ಅಶಿಸ್ತು: ಜರ್ಮನ್ ಆಟಗಾರ ಅಲೆಕ್ಸಾಂಡರ್ ಜ್ವೆರೇವ್ಗೆ 8 ವಾರ ನಿಷೇಧ
Team Udayavani, Mar 9, 2022, 5:30 AM IST
ಅಕಪುಲ್ಕೊ: ಕಳೆದ ತಿಂಗಳ “ಅಕಪುಲ್ಕೊ ಎಟಿಪಿ 500′ ಟೆನಿಸ್ ಪಂದ್ಯಾವಳಿಯ ವೇಳೆ ಅಶಿಸ್ತಿನಿಂದ ಹಾಗೂ ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ನಡೆದು ಕೊಂಡ ಜರ್ಮನ್ ಆಟಗಾರ ಅಲೆಕ್ಸಾಂಡರ್ ಜ್ವೆರೇವ್ ಅವರಿಗೆ ಎಟಿಪಿ 8 ವಾರಗಳ ನಿಷೇಧ ಹೇರಿದೆ.
ಕೂಟದ ಪಂದ್ಯವೊಂದರ ವೇಳೆ ಜ್ವೆರೇವ್ ಚೇರ್ ಅಂಪಾಯರ್ ಅವರತ್ತ ರ್ಯಾಕೆಟ್ ಎಸೆಯುವುದರ ಜತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.
ಈ ಅಶಿಸ್ತಿನ ವರ್ತನೆಗಾಗಿ ಜ್ವೆರೇವ್ ಭಾರೀ ದಂಡ ತೆರುವಂತಾಗಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕಾಗಿ 20 ಸಾವಿರ ಡಾಲರ್, ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ವರ್ತಿಸಿದ್ದಕ್ಕೆ 20 ಸಾವಿರ ಡಾಲರ್ ಹಾಗೂ ಪಂದ್ಯದ ಸಂಭಾವನೆಯ 31 ಸಾವಿರ ಡಾಲರ್ ಮೊತ್ತವನ್ನು ಅವರು ದಂಡದ ರೂಪದಲ್ಲಿ ತೆರಬೇಕಾಗಿದೆ. ಜತೆಗೆ ಕೂಟದ ಎಲ್ಲ ರ್ಯಾಂಕಿಂಗ್ ಅಂಕಗಳನ್ನೂ ಕಳೆದುಕೊಂಡಿದ್ದಾರೆ.