ವುಹಾನ್ ಪಿ-4 ಲ್ಯಾಬ್‌ನ ಒಳಾಂಗಣ ಚಿತ್ರಗಳು ಔಟ್
Team Udayavani, Jul 12, 2020, 5:05 PM IST
ಬೀಜಿಂಗ್: ಕೋವಿಡ್-19 ವೈರಸ್ ಹುಟ್ಟಿಗೆ ಕಾರಣವಾಗಿ, ಅಮೆರಿಕ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿರುವ ಚೀನ ಕೊನೆಗೂ ವುಹಾನ್ ಲ್ಯಾಬ್‌ನ ಕೆಲವೇ ಚಿತ್ರಗಳನ್ನು ಬಿಡುಗಡೆ ಮಾಡಿದೆ.
ಕೋವಿಡ್ ವೈರಸ್ ಸೃಷ್ಟಿಸಲಾಗಿದೆ ಎಂದು ಹೇಳಲಾದ ವುಹಾನ್ ಲ್ಯಾಬ್ ಚಿತ್ರಗಳನ್ನು ಚೀನ ಸರಕಾರದ ವಾಹಿನಿ ಸಿಸಿಟಿವಿ ಬಿಡುಗಡೆ ಮಾಡಿದೆ.
ವುಹಾನ್‌ನ ಪಿ-4 ಲ್ಯಾಬ್‌ನ ಸಂಕ್ಷಿಪ್ತ ಮಾಹಿತಿಯನ್ನು ಅಂತಾರಾಷ್ಟಿ¤àಯ ಮಾಧ್ಯಮ ಸಿಸಿಟಿವಿ ವಾಹಿನಿ ನೀಡಿದೆ. ಆದರೆ ಲ್ಯಾಬ್‌ನಲ್ಲಿ ಯಾವೆಲ್ಲಾ ಚಟುವಟಿಕೆಗಳು ನಡೆಯುತ್ತಿವೆ ಎಂಬುದರ ಬಗ್ಗೆ ಮಾತ್ರ ಚೀನ ಸರಕಾರ ಮೌನವಾಗಿದೆ.
2017ರಲ್ಲಿ ಈ ಲ್ಯಾಬ್ ಆರಂಭಗೊಂಡಿದ್ದು, ಅಂದಿನಿಂದಲೇ ಇಲ್ಲಿ ಅತಿ ಭಯಾನಕವಾದ ಕ್ಲಾಸ್-4 ವೈರಾಣುಗಳನ್ನು ತಯಾರಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಕೋವಿಡ್-19 ವೈರಸ್ ಹುಟ್ಟಿಗೆ ಕಾರಣಗಳನ್ನು ಅಧ್ಯಯನ ಮಾಡಲು ವಿಶ್ವ ಆರೋಗ್ಯ ಸಂಸ್ಥೆಯ ಎರಡು ತಂಡಗಳು ಈಗಾಗಲೇ ರಾಜಧಾನಿ ಬೀಜಿಂಗ್‌ಗೆ ತೆರಳಿದ್ದು, ಮುಂದಿನ ಎರಡು ದಿನಗಳ ಕಾಲ ವೈರಸ್ ಹರಡುವಿಕೆಯ ಬಗ್ಗೆ ಸಂಶೋಧನೆ ನಡೆಯಲಿದೆ.
ಪ್ರಾಣಿಯಿಂದ ಮಾನವರಿಗೆ ಸೋಂಕು ಹೇಗೆ ಹರಡಿತು ಎಂಬುದರ ಕುರಿತಾಗಿ ವೈದ್ಯಕೀಯ ತಜ್ಞರು ಹಾಗೂ ಸಾಂಕ್ರಾಮಿಕ ರೋಗ ತಜ್ಞರು ಅಧ್ಯಯನ ನಡೆಸಲಿದ್ದಾರೆ.
ಮೇ ತಿಂಗಳಲ್ಲಿ ನಡೆದ ವಿಶ್ವ ಆರೋಗ್ಯ ಸಂಸ್ಥೆಯ ಸಭೆಯಲ್ಲಿ ವಿಶ್ವದ 120 ರಾಷ್ಟ್ರಗಳು, ವೈರಸ್ ಹುಟ್ಟಿನ ಮೂಲವನ್ನು ಶೋಧಿಸಬೇಕೆಂದು ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ