
AI News: ಎಐ ಸಹಾಯದಿಂದ ಕೋಲಾ ವಿನ್ಯಾಸ
Team Udayavani, Sep 17, 2023, 12:40 AM IST

ಕೊಕಾ-ಕೋಲಾ ಕಂಪೆನಿಯು ಕೃತಕ ಬುದ್ಧಿಮತ್ತೆ (ಎಐ)ಯ ಸಹಾಯದೊಂದಿಗೆ, ಮಾನವರಿಂದ ತಯಾರಿಸಲಾದ ಲಿಮಿಟೆಡ್ ಎಡಿಶನ್ ಪ್ಲೇವರ್ “ವೈ3000” ಪಾನೀಯವನ್ನು ಪರಿಚಯಿಸಿದೆ. ಎಐ ವಿನ್ಯಾಸದ ಸ್ಲಿಮ್ ಕ್ಯಾನ್‌ನಲ್ಲಿ ಹೊಸ ಬಗೆಯ ಪಾನೀಯ ಲಭ್ಯವಿದೆ.
ಇದಕ್ಕೆ ಬಳಸಲಾದ ಸುವಾಸನೆಯನ್ನು ಕೃತಕ ಬುದ್ಧಿಮತ್ತೆ ಸಹಾಯದಿಂದ ತಯಾರಿಸಲಾಗಿದೆ. ಅಲ್ಲದೇ ವಿವಿಧ ಬಣ್ಣಗಳನ್ನು ಬಳಸಿಕೊಂಡು ಇದರ ಪ್ಯಾಕಿಂಗ್(ಕ್ಯಾನ್) ವಿನ್ಯಾಸವನ್ನು ಕೂಡ ಎಐನಿಂದಲೇ ಮಾಡಲಾಗಿದೆ. ಕೊಕಾ-ಕೋಲಾ “ವೈ3000′ ಪಾನೀಯ ರೆಗ್ಯುಲರ್ ಮತ್ತು ಜಿರೋ-ಶುಗರ್ ಎಂಬ ಎರಡು ಬಗೆಯಲ್ಲಿ ಗ್ರಾಹಕರಿಗೆ ದೊರೆಯಲಿದೆ. ಆದರೆ ಸದ್ಯ ಭಾರತದಲ್ಲಿ ಇದರ ಮಾರಾಟ ಇಲ್ಲ ಎಂದು ಕಂಪೆನಿ ತಿಳಿಸಿದೆ.
ಟಾಪ್ ನ್ಯೂಸ್
