ಸಿನಿಮಾ ಮಂದಿಗೆ ಪ್ರೇಕ್ಷಕರದ್ದೇ ಭಯ!

Team Udayavani, Jun 7, 2020, 4:16 AM IST

prekshaka

ಚಿತ್ರರಂಗ ಈಗ ಮೊದಲಿನಂತಿಲ್ಲ. ಮೊದ ಮೊದಲು ಸಿನಿಮಾಗಳು ತೆರೆಕಂಡರೂ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿತ್ತು. ಯಾವ ಸಿನಿಮಾಗಳೇ ಬಿಡುಗಡೆಯಾದರೂ ಅಲ್ಲಿ ಮೊದಲ ಪ್ರದರ್ಶನಕ್ಕೇ ಪ್ರೇಕ್ಷಕರ ಅನುಪಸ್ಥಿತಿ ಕಾಡುತ್ತಿತ್ತು. ನಂತರದ ಪ್ರದರ್ಶನಕ್ಕಾದರೂ ಜನ ಬರುತ್ತಾರೆ ಎಂಬ ಆಶಾಭಾವನೆ ಇಟ್ಟುಕೊಂಡರೂ ಜನ ಅಪ್ಪಿ ತಪ್ಪಿಯೂ ಚಿತ್ರಮಂದಿರಗಳತ್ತ ಮುಖ ಮಾಡುತ್ತಿರಲಿಲ್ಲ. ಕೆಲವೇ ಕೆಲವು ಸ್ಟಾರ್ಸ್ ನಟರ ಚಿತ್ರಗಳಿಗೆ ಮಾತ್ರ ಚಿತ್ರಮಂದಿರಗಳಲ್ಲಿ ಜನಜಾತ್ರೆ ಆಗುತ್ತಿತ್ತು. ಹೊಸಬರ ಸಿನಿಮಾಗಳಿಗಂತೂ ಅಂತಹ ಓಪನಿಂಗ್ ಸಿಗುತ್ತಲೇ ಇರಲಿಲ್ಲ.

ಈಗ ಕೋವಿಡ್‌ 19 ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆಯ ನಂತರ ಚಿತ್ತರಂಗದ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ ಎಂಬುದನ್ನು ಎಲ್ಲರೂ ಒಪ್ಪಲೇಬೇಕು. ಹೌದು, ಲಾಕ್ ಡೌನ್ ಪರಿಣಾಮ ಎಲ್ಲರ ಬದುಕು ಚೆಲ್ಲಾಪಿಲ್ಲಿಯಾಗಿದೆ. ಈ ನಿಟ್ಟಿನಲ್ಲಿ ಮೆಲ್ಲನೆ ಲಾಕ್ ಡೌನ್ ಸಡಿಲಿಕೆಯಾಗಿದೆ. ಸದ್ಯಕ್ಕೆ ಚಿತ್ರೋದ್ಯಮ ಉಸಿರಾಡುವಂತಾಗಿದೆ. ಹಾಗಂತ, ಚಿತ್ರೀಕರಣಕ್ಕೆ ಅವಕಾಶ ಸಿಕ್ಕಿಲ್ಲ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಅವಕಾಶ ಸಿಕ್ಕಿದೆ. ಇದೊಂದು ರೀತಿಯ ಸಮಾಧಾನದ ವಿಷಯ. ಆದರೆ, ನಿರ್ಮಾಪಕರೂ ಸೇರಿದಂತೆ ಸಿನಿಮಾ ಮಂದಿಗೆ ಈಗ ಭಯ ಕಾಡುತ್ತಿರುವುದಂತೂ ನಿಜ. ಅದಕ್ಕೆ ಕಾರಣ, ಮತ್ತದೇ ಕೋವಿಡ್‌ 19.

ಸಿನಿಮಾ ಚಿತ್ರೀಕರಣದ ಜೊತೆಯಲ್ಲಿ ಚಿತ್ರಮಂದಿರಗಳಿಗೂ ಅನುಮತಿ ಕೊಟ್ಟರೆ, ಶೂಟಿಂಗ್ ತನ್ನ ಪಾಡಿಗೆ ತಾನು ನಡೆಯುತ್ತದೆ. ಸರ್ಕಾರ ಸೂಚಿಸುವ ಮಾರ್ಗಸೂಚಿ ಪ್ರಕಾರ, ಈಗಾಗಲೇ ಪೆಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಿವೆ. ಹಾಗೇಯೇ, ಚಿತ್ರೀಕರಣ ನಡೆಸಲು ಅನುಮತಿ ಸಿಕ್ಕರೂ ಸಾಮಾಜಿಕ ಅಂತೆ ಕಾಪಾಡಿಕೊಂಡು ಕೆಲಸ ಮಾಡುವ ಯೋಚನೆಯಲ್ಲೂ ಸಿನಿಮಾ ಮಂದಿ ಇದ್ದಾರೆ. ಆದರೆ ಸಿನಿಮಾ ಮಂದಿಗೆ ಇರುವ ಭಯ ಅಂದರೆ, ಚಿತ್ರಮಂದಿರಗಳಿಗೆ ತೆರೆಯುವ ಅವಕಾಶ ಬಂದರೆ, ಸಿನಿಮಾ ನೋಡಲು ಪ್ರೇಕ್ಷಕರು ಬರುತ್ತಾರ? ಎಂಬ ಭಯ ಅವರನ್ನು ಕಾಡುತ್ತಿದೆ.

ಕೋವಿಡ್‌ 19 ಸೋಂಕು ಅಂಥದ್ದೊಂದು ಭಯ ಹುಟ್ಟಿಸಿದೆ. ಹಿಂದೆ ಒಳ್ಳೊಳ್ಳೆಯ ಸಿನಿಮಾಗಳು ಬಿಡುಗಡೆ ಕಂಡರೂ ಚಿತ್ರಮಂದಿರಗಳಿಗೆ ಬರುವ ಜನರ ಸಂಖ್ಯೆ ಕಡಿಮೆ ಇತ್ತು. ಈಗ ಇಂತಹ ಸಮಯದಲ್ಲಿ ಜನರು ಚಿತ್ರಮಂದಿರಗಳಿಗೆ ಧೈರ್ಯವಾಗಿ ಬರುತ್ತಾರಾ ಎಂಬ ಆತಂಕ ಮನೆಮಾಡಿದೆ. ಕೋಟಿಗಟ್ಟಲೆ ಹಣ ಹಾಕಿ ನಿರ್ಮಾಣ ಮಾಡಿರುವ ನಿರ್ಮಾಪಕರು, ಜನರಿಗಾಗಿಯೇ ಸಿನಿಮಾ ಮಾಡಿದ್ದಾರೆ. ಈಗ ಚಿತ್ರಮಂದಿರಗಳಲ್ಲಿ ಅವರೇ ಕಾಣದಿದ್ದರೆ ನಮ್ಮ ಗತಿ ಏನು ಎಂಬ ಗೊಂದಲದಲ್ಲಿದ್ದಾರೆ.

ಸ್ಟಾರ್ಸ್ ಸಿನಿಮಾಗಳು ಕೂಡ ಚಿತ್ರಮಂದಿರಗಳಿಗೆ ಬರಬೇಕಾ? ಬೇಡವಾ? ಎಂಬ ಪ್ರಶ್ನೆಯಲ್ಲಿವೆ. ಹೀಗಿರುವಾಗ, ಇನ್ನಿತರೆ ಹೊಸಬರ ಚಿತ್ರಗಳು ಪ್ರೇಕ್ಷಕರನ್ನೇ ನಂಬಿಕೊಂಡು ಬಿಡುಗಡೆಗೆ ಮುಂದಾದರೆ, ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂಬ ಸತ್ಯ ಅರಿತಿದ್ದಾರೆ. ಆದರೂ, ಈಗ ಅವರ ಮುಂದೆ ಉಳಿದಿರೋದು ಒಂದೇ ಪ್ರಶ್ನೆ, ಚಿತ್ರಮಂದಿರಗಳಲ್ಲಿ ನಮ್ಮ ಸಿನಿಮಾ ಬಿಡುಗಡೆ ಮಾಡಿದರೆ ಜನರು ಬರುತ್ತಾರಾ ಅನ್ನೋದು. ಕೆಲವು ನಿರ್ಮಾಪಕರುಗಳು ಈಗಾಗಲೇ ಬೇರೆ ಮಾರ್ಗ ಕಂಡುಕೊಡಿದ್ದಾರೆ. ಈಗಿರುವ ಪರಿಸ್ಥಿಯಲ್ಲಿ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೆ ಅವಕಾಶ ಮಾಡಿಕೊಟ್ಟರೂ, ಜನರು ಬಂದು ಕೂರುತ್ತಾರೆಬ ನಂಬಿಕೆ ಇಲ್ಲ.

ಹಾಗಾಗಿಯೇ, ಕೆಲವು ನಿರ್ಮಾಪಕರು ತಮ್ಮ ಚಿತ್ರಗಳನ್ನು ಒಟಿಟಿ ಫ್ಲಾಟ್ ಫಾರ್ಮ್ ನಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಚಿತ್ರಮಂದಿರ ನಂಬಿಕೊಂಡು ಅನೇಕ ಸಿನಿಮಾ ಮಂದಿ ಇದ್ದರೂ, ಇಂತಹ ಸಮಯದಲ್ಲಿ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದರೆ ಜನರು ಭಯ, ಭೀತಿ ಇಲ್ಲದೆ ಬಂದು ನೋಡುತ್ತಾರಾ ಎಂಬ ಸಣ್ಣದ್ದೊಂದು ಭಯ ಇದ್ದೇ ಇದೆ. ಅದೇನೆ ಇರಲಿ, ಕೋವಿಡ್‌ 19 ಸಾಕಷ್ಟು ಸಮಸ್ಯೆ ಹುಟ್ಟುಹಾಕಿದೆ. ಸರ್ಕಾರ ಚಿತ್ರೀಕರಣಕ್ಕೆ ಹಾಗೂ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೆ ಅವಕಾಶ ಮಾಡಿಕೊಟ್ಟರೂ, ಆ ದಿನಗಳು ಮರುಕಳಿಸುತ್ತವಾ ಎಂಬ ಪ್ರಶ್ನೆಯಂತೂ ಇದೆ.

ಲಾಕ್ ಡೌನ್ ಸಂಪೂರ್ಣ ಸಡಿಲಗೊಂಡು ಮೊದಲಿನಂತೆ, ಎಲ್ಲವೂ ನಡೆದರೆ ಚಂದನವನ ಚೆನ್ನಾಗಿರುತ್ತೆ. ಇಲ್ಲವಾದರೆ ಕಷ್ಟ ಕಟ್ಟಿಟ್ಟ ಬುತ್ತಿ.  ಮಾಹಿತಿ ಪ್ರಕಾರ ಸಿನಿಮಾರಂಗ ಚೇತರಿಕೆಗೆ ವರ್ಷವೇ ಬೇಕಿದೆ. ಅದರಲ್ಲೂ ಚಿತ್ರಮಂದಿರಗಳ ಪ್ರಾರಂಭ ಕೂಡ ಹೇಳುವಷ್ಟು ಸುಲಭವಲ್ಲ ಎಂಬ ಮಾತೂ ಕೇಳಿಬರುತ್ತಿದೆ. ಹಲವು ವರ್ಷಗಳಿಂದಲೂ ಚಿತ್ರರಂಗ ಒಂದಷ್ಟು ಸಮಸ್ಯೆ ಎದುರಿಸುತ್ತಲೇ ಬಂದಿದೆ.ಆ ಸಾಲಿಗೆ ಕೋವಿಡ್‌ 19 ಸಂಕಷ್ಟ ಇನ್ನಷ್ಟು ಚಿಂತೆಗೀಡು ಮಾಡಿರುವುದಂತೂ ನಿಜ.

ಈ ಬಣ್ಣದ ಬದುಕನ್ನೇ ನಂಬಿದವರ ಪಾಲಿಗೆ ಕೋವಿಡ್‌ 19 ಅಕ್ಷರಶಃ ಯಮಸ್ವರೂಪಿ. ಅದೇನೆ ಸಮಸ್ಯೆ ಇದ್ದರೂ, ಈ ಮನರಂಜನೆ ಕ್ಷೇತ್ರ ತಕ್ಕಮಟ್ಟಿಗೆ ಎಲ್ಲಾ ನೋವನ್ನು ಮರೆಸುತ್ತದೆ. ಆದರೆ ಈಗ ಈ ಮನರಂಜನಾ ಕ್ಷೇತ್ರಕ್ಕೇ ತಲೆನೋವಾಗಿದೆ. ಎಲ್ಲಾ ಸಮಸ್ಯೆಗು ಇರುವಂತೆ ಇದಕ್ಕೂ ಒಂದು ಪರಿಹಾರ ಇದ್ದೇ ಇರುತ್ತೆ. ಮುಂದಿನ ದಿನಗಳಲ್ಲಿ ಎಲ್ಲವೂ ಒಳ್ಳೆಯದಾಗುತ್ತೆ ಎಂಬ ಆಶಾಭಾವನೆಯಲ್ಲೇ ಸಿನಿಮಾ ಮಂದಿ ದಿನ ಸವೆಸುತ್ತಿದ್ದಾರೆ.

* ವಿಜಯ್ ಭರಮಸಾಗರ

ಟಾಪ್ ನ್ಯೂಸ್

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.