATCH

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

udayavani youtube

ವಿಷಪ್ರಾಶನ ತಡೆ: ಜಾಗೃತಿ ಮತ್ತು ಮುನ್ನೆಚ್ಚರಿಕೆ ವಹಿಸುವುದು ಹೇಗೆ?

ಹೊಸ ಸೇರ್ಪಡೆ

DHAMMIKA

Sri Lanka : ಮಾಜಿ ಕ್ರಿಕೆಟಿಗ ಧಮ್ಮಿಕ ನಿರೋಶನ್‌ ಹತ್ಯೆ

Jaiswal

T20 Batting Ranking: ಮೂರಕ್ಕೇರಿದ ಯಶಸ್ವಿ ಜೈಸ್ವಾಲ್‌

Padubidri – Karkala ರಸ್ತೆ ಟೋಲ್‌ ಸಂಗ್ರಹಕ್ಕಾಗಿ ಕಾರ್ಯಾದೇಶ

Padubidri – Karkala ರಸ್ತೆ ಟೋಲ್‌ ಸಂಗ್ರಹಕ್ಕಾಗಿ ಕಾರ್ಯಾದೇಶ

Mangaluru ಸೆಂಟ್ರಲ್‌ ವಿಶ್ವದರ್ಜೆಗೇರಿಕೆ: ಸಚಿವ ಸೋಮಣ್ಣ

Mangaluru ಸೆಂಟ್ರಲ್‌ ವಿಶ್ವದರ್ಜೆಗೇರಿಕೆ: ಸಚಿವ ಸೋಮಣ್ಣ

Bantwal: ನೇತ್ರಾವತಿಯಲ್ಲಿ ಈ ವರ್ಷದ ಗರಿಷ್ಠ ಮಟ್ಟ

Bantwal: ಪ್ರವಾಹ ಭೀತಿ ಹಿನ್ನೆಲೆ: ಆಲಡ್ಕದ 6 ಕುಟುಂಬಗಳ ಸ್ಥಳಾಂತರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.