ಸಲೀಸಾಗಿ ಸದನ ಸವಾಲು ಗೆದ್ದ ಸಿಎಂ; ಪ್ರತಿಪಕ್ಷಗಳ ಸಹಕಾರವೇ ಶ್ರೀರಕ್ಷೆ

ನಾಯಕರಿಗೆ ತಕ್ಕ ಉತ್ತರ ನೀಡುವ ಪ್ರಯತ್ನ ನಡೆಸಿದ್ದಾರೆ.

Team Udayavani, Sep 25, 2021, 10:29 AM IST

ಸಲೀಸಾಗಿ ಸದನ ಸವಾಲು ಗೆದ್ದ ಸಿಎಂ; ಪ್ರತಿಪಕ್ಷಗಳ ಸಹಕಾರವೇ ಶ್ರೀರಕ್ಷೆ

ಬೆಂಗಳೂರು: ವಿಧಾನ ಮಂಡಲದ ಅಧಿವೇಶನವನ್ನು ಎದುರಿಸಿ ಯಶಸ್ವಿಯಾಗುವುದು ಪ್ರತಿಯೊಬ್ಬ ನಾಯಕರಿಗೂ ಸವಾಲಿನ ಕೆಲಸ. ಅನಿರೀಕ್ಷಿತವಾಗಿ ದೊರೆತ ಮುಖ್ಯಮಂತ್ರಿ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿ, ಹತ್ತು ದಿನಗಳ ಮೊದಲ ಅಧಿವೇಶನವನ್ನು ಸದ್ದುಗದ್ದಲವಿಲ್ಲದೇ ನಡೆಸಿ, ಪ್ರತಿಪಕ್ಷಗಳನ್ನು ನಿಭಾಯಿಸುವಲ್ಲಿ ಸಿಎಂ ಬಸವರಾಜ ಬೊಮ್ಮಾಯಿ  ಯಶಸ್ವಿಯಾಗಿದ್ದಾರೆ. ಈ ಮೂಲಕ ನಾಯಕತ್ವದ ಬಗ್ಗೆ ಬಿಜೆಪಿ ನಾಯಕರಿಗಿದ್ದ ಆತಂಕವನ್ನು ದೂರ ಮಾಡುವ ಪ್ರಯತ್ನ ಮಾಡಿದ್ದಾರೆ.

ದಾಖಲೆಗಳ ಮೂಲಕವೇ ಉತ್ತರ: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬೆಲೆ ಏರಿಕೆ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಮಾಡಿದ ಆರೋಪಗಳಿಗೆ ಇತಿಹಾಸದಲ್ಲಿನ ದಾಖಲೆಗಳ ಸಮೇತ ಉತ್ತರ ನೀಡಿದ್ದಾರೆ. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಆಗಿರುವ ಬೆಲೆ ಏರಿಕೆ, ಹಣದುಬ್ಬರ ಹೆಚ್ಚಳ, ಅಂತಾರಾಷ್ಟ್ರೀಯ ಮಟ್ಟದಲ್ಲಿನ ತೈಲ ಬೆಲೆ ಏರಿಕೆ, ಆಗಿನ ಸಂದರ್ಭದಲ್ಲಿ ಸರ್ಕಾರಗಳು ತೆಗೆದುಕೊಂಡ ನಿಲುವುಗಳನ್ನು ದಾಖಲೆ ಸಮೇತ ಕೊಟ್ಟು ಅವರನ್ನು ತಣ್ಣಗೆ ಕೂಡಿಸುವಲ್ಲಿ ಸಿಎಂ ಯಶಸ್ವಿಯಾಗಿದ್ದಾರೆ.

ಕಾವ್ಯಕ್ಕೆ ಕಾವ್ಯದ ಮೂಲಕವೇ ಉತ್ತರ: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬೆಲೆ ಏರಿಕೆಯ ವಿಷಯದ ಸಂದರ್ಭದಲ್ಲಿ ಕುಮಾರವ್ಯಾಸದ ಕಾವ್ಯದ ಮೂಲಕ ನಾಯಕನಾದವನು ಹೇಗಿರಬೇಕು ಎಂದು ಆರೋಪಿಸಿದ್ದರೆ, ಕುಮಾರವ್ಯಾಸನ ಕಾವ್ಯದ ಮೂಲಕವೇ ತಮ್ಮ ನಾಯಕತ್ವ ಹೇಗಿದೆ ಎನ್ನುವುದನ್ನು ಸಮರ್ಥಿಸಿಕೊಳ್ಳುವ ಮೂಲಕ ಪ್ರತಿಪಕ್ಷದ ನಾಯಕರಿಗೆ ತಕ್ಕ ಉತ್ತರ ಕೊಡಬಲ್ಲೆ ಎಂಬ ಸಂದೇಶ ರವಾನಿಸಿದರು.

ಸಚಿವರ ಬೆನ್ನಿಗೆ: ಪ್ರಶ್ನೋತ್ತರ ಕಲಾಪ, ನಿಲುವಳಿ ಸೂಚನೆ ಮೇಲಿನ ಉತ್ತರ, ವಿಧೇಯಕಗಳ ಮೇಲಿನ ಚರ್ಚೆಯ ಸಂದರ್ಭದಲ್ಲಿ ಸಂಬಂಧ ಪಟ್ಟ ಇಲಾಖೆಗಳ ಸಚಿವರು ಸಮರ್ಥವಾಗಿ ಉತ್ತರ ನೀಡಲು ಅಸಹಾಯಕರಾದ ಸಂದರ್ಭ ಎದುರಾದಾಗ ತಕ್ಷಣವೇ ಸಚಿವರ ಬೆನ್ನಿಗೆ ನಿಲ್ಲುವ ಮೂಲಕ ಸಿಎಂ ಬೊಮ್ಮಾಯಿ ಪ್ರತಿಪಕ್ಷಗಳ ಶಾಸಕರು ಹಾಗೂ ನಾಯಕರಿಗೆ ತಕ್ಕ ಉತ್ತರ ನೀಡುವ ಪ್ರಯತ್ನ ನಡೆಸಿದ್ದಾರೆ. ಧಾರ್ಮಿಕ ಕಟ್ಟಡಗಳ ಸಂರಕ್ಷಣೆಯನ್ನು ಮುಜರಾಯಿ
ಸಚಿವರ ಬದಲಾಗಿ ಸ್ವತಃ ತಾವೇ ಮಂಡನೆ ಮಾಡಿ, ಪ್ರತಿಪಕ್ಷ ಕಾಂಗೆಸ್‌ ಸದಸ್ಯರ ಆರೋಪಗಳಿಗೆ ತಕ್ಕ ಉತ್ತರ ನೀಡುವ ಮೂಲಕ ಅತ್ಯಂತ ಸೂಕ್ಷ್ಮ ವಿಧೇಯಕಕ್ಕೂ ಯಾವುದೇ ರೀತಿಯ ಗೊಂದಲ ಇಲ್ಲದಂತೆ ಅಂಗೀಕಾರ ಪಡೆದು ಜಾಣ್ಮೆ ಮೆರೆದಿದ್ದಾರೆ.

ಪ್ರತಿಪಕ್ಷಗಳ ಸಹಕಾರವೇ ಶ್ರೀರಕ್ಷೆ
ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ನಂತರ ಬಿಜೆಪಿಯಲ್ಲಿದ್ದ ಶಾಸಕರ ಅಸಮಾಧಾನ ಪ್ರಮಾಣ ತಣ್ಣಗಾದಂತೆ ಕಾಣಿಸುತ್ತಿದೆ. ತಮ್ಮ ಕ್ಷೇತ್ರಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಅನುದಾನ ದೊರೆಯದಿದ್ದರೂ, ಹದಿನೈದು ದಿನದಲ್ಲಿ ಎರಡು ಶಾಸಕಾಂಗ ಸಭೆಗಳನ್ನು ಕರೆದರೂ ಯಾರೂ ನಾಯಕತ್ವದ ವಿರುದ್ಧ ಬಹಿರಂಗವಾಗಿ ಮಾತನಾಡದೇ ಸಹಕಾರ ತೋರಿರುವುದೂ ಕೂಡ ಸಿಎಂ ಬೊಮ್ಮಾಯಿ ಅವರಿಗೆ ಶ್ರೀರಕ್ಷೆಯಾಗಿ ಪರಿಣಮಿಸಿತು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ನಾಯಕರ ಪರೋಕ್ಷ ಸಹಕಾರವೂ ಸಿಎಂಗೆ ವರವಾಗಿ ಪರಿಣಮಿಸಿದಂತೆ ಕಾಣಿಸುತ್ತದೆ. ಬಸವರಾಜ ಬೊಮ್ಮಾಯಿ ಅವರು ಆರ್‌ಎಸ್‌ಎಸ್‌ ಮೂಲದವರಾಗಿರದೇ ಜನತಾ ಪರಿವಾರದ ಮೂಲಕ ಸಮಾಜವಾದಿ ಚಿಂತನೆಯ ಹಿನ್ನೆಲೆಯಿಂದ ಬಂದವರಾಗಿರುವುದರಿಂದ ಹಾಗೂ ಮಾಜಿ ಸಿಎಂ ಎಸ್‌.ಆರ್‌. ಬೊಮ್ಮಾಯಿ ಅವರ ಪುತ್ರರಾಗಿದ್ದಾರೆ ಎನ್ನುವ ಕಾರಣಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸುಗಮ ಕಲಾಪ ನಡೆಯಲು ಸಹಕಾರ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಶಂಕರ ಪಾಗೋಜಿ

ಟಾಪ್ ನ್ಯೂಸ್

ಬಸವರಾಜ ಬೊಮ್ಮಾಯಿ

ನಮಗೆ ಜೆಡಿಎಸ್ ಮುಗಿಸುವ ಅಗತ್ಯವಿಲ್ಲ, ದೇವೇಗೌಡರ ಹೇಳಿಕೆ ಸರಿಯಲ್ಲ: ಸಿಎಂ ಬೊಮ್ಮಾಯಿ

ಸಿಲೆಬಸ್ ಕಡಿತದ ಯೋಚನೆಯಿಲ್ಲ, ರಜೆದಿನ ಬಳಸಿ ಪಾಠ ಮಾಡುತ್ತೇವೆ: ಸಚಿವ ಬಿ.ಸಿ.ನಾಗೇಶ್

ಸಿಲೆಬಸ್ ಕಡಿತದ ಯೋಚನೆಯಿಲ್ಲ, ರಜೆದಿನ ಬಳಸಿ ಪಾಠ ಮಾಡುತ್ತೇವೆ: ಸಚಿವ ಬಿ.ಸಿ.ನಾಗೇಶ್

51

ಪಾಕ್ ವಿರುದ್ಧ ಸೋಲಿನ ನಡುವೆಯೂ ಕ್ರೀಡಾ ಸ್ಫೂರ್ತಿ ಮೆರೆದ ಕೊಹ್ಲಿ, ಧೋನಿ

ತೆಲಂಗಾಣ ಗಡಿಯಲ್ಲಿ ಎನ್ ಕೌಂಟರ್: ಮೂವರು ನಕ್ಸಲರ್ ಹತ್ಯೆಗೈದ ಪೊಲೀಸರು

ತೆಲಂಗಾಣ ಗಡಿಯಲ್ಲಿ ಎನ್ ಕೌಂಟರ್: ಮೂವರು ನಕ್ಸಲರನ್ನು ಹತ್ಯೆಗೈದ ಪೊಲೀಸರು

ಬೆಳ್ಳಂಬೆಳ್ಳಗ್ಗೆ ದುರಂತ: ಬೈಕ್ ಗೆ ಟಿಪ್ಪರ್ ಢಿಕ್ಕಿಯಾಗಿ ತಾಯಿ – ಮಗು ಸಾವು

ಬೆಳ್ಳಂಬೆಳ್ಳಗ್ಗೆ ದುರಂತ: ಬೈಕ್ ಗೆ ಟಿಪ್ಪರ್ ಢಿಕ್ಕಿಯಾಗಿ ತಾಯಿ – ಮಗು ಸಾವು

meghana gaonkar

ಶಿವಾಜಿ ಸುರತ್ಕಲ್‌-2: ಮೇಘನಾ ಗಾಂವ್ಕರ್‌ ಎಂಟ್ರಿ

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 14,306 ಕೋವಿಡ್ ಪ್ರಕರಣ ಪತ್ತೆ, 443 ಮಂದಿ ಸಾವು

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 14,306 ಕೋವಿಡ್ ಪ್ರಕರಣ ಪತ್ತೆ, 443 ಮಂದಿ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳ್ಳಂಬೆಳ್ಳಗ್ಗೆ ದುರಂತ: ಬೈಕ್ ಗೆ ಟಿಪ್ಪರ್ ಢಿಕ್ಕಿಯಾಗಿ ತಾಯಿ – ಮಗು ಸಾವು

ಬೆಳ್ಳಂಬೆಳ್ಳಗ್ಗೆ ದುರಂತ: ಬೈಕ್ ಗೆ ಟಿಪ್ಪರ್ ಢಿಕ್ಕಿಯಾಗಿ ತಾಯಿ – ಮಗು ಸಾವು

breast cancer

ಪ್ರತಿ 4 ನಿಮಿಷಕ್ಕೆ ಓರ್ವ ಮಹಿಳೆಯಲ್ಲಿ ಸ್ತನ ಕ್ಯಾನ್ಸರ್‌

ಡ್ರೋನ್‌ ಪರೀಕ್ಷೆ

ಯಶಸ್ಸಿನ ಹಾದಿಯತ್ತ ದೇಸಿ ಡ್ರೋನ್‌ಗಳು

ಕ್ರಿಸ್‌ಮಸ್‌ ಕೇಕ್‌ ತಯಾರಿ

ಕ್ರಿಸ್‌ಮಸ್‌ ಕೇಕ್‌ ತಯಾರಿ

cracker

ಹೊರಬೀಳದ ಆದೇಶ, ಮುಗಿಯದ ಆತಂಕ

MUST WATCH

udayavani youtube

ಕಾಪು ಮತ್ತು ಕರಂದಾಡಿ ಶಾಲೆಯಲ್ಲಿ ಅದ್ದೂರಿಯ ಶಾಲಾ ಪ್ರಾರಂಭೋತ್ಸವ

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

ಹೊಸ ಸೇರ್ಪಡೆ

ಬಡವರ, ನಿರ್ಗತಿಕರ ನೊಂದವರ ಸೇವೆಯಲ್ಲಿ ಪ್ರತಿಯೊಬ್ಬರ ಸಹಕಾರ ಮುಖ್ಯ: ಸಂಗಮೇಶ ನಿರಾಣಿ

ಬಡವರ, ನಿರ್ಗತಿಕರ ನೊಂದವರ ಸೇವೆಯಲ್ಲಿ ಪ್ರತಿಯೊಬ್ಬರ ಸಹಕಾರ ಮುಖ್ಯ: ಸಂಗಮೇಶ ನಿರಾಣಿ

ಬಸವರಾಜ ಬೊಮ್ಮಾಯಿ

ನಮಗೆ ಜೆಡಿಎಸ್ ಮುಗಿಸುವ ಅಗತ್ಯವಿಲ್ಲ, ದೇವೇಗೌಡರ ಹೇಳಿಕೆ ಸರಿಯಲ್ಲ: ಸಿಎಂ ಬೊಮ್ಮಾಯಿ

ದಾಂಡೇಲಿ: ಲೆನಿನ್ ರಸ್ತೆಯಲ್ಲಿರುವ ಕಬ್ಬಿನ ಹಾಲಿನ ಅಂಗಡಿಯಲ್ಲಿ ಕಳ್ಳತನ

ದಾಂಡೇಲಿ: ಲೆನಿನ್ ರಸ್ತೆಯಲ್ಲಿರುವ ಕಬ್ಬಿನ ಹಾಲಿನ ಅಂಗಡಿಯಲ್ಲಿ ಕಳ್ಳತನ

15birthday

ಅದ್ದೂರಿ ಬರ್ತ್‌ಡೇ ನಿಷಿದ್ಧ

Cycle Jatha for World Folio Day

ಮಕ್ಕಳಿಗೆ ತಪ್ಪದೇ ಪೋಲಿಯೋ ಹನಿ ಹಾಕಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.