Udayavni Special

ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಿಲ್ಲ: ಬಿಎಸ್‌ವೈ


Team Udayavani, Nov 4, 2019, 8:21 PM IST

BSY-545-A

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಇರುವವರೆಗೂ ಆ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಸೋಮವಾರ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಇರುವವರೆಗೂ ಆ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಕಾಯಂ ಆಗಿ ಪ್ರತಿಪಕ್ಷದ ಸ್ಥಾನ ಸಿಗಲಿದೆ. ಇನ್ನೂ ಮೂರೂವರೆ ವರ್ಷ ಪ್ರತಿಪಕ್ಷ ಸ್ಥಾನದಲ್ಲಿ ಕೂರಬೇಕಾಗುತ್ತದೆ ಎಂದು ಹತಾಶೆಯಿಂದ ಸಿದ್ದರಾಮಯ್ಯ ಮನಬಂದಂತೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

ಬಿಜೆಪಿ ವಿರುದ್ಧ ಪಕ್ಷದ ವಿರುದ್ಧ ಅಪಪ್ರಚಾರ ಮಾಡುವ ಬದಲು ತಾಕತ್ತಿದ್ದರೆ ಉಪಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದು ತೋರಿಸಿ ಎಂದು ಪ್ರತಿಪಕ್ಷಗಳಿಗೆ ಸವಾಲು ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ, ನೀವು ಏನೇ ಆರೋಪ ಮಾಡಿದರೂ ಜನರು ನಿಮ್ಮ ಸುಳ್ಳುಗಳನ್ನು ನಂಬುವುದಿಲ್ಲ ಎಂದರು.

ಅಧಿಕಾರ ಕಳೆದುಕೊಂಡು ಹತಾಶರಾಗಿರುವ ಕಾಂಗ್ರೆಸ್‌ ನಾಯಕರು ಮನಬಂದಂತೆ ಮಾತನಾಡುತ್ತಿದ್ದಾರೆ. ಇಂತಹ ಅಪಪ್ರಚಾರ ಮಾಡುವ ಬದಲು ಉಪಚುನಾವಣೆಯ ಅಖಾಡಕ್ಕೆ ಬನ್ನಿ. ನಿಮ್ಮ ಯೋಗ್ಯತೆ ಏನೆಂಬುದು ಗೊತ್ತಾಗುತ್ತದೆ ಎಂದು ವಾಗ್ಧಾಳಿ ನಡೆಸಿದರು.

ಸಿದ್ದರಾಮಯ್ಯ ಅವರ ನಾಯಕತ್ವದಲ್ಲೇ ಕಾಂಗ್ರೆಸ್‌ ಪಕ್ಷ ಲೋಕಸಭಾ ಚುನಾವಣೆ ಎದುರಿಸಿದೆ. ಅವರ ಯೋಗ್ಯತೆಗೆ ಒಂದು ಸ್ಥಾನ ಗೆದ್ದಿದ್ದಾರೆ. ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕಿತ್ತು. ಆದರೆ, ಕಾಂಗ್ರೆಸ್‌ ನಿಮ್ಮನ್ನು ಹೇಗೆ ಪ್ರತಿಪಕ್ಷದ ನಾಯಕನಾಗಿ ಮಾಡಿದೇ ಎಂಬುದು ಗೊತ್ತಿಲ್ಲ. ಕಾಂಗ್ರೆಸ್‌ಗೆ ಕೊನೆ ಮೊಳೆ ಹೊಡೆಯುವುದು ನೀವೇ ಎಂದು ಹೇಳಿದರು.

ಅನರ್ಹ ಶಾಸಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಅವರು ತಮ್ಮದೇ ಆದ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇದನ್ನು ಸುಪ್ರೀಂ ಕೋರ್ಟ್‌ ಗಮನಕ್ಕೂ ತಂದಿದ್ದಾರೆ. ಇನ್ನೇನು ತೀರ್ಪು ಪ್ರಕಟವಾಗಲಿದೆ ಎಂಬ ಸಂದರ್ಭದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರುತ್ತದೆಯೇ ಎಂದು ಪ್ರಶ್ನಿಸಿದರು.

ಸತ್ಯ ಶೋಧನೆ ಮಾಡಿ
ಕಾಂಗ್ರೆಸ್‌ ಮತ್ತು ಜೆಡಿಎಸ್‌ನ 17 ಶಾಸಕರು ಏಕೆ ರಾಜೀನಾಮೆ ನೀಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಅವರು ನಿಯಮಬದ್ಧವಾಗಿ ರಾಜೀನಾಮೆ ಕೊಟ್ಟಿದ್ದನ್ನು ನೀವು ಅಂಗೀಕರಿಸಿದ್ದರೆ ಈ ಗೊಂದಲ ಸೃಷ್ಟಿಯಾಗುತ್ತಿರಲಿಲ್ಲ. ಅಂದಿನ ವಿಧಾನಸಭೆ ಸ್ಪೀಕರ್‌ ರಮೇಶ್‌ ಕುಮಾರ್‌ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಿತೂರಿ ನಡೆಸಿ ರಾಜೀನಾಮೆ ಪತ್ರವನ್ನೇ ಅಂಗೀಕರಿಸಲಿಲ್ಲ. ಪುನಃ ರಾಜೀನಾಮೆ ಕೊಟ್ಟರೂ ನಿಯಮಬದ್ದವಾಗಿ ನೀಡಿಲ್ಲ ಎಂದು ಆಕ್ಷೇಪಿಸಿದ್ದೀರಿ. 17 ಮಂದಿ ಶಾಸಕರನ್ನು ಮಾತನಾಡಿಸಿ, ಅವರ ಬಾಯಿದಂಲೇ ಕೇಳಿ ಏಕಾಗಿ ರಾಜೀನಾಮೆ ನೀಡಿದ್ದಾರೆ ಎಂಬುದನ್ನು ಹೇಳುತ್ತಾರೆ ಎಂದು ವಾಗ್ಧಾಳಿ ನಡೆಸಿದರು.

ಉಪಚುನಾವಣೆಗೂ ಮುನ್ನ ಜನತೆಯಲ್ಲಿ ಗೊಂದಲ ಸೃಷ್ಟಿಸಿ ಅದರ ಲಾಭ ಪಡೆಯಬಹುದೆಂಬ ಸಿದ್ದರಾಮಯ್ಯನವರ ಲೆಕ್ಕಾಚಾರ ಎಂದಿಗೂ ಯಶ ಕಾಣುವುದಿಲ್ಲ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುವ ಕನಸನ್ನು ಕೈ ಬಿಡಲಿ ಎಂದರು.

ನಾನು ವಿಡಿಯೋದಲ್ಲಿ ಏನು ಮಾತನಾಡಿದ್ದೇನೆ ಎಂಬುದು ನನಗೆ ಗೊತ್ತಿದೆ. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಮಾತನಾಡಿರುವುದನ್ನು ಯಾರೂ ಚಿತ್ರೀಕಿಸಿದರೂ ಎಂಬುದು ಗೊತ್ತಿಲ್ಲ. ನನ್ನ ಹೇಳಿಕೆಯಿಂದ ನ್ಯಾಯಾಲಯದಲ್ಲಿ ಅನರ್ಹರಿಗೆ ಯಾವುದೇ ರೀತಿಯ ಹಿನ್ನಡೆ ಉಂಟಾಗುವುದಿಲ್ಲ. ಖಂಡಿತ ಅವರಿಗೆ ನ್ಯಾಯ ಸಿಗಲಿದೆ. ನ್ಯಾಯಾಲಯದ ತೀರ್ಪು ಬಂದ ಬಳಿಕ ಅವರು ಕಾಂಗ್ರೆಸ್‌, ಜೆಡಿಎಸ್‌ ಅಥವಾ ಸ್ವತಂತ್ರವಾಗಿ ಸ್ಪರ್ಧಿಸುತ್ತಾರೆ. ಅದು ಅವರಿಗೆ ಸಂಬಂಧಿಸಿದ ವಿಷಯ. ಇದರಲ್ಲಿ ನಮ್ಮ ಪಾತ್ರ ಏನೂ ಇಲ್ಲ ಎಂದರು.

ಗೊಂದಲ ಸೃಷ್ಟಿಸಬೇಡಿ:
ನೆರೆ ಸಂತ್ರಸ್ತರಿಗೆ ಸರ್ಕಾರ ಕೈಗೊಂಡಿರುವ ಪರಿಹಾರ ಕಾರ್ಯವನ್ನು ಜಾಹೀರಾತಿನಲ್ಲಿ ನೀಡಿದರೆ, ಅದಕ್ಕೂ ಟೀಕೆ ಮಾಡುತ್ತೀರಿ. ನಾವು ನೀಡಿರುವ ಲೆಕ್ಕ ಸರಿಯಿಲ್ಲ ಎಂದಾದರೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆಯಬಹುದು. ಅದನ್ನು ಬಿಟ್ಟು ಸಂತ್ರಸ್ತರಲ್ಲಿ ಏಕೆ ಗೊಂದಲ ಸೃಷ್ಟಿಸುತ್ತಿದ್ದೀರಿ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಮರ್ಪಕ ದಾಸ್ತಾನು ಜಾಲ ಬಲಗೊಳ್ಳಬೇಕು ; ಸರಕಾರ ಏನು ಮಾಡಬೇಕು?

ಸಮರ್ಪಕ ದಾಸ್ತಾನು ಜಾಲ ಬಲಗೊಳ್ಳಬೇಕು ; ಸರಕಾರ ಏನು ಮಾಡಬೇಕು?

ವಿಪತ್ತು ನಿಧಿ ಮಿತಿ ಹೆಚ್ಚಳ

ವಿಪತ್ತು ನಿಧಿ ಮಿತಿ ಹೆಚ್ಚಳ

ಆರ್ಥಿಕ ಪುನರುತ್ಥಾನದಲ್ಲಿ ಭಾರತದ ಪಾತ್ರ ಹಿರಿದು

ಆರ್ಥಿಕ ಪುನರುತ್ಥಾನದಲ್ಲಿ ಭಾರತದ ಪಾತ್ರ ಹಿರಿದು

ಕಾಶಿಯ ಜನರು ಸ್ಫೂರ್ತಿಯ ಸೆಲೆ ; ವಾರಾಣಸಿ NGOಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ

ಕಾಶಿಯ ಜನರು ಸ್ಫೂರ್ತಿಯ ಸೆಲೆ ; ವಾರಾಣಸಿ NGOಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ

ಸುರಕ್ಷಿತ ಪ್ರಯಾಣ ಸಾಧ್ಯವಾದರಷ್ಟೇ ದೇಶಿ ಕ್ರಿಕೆಟ್‌: ಗಂಗೂಲಿ

ಸುರಕ್ಷಿತ ಪ್ರಯಾಣ ಸಾಧ್ಯವಾದರಷ್ಟೇ ದೇಶಿ ಕ್ರಿಕೆಟ್‌: ಗಂಗೂಲಿ

ಚಿನ್ನದ ಬೆಲೆ ದಾಖಲೆ ಏರಿಕೆ

ಚಿನ್ನದ ಬೆಲೆ ದಾಖಲೆ ಏರಿಕೆ

ಪೆರೋಲ್ ಮೇಲೆ‌ ತೆರಳಿದ್ದ 10 ಕೈದಿಗಳಿಗೆ ಕೋವಿಡ್ ಸೋಂಕು ಪತ್ತೆ!

ಪೆರೋಲ್ ಮೇಲೆ‌ ತೆರಳಿದ್ದ 10 ಕೈದಿಗಳಿಗೆ ಕೋವಿಡ್ ಸೋಂಕು ಪತ್ತೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಪತ್ತು ನಿಧಿ ಮಿತಿ ಹೆಚ್ಚಳ

ವಿಪತ್ತು ನಿಧಿ ಮಿತಿ ಹೆಚ್ಚಳ

ಕಾರವಾರದಲ್ಲಿ ಕೋವಿಡ್ ಗೆ ಮತ್ತೊಂದು ಬಲಿ

ಕಾರವಾರದಲ್ಲಿ ಕೋವಿಡ್ ಗೆ ಮತ್ತೊಂದು ಬಲಿ

ಮೈಸೂರು : ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳನ್ನು ರಕ್ಷಿಸಿದ ಪೊಲೀಸರು!

ಮೈಸೂರು : ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳನ್ನು ರಕ್ಷಿಸಿದ ಪೊಲೀಸರು!

ಹೆಚ್ಚುತ್ತಿರುವ ಕೋವಿಡ್ ಸೋಂಕು ಪ್ರಕರಣ : ನಾಗರಹೊಳೆ ರಾಷ್ಟ್ರಿಯ ಉದ್ಯಾನವನ ಬಂದ್

ಹೆಚ್ಚುತ್ತಿರುವ ಕೋವಿಡ್ ಸೋಂಕು ಪ್ರಕರಣ : ನಾಗರಹೊಳೆ ರಾಷ್ಟ್ರಿಯ ಉದ್ಯಾನವನ ಬಂದ್

ಹೃದಯಾಘಾತದಿಂದ ಬಿಳಿಕೆರೆ ಠಾಣೆಯ ಎಎಸ್ಐ ಕೃಷ್ಣೇಗೌಡ ಸಾವು!

ಹೃದಯಾಘಾತದಿಂದ ಬಿಳಿಕೆರೆ ಠಾಣೆಯ ಎಎಸ್ಐ ಕೃಷ್ಣೇಗೌಡ ಸಾವು!

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavaniಹೊಸ ಸೇರ್ಪಡೆ

ಕಾಣಿಯೂರು ಶ್ರೀಗಳಿಂದ ಗೋಮಾತೆಗೆ ಅಭಿವಾದನ

ಕಾಣಿಯೂರು ಶ್ರೀಗಳಿಂದ ಗೋಮಾತೆಗೆ ಅಭಿವಾದನ

jeeva-vyvudya

ಜೀವ ವೈವಿಧ್ಯತೆ ಮಾಹಿತಿ ಸಂಗ್ರಹ

ಸಮರ್ಪಕ ದಾಸ್ತಾನು ಜಾಲ ಬಲಗೊಳ್ಳಬೇಕು ; ಸರಕಾರ ಏನು ಮಾಡಬೇಕು?

ಸಮರ್ಪಕ ದಾಸ್ತಾನು ಜಾಲ ಬಲಗೊಳ್ಳಬೇಕು ; ಸರಕಾರ ಏನು ಮಾಡಬೇಕು?

kovi-shata

ಕೋವಿಡ್‌ ನಿಯಂತ್ರಣಕ್ಕೆ ಸರ್ಕಾರದಿಂದ ಶತಪ್ರಯತ್ನ

ಆನ್‌ಲೈನ್‌ ಶಿಕ್ಷಣದಿಂದ ಹೆತ್ತವರು ಹೈರಾಣ

ಆನ್‌ಲೈನ್‌ ಶಿಕ್ಷಣದಿಂದ ಹೆತ್ತವರು ಹೈರಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.