ತೆಂತಾ ಬಂತಾ?


Team Udayavani, May 25, 2020, 5:33 AM IST

tenta-banta

ತೆಂಗಿನ ನಾಡು ತುಮಕೂರಿಗೆ ತೆಂಗಿನ ತಾಜಾಎಣ್ಣೆಯ (ತೆಂತಾ ಎಣ್ಣೆ) ಪ್ರವೇಶವಾಗಿ ಒಂದು ದಶಕ ಕಳೆದಿದೆ. ಅದಕ್ಕೂ ಮುನ್ನ, ಮನೆಗೆ ಅಗತ್ಯವಿರುವಷ್ಟು ತೆಂಗಿನ ಎಣ್ಣೆಯನ್ನು ಕೆಲವರು ತೆಗೆಯುತ್ತಿದ್ದರು. ಆದರೆ, ಅದೊಂದು  ಗೃಹೋದ್ಯಮವಾಗಿ ಬೆಳೆದಿದ್ದು ಈ ದಶಕದಲ್ಲಿ. ತೆಂಗು ಬೆಳೆಗಾರರು, ಸಾವಯವ ಕೃಷಿಕರು, ಆಟೋ ಚಾಲಕರು, ಯುವಕರು, ಗೃಹಿಣಿಯರು ಈ ಉದ್ಯಮಕ್ಕೆ ಕೈಹಾಕಿದರು. ಈಗ, ಜಿಲ್ಲೆಯಾದ್ಯಂತ 15ಕ್ಕೂ ಹೆಚ್ಚು ಕುಟುಂಬ ಕೇಂದ್ರಿತ  ಉದ್ದಿಮೆಗಳಿವೆ. ವಾರ್ಷಿಕ, 10-15 ಸಾವಿರ ಲೀಟರ್‌ ತೆಂಗಿನೆಣ್ಣೆ ಉತ್ಪಾದನೆಯಾ ಗುತ್ತಿದೆ. ಈಗ ಇರುವ ಘಟಕಗಳೆಲ್ಲಾ, ಮನೆ ಅಥವಾ ತೋಟಗಳಲ್ಲೇ ಕಾರ್ಯ ನಿರ್ವಹಿಸುತ್ತಿವೆ.

500 ಲೀ. ತೆಂಗಿನೆಣ್ಣೆ: ತುರುವೇಕೆರೆ ತಾಲ್ಲೂಕು ಕೊಪ್ಪ ಗ್ರಾಮದ ನಾಗೇಶ್‌, 2009ರಲ್ಲಿ ಈ ಉದ್ಯಮಕ್ಕೆ ಕೈಹಾಕಿದರು. ತಿಂಗಳಿಗೆ 50 ಲೀಟರ್‌ನಿಂದ ಶುರುವಾದ ಈ ಉದ್ಯಮ, ಇದೀಗ 500  ಲೀಟರ್‌ ಮುಟ್ಟಿದೆ. ಪತ್ನಿ ಚಂದ್ರಕಲಾ ಹಾಗೂ  ಒಬ್ಬ ನೌಕರ, ಇಡೀ ಕೆಲಸ ನಿರ್ವಹಿಸುತ್ತಾರೆ. ದಿನಕ್ಕೆ 20 ಲೀಟರ್‌ ತೆಂಗಿನೆಣ್ಣೆ ಉತ್ಪಾದನೆಯಾಗುತ್ತದೆ. ಇದಕ್ಕೆ, ತಿಂಗಳಿಗೆ 8-10 ಸಾವಿರ ಕಾಯಿ ಬೇಕಾಗುತ್ತದೆ. 50-60 ಲೀಟರ್‌ ಎಣ್ಣೆ, ಸ್ಥಳೀಯವಾಗಿ ಮಾರಾಟವಾಗುತ್ತದೆ. ಉಳಿದಿದ್ದು ತುಮಕೂರು, ಬೆಂಗಳೂರು, ಹಾಸನ, ಮೈಸೂರುಗಳಿಗೆ ರವಾನೆಯಾಗುತ್ತದೆ. ಎಲ್ಲಾ ವೆಚ್ಚ ಕಳೆದು, ತಿಂಗಳಿಗೆ 50 ಸಾವಿರದವರೆಗೆ ಉಳಿಕೆ.

ನ್ನೊಂದು ಹೊಸ ಪ್ರಯತ್ನ: ತಿಪಟೂರಿನ ನಂಜುಂಡಯ್ಯ ಹಾಗೂ ಸ್ನೇಹಿತರು ಮಾಡಿರುವ ಪ್ರಯತ್ನ ಹೊಸತನದ್ದು. ಇವರು, ತಾಲೂಕಿನ ಮೂಗತಿಹಳ್ಳಿ ಹಾಗೂ ಕುಪ್ಪಾಳು ಗ್ರಾಮದಲ್ಲಿ ತೆಂತಾ ಜಾಬ್‌ ವರ್ಕ್‌ ಘಟಕ ಹಾಕಿದ್ದಾರೆ.  ಇಲ್ಲಿ, ಯಾರು ಬೇಕಾದರೂ ತೆಂಗಿನ ಕಾಯಿ ತಂದು ಎಣ್ಣೆ ತೆಗೆಸಿಕೊಂಡು ಹೋಗಬಹುದು. ಪ್ರತಿ ಘಟಕಕ್ಕೆ ರೂ. 2 ಲಕ್ಷ ವೆಚ್ಚವಾಗಿದೆ. ಎಣ್ಣೆ  ತೆಗೆದುಕೊಡಲು ರೂ. 60 ಚಾರ್ಜು ಮಾಡಲಾಗುತ್ತದೆ. ಮೈಸೂರು, ಕುಮಟಾ,  ಕುಂದಾಪುರದಿಂದಲೂ ಕಾಯಿಗಳನ್ನು ತಂದು, ಎಣ್ಣೆ ತೆಗೆಸಿಕೊಂಡು ಹೋಗುತ್ತಿದ್ದಾರೆ. ಜಾಬ್‌ ವರ್ಕ್‌ ಸ್ಥಾಪಿಸುವ  ಮೊದಲು, 2014ರಲ್ಲಿ ನಂಜುಂಡಯ್ಯನವರು 1460 ಕುಟುಂಬಗಳ ಎಣ್ಣೆ ಬೇಡಿಕೆ ಕುರಿತು ಸಮೀಕ್ಷೆ ನಡೆಸಿದ್ದರು. ಪ್ರತಿ  ಕುಟುಂಬವು ಅಡುಗೆಗೆ, ದೇವರ ದೀಪಕ್ಕೆ, ಸ್ನಾನ ಇತ್ಯಾದಿಗಳಿಗೆ ಒಂದು ವರ್ಷಕ್ಕೆ ಎಷ್ಟು ಎಣ್ಣೆ ವ್ಯಯಿಸುತ್ತಾರೆ ಎಂಬುದನ್ನು ತಿಳಿಯುವುದು ಇದರ ಉದ್ದೇಶ. ಇಷ್ಟು ಕುಟುಂಬಗಳಲ್ಲಿ, ಒಂದು ಕೋಟಿ ಮೊತ್ತದ ಎಣ್ಣೆ ಕೊಳ್ಳುತ್ತಾರೆಂಬುದು  ಸಮೀಕ್ಷೆಯಿಂದ ತಿಳಿದುಬಂದಿತ್ತು. ಮನೆಯಲ್ಲೇ ಎಣ್ಣೆ ತಯಾರಿಸಿಕೊಂಡರೆ, ಒಂದು ತಾಲೂಕಿನಲ್ಲೇ ಕೋಟ್ಯಂತರ ಮೊತ್ತ ಉಳಿಸಬಹುದು ಎಂಬ ಆಲೋಚನೆಯೊಂದಿಗೆ ಶುರುವಾಗಿದ್ದೇ, ತೆಂತಾ ಜಾಬ್‌ ವರ್ಕ್‌.

ಮಾರುಕಟ್ಟೆ ತಲುಪಿಲ್ಲ: ಇಷ್ಟೆಲ್ಲಾ ಉತ್ತಮ ಅಂಶಗಳಿದ್ದರೂ, ತೆಂತಾ ಎಣ್ಣೆ ಮುಖ್ಯವಾಹಿನಿ ಮಾರುಕಟ್ಟೆಯನ್ನು ತಲುಪಿಲ್ಲ. ಕಾರಣ ಹಲವು. ಏಳೆಂಟು ವರ್ಷಗಳಲ್ಲಿ ಅದರ ಬೆಲೆ ಎರಡು ಪಟ್ಟು ಹೆಚ್ಚಿದೆ (ರೂ. 250ರಿಂದ 500). ಬೇಡಿಕೆ ಕಡಿಮೆಯಾಗಲು ಗುಣಮಟ್ಟದ ಕೊರತೆಯೂ ಕಾರಣ ಎನ್ನುತ್ತಾರೆ ತುಮಕೂರಿನ ಗಂಗಾಧರಮೂರ್ತಿ. ಗುಣಮಟ್ಟ ವ್ಯತ್ಯಾಸಕ್ಕೆ ಪ್ರಮುಖ ಕಾರಣ, ಹೆಂಚಿನ ಮೇಲೆ ಹುರಿಯುವ ಪ್ರಕ್ರಿಯೆ. ಸ್ವಲ್ಪ ಉರಿ ಹೆಚ್ಚಾದರೂ ತೆಂಗಿನ ತುರಿ ಸೀದುಹೋಗುತ್ತದೆ. ಹೀಗಾದಾಗ,  ಎಣ್ಣೆಯ ಪರಿಮಳ ಹಾಳು. ಹೀಗೆ ಆದಾಗ ಎಣ್ಣೆ ಬೇಗ ಕೆಡುವ ಸಾಧ್ಯತೆ ಹೆಚ್ಚು.

ಉದ್ದಿಮೆ ಆಗಿಸಲು ಸಕಾಲ: ಒಂದುಕಡೆ ನೀರಿನ ಕೊರತೆಯಿಂದ ತೆಂಗಿನ ತೋಟಗಳು ಒಣಗುತ್ತಿವೆ. ಇರುವ ತೋಟಗಳಿಗೂ ಹಲವು ರೋಗಗಳು. ಮತ್ತೂಂದು ಕಡೆ, ಅಡುಗೆ ಎಣ್ಣೆಯಲ್ಲಿ ಕಲಬೆರಕೆಯಾಗಿ ಆರೋಗ್ಯಕ್ಕೆ ಮಾರಕ ಪರಿಣಾಮ ಬೀರುತ್ತಿದೆ. ಈ ಎರಡೂ ಸಮಸ್ಯೆಗಳಿಗೆ ಉತ್ತರವಾಗಿ, ತೆಂತಾಎಣ್ಣೆ ಉದ್ದಿಮೆ ಬೆಳೆಸಬಹುದು. ರೈತರು, ತೆಂಗು ಅಭಿವೃದಿ ಮಂಡಳಿ, ತೋಟಗಾರಿಕೆ ಇಲಾಖೆ, ತೆಂಗು ಉತ್ಪಾದಕರ ಕಂಪನಿಗಳು ಒಟ್ಟಿಗೆ ಕುಳಿತು ಚರ್ಚಿಸಲು ಇದು ಸಕಾಲ.

* ಮಲ್ಲಿಕಾರ್ಜುನ ಹೊಸಪಾಳ್ಯ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.