ಕಿರುತೆರೆ ನಟಿ ಶ್ವೇತಾ ತಿವಾರಿ ವಿರುದ್ಧ ಎಫ್ಐಆರ್ ದಾಖಲು
Team Udayavani, Jan 28, 2022, 10:30 PM IST
ಭೋಪಾಲ್: ನಟಿ ಶ್ವೇತಾ ತಿವಾರಿ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. “ದೇವರೇ ನನ್ನ ಬ್ರಾ ಸೈಜ್ ನಿರ್ಧರಿಸುತ್ತಾನೆ’ ಎಂದು ಹೇಳಿರುವ ಅವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ನಟಿ ತಾವು ನಟಿಸಿರುವ “ಶೋ ಸ್ಟಾಪರ್’ ವೆಬ್ ಸೀರಿಸ್ ಪ್ರಚಾರದ ವೇಳೆ, ಈ ಹೇಳಿಕೆ ಕೊಟ್ಟಿದ್ದರು. ಮಹಾಭಾರತ ಧಾರಾವಾಹಿಯಲ್ಲಿ ಕೃಷ್ಣನ ಪಾತ್ರದಲ್ಲಿದ್ದ ಸೌರಭ್ ರಾಜ್ ಈ ಸೀರಿಸ್‌ನಲ್ಲಿ ಬ್ರಾ ಫಿಟ್ಟರ್ ಕೆಲಸ ಮಾಡುವವರಾಗಿ ಕಾಣಿಸಿಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ನಟಿ, ಸೌರಭ್ ಉದ್ದೇಶಿಸಿ, “ದೇವರಿಂದ ಸೀದಾ ಬ್ರಾ ಫಿಟ್ಟರ್ ಆಗಿದ್ದಾನೆ. ನನ್ನ ಬ್ರಾ ಸೈಜ್ ದೇವರೇ ನಿರ್ಧರಿಸುತ್ತಾರೆ’ ಎಂದಿದ್ದರು. ಇದು ಅನೇಕರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಬಗ್ಗೆ ಸೋನು ಪ್ರಜಾಪತಿ ಎಂಬವರು ದೂರು ನೀಡಿದ್ದು, ಶುಕ್ರವಾರ ಪ್ರಕರಣ ದಾಖಲಾಗಿದೆ.
ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರಾ ಅವರು ಈ ಹೇಳಿಕೆ ಬಗ್ಗೆ ತನಿಖೆ ನಡೆಸಿ, ವರದಿ ಒಪ್ಪಿಸಲು ಪೊಲೀಸರಿಗೆ ಆದೇಶಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಾಸಿಗೆಗಾಗಿ ಆನೆಯ ಕಿತ್ತಾಟ -ವಿಡಿಯೋ ವೈರಲ್
ಮತ್ತೆ ಆರೆಂಜ್ ಅಲರ್ಟ್; ಎರ್ನಾಕುಳಂ, ಇಡುಕ್ಕಿ ಸೇರಿ 8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ
ರಾಮ ಮಂದಿರ ಅಡಿಪಾಯ ಆಗಸ್ಟ್ಗೆ ಸಂಪೂರ್ಣ : ಫೆಬ್ರವರಿಯಲ್ಲಿ ಆರಂಭವಾಗಿದ್ದ ಕಾಮಗಾರಿ
ಪತ್ನಿಗೆ ಸೀರೆ ಉಡಲು ಬರುವುದಿಲ್ಲ: ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ !
ಮುಸ್ಲಿಮರ ವಿರುದ್ಧ ದ್ವೇಷ ಭಾಷಣ: ಜಿತೇಂದ್ರ ತ್ಯಾಗಿಗೆ ಜಾಮೀನು