ಜುಲೈನಲ್ಲಿ ಕೈಗೊಳ್ಳಲಾಗುವ ಚಂದ್ರಯಾನ 2ರಲ್ಲಿ 13 ಪೇಲೋಡ್‌; 3.8 ಟನ್‌ ಭಾರ

Team Udayavani, May 15, 2019, 3:22 PM IST

ಬೆಂಗಳೂರು : ಇದೇ ವರ್ಷ ಜುಲೈ ನಲ್ಲಿ ಕೈಗೊಳ್ಳಲಾಗುವ ಭಾರತದ ಎರಡನೇ ಚಂದ್ರಯಾನವು 13 ಪೇಲೋಡ್‌ ಮತ್ತು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಇದರ ಒಂದು ಅಕರ್ಮಕ ಪ್ರಾಯೋಗಿಕ ಪೇಲೋಡ್‌ ಒಂದನ್ನು ಹೊಂದಿರುತ್ತದೆ.

ಹದಿಮೂರು ಪೇಲೋಡ್‌ ಗಳಲ್ಲಿ ಆರ್ಬಿಟರ್‌ ನ ಎಂಟು, ಲ್ಯಾಂಡರ್‌ ನ ಎರಡು ಮತ್ತು ರೋವರ್‌ ನ ಒಂದು ಅಲ್ಲದೆ, ಅಮೆರಿಕದ ನಾಸಾ ದ ಒಂದು ಅಕರ್ಮಕ ಪ್ರಯೋಗಾರ್ಥದ ಒಂದು ಇರುತ್ತದೆ ಎಂದು ತಿಳಿಸಿರುವ ಇಸ್ರೋ, ಅಮೆರಿಕನ್‌ ಘಟಕದ ಉದ್ದೇಶವನ್ನು ಬಹಿರಂಗಪಡಿಸಿಲ್ಲ.

ಚಂದ್ರಯಾನ 2ರ ಬಾಹ್ಯಾಕಾಶ ವಾಹನವು ಒಟ್ಟು 3.8 ಟನ್‌ ಭಾರ ಹೊಂದಿರುತ್ತದೆ; ಇವುಗಳ ಮೂರು module ಗ‌ಳೆಂದರೆ ಆರ್ಬಿಟರ್‌, ಲ್ಯಾಂಡರ್‌ (ವಿಕ್ರಮ್‌) ಮತ್ತು ರೋವರ್‌ (ಪ್ರಜ್ಞಾ) ಎಂದು ಇಸ್ರೋ ಹೇಳಿದೆ.

ಚಂದ್ರಯಾನ-2ರ ಎಲ್ಲ ಮೂರು ಮೊಡ್ನೂಲ್‌ಗ‌ಳು ಜುಲೈ 9ರಿಂದ ಜುಲೈ 16ರ ನಡುವಿನ ಅವಧಿಯಲ್ಲಿ ಸಿದ್ಧವಾಗಲಿದೆ. ಸೆ.6ರಂದು ಚಂದ್ರನ ಮೇಲೆ ಇಳಿಯುವ ನಿರೀಕ್ಷೆ ಇದೆ ಎಂದು ಇಸ್ರೋ ಹೇಳಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬಾಲಪ್ಪ ಎಂ. ಕುಪ್ಪಿ ಕಕ್ಕೇರಾ: ನಗರೋತ್ಥಾನ ಯೋಜನೆಯಡಿ ಕಕ್ಕೇರಾ ಪ್ರಮುಖ ವಾರ್ಡ್‌ಗಳಲ್ಲಿ 3ನೇ ಹಂತದ ಕುಡಿಯುವ ನೀರಿನ ಸೌಕರ್ಯ ಒದಗಿಸಲು ನಗರಾಭಿವೃದ್ಧಿ ಕೋಶ...

  • ಕೋಲಾರ: ರಾಜ್ಯದ ಸಮ್ಮಿಶ್ರ ಸರ್ಕಾರ ಮಾಡಿದ ಜನಪರ ಕೆಲಸಗಳನ್ನು ಜನರಿಗೆ ತಿಳಿಸುವಲ್ಲಿ ಆದ ವೈಫ‌‌ಲ್ಯವೇ ಲೋಕಸಭಾ ಚುನಾವಣೆಯ ಹಿನ್ನಡೆಗೆ ಕಾರಣವಾಯಿತು ಎಂದು ಜಿಲ್ಲಾ...

  • ದೇವದುರ್ಗ: ದೇವದುರ್ಗ ಪಟ್ಟಣ ಸೇರಿ ತಾಲೂಕಿನಾದ್ಯಂತ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚುತ್ತಿವೆ. ಅಕ್ರಮ ಮರಳು ಸಾಗಾಟ, ಜೂಜಾಟ, ಮಟ್ಕಾ, ಅಕ್ರಮ ಮದ್ಯ ಮಾರಾಟ,...

  • ಭಟ್ಕಳ: ತಾಲೂಕಿನ ಮುಟ್ಟಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಹೊಳೆಯ ಪಕ್ಕದಲ್ಲಿ ಗುಂಡಿ ತೋಡಿ ನೀರು ಸರಬರಾಜು ಮಾಡುತ್ತಿರುವ ಖಾಸಗಿ ವ್ಯಕ್ತಿ ವಿರುದ್ಧ ಗ್ರಾಮಸ್ಥರು...

  • ತಾಳಿಕೋಟೆ: ತಾಲೂಕಿನ ಮೂಕಿಹಾಳ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಮೂಕಿಹಾಳ ದರ್ಗಾದ ಬಳಿ ಇರುವ ನಿವಾಸಿಗಳಿಗೆ ನದಿಯಿಂದ ವಾರಕ್ಕೊಮ್ಮೆ ಪೂರೈಕೆಯಾಗುವ ನೀರು ಕಲುಷಿತವಾಗಿದ್ದು...

  • ಶಿರಸಿ: ಸಿದ್ದಾಪುರ ಕಾನಸೂರು ಬಳಿ ವಿಧವಾ ಮಹಿಳೆ ಮೇಲೆ ದೌರ್ಜನ್ಯ ಎಸಗಿದ ಅರಣ್ಯಾಧಿಕಾರಿಗಳ ನಡೆ ವಿರೋಧಿಸಿ ಜಿಲ್ಲಾ ಅತಿಕ್ರಮಣದಾರರ ಹೋರಾಟ ವೇದಿಕೆ ಅಧ್ಯಕ್ಷ...