ಬಾರದ 108, ಹೊಂಡಕ್ಕೆ ಬಿದ್ದ ಮಕ್ಕಳಿಬ್ಬರು ಸಾವು ; ಆಸ್ಪತ್ರೆಯಲ್ಲಿ ಯುವಕರಿಂದ ದಾಂಧಲೆ

Team Udayavani, Jan 25, 2021, 5:09 PM IST

ಬಾರದ 108, ಹೊಂಡಕ್ಕೆ ಬಿದ್ದ ಮಕ್ಕಳಿಬ್ಬರು ಸಾವು ; ಆಸ್ಪತ್ರೆಯಲ್ಲಿ ಯುವಕರಿಂದ ದಾಂಧಲೆ

ಚಿಂತಾಮಣಿ: ಕೃಷಿ ಹೊಂಡಕ್ಕೆ ಕಾಲುಜಾರಿ ಬಿದ್ದ ಇಬ್ಬರು ಬಾಲಕರನ್ನು ಪೋಷಕರು ಮೇಲೆತ್ತಿ 108 ಕರೆ ಮಾಡಿ ಗಂಟೆಗಳೇ ಕಳೆದರೂ ಬಾರದ ಕಾರಣ ಹಳೆ ಟೆಂಪೋದಲ್ಲಿ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಟೆಂಪೋ ಕೆಟ್ಟು ನಿಂತಿದ್ದು, ಬೇಗನೇ ತಪಾಸಣೆ ಮಾಡಿದ್ದರೆ ಮಕ್ಕಳು ಬದುಕುತ್ತಿದ್ದರು. 108 ಬಾರದಿರುವುದು ಹಾಗೂ ವೈದ್ಯರ ನಿರ್ಲಕ್ಷ್ಯವೇ ಮಕ್ಕಳ ಸಾವಿಗೆ ಕಾರಣ ಎಂದು ಪೋಷಕರು ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.

ಮೂಗಲ ಮರಿಯ ಶಿವರಾಜ್‌ ಅವರ ಮಗ ಚರಣ್‌(10) ಮತ್ತು ರಾಮಾಂಜಿ ಅವರ ಮಗ ತೇಜಸ್‌ (11) ಮೃತರು.

ಆಗಿದ್ದೇನು?: ತಾಲೂಕಿನ ಮೂಗಲಮರಿ ಗ್ರಾಮದ ಹೊರ ವಲಯ ದಲ್ಲಿಯ ಕೃಷಿ ಹೊಂಡಕ್ಕೆ ಮಕ್ಕಳು ಬಿದ್ದಿದ್ದರು. 108
ಬರದಿದ್ದರಿಂದ ಟೆಂಪೋದಲ್ಲಿ ಕರೆದ್ಯೊಯುತ್ತಿದ್ದ ವೇಳೆ ಕೆಟ್ಟು ನಿಂತಿದ್ದು, ಬೇರೊಂದು ವಾಹನದಲ್ಲಿ ಆಸ್ಪತ್ರೆಗೆ ತಲುಪಿದ ವೇಳೆ
ಕ್ಷಣಾರ್ಧದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಗ್ರಾಮದ ಯುವಕರು ನಗರದ ಸಾರ್ವಜನಿಕ ಆಸ್ಪತ್ರೆಯ ಕಿಟಕಿ, ಗಾಜು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಟ್ಯಂತರ ರೂ. ವೆಚ್ಚ ಮಾಡಿ ತುರ್ತು ಸೇವೆಗೆಂದು ಸರ್ಕಾರ ನೇಮಿಸಿರುವ 108 ವಾಹನಗಳು ತಾಲೂಕಿನಲ್ಲಿ ಬಹಳ ಮಂದಗತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಹಲವು ಪ್ರಾಣಹಾನಿ ಆಗಿರುವ ಪ್ರಸಂಗಗಳು ಹೆಚ್ಚಿವೆ.

ಇದನ್ನೂ ಓದಿ:ಕೆಜಿಎಫ್: ಮೂರ್ತಿ ಭಂಜನ, ಕತ್ತಿ ಹಿಡಿದು ತಿರುಗಿದ ದುಷ್ಕರ್ಮಿ

ಆಸ್ಪತ್ರೆಯಿಂದ ಕ್ಷಣಾರ್ಧದಲ್ಲಿ ನಾಪತ್ತೆ
ಮಕ್ಕಳನ್ನು ಆಸ್ಪತ್ರೆಗೆ ಕರೆ ತಂದಾಗ ಮೃತಪಟ್ಟಿರುವುದು ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಗ್ರಾಮದ ಯುವಕರು, ಆಸ್ಪತ್ರೆಯ ಕಿಟಕಿ ಬಾಗಿಲುಗಳ ಗಾಜು ಮತ್ತು ಸಹಾಯವಾಣಿ ಕೇಂದ್ರದ ಗಾಜುಗಳನ್ನು ಒಡೆದು ವೈದ್ಯರನ್ನು ಯುವಕರು ನಿಂದಿಸಿದ್ದಾರೆ. ಪೊಲೀಸರು ಬರುವಷ್ಟರಲ್ಲಿ ಆಸ್ಪತ್ರೆಯಿಂದ ಹೊರಟು ಹೋಗಿದ್ದಾರೆಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದರು.

ಆಸ್ಪತ್ರೆಯಲ್ಲಿ ಸಿಸಿ ಕ್ಯಾಮೆರಾ ರಿಪೇರಿ
ದಾಂಧಲೆ ನಡೆಸಿದ ಯುವಕರನ್ನು ಪತ್ತೆ ಹಚ್ಚಲು ಪೊಲೀಸರು ಆಸ್ಪತ್ರೆಯ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಸಿಸಿ ಕ್ಯಾಮೆರಾ ಕೆಟ್ಟಿರುವುದು ಬೆಳಕಿಗೆ ಬಂದಿದೆ. ಇದು ಆಸ್ಪತ್ರೆಯ ವೈದ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಕುರಿತು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

108 ಇರುವುದೇ ಮೂರು, ಒಂದು ಕೆಟ್ಟಿದೆ
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಂತೋಷ್‌, ತಾಲೂಕಿನಲ್ಲಿ 108 ವಾಹನಗಳು ಇರುವುದು ಮೂರು. ಅದರಲ್ಲಿ ಒಂದು ಕೆಟ್ಟಿರುವುದರಿಂದ ಉಳಿದವುಗಳಿಗೆ ಬಿಡುವಿರುವುದಿಲ್ಲ. ಯಾವುದೇ ಕರೆಗೆ ಸ್ಪಂದಿಸಿ ಅಲ್ಲಿಗೆ ತೆರಳಬೇಕಾದರೆ ತಡವಾಗುತ್ತದೆ. ಆ್ಯಂಬುಲೆನ್ಸ್‌ ಬಾರದ ಕೋಪಕ್ಕೆ ಆಸ್ಪತ್ರೆಯ ಮೇಲೆ ದಾಳಿ ಮಾಡಿರುವುದು ಸರಿಯಲ್ಲ. ಮುಳಬಾಗಿಲಿನಲ್ಲಿ ಏಳು 108 ವಾಹನಗಳಿವೆ. ಆದರೆ ನಮ್ಮ ತಾಲೂಕಿಗೆ ಕೇವಲ ಮೂರೇ ಮೂರು ವಾಹನಗಳಿರುವುದು ದುರದೃಷ್ಟಕರ.

ಟಾಪ್ ನ್ಯೂಸ್

Untitled-2

ವಿಟ್ಲ : ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಮಾರ್ಗ ವಿರೋಧಿಸಿ ಬೃಹತ್ ಪ್ರತಿಭಟನೆ

ಹುಬ್ಬಳ್ಳಿ: ಸಿದ್ಧಾರೂಢಸ್ವಾಮಿ ಮಠದ ಹೊಂಡದಲ್ಲಿ ಮುಳುಗಿ ಯುವಕ ಸಾವು

ಹುಬ್ಬಳ್ಳಿ: ಸಿದ್ಧಾರೂಢಸ್ವಾಮಿ ಮಠದ ಹೊಂಡದಲ್ಲಿ ಮುಳುಗಿ ಯುವಕ ಸಾವು

s-t-somashekhar

ಸಿದ್ದರಾಮಯ್ಯ ಮತ್ತು ಜಿ.ಟಿ.ದೇವೇಗೌಡ ಲವ್ ಬರ್ಡ್ಸ್ ತರಹ: ಎಸ್‌ಟಿ ಸೋಮಶೇಖರ್

avatar purusha

‘ಲಡ್ಡು ಬಂದು ಬಾಯಿಗೆ ಬಿತ್ತಾ…’ ಅವತಾರ್‌ ಪುರುಷ ಹಾಡು

ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್

ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್

ರೂಪಾಂತರಿ ವೈರಸ್ ಗೆ ಆಹ್ವಾನ! ದಕ್ಷಿಣ ಆಫ್ರಿಕಾದಿಂದ 1 ಸಾವಿರ ಪ್ರಯಾಣಿಕರು ಮುಂಬಯಿಗೆ ಆಗಮನ?

ರೂಪಾಂತರಿ ವೈರಸ್ ಗೆ ಆಹ್ವಾನ! ದಕ್ಷಿಣ ಆಫ್ರಿಕಾದಿಂದ 1 ಸಾವಿರ ಪ್ರಯಾಣಿಕರು ಮುಂಬಯಿಗೆ ಆಗಮನ?

Untitled-2

ಸದ್ಯಕ್ಕೆ ಲಾಕ್ ಡೌನ್ ಮಾಡುವ ಉದ್ದೇಶ ಸರ್ಕಾರದ ಮುಂದಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-2

ಸದ್ಯಕ್ಕೆ ಲಾಕ್ ಡೌನ್ ಮಾಡುವ ಉದ್ದೇಶ ಸರ್ಕಾರದ ಮುಂದಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

1sudhakar

ಓಮಿಕ್ರಾನ್ ಸೋಂಕಿನ ಕುರಿತು ಆತಂಕ ಬೇಡ: ಸಚಿವ ಡಾ.ಕೆ.ಸುಧಾಕರ್

ಗಾಬರಿ ಬೇಡ; ಎಚ್ಚರವಿರಲಿ; ಒಮಿಕ್ರಾನ್‌ ಬಗ್ಗೆ ರಾಜ್ಯ ಸರಕಾರ ಅಭಯ

ಗಾಬರಿ ಬೇಡ; ಎಚ್ಚರವಿರಲಿ; ಒಮಿಕ್ರಾನ್‌ ಬಗ್ಗೆ ರಾಜ್ಯ ಸರಕಾರ ಅಭಯ

ಒಮಿಕ್ರಾನ್‌ ಆತಂಕ: ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ

ಒಮಿಕ್ರಾನ್‌ ಆತಂಕ: ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ: ಡಾ.ಕೆ.ಸುಧಾಕರ್‌

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ: ಡಾ.ಕೆ.ಸುಧಾಕರ್‌

MUST WATCH

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

ಹೊಸ ಸೇರ್ಪಡೆ

13work

ಕಾಮಗಾರಿ ಪರಿಶೀಲಿಸಿದ ಮಡೋಳಪ್ಪ

ಕಡಲೆಕಾಯಿ ಪರಿಷೆ

ಮೂರು ದಿನಗಳ ಕಾಲ ನಡೆಯುವ ಕಡಲೆಕಾಯಿ ಪರಿಷೆ

12ishwarappa

ನೆಲೆ ಕಳೆದುಕೊಳ್ಳುತ್ತಿದೆ ಕಾಂಗ್ರೆಸ್‌

Untitled-2

ವಿಟ್ಲ : ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಮಾರ್ಗ ವಿರೋಧಿಸಿ ಬೃಹತ್ ಪ್ರತಿಭಟನೆ

ಹುಬ್ಬಳ್ಳಿ: ಸಿದ್ಧಾರೂಢಸ್ವಾಮಿ ಮಠದ ಹೊಂಡದಲ್ಲಿ ಮುಳುಗಿ ಯುವಕ ಸಾವು

ಹುಬ್ಬಳ್ಳಿ: ಸಿದ್ಧಾರೂಢಸ್ವಾಮಿ ಮಠದ ಹೊಂಡದಲ್ಲಿ ಮುಳುಗಿ ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.