ಹೆಚ್ಚುತ್ತಿರುವ ಸೋಂಕು: ಸ್ವಯಂ ಜಾಗೃತಿ ಅಗತ್ಯ


Team Udayavani, Jun 3, 2020, 10:22 AM IST

ಹೆಚ್ಚುತ್ತಿರುವ ಸೋಂಕು: ಸ್ವಯಂ ಜಾಗೃತಿ ಅಗತ್ಯ

ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 150 ಜನರಿಗೆ ಕೋವಿಡ್ ಸೋಂಕು ದೃಢವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಪಾಸಿಟಿವ್‌ ವರದಿಗಳು ಬರುವ ಸಾಧ್ಯತೆಯೂ ಇದ್ದು, ಇದರಿಂದ ಜನರು ಭಯಭೀತರಾಗಿದ್ದಾರೆ.

ಸೋಂಕಿತಲ್ಲಿ ಬಹುತೇಕರು ಮುಂಬಯಿಯಿಂದ ಬಂದವರು. ಮುಂಬಯಿಯಲ್ಲಿ ಸಮುದಾಯದಲ್ಲಿ ಸೋಂಕು ಹರಡಿರುವುದರ ಲಕ್ಷಣವಿದು ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಸಮುದಾಯ ದಲ್ಲಿ ಹರಡದೆ ಇರಬೇಕಾದರೆ ಸರಕಾರ, ಜಿಲ್ಲಾಡಳಿತದ ಮೇಲೆ ಹೊಣೆ ಹೊರಿಸಿ ಇರುವಂತಿಲ್ಲ. ಸಮುದಾಯವೇ ಸ್ವಯಂ ಆಸಕ್ತಿಯಿಂದ ಕೆಲವು ಶಿಸ್ತು ಪಾಲಿಸಬೇಕಾಗಿದೆ.

ಚತುರ್ವ್ರತಧಾರಿಗಳಾಗೋಣ
ಕೈಗಳನ್ನು ಆಗಾಗ್ಗೆ ಸ್ವತ್ಛಗೊಳಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಸಾಧ್ಯವಾದಷ್ಟು ದೂರದಲ್ಲಿಯೇ ಇರುವುದು, ಮಾಸ್ಕ್ ಧರಿಸುತ್ತ ಗಮನ ಹರಿಸಿದರೆ ಸಾಕು ಎನ್ನುತ್ತಾರೆ ಉಡುಪಿ ಡಾ| ಟಿಎಂಎ ಪೈ ನಿಯೋಜಿತ ಕೋವಿಡ್‌ – 19 ಆಸ್ಪತ್ರೆಯ ನೋಡಲ್‌ ಅಧಿಕಾರಿ ಡಾ| ಶಶಿಕಿರಣ್‌ ಉಮಾಕಾಂತ್‌.

ಶೇ. 90 ಸೋಂಕು ಪೀಡಿತರಿಗೆ ಲಕ್ಷಣಗಳಿಲ್ಲ
ಮಾದರಿಗಳನ್ನು ಬಹಳ ಹಿಂದೆಯೇ ಕಳುಹಿಸಲಾಗಿತ್ತು. ಪ್ರಯೋಗಾಲಯ ಗಳಿಗೆ ಒತ್ತಡ ಹೆಚ್ಚಿದ ಕಾರಣ ಮಾದರಿಗಳನ್ನು ಪರೀಕ್ಷಿಸಲು ತಡ ವಾಯಿತು. ಈಗ ಪರೀಕ್ಷೆ ನಡೆಸಿ ವರದಿ ಬಂದಿದೆ. ಈ 150 ಜನರಲ್ಲಿ ಕೆಲವೇ ಕೆಲವರಿಗೆ ರೋಗ ಲಕ್ಷಣಗಳಿರ
ಬಹುದೇ ವಿನಾ ಎಲ್ಲರಿಗೂ ಇಲ್ಲ. ಗಂಟಲುದ್ರವ ಮಾದರಿಯನ್ನು ಕಳುಹಿಸುವಾಗಲೂ ಇಂತಹವರಿಗೆ ರೋಗ ಲಕ್ಷಣವಿರಲಿಲ್ಲ, ಈಗಲೂ ಇಲ್ಲ. ಆದರೆ ವೈರಸ್‌ ಇರುತ್ತದೆ, ಅವೇನೂ ಅವರಿಗೆ ಉಪದ್ರವ ಕೊಟ್ಟಿಲ್ಲ. ಕೊಡುವುದೂ ಇಲ್ಲ. ಇಂತಹ ಅನೇಕ ರೋಗಾಣುಗಳು ನಮ್ಮ ಶರೀರದಲ್ಲಿ ಬದುಕಿಕೊಂಡಿವೆ.ಒಟ್ಟಾರೆ ಸೋಂಕು ಪೀಡಿತರಲ್ಲಿ  ಶೇ. 10ರಷ್ಟು ಜನರಿಗೆ ಮಾತ್ರ ಶೀತ, ಜ್ವರ,
ಕೆಮ್ಮು ಇತ್ಯಾದಿ ಲಕ್ಷಣಗಳು ಕಂಡುಬರುತ್ತಿವೆ. ಹೃದಯ ರೋಗ, ಉಸಿರಾಟ, ಕಿಡ್ನಿ, ಅಸ್ತಮಾ ಇತ್ಯಾದಿ ಸಮಸ್ಯೆ ಇರುವವರಿಗೆ ಸೋಂಕು ಉಂಟಾದರೆ ಈಗಾಗಲೇ ಇರುವ ರೋಗ ಉಲ್ಬಣ ಗೊಳ್ಳುತ್ತದೆ. ಆದ್ದರಿಂದ ವಿಶೇಷವಾಗಿ ವೃದ್ಧರು, ರೋಗಿಗಳು, ಗರ್ಭಿಣಿ ಯರು, ಚಿಕ್ಕ ಮಕ್ಕಳನ್ನು ಜಾಗರೂಕ ವಾಗಿ ನೋಡಿಕೊಳ್ಳಬೇಕಾಗಿದೆ.

ಅಗತ್ಯದವರಿಗೆ ಮಾತ್ರ ಉಡುಪಿ ಆಸ್ಪತ್ರೆ
ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ ಈಗಿರುವ ಕೊರೊನಾ ರೋಗಿಗಳು ಕೇವಲ 36. ಯಾರಿಗೆ ತೀವ್ರ ಉಸಿರಾಟದ ಸಮಸ್ಯೆ ಇದೆಯೋ ಅಂತಹವರನ್ನು ಮಾತ್ರ ಆಸ್ಪತ್ರೆಗೆ ಸೇರಿಸಿಕೊಳ್ಳಲಾಗುತ್ತಿದೆ.
ರೋಗ ಲಕ್ಷಣ ಇಲ್ಲದಿರುವವರನ್ನು ಇತರ ನಿಯೋಜಿತ ಆಸ್ಪತ್ರೆಗೆ ದಾಖಲಿಸ ಲಾಗುತ್ತಿದೆ ಎಂದು ಡಾ| ಶಶಿಕಿರಣ್‌ ಉಮಾಕಾಂತ್‌ ಮತ್ತು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದ್ದಾರೆ.

ಸೋಂಕು ಪೀಡಿತರಲ್ಲಿ ಶೇ. 10 ಜನರಿಗೆ ಮಾತ್ರ ಲಕ್ಷಣ
ಕೈತೊಳೆದುಕೊಳ್ಳುವ, ಅಂತರ ಕಾಪಾಡುವ, ಗುಂಪಿನಲ್ಲಿ ಸೇರದೆ ಇರುವ, ಮಾಸ್ಕ್ ಧರಿಸುವ ನಾಲ್ಕು ವ್ರತಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಯಾವ ತೊಂದರೆಯೂ ಬರುವುದಿಲ್ಲ. ಇಲ್ಲಿ ಸಮುದಾಯಕ್ಕೆ ಸೋಂಕು ಹರಡಿಲ್ಲ. ಎಷ್ಟೋ ಜನರ ದೇಹದಲ್ಲಿ ಅನೇಕ ವೈರಸ್‌ಗಳು ಇವೆ. ಎಷ್ಟೋ ಜನರಿಗೆ ಕೊರೊನಾ ವೈರಸ್‌ ಕೂಡ ಏನೂ ತೊಂದರೆ ಕೊಡದೆ ಇರುತ್ತದೆ. ಶೇ. 10 ಸೋಂಕುಪೀಡಿತರಿಗೆ ಮಾತ್ರ ಕೊರೊನಾ ಲಕ್ಷಣಗಳಿರುತ್ತವೆ.

– ಡಾ| ಶಶಿಕಿರಣ್‌ ಉಮಾಕಾಂತ್‌, ನೋಡಲ್‌ ಅಧಿಕಾರಿ ಮತ್ತು ಮೆಡಿಸಿನ್‌ ವಿಭಾಗ ಮುಖ್ಯಸ್ಥರು, ಡಾ| ಟಿಎಂಎ ಪೈ ಆಸ್ಪತ್ರೆ (ನಿಯೋಜಿತ ಕೋವಿಡ್‌-19 ಆಸ್ಪತ್ರೆ), ಉಡುಪಿ.

ಟಾಪ್ ನ್ಯೂಸ್

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Amit Shah

Modi 3.0 ಅವಧಿಯಲ್ಲಿ ನಕ್ಸಲ್‌ ಮುಕ್ತ ದೇಶ: ಅಮಿತ್‌ ಶಾ

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.