ಗಣೇಶ ಚರ್ತುರ್ಥಿಗೆ ಮಂಗಳೂರಿನಲ್ಲಿ ಭರದ ಸಿದ್ಧತೆ

Team Udayavani, Aug 31, 2019, 8:34 PM IST

ಮಂಗಳೂರು: ಗಣೇಶ ಚತುರ್ಥಿಗೆ ಇನ್ನೊಂದು ದಿನ ಬಾಕಿ ಇದ್ದು ನಗರದಾದ್ಯಂತ ವಿಶೇಷ ಸಿದ್ಧತೆಗಳು ಆರಂಭವಾಗಿವೆ.

ದೇವಸ್ಥಾನ, ಕೆಲವೊಂದು ಸಂಘ-ಸಂಸ್ಥೆಗಳು, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳೂ ಬಿರುಸಿನ ತಯಾರಿಯಲ್ಲಿ ತೊಡಗಿವೆ. ಪ್ಲಾಸ್ಟರ್‌ಆಫ್‌ ಪ್ಯಾರಿಸ್‌ ಗಣಪನ ಮೂರ್ತಿ ಆರಾಧನೆ ಮಾಡಬಾರದು ಎಂಬ ನಿಯಮ ಇರುವುದರಿಂದ ಎಲ್ಲೆಡೆ ಪರಿಸರಸ್ನೇಹಿ ಗಣಪನಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಗಣೇಶ ಚತುರ್ಥಿ ಹಿನ್ನಲೆಯಲ್ಲಿ ತರಕಾರಿ, ಹಣ್ಣು ಹಂಪಲುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಸ್ಥಳೀಯವಾಗಿಯಲ್ಲದೆ, ಮಂಡ್ಯ, ಬೆಂಗಳೂರು, ಹುಬ್ಬಳ್ಳಿ, ಉತ್ತರ ಕರ್ನಾಟಕ ಭಾಗದಿಂದ ಹೂವು, ಹಣ್ಣು, ತರಕಾರಿಗಳು ನಗರಕ್ಕೆ ಬಂದಿದೆ.

ಗೌರಿ ಹಬ್ಬ
ದ.ಕ. ಜಿಲ್ಲೆಯಲ್ಲಿ ಗೌರಿ ಹಬ್ಬಕ್ಕೆ ಹೆಚ್ಚು ಪ್ರಾಮುಖ್ಯತೆ ಇಲ್ಲದೆ ಇದ್ದರೂ ಕೆಲವೆಡೆ ಗೌರಿ ಹಬ್ಬಕ್ಕೆ ಸಿದ್ಧತೆಗಳು ನಡೆದಿದೆ. ಹೆಂಗಳೆಯರ ನೆಚ್ಚಿನ ಹಬ್ಬ ಗೌರಿಹಬ್ಬಕ್ಕಾಗಿ ಮನೆಗಳಲ್ಲಿ ತಯಾರಿ ಜೋರಾಗಿದೆ. ಇದಕ್ಕಾಗಿ ಕಂಕನಾಡಿ, ಬಿಜೈ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ ಮುಂಭಾಗ, ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್‌ ಮುಂತಾದೆಡೆ ಹೂವು ಮಾರಾಟಗಾರರು ಉತ್ತರ ಕನ್ನಡ ಭಾಗಗಳಿಂದ ಆಗಮಿ ಸಿದ್ದು, ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ