ಚಿಕನ್‌ ಅಂಗಡಿ ತ್ಯಾಜ್ಯಕ್ಕೆ ಸಾಕುಪ್ರಾಣಿ ಆಹಾರ ರೂಪ

ಪಾಲಿಕೆಯೊಂದಿಗೆ ಕೈಜೋಡಿಸಿದ ಮಂಗಳೂರು ಕಂಪೆನಿ | ಧಾರವಾಡ ಬಳಿ ರೆಂಡರಿಂಗ್‌ ಘಟಕ ಸ್ಥಾಪನೆ

Team Udayavani, May 27, 2022, 9:40 AM IST

1

ಹುಬ್ಬಳ್ಳಿ: ಅವಳಿನಗರದಲ್ಲಿ ಸಂಗ್ರಹವಾಗುವ ತಾಜ್ಯದಿಂದ ಗೊಬ್ಬರ ತಯಾರಿಸುವ ಮೂಲಕ ರೈತರ ಮೆಚ್ಚುಗೆಗೆ ಪಾತ್ರವಾಗಿರುವ ಹು-ಧಾ ಮಹಾನಗರ ಪಾಲಿಕೆ, ಇದೀಗ ಚಿಕನ್‌ ಅಂಗಡಿಗಳಿಂದ ಸಂಗ್ರಹವಾಗುವ ತಾಜ್ಯವನ್ನು ಸಾಕು ಪ್ರಾಣಿಗಳ ಆಹಾರವನ್ನಾಗಿ ಮಾರ್ಪಡಿಸಲು ಮುಂದಾಗಿದೆ. ಪಾಲಿಕೆಯು ಮಂಗಳೂರು ಮೂಲದ IITAZ ventures ಕಂಪೆನಿಯೊಂದಿಗೆ ಒಡಬಂಡಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಲಿದ್ದು, ಇದರಿಂದ ಅವಳಿನಗರದಲ್ಲಿ ಚಿಕನ್‌ ಸೆಂಟರ್‌ಗಳಿಂದ ಪ್ರತಿದಿನ ಸಂಗ್ರಹವಾಗುವ ಸುಮಾರು 12-15 ಟನ್‌ ಕೋಳಿ ತಾಜ್ಯವನ್ನು ನಿರ್ವಹಣೆ ಮಾಡಲು ಸಹಕಾರಿಯಾಗಲಿದೆ.

ಹುಬ್ಬಳ್ಳಿಯಲ್ಲಿ 500, ಧಾರವಾಡದಲ್ಲಿ 300 ಸೇರಿದಂತೆ ಅವಳಿನಗರದಲ್ಲಿ ಸುಮಾರು 800ಕ್ಕೂ ಹೆಚ್ಚು ಚಿಕನ್‌ ಅಂಗಡಿಗಳಿವೆ. ಅವುಗಳಿಂದ ಪ್ರತಿದಿನ ಸುಮಾರು 12- 15 ಟನ್‌ ಕೋಳಿ ತಾಜ್ಯ ಸಂಗ್ರಹವಾಗುತ್ತಿದೆ. ಅದನ್ನು ಸರಿಯಾಗಿ ನಿರ್ವಹಣೆ ಮಾಡುವ ಮೂಲಕ ಸಾಕುಪ್ರಾಣಿಗಳ ಆಹಾರವನ್ನಾಗಿ ತಯಾರಿಸಲು IITAZ ventures ಸಂಸ್ಥೆ ಮುಂದೆ ಬಂದಿದೆ. ಅದಕ್ಕಾಗಿ ಮಹಾನಗರ ಪಾಲಿಕೆ ಸಹ ಹಸಿರು ನಿಶಾನೆ ತೋರಿಸಿದೆ. ಈಗಾಗಲೇ ಧಾರವಾಡ ಬೇಲೂರ ಕೈಗಾರಿಕಾ ವಸಾಹತು ಪ್ರದೇಶದಲ್ಲಿ 1.3 ಎಕರೆ ಪ್ರದೇಶದಲ್ಲಿ ಕೋಳಿ ತ್ಯಾಜ್ಯವನ್ನು ಸಾಕುಪ್ರಾಣಿಗಳ ಆಹಾರವನ್ನಾಗಿ ಪರಿವರ್ತಿಸುವ ರೆಂಡರಿಂಗ್‌ ಘಟಕ ಸ್ಥಾಪನೆ ಮಾಡಲಾಗುತ್ತಿದ್ದು, ಇನ್ನೊಂದು ತಿಂಗಳಲ್ಲಿ ಘಟಕ ಕಾರ್ಯಾರಂಭ ಮಾಡಲಿದೆ.

ಹುಬ್ಬಳ್ಳಿ-ಧಾರವಾಡದಲ್ಲಿ ಸಂಗ್ರಹವಾಗುವ ತಾಜ್ಯವನ್ನು ರಸ್ತೆ ಬದಿ ಮತ್ತು ತೆರೆದ ಚರಂಡಿಗಳಲ್ಲಿ ಸುರಿಯುವುದನ್ನು ಕಡಿಮೆ ಮಾಡಲು ಈ ಘಟಕ ನಿರ್ಮಾಣಕ್ಕೆ ಮುಂದಾಗಿದ್ದು, ಇದರಿಂದ ಬೀದಿ ನಾಯಿಗಳು ಸೇರಿದಂತೆ ಇನ್ನಿತರ ಸಾಕು ಪ್ರಾಣಿಗಳ ಉಪಟಳವೂ ಹತೋಟಿಗೆ ಬರಲಿದೆ ಎನ್ನುವ ಭರವಸೆ ಹೊಂದಲಾಗಿದೆ. ಸದ್ಯ ನಗರದಲ್ಲಿ ಹೆಚ್ಚಿನ ಚಿಕನ್‌ ಅಂಗಡಿಗಳ ತ್ಯಾಜ್ಯವನ್ನು ಸಾಮಾನ್ಯ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದು, ಇದನ್ನು ಸರಿಯಾಗಿ ನಿರ್ವಹಣೆ ಮಾಡಿದಲ್ಲಿ ಸಾಕು ಪ್ರಾಣಿಗಳಿಗೆ ಪೌಷ್ಟಿಕ ಆಹಾರ ನೀಡಿದಂತಾಗುತ್ತದೆ.

ಶೀಘ್ರದಲ್ಲಿಯೇ ಸಹಿ: ಈಗಾಗಲೇ ಮಹಾನಗರ ಪಾಲಿಕೆ ಹಾಗೂ ಮಂಗಳೂರು ಮೂಲದ ಕಂಪೆನಿಯೊಂದಿಗೆ ಮಾತುಕತೆಯಾಗಿದ್ದು, ಒಡಂಬಡಿಕೆ ಪತ್ರಕ್ಕೆ ಸಹಿ ಹಾಕುವುದು ಬಾಕಿ ಉಳಿದಿದೆ. ಮಹಾನಗರ ಪಾಲಿಕೆ ಮಹಾಪೌರ ಹಾಗೂ ಉಪಮಹಾಪೌರ ಆಯ್ಕೆ ನಂತರ ಪತ್ರಕ್ಕೆ ಸಹಿ ಆಗುವ ನಿರೀಕ್ಷೆ ಹೊಂದಲಾಗಿದೆ.

ಚಿಕನ್‌ ಅಂಗಡಿಗಳ ತ್ಯಾಜ್ಯವನ್ನು ಸಾಕುಪ್ರಾಣಿಗಳ ಆಹಾರವನ್ನಾಗಿ ಪರಿವರ್ತಿಸುವ ರೆಂಡರಿಂಗ್‌ ಘಟಕ ಸ್ಥಾಪಿಸುವ ಬಗ್ಗೆ ಮಂಗಳೂರು ಮೂಲದ ಸಂಸ್ಥೆ ಸಂಪರ್ಕಿಸಲಾಗಿತ್ತು. ಕಂಪೆನಿ ಈಗಾಗಲೇ ಧಾರವಾಡ ಬಳಿಯ ಕೈಗಾರಿಕಾ ಪ್ರದೇಶದಲ್ಲಿ ರೆಂಡರಿಂಗ್‌ ಘಟಕ ಸ್ಥಾಪಿಸುವ ಕೆಲಸ ಪ್ರಾರಂಭಿಸಿದೆ. ಚಿಕನ್‌ ತ್ಯಾಜ್ಯ ಸಂಗ್ರಹಿಸಲು ಅವರಿಗೆ ಹು-ಧಾ ಮಹಾನಗರ ಪಾಲಿಕೆ ಅಗತ್ಯ ನೆರವು ನೀಡಲಿದೆ. ಡಾ| ರವಿ ಸಾಲಿಗೌಡರ, ಪಾಲಿಕೆ ಪಶು ವೈದ್ಯಕೀಯ ವಿಭಾಗದ ಮುಖ್ಯಸ್ಥ

ಅವಳಿನಗರದಲ್ಲಿ ಸಂಗ್ರಹವಾಗುವ ಚಿಕನ್‌ ತ್ಯಾಜ್ಯವನ್ನು ಕಂಪನಿಯಿಂದ ಸಂಗ್ರಹಿಸುವ ಮೂಲಕ ಸಾಕು ಪ್ರಾಣಿಗಳ ಆಹಾರವನ್ನಾಗಿ ತಯಾರಿಸುವ ರೆಂಡರಿಂಗ್‌ ಘಟಕವನ್ನು ಧಾರವಾಡದ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ. ಈಗಾಗಲೇ ಮಹಾನಗರ ಪಾಲಿಕೆ ಜೊತೆ ಈ ಕುರಿತು ಚರ್ಚೆಗಳು ನಡೆದಿದ್ದು, ಒಡಂಬಡಿಕೆ ಪತ್ರಕ್ಕೆ ಸಹಿ ಹಾಕುವುದು ಬಾಕಿ ಇದೆ. ಈಗಾಗಲೇ ಕಂಪೆನಿಯಿಂದ ಕೇರಳದಲ್ಲಿ ಘಟಕ ಇದ್ದು, ಮಂಗಳೂರಿನಲ್ಲೂ ಆರಂಭಿಸಲಾಗಿದೆ. ಹು-ಧಾದಲ್ಲಿ ಆರಂಭಿಸಬೇಕಿದ್ದು, ಮುಂದಿನ ದಿನಗಳಲ್ಲಿ ಗೋವಾ, ಶಿವಮೊಗ್ಗ ಹಾಗೂ ಬೆಂಗಳೂರಲ್ಲಿ ಘಟಕ ಕಾರ್ಯಾರಂಭವಾಗಲಿದೆ. ಅವಳಿನಗರದಲ್ಲಿ ನಿರ್ಮಾಣವಾಗುತ್ತಿರುವ ಘಟಕ 20 ಟನ್‌ ಸಾಮರ್ಥ್ಯ ಹೊಂದಿರಲಿದೆ. ಆರಿಫ್‌ ಬಾವಾ, IITAZ ventures ಮುಖ್ಯಸ್ಥ

„ಬಸವರಾಜ ಹೂಗಾರ

ಟಾಪ್ ನ್ಯೂಸ್

ಕರಾವಳಿಯಲ್ಲಿ ಭಾರೀ ಮಳೆ; ಜೂನ್. 26ರವರೆಗೆ ಆರೆಂಜ್ ಅಲರ್ಟ್​ ಘೋಷಣೆ

ಕರಾವಳಿಯಲ್ಲಿ ಭಾರೀ ಮಳೆ; ಜೂನ್. 26ರವರೆಗೆ ಆರೆಂಜ್ ಅಲರ್ಟ್​ ಘೋಷಣೆ

ವಿರಾಜಪೇಟೆ: ಹುಲಿ ದಾಳಿ: ಎರಡು ಹಸು ಸಾವು: ಪಾಲಿಬೆಟ್ಟದಲ್ಲೂ ಆತಂಕ

ವಿರಾಜಪೇಟೆ: ಹುಲಿ ದಾಳಿ: ಎರಡು ಹಸು ಸಾವು: ಪಾಲಿಬೆಟ್ಟದಲ್ಲೂ ಆತಂಕ

ಪ್ರತಿ ಜಿಲ್ಲೆಯಲ್ಲೂ ಕಾಂಗ್ರೆಸ್‌ ಪಾದಯಾತ್ರೆ : ಧ್ರುವನಾರಾಯಣ

ಪ್ರತಿ ಜಿಲ್ಲೆಯಲ್ಲೂ ಕಾಂಗ್ರೆಸ್‌ ಪಾದಯಾತ್ರೆ : ಧ್ರುವನಾರಾಯಣ

ಅಗ್ನಿಪಥ ಸೇವೆ ಬಳಿಕ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ: ನಳಿನ್‌

ಅಗ್ನಿಪಥ ಸೇವೆ ಬಳಿಕ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ: ನಳಿನ್‌

ಮಂಗಳೂರು ಏರ್‌ಪೋರ್ಟ್‌ಗೆ ಸರಕಾರಿ ಬಸ್‌ ಸೇವೆ

ಮಂಗಳೂರು ಏರ್‌ಪೋರ್ಟ್‌ಗೆ ಸರಕಾರಿ ಬಸ್‌ ಸೇವೆ

ಶಿಕ್ಷಕನಿಂದ ಹಲ್ಲೆ ಆರೋಪ: ಇಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಶಿಕ್ಷಕನಿಂದ ಹಲ್ಲೆ ಆರೋಪ: ಇಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಕಸಬಾ ಬಜಾರ್: ಮೊಬೈಲ್‌ ಟವರನ್ನೇ ಕದ್ದೊಯ್ದರು!

ಕಸಬಾ ಬಜಾರ್: ಮೊಬೈಲ್‌ ಟವರನ್ನೇ ಕದ್ದೊಯ್ದರು!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

ಭಾರತದ ಅರ್ಥ ವ್ಯವಸ್ಥೆ ಜಾಗತಿಕ ಮಟ್ಟದಲ್ಲಿ ಬಲಿಷ್ಠ

4

ಕಾರಂತರು ಜನಪದರ ಪ್ರಜ್ಞೆಯ ವಕ್ತಾರ: ಡಾ| ಎಂ.ಎಸ್‌. ಮೂರ್ತಿ

3

ಜೆಎಸ್ಸೆಸ್‌ ಕಾಲೇಜಿಗೆ ನ್ಯಾಕ್‌ ಎ ಪ್ಲಸ್‌ ಗ್ರೇಡ್‌

2

ರೌಡಿಗಳ ಮನೆ ಕದ ತಟ್ಟಿದ ಪೊಲೀಸರು

1

ನಂಬರ್‌ ಪ್ಲೇಟ್‌ ನಿಯಮಕ್ಕೆ ಕಿಮ್ಮತ್ತಿಲ್ಲ

MUST WATCH

udayavani youtube

ಗೃಹ ಪ್ರವೇಶ ಸಂದರ್ಭ ಅವಾಂತರ |ಮಂಗಳಮುಖಿಯರ ರಂಪಾಟ

udayavani youtube

ಕಿನ್ನಿಗೋಳಿ :ಪತ್ನಿ ಸೇರಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನಿಸಿದ ಪತಿ

udayavani youtube

ನೀವು ಬಿಜೆಪಿಗೆ ಸೇರಿ, ನಾವು ಶಿವಸೇನೆಯನ್ನು ಮತ್ತೆ ಕಟ್ಟುತ್ತೇವೆ : ರಾವತ್

udayavani youtube

13,940 ಮೊಳೆಗಳಲ್ಲಿ ಕಲಾಕೃತಿ : India Book of Records ಗೆ ದಾಖಲಾದ ಕಾಪುವಿನ ಶಶಾಂಕ್

udayavani youtube

ಮನುಷ್ಯನ ಮನಸ್ಸು ಒಂದೇ ರೀತಿ ಇರುವುದಿಲ್ಲ.. ಯಾಕೆ ?

ಹೊಸ ಸೇರ್ಪಡೆ

ಕರಾವಳಿಯಲ್ಲಿ ಭಾರೀ ಮಳೆ; ಜೂನ್. 26ರವರೆಗೆ ಆರೆಂಜ್ ಅಲರ್ಟ್​ ಘೋಷಣೆ

ಕರಾವಳಿಯಲ್ಲಿ ಭಾರೀ ಮಳೆ; ಜೂನ್. 26ರವರೆಗೆ ಆರೆಂಜ್ ಅಲರ್ಟ್​ ಘೋಷಣೆ

ವಿರಾಜಪೇಟೆ: ಹುಲಿ ದಾಳಿ: ಎರಡು ಹಸು ಸಾವು: ಪಾಲಿಬೆಟ್ಟದಲ್ಲೂ ಆತಂಕ

ವಿರಾಜಪೇಟೆ: ಹುಲಿ ದಾಳಿ: ಎರಡು ಹಸು ಸಾವು: ಪಾಲಿಬೆಟ್ಟದಲ್ಲೂ ಆತಂಕ

ಪ್ರತಿ ಜಿಲ್ಲೆಯಲ್ಲೂ ಕಾಂಗ್ರೆಸ್‌ ಪಾದಯಾತ್ರೆ : ಧ್ರುವನಾರಾಯಣ

ಪ್ರತಿ ಜಿಲ್ಲೆಯಲ್ಲೂ ಕಾಂಗ್ರೆಸ್‌ ಪಾದಯಾತ್ರೆ : ಧ್ರುವನಾರಾಯಣ

ಅಗ್ನಿಪಥ ಸೇವೆ ಬಳಿಕ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ: ನಳಿನ್‌

ಅಗ್ನಿಪಥ ಸೇವೆ ಬಳಿಕ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ: ನಳಿನ್‌

ಮಂಗಳೂರು ಏರ್‌ಪೋರ್ಟ್‌ಗೆ ಸರಕಾರಿ ಬಸ್‌ ಸೇವೆ

ಮಂಗಳೂರು ಏರ್‌ಪೋರ್ಟ್‌ಗೆ ಸರಕಾರಿ ಬಸ್‌ ಸೇವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.